Malenadu today news report /14 ಶಕ್ತಿದೇವತೆಗಳನ್ನೆ ಕದ್ದಿದ್ದರು ಕಳ್ಳರು! ರೋಚಕ ಕಳ್ಳತನದ ಕಥೆ ಮಲೆನಾಡು ಟುಡೆಯಲ್ಲಿ !

Malenadu today news report The thieves were caught stealing 14 idols Malnad's exciting theft in Malenadu Today!

Malenadu today news report /14 ಶಕ್ತಿದೇವತೆಗಳನ್ನೆ ಕದ್ದಿದ್ದರು ಕಳ್ಳರು!  ರೋಚಕ ಕಳ್ಳತನದ ಕಥೆ  ಮಲೆನಾಡು ಟುಡೆಯಲ್ಲಿ !
The thieves were caught stealing 14 idols Malnad's exciting theft in Malenadu Today!

Malenadu today news report  ’|   Shivamogga riots  Malenadu today news report /JP Flashback ಜನರ ಭಯವನ್ನೆ ಬಂಡವಾಳ ಮಾಡಿಕೊಂಡು ತೀರ್ಥಹಳ್ಳಿ, ಹೊಸನಗರದಲ್ಲಿ 14 ಶಕ್ತಿದೇವತೆಗಳನ್ನೆ ಕದ್ದಿದ್ದರು ಕಳ್ಳರು! ಖತರ್ನಾಕ್​ ಐಡಿಯಾ ಮಾಡಿದವರು, ಬಂದು ಖುದ್ಧಾಗಿ ತಗ್ಲಾಕ್ಕೊಂಡರು! ಮಲೆನಾಡಿನ ರೋಚಕ ಕಳ್ಳತನದ ಕಥೆ ?

ಜೆಪಿ ಪ್ಲಾಶ್​ ಬ್ಯಾಕ್

ಭಯವನ್ನೇ ಬಂಡವಾಳ ಮಾಡಿಕೊಂಡು ಮಲೆನಾಡಿನಲ್ಲಿ 14 ಉಗ್ರಸ್ವರೂಪಿ ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ ಜೋಡಿ ಕಳ್ಳರನ್ನು ಹಿಡಿದಿದ್ದೇ…ಒಂದು ರೋಚಕ ಕಹಾನಿ. 2017 ರಲ್ಲಿ ತೀರ್ಥಹಳ್ಳಿ ತಾಲೂಕನ್ನೇ ತಲ್ಲಣಗೊಳಿಸಿದ್ದ ದೇವಸ್ಥಾನ ಕಳ್ಳತನ ಪ್ರಕರಣಗಳನ್ನ ಪೋಲಿಸ್ರು ಭೇದಿಸಿದ್ದು ಹೇಗೆ ಗೊತ್ತಾ ? ಇದು ಜೆಪಿ ಪ್ಲಾಶ್​ ಬ್ಯಾಕ್



2017 ರಲ್ಲಿ ನಡೆದಿತ್ತು ಸರಣಿ ಕಳ್ಳತನ

2017 ರ ಸಾಲಿನಲ್ಲಿ ತೀರ್ಥಹಳ್ಳಿ ತಾಲೂಕು ಸೇರಿದಂತೆ ಇಡೀ ಮಲೆನಾಡನ್ನೇ ಬೆಚ್ಚಿಬೀಳಿಸಿದ್ದ, ಸರಣಿ ದೇವಸ್ಥಾನ ಕಳ್ಳತನ ಪ್ರಕರಣ ಪೊಲೀಸರಿಗೆ ಅತ್ಯಂತ ಸವಾಲಾಗಿತ್ತು. ದೇವಸ್ಥಾನದಲ್ಲಿ ದೇವರ ವಿಗ್ರಹವನ್ನೇ ಕದಿಯುತ್ತಿರುವುದಕ್ಕೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅದರಲ್ಲೂ ಶಕ್ತಿದೇವತೆಗಳ ವಿಗ್ರಹಗಳನ್ನೇ ಕಳ್ಳರು ಎಗರಿಸಿಕೊಂಡು ಹೋಗ್ತಿದ್ರು.

ಹರಕೆ ಹೊರಲು ದೇವರೇ ಇರಲಿಲ್ಲ! 

ಜನರು ಹರಕೆ ಹೊರುವ ಹರಕೆ ತೀರಿಸುವ. ಜಾಗಗಳಲ್ಲಿ ದೇವರೇ ಇಲ್ಲದಂತೆ ಮಾಡಿತ್ತು ಕಳ್ಳರ ತಂಡ. ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕಿನ ಗ್ರಾಮಗಳನ್ನೇ ಗುರಿಯಾಗಿಸಿಕೊಂಡು ದೇವಸ್ಥಾನಗಳಲ್ಲಿ ಕಳ್ಳತನ ಮಾಡ್ತಿದ್ದ ಗ್ಯಾಂಗ್ ನ್ನು ಹಿಡಿಲೇಬೇಕು ಎಂದು ಅಂದಿನ ಎಸ್ಪಿ ಅಭಿನವ್ ಖರೆಗೆ ಹೆಚ್ಚಿನ ಒತ್ತಡಗಳು ಬರುತ್ತೆ.



ಅಂದಿನ ತೀರ್ಥಹಳ್ಳಿ ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ಹಾಗು ಎಸ್ಸೈ ಭರತ್ ಕುಮಾರ್ ಹಾಗು ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚನೆ ಮಾಡಿ ನೈಟ್ ಪೆಟ್ರೋಲಿಂಗ್ ಗೆ ಹೆಚ್ಚಿನ ಆದ್ಯತೆ ನೀಡುವಂತೆ ಎಸ್ಪಿ ಆದೇಶ ಮಾಡ್ತಾರೆ.

ರಾತ್ರಿ ಗಸ್ತಿನಲ್ಲಿ ನಡೀತು ಆ ಘಟನೆ

  • ಅಂತೆಯೇ ತೀರ್ಥಹಳ್ಳಿಯ ಸಬ್ ಇನ್ಸ್ ಪೆಕ್ಟರ್ ಭರತ್ ಕುಮಾರ್ ಅಂಡ್ ಟೀಂ ಕಟ್ಟೆಹಕ್ಲು ಬಳಿ ಪಿಸಿಆರ್ ವೆಹಿಕಲ್ ನಲ್ಲಿ ಪ್ರತಿದಿನ ನೈಟ್ ರೌಂಡ್ಸ್ ಮಾಡ್ತಾ ಇದ್ರು.

  • ಆದ್ರೆ ಅದೊಂದು ರಾತ್ರಿಯ ಗಸ್ತಿನಲ್ಲಿ ಅಪರಿಚಿತ ವಾಹನ ಅನುಮಾನಸ್ಪದ ವ್ಯಕ್ತಿಗಳನ್ನೆಲ್ಲಾ ತಪಾಸಣೆ ಮಾಡಿದಾಗ ಆ ಕ್ಷಣದವರೆಗೆ ಯಾವ ಕ್ರಿಮಿನಲ್ ಗಳು ಕಣ್ಣಿಗೆಬೀಳೋದಿಲ್ಲ

  • ರಾತ್ರಿಯೆಲ್ಲಾ ಗಸ್ತಿನಲ್ಲಿದ್ದು ಸುಸ್ತಾಗಿದ್ದ ಭರತ್ ಕುಮಾರ್ ಬೆಳಿಗ್ಗೆ ಆರು ಗಂಟೆ ಹೊತ್ತಿಗೆ ಇನ್ನೆನು ಠಾಣೆ ಕಡೆಗೆ ಹೊರಟಿದ್ರು ಅಷ್ಟೆ.

  • ಅದೇ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಜರ್ಕಿನ್ ಹಾಕೊಂಡು ಟಿವಿಎಸ್ ವಿಕ್ಟರ್ ಬೈಕ್ ನಲ್ಲಿ ಕಟ್ಟೆಹಕ್ಲು ರಸ್ತೆ ಮಾರ್ಗವಾಗಿ ಬರ್ತಾ ಇದ್ರು.

ಪೊಲೀಸರಿಗೆ ಖದ್ದಾಗಿ ಕ್ಲೂ ಕೊಟ್ಟ ಆರೋಪಿಗಳು!

ಬೆಳಗಿನ ಜಾವ ತಾನೆ…ಇನ್ಯಾವ ಕಳ್ಳರು ಬರ್ತಾರೆ…ಗದ್ದೆ ತೋಟದ ಕಡೆ ಕೆಲಸಕ್ಕೆ ಹೊರಟಿರಬೇಕು ಅಂತಾ..ಭರತ್ ಕುಮಾರ್ ಅಷ್ಟೊಂದು ತಲೆಕೆಡಿಸಿಕೊಳ್ಳಲಿಲ್ಲ.

ಜೀಪ್ ಮುಂದೆ ಹೋಗ್ತಾನೆ ಇತ್ತು. ಆದ್ರೆ ಅಣತಿ ದೂರದಲ್ಲಿದ್ದ ಬೈಕ್ ಸವಾರರಿಬ್ಬರು ಪೊಲೀಸ್ ವಾಹನ ನೋಡ್ತಿದ್ದ ಹಾಗೆ ಬ್ರೇಕ್ ಹೊಡೆದು ನಿಲ್ಲಿಸಿಬಿಟ್ರು

ಇದನ್ನು ಭರತ್ ಕೂಡ ಅಬ್ಸರ್ವ್ ಮಾಡಿದ್ರು. ಆದ್ರೂ. ತಲೆಕೆಡಿಸಿಕೊಳ್ಳೋದಕ್ಕೆ ಅವರು ಹೋಗ್ಲಿಲ್ಲ. ಆದ್ರೆ ಬೈಕ್ ನಲ್ಲಿದ್ದವರ ದೈರ್ಯ ಔಟಾದಂತೆ ಕಾಣ್ತು. ತಕ್ಷಣ ಬೈಕ್ ರಿವರ್ಸ್ ತೆಗೆದುಕೊಂಡು ಅಲ್ಲಿಂದ ಎಸ್ಕೇಪ್ ಆಗೋದಕ್ಕೆ ಶುರು ಮಾಡಿದ್ರು.

ಮೂರು ಕಿಲೋಮೀಟರ್ ಬೆನ್ನಟ್ಟಿದ್ದ ಪೊಲೀಸ್!

ತಕ್ಷಣ ಅಲರ್ಟ್ ಆದ ಭರತ್ ಕುಮಾರ್ ಅಂಡ್ ಟೀಂ ಬೈಕ್ ಛೇಸ್ ಮಾಡಿದ್ರು. ಸುಮಾರು ಮೂರು ಕಿಲೋಮೀಟರ್ ವರೆಗೆ ಸಿನಿಮೀಯ ಮಾದರಿಯಲ್ಲಿ ಕಳ್ಳ-ಪೊಲೀಸ್ ಚೇಸಿಂಗ್ ಸೀನ್ ಅಂದು ನಡೆದು ಹೊಯ್ತು.ಆದ್ರೂ ಬೆಂಬಿಡದ ಪೊಲೀಸ್ ಸಿಬ್ಬಂದಿಗಳು ಇನ್ನೇನು ಬೈಕ್​ ಸನಿಹ ಬರೋವಷ್ಟರಲ್ಲಿ ಬೈಕ್ ಸವಾರರು ಅಲ್ಲೆ ಬೈಕ್ ನಿಲ್ಲಿಸಿ ಕಾಡಿನಲ್ಲಿ ತಪ್ಪಿಸಿಕೊಳ್ಳೋ ಯತ್ನ ಮಾಡಿದ್ರು.ಆದ್ರೆ ಪೊಲೀಸ್ರು ಲೈವ್ ಆಗಿಯೇ ಇಬ್ಬರು ವ್ಯಕ್ತಿಗಳನ್ನು ಹಿಡಿದೇ ಬಿಟ್ರು.

ಜರ್ಕಿನ್ ನಲ್ಲಿದ್ದವು ದೇವರ ವಿಗ್ರಹ

ಬೈಕ್ ಸವಾರರಿಬ್ಬರನ್ನು ಕ್ಯಾಚ್ ಮಾಡಿದ ಪೊಲೀಸ್ ಸಿಬ್ಬಂದಿಗಳು ಅವರ ಜರ್ಕಿನ್ ಚೆಕ್ ಮಾಡಿದಾಗ…ಪೊಲೀಸ್ರಿಗೆ ಅಚ್ಚರಿ ಕಾದಿತ್ತು.

ಜರ್ಕಿನ್ ತಪಾಸಣೆ ಮಾಡಿದಾಗ ಬೆಳ್ಳಿಯ ಗಣಪತಿ ವಿಗ್ರಹ,ಬೆಳ್ಳಿಯ ಸಣ್ಣ ವಿಗ್ರಹ ಪತ್ತೆಯಾಗ್ತವೆ.ಇನ್ನು ಬೈಕ್ ಸೈಡ್ ಕವರ್ ಚೆಕ್ ಮಾಡ್ದಾಗ.ಅಲ್ಲಿ ರಾಡು, ಮಂಕಿ ಕ್ಯಾಪ್, ಗ್ಲೌಸ್​, ಟಾರ್ಚ್​ಗಳು ಪತ್ತೆಯಾಗುತ್ತವೆ

ಭರತ್ ಕುಮಾರ್ ಗೆ ಇವರಿಬ್ಬರು ಯಾವುದೋ ದೇವಸ್ಥಾನ ಕಳ್ಳತನ ಮಾಡ್ಕೊಂಡು ಬಂದಿದ್ದಾರೆ..ಇವರು ಟೆಂಪಲ್ ಥೀವ್ಸ್ ಅನ್ನೋದು ಪಕ್ಕಾ ಆಗುತ್ತೆ.

ತಕ್ಷಣ ಅವರನ್ನು ತೀರ್ಥಹಳ್ಳಿ ಠಾಣೆಗೆ ಕರೆತರೋ ಪೊಲೀಸ್ರು. ಮೊದಲು ಅವರ ಬಳಿ ಸಿಕ್ಕ ದೇವರ ವಿಗ್ರಹ, ಒಡವೆಗಳು ಈ ಹಿಂದೆ ಕಳ್ಳತನವಾದ ಯಾವ ದೇವಸ್ಥಾನದ್ದು ಅಂತಾ ಖಾತರಿ ಪಡಿಸಿಕೊಳ್ಳೋದಕ್ಕೆ ತನಿಖೆ ಕೈಗೊಳ್ಳುತ್ತಾರೆ.

ಹೊಸನಗರ ತಾಲೂಕಿನ ಸೊನಲೆ ದೇವಸ್ಥಾನದ ವಿಗ್ರಹಗಳು ಎಂಬುದು ಗೊತ್ತಾಗುತ್ತೆ. ಅಲ್ಲಿಗೆ ನಾವು ರಾತ್ರಿಯಿಂದ ಬೆಳಗಿನವರೆಗೂ ಕಾದಿತ್ಕೂ. ಕೊನೆಗೆ ಕಳ್ಳರು ಸಿಕ್ಕಾಕೊಂಡ್ರು..ಅನ್ನೋ ಸಮಾಧಾನ ತೀರ್ಥಹಳ್ಳಿ ಪೊಲೀಸರಿಗಾಯ್ತು.

ತನಿಖೆಯಲ್ಲಿ ಸಿಕ್ತು ಮತ್ತಷ್ಟು ಟ್ವಿಸ್ಟ್​!

ತಕ್ಷಣ ತನಿಖೆಗೆ ಅಣಿಯಾದ ಇನ್ಸ್ ಪೆಕ್ಟರ್ ಸುರೇಶ್ ಕುಮಾರ್..ಏನ್ರೋ…ನಿಮ್ ಗುಡ್ ನೇಮ್ ಅಂದಾಗ…ಕಳ್ಳರು ಸಾರ್ ನಾನು ಪ್ರಸನ್ನ ಇವನು ಮೊಹಮ್ಮದ್ ಹನೀಫ್..ಇಬ್ಬರು ಕಟ್ಟೆಹೈಕ್ಲು ಗ್ರಾಮದವರೇ ಸಾರ್ ಅಂದ.

ಅಲ್ಲಾ ಮಾರಾಯ ನಾವು ನೋಡಿದ್ರೆ ಹದಿನಾಲ್ಕು ದೇವಸ್ಥಾನ ಕಳ್ಳತನ ಮಾಡಿರೋರು…ಹೊರಜಿಲ್ಲೆಯವರಿರಬಹುದು ಅಂತಾ. ಅವರ ಪೋಟೋ ಫಿಂಗರ್ ಪ್ರಿಂಟ್ ಹಿಡ್ಕೊಂಡು ಟ್ರೇಸ್ ಔಟ್ ಗೆ ಹೊರಟ್ರೆ . ಕಳ್ಳರು ಬುಡದಲ್ಲೇ ಇದಾರಲ್ಲೋ.. ರೀ ಭರತ್ …ಇವರನ್ನು ಸ್ಲಲ್ಪ ಸ್ಟ್ರಾಂಗ್ ಆಗಿಯೇ ಎನ್ಕೈರಿ ಮಾಡ್ರಿ ಅಂತಾ ಸುರೇಶ್ ಹೇಳಿದ್ರು…

ಆಗ ಭರತ್ ಕುಮಾರ್ ಹೇಳ್ರೋ…ಇನ್ನೆಷ್ಟು ದೇವಸ್ಥಾನ ಕಳ್ಳತನ ಮಾಡಿದಿರಿ ಅಂತಾ ಕೇಳ್ದಾಗ..ಸಾರ್ ಸೊನಲೆಯಲ್ಲಿ ಒಂದೇ ದೇವಸ್ಥಾನ ಸಾರ್ ಅಂದ ಕಳ್ಳ ಪ್ರಸನ್ನ. ಭರತ್ ಇವ್ರ ಫಿಂಗರ್ ಪ್ರಿಂಟ್ ತೆಗೆದು ಶಿವಮೊಗ್ಗದ ಫೊರೆನ್ಸಕ್ ಬ್ಯೂರೋ ಗೆ ಕಳುಹಿಸ್ತಾರೆ

ಆಗ ಈ ಹಿಂದೆ ಕಳ್ಳತನವಾದ ಹದಿನಾಲ್ಕು ದೇವಸ್ಥಾನಗಳಲ್ಲಿ ಕಲೆಹಾಕಿದ ಫಿಂಗರ್ ಪ್ರಿಂಟ್ ಜೊತೆ ಹೊಲಿಕೆ ಮಾಡಲಾಯ್ತು. ಆಗ ಹನೀಫನ ಫಿಂಗರ್ ಪ್ರಿಂಟ್ ಆಗುಂಬೆಯ ಕಾಸರವಳ್ಳಿಯ ಗುತ್ಯಮ್ಮ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಕಳ್ಳತನವಾದಾಗ ಕಲೆ ಹಾಕಿದ ಫಿಂಗರ್ ಪ್ರಿಂಟ್ ಜೊತೆ ಹೊಲಿಕೆಯಾಗುತ್ತೆ.

ಆವಾಗ ಪೊಲೀಸ್ರಿಗೆ ಇವ್ರು ಬಹಳ ಚಾಲಾಕಿ ಕಳ್ಳರು ಇದಾರೆ.ಇವ್ರರನ್ನು ತಕ್ಷಣ ಕೋರ್ಟ್ ಗೆ ಪ್ರೊಡ್ಯೂಸ್ ಮಾಡಿ ಮತ್ತೆ ಕಸ್ಟಡಿ ಪಡೀದ್ರೆ ಬಹಳಷ್ಟು ಪ್ರಕರಣ ಭೇದಿಸಬಹುದು ಅನ್ಕೊಂಡ ಇನ್ಸ್ ಪೆಕ್ಟರ್ ಸುರೇಶ,ಕಳ್ಳರನ್ನು ಕೋರ್ಟ್ ಗೆ ಹಾಜರು ಪಡಿಸಿ ಮತ್ತೆ ಹತ್ತು ದಿನಗಳ ಕಾಲ ಕಸ್ಡಡಿಗೆ ಪಡಿತಾರೆ. ಆ ಹತ್ತು ದಿನಗಳ ಕಸ್ಡಡಿ ಅಂಡ್ ರಿಕವರಿ ಸ್ಟೋರಿ ಇದೆಯಲ್ಲಾ ಅದು ಮತ್ತಷ್ಚು ನಗೆಪಾಡ್ಲಿಗೆ ಈಡು ಮಾಡುತ್ತೆ ಓದುಗರೆ,.

ಹುಂಡಿತ ಕಳ್ಳತನ ಮತ್ತು ಕಸ್ಟಡಿ ಎನ್​ಕ್ವೈರಿ

ಹತ್ತು ದಿನಗಳ ಕಾಲ ತಮ್ ಕಸ್ಟಡಿ ಪಡಿಯೋ ತೀರ್ಥಹಳ್ಳಿ ಪೊಲೀಸ್ರು..ಕಳ್ಳರನ್ನು ತೀವೃ ತನಿಖೆಗೆ ಒಳಪಡಿಸ್ತಾರೆ

ಆಗ ಹನೀಫ್ ಮತ್ತು ಪ್ರಸನ್ನ ಮಲೆನಾಡಿನ ಹದಿನಾಲ್ಕು ದೇವಸ್ಥಾನಗಳಲ್ಲಿ ದೇವರ ವಿಗ್ರಹ,ಮುಖವಾಡ ಪ್ರಭಾವಳಿ ಕಾಣಿಗೆ ಹುಂಡಿ ಕಳ್ಳತನ ಮಾಡಿದ್ದು ನಾವೇ ಸಾರ್.

ಕೇವಲ ಇಬ್ಬರೇ ಕಳ್ಳತನ ಮಾಡ್ತಿದ್ವಿ. ನಮ್ಮದು ಯಾವುದೇ ಗ್ಯಾಂಗ್ ಇಲ್ಲಾ ಅಂತಾರೆ. ಪ್ರಸನ್ನ ಮತ್ತು ಹನೀಫ್ ರನ್ನು ಕರ್ಕೊಂಡು ರಿಕವರಿಗೆ ಹೊರಡೋ ಎಸ್ಸೈ ಭರತ್ ಕುಮಾರ್​ ಎಲ್ಲಾ ಕಳ್ಳತನವಾದ ದೇವಸ್ಥಾನಗಳಲ್ಲಿ ಎವಿಡೆನ್ಸ್ ಕಲೆಕ್ಟ್ ಮಾಡ್ತಾರೆ.

ದೇವಸ್ಥಾನದ ಎಲ್ಲಾ ಕಳ್ಳತನ ಪ್ರಕರಣಗಳನ್ನು ಭೇದಿಸಿದ ಎಸ್ಸೈ ಭರತ್ ಕುಮಾರ್ ಮತ್ತು ಇನ್ಸ್ ಪೆಕ್ಟರ್ ಸುರೇಶ್ ಗೆ ಒಂದು ಕುತೂಹಲವಂತೂ ಇದ್ದೇ ಇತ್ತು.

ಅಲ್ರೊ ಪ್ರಸನ್ನ ಹನೀಫ್…ಜನರು ಭಯ ಭಕ್ತಿ ನೇಮ ನಿಷ್ಠೆ ಶ್ರದ್ದೆಯಿಂದ ನಡೆದುಕೊಳ್ಳೋ ದೇವಸ್ಥಾನಗಳನ್ನೇ ಕದ್ದಿದ್ದೀರಲ್ಲೋ…ನಿಮ್ ಕಣ್ಣಿಗೆ ಯಾವ ಮನೆಗಳು ಕಾಣ್ಲಿಲ್ವ..ಅದ್ರಲ್ಲೂ ಉಗ್ರ ಸ್ವರೂಪಿ ದೇವರ ಮೂರ್ತಿಗಳನ್ನೇ ಕದ್ದಿದ್ದಿರಲ್ಲೋ…ಯಾಕೋ ಅಂತಾ ಕೇಳಿದ್ರೆ..ಆಗ ಆ ಕಳ್ಳರು ಏನೇಳಬೇಕು…ಭಯ ಸಾರ್.., ಭಯಾ..

ಭಯ...ಸಾರ್ ..ಏನ್​ ಭಯ

ಭಯವನ್ನೇ ಬಂಡವಾಳ ಮಾಡ್ಕೊಂಡ್ವಿ ಅಷ್ಟೆ…ಸಾರ್ ಅಂದ್ರು..ಆಗ ಭರತ್ ಕುಮಾರ್…ಕ್ಯುರಿಯಾಸಿಟಿ ಜಾಸ್ತಿಯಾಯ್ತು..ಭಯ ಹೇಗೋ ಬಂಡವಾಳ ಆಗುತ್ತೆ.ಬಿಡಿಸಿ ಹೇಳಪ್ಪ ಅಂದಾಗ..ಪ್ರಸನ್ನ..

ನೋಡಿ ಸಾರ್..ಉಗ್ರಸ್ವರೂಪಿ ದೇವರೇ ನಮ್ ಟಾರ್ಗೇಟ್ ,,ಯಾಕಂತ ಕೇಳಿದ್ರೆ…ನಮ್ ಜನ್ರರಿಗೆ ಈ ದೇವರು ಕಂಡ್ರೇ ತುಂಬಾನೆ ಭಯ…ಈ ದೇವರು ವರನು ಕೊಡುತ್ತೆ.., ಶಾಪನೂ ಕೊಡುತ್ತೆ…..ತಪ್ಪು ಮಾಡಿದ್ರೆ,,,ಪಾಪಾ ಮಾಡ್ದೋನು ರಕ್ತಕಾರಿ ಸಾಯ್ತಾನೆ ಅಲ್ವಾ ಸಾರ್…

ಅದೇ ಜನ್ರ ಭಯ ನಮಗೆ ಬಂಡವಾಳ ಸಾರ್..ಪೂಜಾರಿನೂ ಇದೇ ದೇವ್ರನ್ನು ತೋರ್ಸಿ ತಾನೆ ಭಕ್ತರಿಗೆ ಭಯವನ್ನು ಸೃಷ್ಟಿಸೋದು…ನಾವೂ ಕೂಡ ಅದೇ ದೇವರ ಭಯವನ್ನು ಎನ್ ಕ್ಯಾಷ್ ಮಾಡ್ಕೊಂಡ್ವಿ…

ಶಕ್ತಿ ದೇವರಲ್ಲಿ ಕಳ್ಳತನ ಯಾರು ಮಾಡಲ್ಲ

ಭಕ್ತರಿಗೆ ದೇವರನ್ನ ಕಂಡ್ರೆ ಭಯ ಜಾಸ್ತಿ…ಹೆಂಗೂ ಇಂತಹ ರೌದ್ರ ದೇವರ ದೇವಸ್ಥಾನಗಳಲ್ಲಿ ಯಾರು ಕಳ್ಳತನ ಮಾಡೋದಕ್ಕೆ ಹೋಗೋದಿಲ್ಲ..ಹಾಗಾಗಿ ದೇವಸ್ಥಾನಗಳಿಗೆ ಯಾವ ಭದ್ರತೆನೂ ಇರಲ್ಲ… ಇದೇ ದೇವಸ್ಥಾನಗಳಿಗೆ ನಾವು ಬೆಳಿಗ್ಗೆ ಭಕ್ತರಂತೆ ಹೋಗ್ತಿದ್ವಿ…ಪ್ರಸಾದ ಸ್ವೀಕರಿಸ್ತಿದ್ವಿ…

ರಾತ್ರಿಯಾದ ನಂತ್ರ ಅದೇ ದೇವಸ್ಥಾನಗಳ ಬೀಗ ಒಡೆದು ಕ್ಷಮಿಸಿ ದೇವ್ರೇ…ನಿನ್ನನ್ನೆ ಕದಿತಾಯಿದಿವಿ ಅಂತಾ..ದೇವರ ಮೂರ್ತಿಯನ್ನು ಎಗರಿಸ್ತಿದ್ವಿ…ಕಾಣಿಗೆ ಹುಂಡಿ ಹೊಡಿತಾಯಿದ್ವಿ….ಸಾರ್ ಅಂತಾ ಆಂತರ್ಯದ ಗುಟ್ಟನ್ನು ಮನಬಿಚ್ಚಿ ಮಾತನಾಡ್ ಬಿಟ್ರು…

ಇವರ ಮಾತು ಆ ಕ್ಷಣಕ್ಕೆ ಪೊಲೀಸ್ರಿಗೆ ಭಯದ ಪಾಠ ಮಾಡ್ದ ಹಾಗಾಯ್ತು…ನನ್ ಮಕ್ಳಾ ಹಿಂಗೆ ಬಿಟ್ರೇ..ನಮ್ ಭಯನೂ ಇಲ್ಲಾ ಅಂತೀರಿ….ಏಳ್ರೋ ಮೇಲೆ ಬೆಳ್ಳಿಯ ವಿಗ್ರಹಗಳನ್ನು ಎಲ್ಲಿ ಕೊಟ್ಟಿದಿರೋ ಅಂತಾ ಕೇಳ್ದಾಗ ಸಾರ್ ಕೊಪ್ಪದಲ್ಲಿ ಒಬ್ಬರಿಗೆ ಅವರಿಗೆ ಕೊಟ್ಟಿದಿವಿ ಅಂತಾರೆ..

ತೀರ್ಥಹಳ್ಳಿ, ಹೊಸನಗರ ಕೊಪ್ಪ

ಕೊಪ್ಪದಲ್ಲಿ ಚಿನ್ನಬೆಳ್ಳಿ ವ್ಯಾಪಾರ ಮಾಡ್ಕೊಂಡಿರೋ ಒಬ್ಬರಿಗೆ ಪ್ರಸನ್ನ ಮತ್ತು ಹನಿಫ್ ಸುಮಾರು ಐದುವರೆ ಕೇಜಿ ತೂಕದ ದೇವರ ವಿಗ್ರಹಗಳನ್ನು ಕರಗಿಸಿ ಗಟ್ಟಿಮಾಡಿಕೊಡುವಂತೆ ನೀಡಿದ್ರು…

ದೇವರ ವಿಗ್ರಹಗಳನ್ನು ಮಾರಾಟ ಮಾಡೋದಕ್ಕೆ ಹೋದ್ರೆ…ಅನುಮಾನದ ಮೇಲೆ ಯಾರಾದ್ರೂ ಪೊಲೀಸ್ರಿಗೆ ಇನ್ ಪರ್ಮ್ ಮಾಡಿಬಿಡ್ತಾರೆ…

ಹೀಗಾಗಿ ಈ ಖದೀಮರು ದೇವಸ್ಥಾನದ ಹುಂಡಿ ಒಡೆದ್ರೆ ತಕ್ಷಣಕ್ಕೆ ದೇವರ ಸನ್ನಿದಾನದಲ್ಲೇ ಹಣ ಹಂಚ್ಕೊಬಿಡ್ತಿದ್ರು..ಸಣ್ಣಪುಟ್ಟ ಚಿನ್ನ ಬೆಳ್ಳಿ ಒಡವೆಗಳಿದ್ರೆ…ಅದನ್ನು ಕೂಡ ಹಂಚಿಕೊಳ್ತಿದ್ರೂ..ದೇವಸ್ಥಾನದಲ್ಲಿ ಕದ್ದ ದೊಡ್ಡ ದೇವರ ವಿಗ್ರಹ, ಮುಖವಾಡದಂತ ಬೆಳ್ಳಿಯನ್ನು ಕೂಡಿಟ್ಟುಕೊಂಡು ನಂತ್ರ ನಂಬಿಕಸ್ತ ಅಕ್ಕಸಾಲಿಗನಿಂದ ಕರಗಿಸೋದಕ್ಕೆ ಅಣಿಯಾಗಿದ್ರು…

ಕೊಪ್ಪದ ವ್ಯಕ್ತಿ ಇವರು ನೀಡಿದ ವಿಗ್ರಹವನ್ನು ಕರಗಿಸಿಟ್ಟುಕೊಂಡಿದ್ದ..ಅಷ್ಟರಲ್ಲಿ ಪ್ರಸನ್ನ ಹನೀಫ ಅಂದರ್ ಆಗಿದ್ರೂ….ಹಸನ್ ನಿಂದ ಎಲ್ಲಾ ವಸ್ತುಗಳನ್ನು ತೀರ್ಥಹಳ್ಳಿ ಪೊಲೀಸ್ರು ರಿಕವರಿ ಮಾಡಿ ಕಳ್ಳರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಾರೆ.

ಲಾಸ್ಟ್ ಬೈಟ್

ಕೇವಲ ದೇವಸ್ಥಾನಗಳನ್ನು ಅದ್ರಲ್ಲೂ ವಿಶೇಷವಾಗಿ ಶಕ್ತಿದೇವರುಗಳ ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡ್ತಿದ್ದ ಈ ಖದೀಮರಿಗೆ ಭಯವೇ ಬಂಡವಾಳವಾಗಿತ್ತು ಅನ್ನೋದಿದೆಲ್ಲಾ..ಅದೇ ವಿಚಿತ್ರ ಕಂಡ್ರಿ…

ದೇವರ ಮೇಲೆ ಭಯವಿಲ್ಲದಿದ್ರೆ ಏನಂತೆ ನಮ್ ಭಯ ಇರ್ಲೇ ಬೇಕು ಅಂತಾ ಪೊಲೀಸ್ರು ಕಳ್ಳರಿಗೆ ಸರಿಯಾದ ರುಚಿ ತೋರಿಸಿ ಮಾವನ ಮನೆಗೆ ಅಟ್ಟಿದ್ರು. .ಇದು  Malenadu today news report