BSY ಸಿಎಂ ಆಗಿದ್ದಾಗ ಅವರ ಕುಟುಂಬದ ಸಂಸ್ಥೆಯ ಹೆಸರಲ್ಲಿ ಆಗಿತ್ತು ಚೆಕ್​ ಕ್ಲೋನಿಂಗ್ /ಏಂತಹ ಮೋಸ ಗೊತ್ತಾ ಇದು /JP Flash back

When BSY was the CM, there was cheque cloning in the name of his family's firm

BSY ಸಿಎಂ ಆಗಿದ್ದಾಗ ಅವರ ಕುಟುಂಬದ ಸಂಸ್ಥೆಯ ಹೆಸರಲ್ಲಿ ಆಗಿತ್ತು ಚೆಕ್​ ಕ್ಲೋನಿಂಗ್ /ಏಂತಹ ಮೋಸ ಗೊತ್ತಾ ಇದು /JP Flash back

BSY ಸಿಎಂ ಆಗಿದ್ದಾಗ ಅವರ ಕುಟುಂಬದ ಸಂಸ್ಥೆಯ ಹೆಸರಲ್ಲಿ ಆಗಿತ್ತು ಚೆಕ್​ ಕ್ಲೋನಿಂಗ್ /ಏಂತಹ ಮೋಸ ಗೊತ್ತಾ ಇದು?/ ಲಾಕ್​ಡೌನ್​ನಲ್ಲಿ ಮುಂಬೈನ ದಾರಾವಿಗೆ ಹೋಗಿ ಆರೋಪಿನ ಬಂದಿಸಿ ತಂದ ಪೊಲೀಸರನ್ನ 8 ತಿಂಗಳು ಕಾಡಿತ್ತು ಕೊರೊನಾ?/ ಇತ್ತೀಚೆಗೆ ಹೊರಬಂದ ₹16 ಲಕ್ಷದ ಹಿಂದಿನ ಕಥೆ ಇನ್ನೆಲ್ಲೂ ಸಿಗಲ್ಲ/JP Flash back

  • ಬಿಎಸ್.ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ…ಅವರ ಸಂಸ್ಥೆಯ ಹೆಸರಿನಲ್ಲಿ ಚೆಕ್ ಕ್ಲೋನಿಂಗ್ ಆಗಿದ್ದು ಹೇಗೆ..ಗೊತ್ತಾ?
  • ಕೊರೊನಾ ಮೊದಲ ಅಲೆ ಉತ್ತುಂಗದಲ್ಲಿರುವಾಗಲೇ ಬಾಂಬೆಯ ದಾರಾವಿ ಸ್ಲಂ ಗೆ ನುಗ್ಗಿ ಆರೋಪಿಗಳನ್ನು ಹಿಡಿದ ಪೊಲೀಸರಿಗೆ, ಕೊರೊನಾ ಸೋಂಕು ಹರಡಿದ್ದು ಹೇಗೆ ಗೊತ್ತಾ?
  • ಪೊಲೀಸರ ಜೀವಕ್ಕೆ ಗ್ಯಾರಂಟಿ ಇಲ್ಲ ಎಂದು ಹೇಳಿದ್ರೂ,ತಿಂಗಳುಗಟ್ಟಲೆ ಐಸಿಯು ನಲ್ಲಿದ್ದ ಪೊಲೀಸರು ಗುಣಮುಖರಾಗಿದ್ದು ಹೇಗೆ?
  • ಇದೆ ಇವತ್ತಿನ ಎಲ್ಲಿಯು ಸಿಗದ Jp Flash back story

2020 ಮೊದಲ ಕೊರೊನಾ ಕಾಲ

ಅದು 2020 ಕೊರೊನಾ ಮೊದಲ ಅಲೆ ಪೀಕ್ ಇರೋ ಸಂದರ್ಭ, ಅದರಲ್ಲೂ ಮಹಾರಾಷ್ಟದ ಸ್ಲಂ ಸಿಟಿ ಧಾರಾವಿಯಲ್ಲಿ ಕೊರೊನಾ ಅಲೆ ಹೆಚ್ಚಿತ್ತು.

ದೇಶದೆಲ್ಲೆಡೆ ಆತಂಕ ಸೃಷ್ಟಿಯಾಗಿತ್ತು. ಇಂತಹ ಸಂದರ್ಭದಲ್ಲಿ ಶಿವಮೊಗ್ಗ ಪೊಲೀಸರಿಗೆ ಧಾರಾವಿಗೆ ಹೋಗಿ ಆ ಸ್ಲಂ ಏರಿಯಾದಲ್ಲಿ ಆರೋಪಿಗಳನ್ನು ಹಿಡಿಯಬೇಕಾದ ಬಿಗ್ ಟಾಸ್ಕ್ ಎದುರಾಗಿತ್ತು. ಅದಕ್ಕೆ ಕಾರಣ ಅಂದಿನ ಮುಖ್ಯಮಂತ್ರಿ ಬಿ.ಎಸ್,ಯಡಿಯೂರಪ್ಪ.

16 ಲಕ್ಷ ರೂಪಾಯಿ ಡ್ರಾ ಆಗಿತ್ತು

ಹೌದು ಬಿ.ಎಸ್.ಯಡಿಯೂರಪ್ಪರವರ ಕುಟುಂಬ ಒಡೆತನದ ಸಂಸ್ಥೆ ಪೆಸಿಟ್ ಕಾಲೇಜಿಗೆ ಸಂಬಂಧಿಸಿದ ಸಂಸದ ಬಿ.ವೈ ರಾಘವೇಂದ್ರ ಹೆಸರಿನಲ್ಲಿ 16 ಲಕ್ಷ ಹಣ ಡ್ರಾ ಆಗಿತ್ತು.

ಆದ್ರೆ ಸಂಸದ ಬಿ.ವೈ ರಾಘವೇಂದ್ರ ಯಾರಿಗೂ ಚೆಕ್ ನೀಡಿರಲಿಲ್ಲ. ಓಟಿಪಿಯನ್ನು ನೀಡಿರಲಿಲ್ಲ. ಆದ್ರೂ ಅವರ ಹೆಸರಿನಲ್ಲಿ ಬಾಂಬೆಯಲ್ಲಿ ಹ್ಯಾಕರ್ಸ್ ಗಳು ಚೆಕ್ ಡ್ರಾ ಮಾಡಿ 16 ಲಕ್ಷ ರೂಪಾಯಿ ಏಗಿರಿಸಿದ್ರು.

ಹೇಳಿಕೇಳಿ ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿಯೇ ಈ ಫ್ರಾಡ್ ನಡೆದು ಹೋಗಿತ್ತು. ಪೊಲೀಸರಿಗೂ ಸಹಜವಾಗಿ ಒತ್ತಡ ಹೆಚ್ಚಿತ್ತು.

ಸಿಇಎನ್ ಠಾಣೆಯ ಅಂದಿನ ಇನ್ ಸ್ಪೆಕ್ಟರ್ ಗುರುರಾಜ್ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಗಳ ಬೆನ್ನು ಬಿದ್ದಾಗ, ಅವರ ಸುಳಿವು ಮುಂಬೈಯ ಧಾರಾವಿಯನ್ನು ಬೊಟ್ಟು ಮಾಡಿ ತೋರಿಸಿತ್ತು.

ಕೊರೊನಾ ಕಾಟದ ನಡುವೆ ಮುಂಬೈ ಪ್ರಯಾಣ

ಇದೇ ಸಂದರ್ಭದಲ್ಲಿ ಕೊರೊನಾ ಅಲೆ ಬಾಂಬೆಯನ್ನು ಭಾದಿಸಿತ್ತು. ಅದರಲ್ಲೂ ಬಾಂಬೆಯ ಸ್ಲಂ ಏರಿಯಾ ಧಾರಾವಿಯಲ್ಲಿ ದಿನದಿನಕ್ಕೂ ಉಲ್ಬಣಿಸಿದ ಕೊರೊನಾ ದೇಶಕ್ಕೆ ಆತಂಕವನ್ನು ತಂದೊಡ್ಡಿತ್ತು

ಆರೋಪಿಗಳ ಜಾಡು ಭೇದಿಸಲು ಶಿವಮೊಗ್ಗ ಸಿಇಎನ್ ಪೊಲೀಸ್ ಇನ್ ಸ್ಪೆಕ್ಟರ್ ಗುರುರಾಜ್ ಹಾಗು ಸಿಬ್ಬಂದಿಗಳಾದ ಮರ್ಧನ್, ಕಿರಣ್ ಸಂದೀಪ್ ಅಲ್ಲಿಗೆ ತೆರಳಬೇಕಾದ ಅನಿವಾರ್ಯತೆ ಎದರಾಯಿತು.

ಬಾಂಬೆಯಲ್ಲಿ ಬೇಸಿಕ್ ಪೊಲೀಸಿಂಗ್ ಮಾಡಿದ ಶಿವಮೊಗ್ಗ ಪೊಲೀಸರು

ಒಂದೆಡೆ ಕೊರೊನಾ ಮತ್ತೊಂದೆಡೆ ಧಾರಾಕಾರ ಮಳೆ

 ಪೆಸಿಟ್ ಸಂಸ್ಥೆಯ ಹೆಸರಿನಲ್ಲಿ ಡ್ರಾ ಆದ ಚೆಕ್ ಪ್ರಕರಪಣಕ್ಕೆ ಸಂಬಂಧಿಸಿದಂತೆ ಸಿಇಎನ್ ಠಾಣೆ ಇನ್ ಸ್ಪೆಕ್ಟರ್ ಗುರುರಾಜ್ ತನಿಖೆಗೆ ಅಣಿಯಾದ್ರು.ಬಾಂಬೆಯಲ್ಲಿ ಚೆಕ್ ಡ್ರಾ ಆದ ಬ್ಯಾಂಕ್ ಗೆ ಹೋದ ಪೊಲೀಸರು, ಚೆಕ್ ಲೀಫ್ ಪಡೆದಿದ್ದ ಆರೋಪಿಯ ವಿಳಾಸದ ಮಾಹಿತಿ ಕಲೆ ಹಾಕಿದ್ರು.

ಮುಂಬೈ ಪೊಲೀಸರ ಸಹಕಾರ ಪಡೆದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ರೂ...ಶಿವಮೊಗ್ಗ ಪೊಲೀಸರಿಗೆ ಸಣ್ಣ ಕ್ಲೂ ಕೂಡ ಸಿಗಲಿಲ್ಲ. ನಂತರ ಮುಂಬೈ ಪೊಲೀಸರ ನೆರವನ್ನು ಯಾಚಿಸದೆ, ನಂತರ ಬೇಸಿಕ್ ಪೊಲೀಸಿಂಗ್ ಗೆ ಇಳಿದ್ರು. ಲಾಕ್ ಡೌನ್ ಆದ ಧಾರಾವಿ ಸ್ಲಮ್ ಏರಿಯಾಗಳಲ್ಲಿ ಹಗಲು ರಾತ್ರಿ ಆರೋಪಿಯ ಪತ್ತೆಗಾಗಿ ಎಂಟತ್ತು ದಿನ ಹೊಂಚು ಹಾಕಿದ್ರು.

ಲಾಕ್ ಡೌನ್ ಸಂದರ್ಭದಲ್ಲಿ ಪೊಲೀಸರಿಗೆ ಲಾಡ್ಜ್ ಕೂಡ ಸಿಗಲಿಲ್ಲ

ಇತ್ತ ಸಿಎಂ ಒಡೆತನದ ಸಂಸ್ಥೆಯಲ್ಲಾದ ಚೆಕ್ ಪ್ರಾಡ್ ಹಗರಣವನ್ನು ಭೇದಿಸುವುದು ಅಂದಿನ ಎಸ್ಪಿ ಶಾಂತ್ ಕುಮಾರ್ ಗೆ ಒಂದಶಂದ ಕಾರ್ಯಕ್ರಮವಾಗಿತ್ತು. ಕೊರೊನಾ ಅಲೆಯ ನಡುವೆಯೂ, ಇನ್ ಸ್ಪೆಕ್ಟರ್ ಗುರುರಾಜ್ ಗೆ ಮಾರ್ಗದರ್ಶನ ಮಾಡಿದ ಎಸ್ಪಿ ಶಾಂತ್ ಕಮಾರ್, ಪ್ರಕರಣ ಭೇದಿಸುವ ಭರವಸೆಯನ್ನು ನೀಡಿದ್ರು.ಎಸ್ಪಿಯವರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಧಾರಾವಿಯಲ್ಲಿ ಹನ್ನೊಂದು ದಿನ ಬೀಡು ಬಿಟ್ಟು ಕೆಲಸ ಮಾಡಿತ್ತು ಗುರುರಾಜ್ ತಂಡ. ಮುಂಬೈ ಯಲ್ಲಿ ಕೊರೊನಾ ಪೀಕ್ ಇದ್ದ ಕಾರಣಕ್ಕೆ ಲಾಡ್ಜ್ ಗಳು ಸಿಗುತ್ತಿರಲಿಲ್ಲ. ಸ್ಥಳೀಯ ಠಾಣೆ, ಇಲ್ಲವೇ ಜೀಪಿನಲ್ಲಿ ರೆಸ್ಟ್ ಪಡೆಯುವ ಪರಿಸ್ಥಿತಿ ಎದುರಾಗಿತ್ತು ಅದಲ್ಲದೆ ಕೊರೊನಾ ಸೋಂಕು ಹೆಚ್ಚಿದ್ದ ಧಾರಾವಿಯಲ್ಲಿಯೇ ಮಳೆಯ ನಡುವೆಯೂ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು.

ಮುಂಬೈಯ ಧಾರಾವಿಯಲ್ಲಿ ಸುಮಾರು ಎಂಟತ್ತು ದಿನ ಮೂಲೆ ಮೂಲೆ ಹುಡುಕಿದ್ರು, ಪೊಲೀಸರಿಗೆ ಆರೋಪಿಯ ಜಾಡು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಇತ್ತ ಕೊರೊನಾ ಕಾಣಿಸಿಕೊಂಡ ಸ್ಮಂ ಎರಿಯಾಗಳನ್ನು ಅಲ್ಲಿನ ಸ್ಥಳೀಯ ಆಡಳಿತ ಲಾಕ್ ಡೌನ್ ಮಾಡಿಸುತಿತ್ತು..ಕೊರೊನಾ ಪಾಸಿಟಿವ್ ಹೆಚ್ಚಾದ ಏರಿಯಾಗಳನ್ನು ಪೊಲೀಸರು ಒಂದೊಂದಾಗಿ ಸೀಲ್ ಡೌನ್ ಮಾಡಿಕೊಂಡು ಬರುತ್ತಿದ್ದರೆ. ಇತ್ತ, ಶಿವಮೊಗ್ಗ ಪೊಲೀಸರು ಸೀಲ್ ಡೌನ್ ಆದ ಏರಿಯಾಗಳಲ್ಲೇ ಆರೋಪಿಗಳನ್ನು ಹುಡುಕಬೇಕಾದ ಸಂದಿಗ್ಧತೆ ಎದುರಾಗಿತ್ತು.,

ದಾರಾವಿಯಲ್ಲಿ ಪೊಲೀಸರಿಗೆ ಫೆವರಿಂಗ್ ಇರುವ ಇರ್ಮಮೆಂಟ್ ಗಳನ್ನು ಬಳಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ರು ಗುರುರಾಜ್. ಆರೋಪಿಯೊಬ್ಬ ದಾರಾವಿಯಲ್ಲಿ ಇಂತಿಂಥ ಕಡೆ ಪಾನಿಪೂನಿ ತಿನ್ನೋದಕ್ಕೆ ಬರ್ತಾನೆ..ಅನ್ನೋ ಸುಳಿವು ಸಿಕ್ಕ ತಕ್ಷಣ ಗುರುರಾಜ್, ಮಾಹಿತಿದಾರರ ಮೂಲಕವೇ ಆರೋಪಿ, ನಿಗದಿತ ಸ್ಥಳಕ್ಕೆ ಬರಮಾಡಿಕೊಳ್ಳುತ್ತಾರೆ. ಎಲ್ಲರೂ ಸ್ಮಮ್ ಏರಿಯಾದಲ್ಲಿರುವವರಂತೆ ಸಿವಿಲ್ ಡ್ರೆಸ್ ನಲ್ಲಿ ಅಟ್ಯಾಕ್ ಗೆ ಅಣಿಯಾಗ್ತಾರೆ. ಅಂದುಕೊಂಡಂತೆ ಆರೋಪಿ ಬಂದ ತಕ್ಷಣ ಆತನನ್ನು ವಶಕ್ಕೆ ಪಡೆದು, ಪೊಲೀಸರು ಲಾಕ್ ಮಾಡಿಕೊಳ್ತಾರೆ. ಬಂಧಿತ ವ್ಯಕ್ತಿಯ ಮಾಹಿತಿ ಮೇರೆಗೆ ಉಳಿದವರನ್ನು ಪೊಲೀಸರು ಅರೆಸ್ಟ್ ಮಾಡಿ ಶಿವಮೊಗ್ಗಕ್ಕೆ ಕರೆ ತರ್ತಾರೆ. ಒಟ್ಟು 11 ದಿನಗಳ ಕಾಲ ದಾರಾವಿಯಲ್ಲಿ ಓಡಾಡಿದ ಪೊಲೀಸರಿಗೆ ಚೆಕ್ ಕ್ಲೋನಿಂಗ್ ಕಳ್ಳರು ಸಿಕ್ಕಿಬಿಳ್ತಾರೆ.

ಚಿತ್ರದುರ್ಗ ಅಸ್ಥಿ ಪಂಜರ ನೆನಪಿಸಿದ ಘಟನೆ | 15-20 ದಿನದ ನಂತರ ಲಾರಿಯಲ್ಲಿ ವ್ಯಕ್ತಿಯ ಶವ ಪತ್ತೆ! ಶಿವಮೊಗ್ಗ ವೀರಭದ್ರ ಟಾಕೀಸ್​ ಬಳಿ ಘಟನೆ

ಏನಿದು ಚೆಕ್​ ಕ್ಲೋನಿಂಗ್

ಪ್ರತಿಷ್ಠಿತ ಕಂಪನಿ, ವ್ಯಕ್ತಿ, ಉದ್ಯಮಿ ಸೇರಿದಂತೆ ಹಣಕಾಸಿನ ವ್ಯವಸ್ಥೆಯನ್ನು ಬ್ಯಾಂಕ್ ನಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸುವವರ ಡೇಟಾಗಳನ್ನು ಈ ಡೇಟಾ ಕಳ್ಳರು ಯಾವುದಾದರೂ ಒಂದು ಮೂಲದಿಂದ ಹಣಕೊಟ್ಟು ಪಡೆದುಕೊಳ್ಳುತ್ತಾರೆ.

ಅಂತಹ ವ್ಯಕ್ತಿಯು ಬ್ಯಾಂಕ್ ನಲ್ಲಿ ಎಷ್ಟು ಹಣ ಇಟ್ಟಿದ್ದಾನೆಂಬುದನ್ನು ಖಾತರಿ ಮಾಡಿಕೊಳ್ಳುತ್ತಾರೆ. ಅಲ್ಲದೆ ಅವರ ಸಹಿಯ ಮಾದರಿಯನ್ನು ಕೂಡ ಕಲೆ ಹಾಕಿಕೊಂಡಿರುತ್ತಾರೆ. ಇಂತಹ ಪ್ರತಿಷ್ಠಿತ ವ್ಯಕ್ತಿಗಳು ಬಳಸುವ ಚೆಕ್ ಗಳನ್ನು ಹಾಗು ವಾಟರ್ ಮಾರ್ಕ್ ಗಳನ್ನು ಯಾವುದೇ ಅಸಲಿ ಚೆಕ್ ಕೂಡ ನಾಚುವಂತೆ ಪ್ರಿಂಟ್ ಮಾಡಿರುತ್ತಾರೆ.

ಅಲ್ಲದೆ ಲೈಟ್ ಬಿಟ್ಟು ಚೆಕ್ ನ ವಾಟರ್ ಮಾರ್ಕ್ ನೋಡಿದ್ರೂ,ಅದು ಒರಿಜಿನಲ್ ನಂತೆ ಕಾಣುತ್ತದೆ ಹಾಗೆ, ಒಂದು ಒರಿಜನಲ್ ಚೆಕ್ ಗೆ ಪರ್ಯಾಯ ಚೆಕ್ ನ್ನು ಸಿದ್ದ ಪಡಿಸುದೇ ಚೆಕ್ ಕ್ಲೋನಿಂಗ್.

ಈ ರೀತಿ ಸಿದ್ದಪಡಿಸಿದ ಚೆಕ್ ಗಳಿಗೆ ಹೆಸರು ಸಹಿ ಹಾಕಿ ಬ್ಯಾಂಕ್ ನಲ್ಲಿ ಕ್ಯಾಶಿಯರ್ ಬ್ಯುಸಿಯಿರುವ ಸಂದರ್ಭದಲ್ಲಿ ಅರ್ಜೆಂಟ್ ಅಂತಾ ಹೇಳಿ ಹಣ ಮಾಡಿಸಿಕೊಳ್ಳುವುದು. ಖದೀಮರ ಪ್ಲಾನಾಗಿರುತ್ತದೆ.

ಅವತ್ತು ಏನಾಗಿತ್ತು?

ಅದೇ ರೀತಿ ಸಂಸದ ಬಿ.ವೈ ರಾಘವೇಂದ್ರರು ಯಾರಿಗೂ ಚೆಕ್ ನೀಡದಿದ್ರೂ. ಅವರ ಹೆಸರಿನಲ್ಲಿ 16 ಲಕ್ಷ ರೂಪಾಯಿ ಹಣವನ್ನು ಖದೀಮರು ಡ್ರಾ ಮಾಡಿ ಎಂಜಾಯ್ ಮಾಡಿದ್ರು,

ಆದ್ರೆ ಆರ್.ಬಿ.ಐ ನಿಯಮಾವಳಿ ಪ್ರಕಾರ ಬ್ಯಾಂಕ್ ಖಾತೆದಾರ ತನ್ನ ಚೆಕ್ ಅನ್ನಾಗಲಿ ಸಹಿಯನ್ನಾಗಲಿ, ಒಟಿಪಿಯನ್ನಾಗಲಿ ಇತರರಿಗೆ ನೀಡದೆ ಆತನ ಖಾತೆಯಿಂದ ಹಣ ಡ್ರಾ ಆದ್ರೆ ಅದಕ್ಕೆ ಬ್ಯಾಂಕ್ ನ ಅಧಿಕಾರಿಗಳೇ ಹೊಣೆ ಹೋರಬೇಕಾಗುತ್ತದೆ.ಆ ನಿಯಮವನ್ನು ಇಲ್ಲಿ ಕೂಡ ಬ್ಯಾಂಕ್​ ಪಾಲಿಸಿದೆ.

ಪೊಲೀಸರಿಗೆ ಬಂತು ಕೊರೊನಾ

ಆದ್ರೆ ವಿಷಯಕ್ಕೆ ಬರೋದಾದ್ರೆ, ಆರೋಪಿಗಳನ್ನು ಹಿಡಿದ ಪೊಲೀಸರು,ಶಿವಮೊಗ್ಗಕ್ಕೆ ಬರೋದ್ರಲ್ಲಿ ಸುಸ್ತಾಗಿದ್ರು, ಎಲ್ಲರಿಗೂ ಜ್ವರ ಕಾಣಿಸಿಕೊಂಡಿತ್ತು.

  • ಪರೀಕ್ಷಿಸಿದಾಗ ಇನ್ ಸ್ಪೆಕ್ಟರ್ ಗುರುರಾಜ್, ಕಿರಣ್ ಸಂದೀಪ್ ಮರ್ದನ್ ಎಲ್ಲರಿಗೂ ಕೊರೊನಾ ಪಾಸಿಟಿವ್ ಬಂದಿತ್ತು.
  • ಗುರುರಾಜ್ ಸಾವಿನ ಮನೆ ಕದ ತಟ್ಟಿಯೇ ವಾಪಸ್ಸು ಬರಬೇಕಾಯಿತು, ಹಾಗು ಹೆಡ್ ಕಾನ್ ಸ್ಟೆಬಲ್ ಮರ್ಧನ್ ಆ ಆಕ್ಷಿಜನ್ ಲೆವೆಲ್ 55 ಕ್ಕೆ ಕುಸಿದಿತ್ತು, ವೈದ್ಯರು ಬದುಕುವುದು ಗ್ಯಾರಂಟಿ ಇಲ್ಲ ಎಂದು ಷರಾ ಬರೆದಿದ್ದರು.
  • ಆರೋಪಿಯನ್ನು ಹಿಡಿಯಲು ಹೋಗಿ ಕೊರೊನಾ ಅಂಟಿಸಿಕೊಂಡು ಬಂದ ಪೊಲೀಸರು ಮನೆಗೆ ಹೋಗಿ ಐಸೋಲೇಷನ್ ಆದ್ರೂ, ಅದರ ಭಾದೆಯಿಂದ ಹೊರಬರಲಾಗಲಿಲ್ಲ.

ಕೊನೆಗೆ ದೇವರು ಗೆಲ್ಲಿಸಿದ ಎಲ್ಲರನ್ನು, ಮರ್ದನ್ ಐಸಿಯು ನಲ್ಲಿ ಚಿಕಿತ್ಸೆ ಪಡೆದು, ಸಾವು ಗೆದ್ದು ಬಂದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಕುಟುಂಬದ ವಿಚಾರವಾದ್ದರಿಂದ ಪೊಲೀಸರು ಮಾದ್ಯಮಗಳಿಗೆ ಸುದ್ದಿಯನ್ನು ಬಿಟ್ಟುಕೊಟ್ಟಿರಲಿಲ್ಲ

ಯಾಕೋ ಇತ್ತಿಚೆಗೆ ಬಿ.ವೈ ರಾಘವೇಂದ್ರರು, ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಿಜಿಟಲ್ ಪಾವತಿ ಮಾಹಿತಿ ಕಾರ್ಯಕ್ರಮದಲ್ಲಿ ಈ ಘಟನೆಯನ್ನು ಮೆಲಕು ಹಾಕಿದ್ರು.

ಈ ಕಾರಣಕ್ಕಾಗಿ ಈ ಸುದ್ದಿಯನ್ನು ಕೊರೊನಾ ಪೀಕ್ ಇರೋ ಸಂದರ್ಭದಲ್ಲಿ ಸಾವಿನ ಮನೆಯಂತಾಗಿದ್ದ ದಾರಾವಿಗೆ ನುಗ್ಗಿ ಆರೋಪಿಗಳನ್ನು ಹೇಗೆ ಸೆರೆ ಹಿಡಿದು, ಪೊಲೀಸರು ಹೇಗೆಲ್ಲಾ ಸಾವನ್ನು ಗೆದ್ದು ಬಂದರು ಎಂಬುದು ಹೇಳಬೇಕಾಯಿತು.