ಮಠದ ಗದ್ದುಗೆಯಲ್ಲಿತ್ತು ಜಗತ್ತೆ ಕಾಣದ ಮಹಾ ಘಟಸರ್ಪ! ಬಿಂದಿಗೆ ನೀರಿನಲ್ಲಿ ಹಾವಿನ ವಿಷ ತೆಗೆಯುತ್ತಿದ್ರು ‘Today’ ಸತ್ಯ!

In the head of that monastery in Shimoga was the great dragon that the world had never seen!

ಮಠದ ಗದ್ದುಗೆಯಲ್ಲಿತ್ತು ಜಗತ್ತೆ ಕಾಣದ ಮಹಾ ಘಟಸರ್ಪ!  ಬಿಂದಿಗೆ ನೀರಿನಲ್ಲಿ ಹಾವಿನ ವಿಷ ತೆಗೆಯುತ್ತಿದ್ರು  ‘Today’ ಸತ್ಯ!
Mysterious incidents in Shivamogga

Malenadu today news report  | ಶಿವಮೊಗ್ಗದ ಆ ಮಠದ ಗದ್ದುಗೆಯಲ್ಲಿತ್ತು ಜಗತ್ತೆ ಕಾಣದ ಮಹಾ ಘಟಸರ್ಪ! ಅಲ್ಲಿ ಬಿಂದಿಗೆ ನೀರಿನಲ್ಲಿ ಹಾವಿನ ವಿಷ ತೆಗೆದು ಜೀವ ಉಳಿಸ್ತಿದ್ದವರು ಯಾರು ಗೊತ್ತಾ!? ನಿಗೂಢತೆಯ ವಿಸ್ಮಯ ಸ್ಟೋರಿ ಇವತ್ತಿನ ‘Today’ ಸತ್ಯ! ವಿಡಿಯೋ ಸ್ಟೋರಿ!

ಆ ಮಠದ ಗದ್ದುಗೆಗೆ ಕಾಯಕಲ್ಪ ಮಾಡಬೇಕು. ಸುತ್ತಲ ಪರಿಸರ ಸಮತಟ್ಟು ಮಾಡಬೇಕೆಂಬುದು ಆ ಗುರೂಜಿಯ ಬಯಕೆಯಾಗಿತ್ತು.ಅಂದುಕೊಂಡಂತೆ ಅಂದು ಜೆಸಿಬಿ ಯಂತ್ರದ ಮೂಲಕ ಗದ್ದುಗೆ ಸುತ್ತಲು ಮಣ್ಣು ಅಗೆಯಲು ಮುಂದಾದ್ರು, ಆದ್ರೆ ಅದೆಲ್ಲಿಂದ ಪ್ರತ್ಯಕ್ಷವಾಯಿತೋ ಆ ಘಟಸರ್ಪ, ಜೆಸಿಬಿ ಯಂತ್ರಕ್ಕೆ ಅಡ್ಡಲಾಗಿ ಬಂದುಬಿಟ್ಟಿತು.

ಗದ್ದುಗೆಯನ್ನು ಅಗೆಯಲು ಬಿಡದೆ ಗದ್ದುಗೆಯ ಬಿಲ ಸೇರಿ ತನ್ನ ಇರುವಿಕೆಯನ್ನು ಸಾಕ್ಷಿಕರಿಸಿತ್ತು ಆ ಜೀವಿ. ಈ ದೈವಿಶಕ್ತಿಯ ಕಥೆಯ ಹಿಂದನ ರಹಸ್ಯವೇನು, ಆ ಮಠದಲ್ಲಿರುವ ಪವಾಡ ಶಕ್ತಿಯೇನು. ಇದು ಇವತ್ತಿನ ಟುಡೆ ಸತ್ಯ!

ಶಿವಮೊಗ್ಗದ ಆ ಮಠದ ಗದ್ದುಗೆಯಿಂದ ಹೊರಬಂದು ದರ್ಶನ ಕೊಟ್ಟಿತ್ತು ಘಟಸರ್ಪ!

ದೈವ ನಂಬಿಕೆ ಎಂಬುದು ಅವರವರ ಭಾವಕ್ಕೆ ಬಿಟ್ಟ ವಿಚಾರ, ಶಾಸ್ತ್ರ ಸಂಪ್ರದಾಯಗಳನ್ನು ನಂಬದಿದ್ದರೂ, ದೈವಿಶಕ್ತಿಯನ್ನು ನಂಬುವವರು ಸಮಾಜದಲ್ಲಿ ಸಾಕಷ್ಟಿದ್ದಾರೆ. ಇದಕ್ಕೆ ಜಾತಿ ಧರ್ಮದ ಭೇದಭಾವವಿಲ್ಲ. ಇಂತಹ ನಂಬಿಕೆಗೆ ಸಾಕ್ಷಿಯಾಗೋದು, ಆಯಾ ಧರ್ಮಸಭೆ, ಮಠ, ಮಂದಿರ,ಮಸೀದಿಗಳಲ್ಲಿ ನಡೆಯುವ ಚಮತ್ಕಾರಗಳು. ಪವಾಡಗಳು. ಅಂತಹ ದೈವಶಕ್ತಿಗೆ ಸಾಕ್ಷಿಯಾಗಬಲ್ಲ ಚಮತ್ಕಾರವೊಂದು ಮಲೆನಾಡಿನ ಮೂಲೆಯಲ್ಲಿ ನಡೆದಿತ್ತು.

2014 ರ ಡಿಸೆಂಬರ್ ನಲ್ಲಿ ನಡೆದ ಘಟನೆಯಿದು.

ಸುಮಾರು 500 ವರ್ಷಗಳ ಇತಿಹಾಸ ಹೊಂದಿರುವ ಸೊರಬ ತಾಲೂಕಿನ ಕ್ಯಾಸನೂರು ಮಠದಲ್ಲಿ 2014 ರಲ್ಲಿ ಅಚ್ಚರಿಯ ಪ್ರಸಂಗವೊಂದು ನಡೆದಿತ್ತು. ಮಠದ ಸುತ್ತಲ ಪರಿಸರವನ್ನು ಶುಚಿಗೊಳಿಸಿ, ಬರುವ ಭಕ್ತರಿಗೆ ಅನುಕೂಲ ಮಾಡುವ ಸಲುವಾಗಿ ಖೇಚರಪುರ ಮಠದ ಶ್ರೀಗಳು ಜೆಸಿಬಿ ಯಂತ್ರದ ಮೂಲಕ ಮಣ್ಣು ಅಗೆಸಲು ಮುಂದಾದ ಸಂದರ್ಭದಲ್ಲಿ ಘಟಸರ್ಪವೊಂದು ಪ್ರತ್ಯಕ್ಷವಾಗಿತ್ತು.

ಅಬ್ಬಾ..,ಘಟ ಸರ್ಪದ ಹೆಸರು ಕೇಳಿದ್ದೆವು ಓದಿದ್ದೆವು..ಕಲಿಯುಗದಲ್ಲಿ ಅಂತಹ ಸರ್ಪ ಹೇಗೆ ಪ್ರತ್ಯಕ್ಷವಾಗಲೂ ಸಾಧ್ಯ ಅಂತೀರಾ..ಈ ಘಟನೆಯನ್ನು ನಂಬುವುದು ಬಿಡುವುದು ನಿಮಗೆ ಬಿಟ್ಟ ವಿಚಾರ. ಯಾಕೆಂದ್ರೆ ಮಠದಲ್ಲಿ ನಡೆದ ಘಟನೆಗೆ ಸಾಕ್ಷಿಭೂತರಾಗಿದ್ದು, ಮಠದ ಗುರುಗಳೇ ಹೊರೆತು, ಮತ್ತಿನ್ಯಾವ ಸಾಮಾನ್ಯನೂ ಅಲ್ಲ. ಹೀಗಾಗಿ ಮಠದಲ್ಲಿ ನಡೆದ ಈ ಪ್ರಸಂಗಕ್ಕೆ ದೈವಶಕ್ತಿಯ ಲೇಪವಾಗಿದೆ.

ಜಾಗ ಸಮತಟ್ಟು ಮಾಡಲು ಹೋದಾಗ ನಡೆದಿದ್ದು ಅಚ್ಚರಿ

ಸೊರಬ ತಾಲ್ಲೂಕಿನ ಕ್ಯಾಸನೂರಿನ ಖೇಚರಪುರದ ಮಠದ ಶ್ರೀಗಳು ಮಠದ ಜೀರ್ಣೋದ್ಧಾರಕ್ಕಾಗಿ ಹಗಲಿರುಳು ಶ್ರಮಿಸಿದವರು. ಪಾಳು ಬಿದ್ದಂತಿದ್ದ ಮಠಕ್ಕೆ ಕಾಯಕಲ್ಪ ಮಾಡಲು ಅಣಿಯಾಗಿದ್ರು. ಶ್ರೀಗಳಿಗೆ ಸುತ್ತಮುತ್ತಲ ಭಕ್ತಸಾಗರ ನೆರವಿನ ಹಸ್ತ ನೀಡಿತ್ತು. ಮಠದ ಸುತ್ತಲ ಪರಿಸರವನ್ನು ಸಮತಟ್ಟು ಮಾಡಿ, ಸುತ್ತಮುತ್ತಲಿರುವ ಗದ್ದುಗೆಗಳನ್ನು ನವೀಕರಣ ಮಾಡುವ ಉದ್ದೇಶ ಮಠದ ಶ್ರೀಗಳದ್ದಾಗಿತ್ತು. ಜೆಸಿಬಿ ಯಂತ್ರಗಳ ಮೂಲಕ ಮಠದ ಸುತ್ತಲ ಪರಿಸರವನ್ನು ಸಮತಟ್ಟು ಮಾಡಲಾಗುತ್ತಿತ್ತು.

ಇಂತಹ ಸಂದರ್ಭದಲ್ಲಿಯೇ ಮಠದ ಸನಿಹವೇ ಇರುವ ಗದ್ದುಗೆ ಬಳಿ ಜೆಸಿಬಿ ಚಾಲಕ ಮಣ್ಣು ಅಗೆಯಲು ಹೋದಾಗ ದಿಗ್ಬ್ರಾಂತನಾಗಿ ಹೋಗಿದ್ದ. ಗದ್ದುಗೆ ಬಳಿ ಯಂತ್ರದಿಂದ ಮಣ್ಣು ಅಗೆಯಲು ಮುಂದಾಗುತ್ತಿದ್ದಂತೆ ದೊಡ್ಡ ಗಾತ್ರದ ನಾಗರ ಹಾವು ಪ್ರತ್ಯಕ್ಷವಾಯಿತು. ಅದು ಜೆಸಿಬಿ ಗೆ ಅಡ್ಡಲಾಗಿ ಬಂದು, ತಕ್ಷಣವೇ ಗದ್ದುಗೆ ಒಳಪ್ರವೇಶಿಸಿತು.

ನಾನು ಕೆಲಸಮಾಡಲಾರೆ, ಕೈ ಕಾಲು ನಡುಗುತ್ತಿವೆ

ತಕ್ಷಣ ಗಾಬರಿಗೊಂಡ ಚಾಲಕ ಜೆಸಿಬಿ ಬಿಟ್ಟು, ಕೆಳಗಿಳಿದ, ನಾನು ಕೆಲಸ ಮಾಡಲಾರೆ, ನನ್ನ ಕೈಕಾಲುಗಳು ಅದುರುತ್ತಿವೆ ಎಂದು ಸನಿಹದಲ್ಲಿಯೇ ಇದ್ದ ಶ್ರೀಗಳಿಗೆ ಹೇಳಿದ. ಇದೆಲ್ಲವನ್ನು ಸನಿಹದಿಂದಲೇ ನೋಡುತ್ತಿದ್ದ ಶ್ರೀಗಳು ಕೂಡ ತಕ್ಷಣಕ್ಕೆ ಭಯಭೀತರಾದರು. ಏಕೆಂದರೆ ತನ್ನ ದೇಹಸಿರಿಯನ್ನು ಪ್ರದರ್ಶಿಸಿದ ಘಟಸರ್ಪದ ರೌದ್ರದರ್ಶನ ಕಣ್ಣಿನಿಂದ ನೋಡಲು ಅಂದು ಯಾರಿಂದಲೂ ಸಾಧ್ಯವಾಗ್ಲಿಲ್ಲ.

ತಮ್ಮ ಜೀವಮಾನದಲ್ಲಿ ಎಂದೂ ಕಾಣದಂತಹ ದೊಡ್ಡ ಗಾತ್ರದ ನಾಗರ ಹಾವು ಪ್ರತ್ಯಕ್ಷವಾಗಿದ್ದನ್ನು ಕಂಡ ಶ್ರೀಗಳು ಮನದಲ್ಲೇ ಸಂಕಲ್ಪ ಮಾಡಿಬಿಟ್ಟರು. ಏಕೆಂದರೆ ಅವರು ಕಂಡ ಘಟದ ಸರ್ಪದ ಚಿತ್ರಣ ಭಯಾನಕವಾಗಿತ್ತು. ಮನುಷ್ಯರನ್ನೇ ಹೋಲುವ ನೀಲಿ ಕಣ್ಣುಗಳು, ತಲೆಯ ಮೇಲೆ ಕೂದಲು ಗೋದಿ ಮೈ ಬಣ್ಣವನ್ನು ಆ ದೊಡ್ಡ ಗಾತ್ರದ ಹಾವು ಹೊಂದಿತ್ತು.

ನೀಲಿ ಕಣ್ಣುಗಳ ದರ್ಶನ

ಅಲ್ಲಿ ಕೆಲಸ ಮಾಡುತ್ತಿದ್ದ ಜನರೆಲ್ಲರೂ ಈ ಹಾವನ್ನು ನೋಡಿದ್ದಾರೆ. ಜೆಸಿಬಿಗೆ ಅಡ್ಡಲಾಗಿ ಬಂದ ಹಾವು ಕೆಲವೇ ಕ್ಷಣಗಳಲ್ಲಿ ಗದ್ದುಗೆಯ ಒಳಗಿನ ಬಿಲದಲ್ಲಿ ಹೋಗಿ ಸೇರಿಕೊಂಡಿತು. ಅಂದು ಎಲ್ಲರೂ ಕೆಲಸವನ್ನು ಸ್ಥಗಿತಗೊಳಿಸಿದ್ದರು. ಬಿಲದೊಳಗೆ ಸೇರಿಕೊಂಡ ಹಾವನ್ನು ನೋಡಲು ಯಾರು ಅತ್ತ ಸುಳಿಯಲಿಲ್ಲ.

ಮೊದಲೇ ಮಠದ ಮಹಿಮೆಯನ್ನು ಅರಿತಿದ್ದ ಶ್ರೀಗಳು ಮಾತ್ರ ಎದೆಗುಂದಲಿಲ್ಲ.ಗದ್ದುಗೆಯ ಬಿಲದೊಳಗೆ ಅಡಗಿ ಕೂತ ಹಾವನ್ನು ಸನಿಹದಿಂದಲೇ ನೋಡುವ ಪ್ರಯತ್ನ ಮಾಡಿದರು. ಬಿಲದೊಳಗೆ ಬೆಳಕನ್ನು ಬಿಟ್ಟು ನೋಡಿದಾಗ ಅವರಿಗೆ ಮತ್ತದೇ ನೀಲಿಕಣ್ಗಳ ದರ್ಶನ. ದೊಡ್ಡಗಾತ್ರದ ಮುಖದರ್ಶನವಾಗಿದೆ. ಬಿಲದೊಳಗೆ ಬೆಳಕುಬಿಟ್ಟು ನೋಡಿದಾಗ ದೊಡ್ಡದೇಹಗಾತ್ರ ಸರಿದಾಡುತ್ತಿರುವುದು ಕಂಡಿದೆ.

ಬಿಲದೊಳಗಿನ ಹಾವಿನ ಬಾಲದ ತುದಿಯನ್ನು ಗಮನಿಸಿದರೆ, ಅದು ಮನುಷ್ಯನ ಭುಜದ ಗಾತ್ರದಷ್ಟು ದಪ್ಪನಾಗಿದೆ. ಪಾದದ ಅಗಲವೇ ನಾಲ್ಕು ಇಂಚು ಇತ್ತು. ಅದರ ಪಾದದ ಪೊರೆ ನೋಡಿದ್ರೆ ಹಾವು ಇನ್ನೆಷ್ಟು ದೊಡ್ಡದಿರಬೇಕು ಎಂದು ಊಹಿಸುವುದಕ್ಕು ಸಾಧ್ಯವಾಗಲಿಲ್ಲ.

ಅಂದು ಗದ್ದುಗೆ ಸೇರಿದ ಹಾವು ಮತ್ತೆ ಹೊರಬಂದಿಲ್ಲ.

ಹಾಗೆ ಒಮ್ಮೆ ದರ್ಶನ ಕೊಟ್ಟ ಸರ್ಪ, ಮತ್ತೆ 10 ದಿನಗಳಾದ್ರೂ ಗದ್ದುಗೆಯಿಂದ ಹೊರಬಂದಿರಲಿಲ್ಲ. ಯಾರಿಗೂ ಮುಖದರ್ಶನ ನೀಡಿರಲಿಲ್ಲ. ಆಹಾರ ಅರಸಿ ಎಲ್ಲಿಗೂ ಹೋಗಿಲ್ಲ, ಗದ್ದುಗೆ ಬಿಲದಲ್ಲಿ ಸರಿದಾಡುವ ಬಾಲದ ತುದಿ, ದೇಹದ ಮಧ್ಯಭಾಗ ಹೊರಳಾಡುವ ದೃಶ್ಯ ಮಾತ್ರ ಕಾಣಸಿಗುತ್ತಿತ್ತು.

ಒಮ್ಮೆ ಬಿಲದಿಂದ ಹೊರಹಾಕಿದ ಮೈ ಮಾತ್ರ ಶ್ರೀಗಳಿಗೆ ಗೋಚರಿಸಿದೆ.ಅದನ್ನು ಅವರು ಕ್ಯಾಮರಾದಲ್ಲಿ ಕ್ಲಿಕ್ಕಿಸಿದ್ದಾರೆ. ಹಾವು 10 ದಿನಗಳಿಂದ ಗದ್ದುಗೆ ಬಿಟ್ಟು ಹೊರಬರದಿರುವದನ್ನು ಗಮನಿಸಿದ ಶ್ರೀಗಳು ಹಾವು ಪೊರೆ ಬಿಟ್ಟಿರಬೇಕು ಎಂದು ಭಾವಿಸಿದ್ದಾರೆ. ಹಾವು ಪೊರೆಬಿಡಲು ನಾಲ್ಕೈದು ದಿನಗಳಾಗಬಹುದು.ನಂತರ ಹಾವು ಬೇರೆಡೆ ಹೋಗಬಹುದು ಅಂದು ಅವರು ಭಾವಿಸಿದ್ದಾರೆ.

ಹಾವಿನ ಕಣ್ಣಿನ ಪೊರೆ ಏನೋ ಕಥೆ ಹೇಳುತ್ತಿತ್ತು

ಶ್ರೀಗಳು ಅಂದುಕೊಂಡಂತೆ ಗದ್ದುಗೆ ಸೇರಿದ್ದ ಕೆಲ ದಿನಗಳಲ್ಲಿ ಹಾವು ಪೊರೆಬಿಟ್ಟಿದೆ. ಹಾವಿನ ಪೊರೆಯ ಮಾದರಿಗಳು ಗದ್ದುಗೆ ಬಳಿ ಹಾಗೇಯೆ ಇದ್ವು. ಪೊರೆಯ ಗಾತ್ರ ಉದ್ದ ಅಗಲವನ್ನು ಗಮನಿಸಿದರೆ ಹಾವಿನ ಗಾತ್ರ ಎಷ್ಟು ಎಂಬುದು ಅರಿವಾಗುತ್ತೆ. ಆ ಪೊರೆ ನೋಡಿದರೆ,ಮನುಷ್ಯರ ಕಣ್ಣನ್ನೇ ಮೀರಿಸುವಂತಿತ್ತು. ಹಾವು ಪೊರೆಬಿಟ್ಟರೂ ಗದ್ದುಗೆಯನ್ನು ಬಿಟ್ಟು ಕದಲಲಿಲ್ಲ ಏಕೆ ಎಂಬ ಅನುಮಾನಗಳಿಗೆ ಶ್ರೀಗಳಿಗೆ ತಕ್ಷಣ ಸ್ಥಳದಲ್ಲೇ ಉತ್ತರ ಸಿಕ್ಕಿದೆ. ಅದು ದೈವೀ ಸಂಕೇತದ ಶಕ್ತಿ ಎಂಬುದು ಶ್ರೀಗಳಿಗೆ ಅರಿವಾಗಿದೆ.

ಐದು ತಿಂಗಳ ಹಿಂದೆ ಶ್ರೀಗಳಿಗೆ ಕನಸಿನಲ್ಲಿ ಕಂಡಿತ್ತು ಹಾವು.

ಹಾವು ಕಾಣಿಸಿಕೊಳ್ಳುವ ಐದು ತಿಂಗಳ ಮೊದಲೇ ಮಠದಲ್ಲಿ ಶ್ರೀಗಳು ಮಲಗಿದ್ದ ಸಂದರ್ಭದಲ್ಲಿ ಬೆಳಗಿನ ಜಾವ ಕನಸೊಂದು ಬಿದ್ದಿದೆ. ಕನಸಿನಲ್ಲಿ ಮಠದ ಗದ್ದುಗೆ ಬಳಿ ಘಟಸರ್ಪವೊಂದು ಕನಸಿನಲ್ಲಿ ದರ್ಶನ ನೀಡಿದೆ. ಗದ್ದುಗೆ ಬಳಿ ಪ್ರಕಾಶಮಾನವಾಗಿ ಶೋಭಿಸುತ್ತಿದ್ದ ಸರ್ಪದ ಮೇಲೆ ಕೂದಲುಗಳು ಬೆಳಕು ಕಂಡಿದೆ. ಶ್ರೀಗಳು ತಕ್ಷಣ ಎದ್ದು ಮಠದ ಹೊರಗೆ ಬಂದು ಗದ್ದುಗೆ ಬಳಿ ವೀಕ್ಷಿಸಿದಾಗ ಕನಸಿನಲ್ಲಿ ಕಂಡ ಹಾವೇ ಅಲ್ಲಿ ನಿಜರೂಪದಲ್ಲಿ ದರ್ಶನ ನೀಡಿದೆ.

ಅದು ಸಾರಂಗ ಶ್ರೀಗಳ ಗದ್ದುಗೆ. ಅವರಿಗಿತ್ತು.ಹಾವಿನ ವಿಷದ ನಂಜು ಕಡಿಮೆ ಮಾಡುವ ಶಕ್ತಿ.

ಅಷ್ಟಕ್ಕೂ ಆ ಗದ್ದುಗೆಯಲ್ಲಿ ದೊಡ್ಡ ಗಾತ್ರದ ಹಾವಿನ ಇರುವಿಕೆಗೂ ಸಾಕ್ಷಿಯಾಗಬಲ್ಲ ದೈವಿಶಕ್ತಿಯಿದೆ. ಅದೇನಂತಿರಾ,ಆ ಗದ್ದುಗೆ ಅಂತಿಂಥ ವ್ಯಕ್ತಿಯ ಸಮಾಧಿಯಲ್ಲ. 200 ವರ್ಷಗಳ ಹಿಂದೆ ಇದೇ ಮಠವನ್ನು ಮುನ್ನೆಡೆಸುತ್ತಿದ್ದ ಸಾರಂಗ ಲಿಂಗ ಶ್ರೀಗಳು ಜೀವಂತವಾಗಿ ಐಕ್ಯಗೊಂಡ ಸಮಾದಿಯಾಗಿತ್ತು.

ದೈವಿಸಂಭೂತರಾದ ಗುರುಗಳು ಪವಾಡ ಪುರುಷರಾಗಿದ್ದರು ಅವರು. ಹಾವು ಕಚ್ಚಿದವರು, ಕೈಕಾಲು ಕೊಳೆತವರು ನಾಯಿಕಚ್ಚಿದವರು ಇಲ್ಲಿ ಅಮವಾಸ್ಯೆ ದಿನ ಬಂದರೆ ಸಾರಂಗಲಿಂಗ ಶ್ರೀಗಳು ಕೇವಲ ನೀರಿನ ಮಂತ್ರಶಕ್ತಿಯಿಂದ ವಿಷದ ನಂಜನ್ನು ಕಡಿಮೆ ಮಾಡಿ, ರೋಗಿಗಳನ್ನು ಗುಣಮುಖರನ್ನಾಗಿ ಮಾಡುತ್ತಿದ್ದರು.

ಘಟಸರ್ಪ ಬೀಡುಬಿಟ್ಟಿದ್ದ ಗದ್ದುಗೆ ಸ್ಥಳದಲ್ಲೇ ಹಿಂದಿನ ಶ್ರೀಗಳು ರೋಗಿಗಳನ್ನು ಗುಣಮುಖರನ್ನಾಗಿ ಮಾಡುತ್ತಿದ್ದರು. ಕೇವಲ ನೀರಿನ ಮಂತ್ರ ಶಕ್ತಿಯಿಂದ ಅವರು ವಿಷಸರ್ಪಗಳ ನಂಜನ್ನು ಕಡಿಮೆ ಮಾಡುತ್ತಿದ್ದರೂ ಎಂದರೇ ಅದನ್ನು ನಂಬಲು ಸಾಧ್ಯನಾ..ನಂಬಲೇ ಬೇಕಾದ ಸತ್ಯಾಸತ್ಯೆಗಳು ಅಲ್ಲಿದೆ. ಇಂತಹ ಗದ್ದುಗೆಯನ್ನು ಕೆಡವಿ ನವೀಕರಣಗೊಳಿಸಲು ಮುಂದಾದ ಸಂದರ್ಭದಲ್ಲಿಯೇ,ದೈವಿ ಸ್ವರೂಪದಲ್ಲಿ ಪ್ರತ್ಯಕ್ಷವಾದ ಹಾವು ಸಾರಂಗ ಗುರುಗಳ ದೈವಶಕ್ತಿ ಇರುವಿಕೆಯನ್ನು ಸಾರಿ ಹೇಳಿತ್ತು.

ಕೆಳದಿ ಅರಸರ ಕಾಲದ ಮಠವದು!

ಸೊರಬ ತಾಲೂಕಿನ ಖೇಚರಪುರ ಎಂದೇ ಖ್ಯಾತಿ ಗಳಿಸಿದ್ದ ಗ್ರಾಮ ಇಂದು ಕ್ಯಾಸನೂರು ಆಗಿದೆ. ಕ್ಯಾಸನೂರು ಮಂಗನ ಕಾಯಿಲೆಯಿಂದ ಗ್ರಾಮಕ್ಕೆ ಖೇಚರಪುರ ಹೋಗಿ ಬದಲಾದ ಕಾಲಮಾನದಲ್ಲಿ ಕ್ಯಾಸನೂರು ಎಂದು ನಾಮಕರಣವಾಗಿದೆ. ಕೆಳದಿ ಅರಸರ ಕಾಲದ ಪೂರ್ವದಲ್ಲಿದ್ದ ಖೇಚರಪುರ ಪಂಚಮಠಗಳಲ್ಲಿ ಒಂದು.

ಕೆಳದಿ ಅರಸರು ದಾನದತ್ತಿಗಳನ್ನು ನೀಡಿ,ರಾಜಗುರು ಮಠದಂತೆ ಪೋಷಿಸಿದ್ದರು. ಸುಮಾರು ವರ್ಷಗಳ ಹಿಂದೆ ಮಠದಲ್ಲಿದ್ದ ಗುರುಬಸವಸ್ವಾಮಿಗಳು ಪವಾಡ ಪುರುಷರಾಗಿದ್ದರು.ಅವರು ಗಾಳಿಯಲ್ಲಿ ಸಂಚರಿಸುವ ಶಕ್ತಿ ಹೊಂದಿದ್ದರಂತೆ. ಹೀಗಾಗಿಯೇ ಈ ಗ್ರಾಮಕ್ಕೆ ಖೇಚರ ಪುರ ಎಂದು ನಾಮಕರಣವಾಗಿತ್ತು. ಗುರುಬಸವ ಸ್ವಾಮಿಗಳು ಸಪ್ತ ಕಾವ್ಯಗಳನ್ನು ಬರೆದಿದ್ದಾರೆ.

ಬಿಂದಿಗೆ ನೀರಿನಲ್ಲಿ ಇರುತ್ತಿತ್ತು ಆ ಶಕ್ತಿ!

ಅವರಲ್ಲಿ ಪವಾಡಶಕ್ತಿಯಿತ್ತು. ಕೇವಲ ನೀರಿನಿಂದಲೇ ರೋಗಗಳನ್ನು ಗುಣಪಡಿಸುವ ಶಕ್ತಿಯಿತ್ತು. ವಿಷಕಾರಿ ಹಾವುಗಳಿಂದ ಕಚ್ಚಿಸಿಕೊಂಡವರು ನಾಯಿಕಡಿತಕ್ಕೊಳಗಾದವರು ಗ್ಯಾಂಗ್ರಿನ್ ಗೆ ತುತ್ತಾದವರು ಗುರುವಿನ ಬಳಿ ಬಂದರೆ ಅವರನ್ನು ಸಾವಿನಿಂದ ಪಾರು ಮಾಡುತ್ತಿದ್ದರು.ಅವರು ಪವಾಡ ಮಾಡುತ್ತಿದ್ದ ಸ್ಥಳವೇ ಹಾವು ಬೀಡುಬಿಟ್ಟಿದ್ದ ಸ್ಥಳವಾಗಿತ್ತು.

ಕಾರ್ಕೋಟಕ ವಿಷ ಸೇರಿದಂತೆ ಯಾವುದೇ ಖಾಯಿಲೆಗೆ ತುತ್ತಾದವರು ಗುರುಗಳ ಬಳಿ ಬಂದರೆ,ಬಸವಗುರುಗಳು ಗದ್ದುಗೆ ಬಳಿ ಕುಳಿತು, ರೋಗಿಗಳಿಗೆ ತಾಮ್ರದ ಬಿಂದಿಗೆ ನೀಡುತ್ತಿದ್ದರು. ಭಾದಿತರು ಪೂರ್ವಾಭಿಮುಖವಾಗಿ ಮಠದ ಸನಿಹದ ಹಳ್ಳಕ್ಕೆ ಹೋಗಿ ನೀರನ್ನು ತರಬೇಕು. ನೀರು ತರುವಾಗ ಅವರು ಯಾರೊಂದಿಗೂ ಮಾತನಾಡುವಂತಿರಲಿಲ್ಲ.

ಗುರುಗಳು ಹೇಳಿದ ಸಂದೇಶ ಪಾಲಿಸಿಕೊಂಡು ಬರುವ ರೋಗಿಗಳು, ನೀರುತುಂಬಿದ ತಾರ್ಮದ ಬಿಂದಿಗೆ ನೀಡುತ್ತಿದ್ದರು. ಗುರುಗಳು ತಾಮ್ರದ ಬಿಂದಿಗೆ ಮಂತ್ರಿಸಿ, ಹಾವು ಕಡಿದ, ಇಲ್ಲವೆ ಗಾಯವಾದ ಸ್ಥಳಗಳಿಗೆ ನೀರು ಸಿಂಪಡಿಸುತ್ತಿದ್ದರು. ರೋಗಿ ಗುಣಮುಖವಾಗುವುದು ತಡವಾದ್ರೆ, ಮಠದಲ್ಲಿಯೇ ಉಳಿಯಲು ಅವಕಾಶ ನೀಡುತ್ತಿದ್ದರು. ಹಲವು ದಿನಗಳ ಕಾಲ ಉಳಿದ ರೋಗಿಗಳು ಗುಣವಾದ ನಂತ್ರ ಮನೆ ಸೇರುತ್ತಿದ್ದರು.

ಸಾರಂಗ ಶ್ರೀಗಳ ಅವಧಿಯಲ್ಲಿಯು ನಡೆದಿತ್ತು ಪವಾಡ

ಬಸವಗುರುಗಳ ನಂತ್ರ ಸಾರಂಗಲಿಂಗ ಶ್ರೀಗಳು ಇದೇ ಕಾಯಕವನ್ನು ಮುಂದುವರೆಸಿದರು.ಇವರ ದೈವಶಕ್ತಿಯೂ,ಬಸವಗುರುಗಳ ಶಕ್ತಿಯನ್ನು ಇಮ್ಮಡಿಗೊಳಿಸಿತ್ತು. ಹೀಗಾಗಿ ಇವರ ಕೈಗುಣದಿಂದ ಸಾವಿನಿಂದ ಪಾರಾದವರು ಹೆಚ್ಚು. ಸಾರಂಗ ಶ್ರೀಗಳು ಮಠದಲ್ಲಿ ಪವಾಡ ನಡೆಯುತ್ತಿದ್ದ ಸ್ಥಳದಲ್ಲಿಯೇ ಜೀವಂತವಾಗಿ ಲಿಂಗೈಕ್ಯರಾದರು.

ಸಾರಂಗಶ್ರೀಗಳು ಲಿಂಗೈಕ್ಯರಾಗಿ 200 ವರ್ಷಗಳಾಗಿರಬಹುದು. ಕಾಲನಂತರದಲ್ಲಿ ಮಠದ ಜೀರ್ಣೋದ್ಧಾರ ಕಾರ್ಯಗಳು ನಡೆಯಲಿಲ್ಲ. ಆದರೆ ಮಠದಲ್ಲಿನ ದೈವಶಕ್ತಿಯ ಮಹಿಮೆ ಹಾಗೆಯೇ ಇದೆ. ಹೀಗಾಗಿ ಮಠದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕ್ಯಾಸನೂರು ಶ್ರೀಗಳು ಮಠದ ಜೀರ್ಣೋದ್ಧಾರಕ್ಕೆ ಟೊಂಕಕಟ್ಟಿ ನಿಂತಿದ್ದರು.

ಗದ್ದುಗೆ ಮತ್ತು ಘಟಸರ್ಪ!

ಅವರು ಮಠದ ಸುತ್ತಲ ಪ್ರದೇಶವನ್ನು ಅಗೆಯುವ ಸಂದರ್ಭದಲ್ಲಿಯೇ ಸಾರಂಗಶ್ರೀಗಳ ಗದ್ದುಗೆಯ ಬಳಿ ಘಟಸರ್ಪ ಪ್ರತ್ಯಕ್ಷವಾಗಿತ್ತು. ಗದ್ದುಗೆಯನ್ನು ಏನು ಮಾಡದಂತೆ ಅದು ಎಚ್ಚರಿಸಿರಬೇಕು. ಅಥವಾ ಮಠದ ಮಹಿಮೆಯನ್ನು ಜಗತ್ತಿಗೆ ಸಾರುವಂತೆ ತನ್ನ ಇರುವಿಕೆಯನ್ನು ತೋರಿಸಿರಬೇಕು. ಕ್ಯಾಸನೂರು ಮಠದಲ್ಲಿ ಇಂದಿಗೂ ಬಸವಗುರು ಶ್ರೀಗಳು ಸಾರಂಗಶ್ರೀಗಳ ಗದ್ದುಗೆಗಳಿವೆ. ಬಸವಗುರು ಶ್ರೀಗಳ ಗದ್ದುಗೆಯನ್ನು ದೇವಸ್ಥಾನ ಮಾದರಿಯಲ್ಲಿ ಕಟ್ಟಲಾಗಿದೆ. ಆದರೆ ಸಾರಂಗಶ್ರೀಗಳ ಗದ್ದುಗೆಯನ್ನು ಕೆಡವಲು ಹೋದಾಗಲೇ ಸರ್ಪದ ಇರುವಿಕೆ ದೈವಿಶಕ್ತಿಯನ್ನು ಪ್ರದರ್ಶಿಸಿದೆ.

ಸ್ನೇಹಿತರೇ, ಮಲೆನಾಡಿನ ಒಡಲಾಳದಲ್ಲಿ ಇಂತಹ ಅನೇಕ ಸಂಗತಿಗಳು ಇವೆ, ಒಂದೊಂದಾಗಿಯೇ ನಿಮಗದರ ಪರಿಚಯ ಮಾಡುವ ಕೆಲಸವನ್ನು ಮಾಡುತ್ತಿದ್ದೇವೆ. ಈ ರೀತಿಯ ಸ್ಟೋರಿಗಳು ನಿಮಗೆ ಇಷ್ಟವಾದಲ್ಲಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ, ಸುದ್ದಿಯನ್ನು ನಿಮ್ಮವರಿಗೂ ತಿಳಿಸಿ!