Roja Shanmugam ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿ ದೇವಾಲಯಕ್ಕಾಗಿ, ಸ್ಥಳ ನೋಡುವಾಗ ನಡೆದಿತ್ತು ಅಚ್ಚರಿ!

Roja Shanmugam Bejjavalli For The Ayyappa Swamy Temple, It Was A Surprise While Visiting The Place!

Roja Shanmugam ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿ ದೇವಾಲಯಕ್ಕಾಗಿ, ಸ್ಥಳ ನೋಡುವಾಗ ನಡೆದಿತ್ತು ಅಚ್ಚರಿ!
Roja Shanmugam

Roja Shanmugam ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಸ್ಥಳ ನೋಡುವಾಗ ನಡೆದಿತ್ತು ಅಚ್ಚರಿ! ರವಿಶಂಕರ್ ಗುರೂಜಿಯನ್ನ ಬೈಕ್​ನಲ್ಲಿ ಕೂರಿಸಿಕೊಂಡು ಶಿವಮೊಗ್ಗ ಸುತ್ತಾಡುತ್ತಿದ್ದ ಗುರುಸ್ವಾಮಿಗಳು ಆ ಕಾಲದಲ್ಲಿಯೇ ಕಾರ್ಪೊರೇಟರ್​ ಆಗಿದ್ದರು ಗೊತ್ತಾ!? ರೋಜಾ ಷಣ್ಮುಗಂರವರ ಬಗೆಗಿನ ಇನ್ನಷ್ಟು ಕುತೂಹಲ ಕಾರಿ ಸಂಗತಿಗಳು!

ಅಯ್ಯಪ್ಪ ಮಾಲಾಧಾರಿಗಳಿಗೆ ಎಲ್ಲಿಯೇ ಸಮಸ್ಯೆಯಾದರೂ ಥಟ್ ಎಂದು ಬಂದು ಸಮಸ್ಯೆ ಸರಿಮಾಡುತ್ತಿದ್ದ ಹಿರಿಯ ಗುರುಸ್ವಾಮಿ ರೋಜಾ ಷಣ್ಮುಗಂರವರು ನಿಧನರಾಗಿದ್ಧಾರೆ.

ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ಅವರಿಗೆ ಹೃದಯಾಘಾತವಾಗಿದೆ. 55 ವರ್ಷದಿಂದ ಮಾಲೆ ಹಾಕುತ್ತಾ ಅಯ್ಯಪ್ಪನ ಸ್ಮರಣೆಯಲ್ಲಿಯೇ ಬದುಕು ಸಾಗಿಸುತ್ತಿದ್ದ ಅವರು, ಶಿವಮೊಗ್ಗದ ಪ್ರಧಾನ ಗುರುಸ್ವಾಮಿ ಎಂದು ಹೆಸರು ಪಡೆದಿದ್ದರು.

ಅವರ ಬಗ್ಗೆ ಕೆಲವೊಂದು ಕುತೂಹಲ ಕಾರಿ ಸಂಗತಿಗಳು ಇಲ್ಲಿದೆ.

  • ಮಾಜಿ ಸಿಎಂ ದಿವಂಗತ ಬಂಗಾರಪ್ಪರವರು ಸಿಎಂ ಆಗಿದ್ದಾಗ ಶಿವಮೊಗ್ಗ & ಭದ್ರಾವತಿ ಮಹಾನಗರ ಪಾಲಿಕೆಯು ರಚನೆಯಾಗಿತ್ತು. ಆಗ ರೋಜಾ ಷಣ್ಮುಗಂರವರು ಸಹ ಕಾರ್ಪೊರೇಟರ್​ ಆಗಿದ್ದರು.
  • ಬೆಜ್ಜವಳ್ಳಿಯಲ್ಲಿ ಅಯ್ಯಪ್ಪನ ದೇವಸ್ಥಾನ ಕಟ್ಟುವುದಕ್ಕಾಗಿ ಕೃಷ್ಣಯ್ಯ ಶೆಟ್ಟರು ಗುರುಸ್ವಾಮಿಗಳನ್ನ ಸಂಪರ್ಕಿಸಿದಾಗ ರೋಜಾ ಷಣ್ಮುಗರವರು ಅಲ್ಲಿಗೆ ಹೋಗಿದ್ದರು. ಜಾಗ ಪರಿಶೀಲನೆಗೆ ಎಂದು ನೋಡುತ್ತಿದ್ದಾಗ, ಮೇಲೆ ಗರುಡ ಪಕ್ಷಿಯೊಂದು ಸುತ್ತುಹಾಕುವುದನ್ನ ಕಂಡು, ಇಲ್ಲಿಯೇ ಅಯ್ಯಪ್ಪ ಸ್ವಾಮಿ ದೇವಾಲಯವನ್ನು ನಿರ್ಮಿಸುವುದು ಸೂಕ್ತ ಎಂದು ಜಾಗವನ್ನು ನಿಕ್ಕಿ ಮಾಡಿದ್ದರು.
  • ರೋಜಾ ಷಣ್ಮಗಂರವರಿಗೆ ರವಿಶಂಕರ್​ ಗುರೂಜಿಯವರು ಆತ್ಮೀಯರು ಒಂದು ಕಾಲದಲ್ಲಿ ಅವರನ್ನು ತಮ್ಮ ಸ್ಕೂಟರ್​ನಲ್ಲಿ ಕೂರಿಸಿಕೊಂಡು ಶಿವಮೊಗ್ಗ ಸುತ್ತುತ್ತಿದ್ದರಂತೆ ಗುರುಸ್ವಾಮಿಗಳು.
  • ಅಯ್ಯಪ್ಪ ಸ್ವಾಮಿ ಮಂಡಳಿಗಳನ್ನು ಒಗ್ಗೂಡಿಸಿ ಗುರುಸ್ವಾಮಿಗಳ ಸಂಘಟನೆಯನ್ನು ಕಟ್ಟಿದ್ದ ರೋಜಾಷಣ್ಮುಗಂರವರು ಭಾರತೀಯ ಅಯ್ಯಪ್ಪಸ್ವಾಮಿ ಸೇವಾ ಸಂಘದ(ಬಿಎಎಸ್ಎಸ್) ರಾಷ್ಟ್ರೀಯ ಅಧ್ಯಕ್ಷರಾಗಿಯು ಕೆಲಸ ಮಾಡಿದ್ದಾರೆ.