Shimoga district | ಭಯೋತ್ಪಾಧಕರಿಗೂ ಶಿವಮೊಗ್ಗ ಜಿಲ್ಲೆಗೂ ಇರುವ ನಂಟೇನು? JP STORY PART 3

Shimoga district | In 2011, Mumbai blasts carried out explosives stored in Malnad. JP STORY PART 3

Shimoga district | ಭಯೋತ್ಪಾಧಕರಿಗೂ ಶಿವಮೊಗ್ಗ ಜಿಲ್ಲೆಗೂ ಇರುವ ನಂಟೇನು?  JP STORY PART 3
Shimoga district

ದೇಶದ ಯಾವುದೇ ಭಾಗದಲ್ಲಿ ಭಯೋತ್ಪಾದಕ ಕೃತ್ಯಗಳು ನಡೆದಾಗಲೆಲ್ಲಾ ಮೆಟ್ರೋದಲ್ಲಿ ರೆಡ್ ಅಲರ್ಟ್ ಘೋಷಿಸಿದಂತೆ ಮಲೆನಾಡಿನಲ್ಲೂ ಹೈ ಅಲರ್ಟ್ ಘೋಷಣೆಯಾಗಿರುತ್ತದೆ.ಉಗ್ರರಿಗೂ ಮಲೆನಾಡಿಗೂ ಒಂದು ನಂಟಿದೆ. ದೇಶದ ಯಾವುದೋ ಮೂಲೆಯಲ್ಲಿ ಭಯೋತ್ಪಾದನೆ ಕೃತ್ಯ ಎಸಗುವ ಉಗ್ರರು ಮಲೆನಾಡು ಪ್ರವೇಶಿಸಬಹುದೆಂಬ ಅನುಮಾನ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಕೇಂದ್ರ ಗುಪ್ತಚರ ಇಲಾಖೆಗಿದೆ.ಇದು ಹಲವಾರು ಪ್ರಕರಣಗಳಲ್ಲಿ ಸಾಭೀತಾಗಿದೆ.ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಯಲ್ಲಿ 2008-09 ರ ಆಸುಪಾಸಿನಲ್ಲಿ ಬಂಧಿತರಾದ ಇಂಡಿಯನ್ ಮುಜಾಯಿದ್ದಿನ್ ಶಂಕಿತ ಉಗ್ರರೇ ಇದಕ್ಕೆ ಸಾಕ್ಷಿಯಾಗಿದ್ದಾರೆ.ಅಷ್ಟೇ ಏಕೆ ಇಂಡಿಯನ್ ಮುಜಾಯಿದ್ದಿನ್ ಸಂಘಟನೆ ಸ್ಥಾಪಕ ಯಾಸಿನ್ ಬಟ್ಕಳ್ 2009 ರಲ್ಲಿ ಶಿಕಾರಿಪುರದಲ್ಲಿ ನಾಲ್ಕು ತಿಂಗಳು ಆಶ್ರಯ ಪಡೆದಿದ್ದ

ಯಾಸಿನ್ ಭಟ್ಕಳ್ ಹಾಕಿದ್ದ ಟೆಂಟು.

2009 ರಲ್ಲಿ ದೇಶದ ಹಲವೆಡೆ ಬಾಂಬ್ ಸ್ಪೋಟಿಸಿದ್ದ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ರಿಯಾಝ್ ಭಟ್ಕಳ್ ಗೆ ಶಿವಮೊಗ್ಗ ಚಿಕ್ಕಮಗಳೂರು ಚಿರಪರಿಚಿತ.ಶಿವಮೊಗ್ಗ ಜಿಲ್ಲೆಯ ಹಲವಾರು ಸ್ಥಳಗಳಿಗೆ ಭೇಟಿ ನೀಡಿದ್ದ ರಿಯಾಝ್ ಇಲ್ಲಿ ಕೂಡ ತನ್ನ ಸಹಚರರನ್ನು ಹುಟ್ಟಿಹಾಕುವ ಯತ್ನ ನಡೆಸಿದ್ದ.ಇನ್ನು ಈತನ ಸಹೋದರ ಯಾಸಿನ್ ಭಟ್ಕಳ್ ಐಎಂ ಸಂಘಟನೆ ಕಾರ್ಯಕ್ಷೇತ್ರವನ್ನಾಗಿ ಚಿಕ್ಕಮಗಳೂರು ಜಿಲ್ಲೆ ಆಯ್ಕೆ ಮಾಡಿಕೊಂಡಿದ್ದ. ಕೊಪ್ಪದ ಬಳಿ ಎಸ್ಟೇಟ್ ಹೊಂದಿರಲ್ಲಿ ಕ್ಯಾಂಪ್ ಹಾಕಿದ್ದ.ಅಲ್ಲಿಂದಲೇ ಉದ್ದೇಶಿತ ಸ್ಪೋಟಕ ಕೃತ್ಯಗಳಿಗೆ ಸ್ಪೋಟಕಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದ.ಖಚಿತ ಮಾಹಿತಿ ಮೇರೆಗೆ  ಹಿಡಿಯುಲು ಹೋದ ಪೋಲೀಸರಿಂದ ಯಾಸಿನ್ ಭಟ್ಕಳ್ ತಪ್ಪಿಸಿಕೊಂಡಿದ್ದ. ಯಾಸಿನ್ ನಂತ್ರ ಶೆಲ್ಟರ್ ಪಡೆದಿದ್ದೆ ಶಿಕಾರಿಪುರದಲ್ಲಿ.

ಶಿಕಾರಿಪುರದಲ್ಲಿದ್ದ ಆತ

ಶಿಕಾರಿಪುರದ ಥೈರೋಜ್ ಎಂಬುವರ ಮನೆಯಲ್ಲಿ ನಾಲ್ಕು ತಿಂಗಳ ಕಾಲ ಆಶ್ರಯ ಪಡೆದಿದ್ದ.ಈ ಪ್ರಕರಣವನ್ನು ಶಿವಮೊಗ್ಗದ ಕೋಟೆ ಠಾಣೆ ಅಂದಿನ ಇನ್ ಸ್ಪೆಕ್ಟರ್ ವಸಂತ್ ಕುಮಾರ್ ನೇತ್ರತ್ವದ ತಂಡ ಭೇದಿಸಿತ್ತು.ಉಗ್ರರಿಗೆ ಆಶ್ರಯ ನೀಡಿದ ಕಾರಣಕ್ಕೆ ಶಿಕಾರಿಪುರದ ಓರ್ವನನ್ನು ಶಿವಮೊಗ್ಗದ ಅಂದಿನ ಕೋಟೆ ಠಾಣೆ ಇನ್ ಸ್ಪೆಕ್ಟರ್ ವಸಂತ್ ಕುಮಾರ್ ನೇತ್ರತ್ವದ ತಂಡ ಬಂಧಿಸಿ, ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನಿಷೇದಿತ ಸಿಮಿ ಸಂಘಟನೆ ನಂಟನ್ನು ಇವನು ಹೊಂದಿರುವ ಶಂಕೆಯನ್ನು ಪೊಲೀಸರು ಅಂದು ವ್ಯಕ್ತಪಡಿಸಿದ್ದರು.ಇಬ್ಬರು ಶಂಕಿತರನ್ನು 2009 ಜೂನ್ ಒಂದರಂದು ಕೋಟೆ ಪೊಲೀಸರು  ಬಂಧಿಸ್ತಾರೆ. ಗುಜರಾತ್ ಪೊಲೀಸರ ಬಂಧನದಲ್ಲಿದ್ದ, ಇಂಡಿಯನ್ ಮುಜಾಹಿದ್ದಿನ್ ನ ಖಯಾಮುದ್ದೀನ್ ಕಪಾಡಿಯ ದಕ್ಷಿಣ ಕನ್ನಡ ಪೊಲೀಸರಿಗೆ ನೀಡಿದ ಮಾಹಿತಿ ಮೇರೆಗೆ ಇವರ ಬಂಧನವಾಗುತ್ತೆ.ಇಲ್ಲಿಗೆ ಅಹಮ್ಮದಾಬಾದ್, ಬಾಂಬೆ ಬಾಂಬ್ ಸ್ಪೋಟಕ್ಕೆ ಕಾರಣನಾದ ಇಂಡಿಯನ್ ಮುಜಾಹಿದ್ದಿನ್ ಸ್ಥಾಪಕ ರಿಯಾಜ್ ಭಟ್ಕಳ, ಇಕ್ಬಾಲ್ ಶಾಬಂದ್ರಿ, ಅಹಮದ್ ಯಾಸಿನ್  ಅನೇಕ ಬಾರಿ ಮನೆಗೆ ಬಂದು ತಂಗಿದ್ದರು ಎಂಬ ಅನುಮಾನ ಪೊಲೀಸರಿಗಿತ್ತು.ಅಂದು ಎಸ್ಪಿಯಾಗಿದ್ದ ಮುರುಗನ್ ಶಿಕಾರಿಪುರದ ಆ ವ್ಯಕ್ತಿ ಮಾತ್ರವಲ್ಲದೆ ಮತ್ತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.ಉಗ್ರರಿಗೆ ಆಶ್ರಯ ನೀಡಿ ಅವರಿಗೆ ಅಡುಗುದಾಣ ಕಲ್ಪಿಸಿಕೊಟ್ಟಿದ್ದರ ವಿರುದ್ಧ ಕೇಸು ಹಾಕಿದ್ದರು.ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದ ಎಲ್ಲರೂ ಕೇಸಿನಿಂದ ಖುಲಾಸೆಗೊಂಡ್ರು.

ಮೋಸ್ಟ್ ವಾಂಟೆಡ್ ಟೆರರ್ ಕೆ.ಪಿ ಶಬ್ಬಿರ್ ಆಶ್ರಯ ಪಡೆದಿದ್ದು ಶಿವಮೊಗ್ಗದಲ್ಲೇ

ಕೆ.ಪಿ ಶಬ್ಬೀರ್..,ರಾಷ್ಟ್ರೀಯ ತನಿಖಾ ಸಂಸ್ಥೆಯ ಹಿಟ್ ಲೀಸ್ಟ್ ನ, ಮೋಸ್ಟ್ ವಾಂಟೆಡ್ ಟೆರರ್.ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಹಲವೆಡೆಯಲ್ಲಿನ ಸರಣಿ ಬಾಂಬ್ ಸ್ಪೋಟದಲ್ಲಿ ಭಾಗಿಯಾಗಿದ್ದ ಪ್ರಮುಖ ರುವಾರಿ.ಬಾಂಬ್ ಮೇಕಿಂಗ್ ಎಕ್ಸ್ ಪರ್ಟ್, ಈತ ಬಿಜೆಪಿ ವರೀಷ್ಠ ಎಲ್.ಕೆ ಆಡ್ವಾನಿಯವರಿಗೆ 1998 ರಲ್ಲಿ ಕೊಯಮತ್ತೂರಿನಲ್ಲಿ ಬಾಂಬ್ ಸ್ಪೋಟಿಸುವ ಹುನ್ನಾರ ನಡೆಸಿ ವಿಫಲನಾಗಿದ್ದ.ಆದರೆ ಸ್ಪೋಟದ ತೀವೃತೆ 54 ಮಂದಿ ಬಲಿತೆಗೆದುಕೊಂಡಿತ್ತು. ಇಂತಹ ಉಗ್ರನೊಬ್ಬ ತನ್ನೆಲ್ಲಾ ದುಷ್ಕೃತ್ಯಗಳನ್ನು ಮುಚ್ಚಿಹಾಕಿಕೊಳ್ಳಲು 2012 ರಲ್ಲಿ ಶಿವಮೊಗ್ಗ ನಗರವನ್ನು ಆಯ್ಕೆ ಮಾಡಿಕೊಂಡಿದ್ದ.

ಲಷ್ಕರ್ ಎ ತೊಯ್ಬಾ ದಕ್ಷಿಣ ಭಾರತ ಕಮಾಂಡರ್ ಆಗಿದ್ದ ಶಬ್ಬಿರ್

ಕೆ.ಪಿ ಶಬೀರ್ ಮೂಲತಃ ಕೇರಳದ ಕಣ್ಣೂರಿನವನು. ಲಷ್ಕರ್ ಎ ತೊಯ್ಬಾ ದಕ್ಷಿಣ ಬಾರತದ ಕಮಾಂಡರ್ . ಶಬ್ಬೀರ್ ತನ್ನ ಮೊಗ್ಗಿನ ವಯಸ್ಸಿನಲ್ಲಿಯೇ ಕಟ್ಟರ್ ಮುಸ್ಲಿಂ ಮೂಲಭೂತವಾದಕ್ಕೆ ಆಕರ್ಷಿತನಾದವನು.14 ವರ್ಷ ವಯಸ್ಸಿನಲ್ಲಿಯೇ ಜೀಹಾದ್ ಹೆಸರಿನಲ್ಲಿ ಪಾಪದ ಲೋಕಕ್ಕೆ ಕಾಲಿಟ್ಟವನು. ತಳಿಯಂಟಿವಿಡೆ ನಾಸೀರ್ ಎಲ್.ಇ.ಟಿ ಕಮಾಂಡರ್ ಆಗಿದ್ದಾಗ ಆತನ ಬಲಗೈ ಬಂಟನಾಗಿದ್ದ.ದರೋಡೆ ಮಾಡುವುದು ಅದರಿಂದ ಬಂದ ಹಣದಲ್ಲಿ ದಕ್ಷಿಣ ಭಾರತದಲ್ಲಿ ಲಷ್ಕರ್ ಎ ತೊಯ್ಬಾ ಸಂಘಟನೆಯನ್ನು ಬಲಪಡಿಸುವುದು ಈ ತಂಡದ ಉದ್ದೇಶವಾಗಿತ್ತು. ಬೆಂಗಳೂರಿನ ಸರಣಿ ಸ್ಪೋಟದ ರುವಾರಿ ಅಬ್ದುಲ್ ಮದನಿಯ ಸಹಚರ.ಇಂಡಿಯನ್ ಮುಜಾಹಿದ್ದೀನ್ ಮುಖಂಡ ರಿಯಾಜ್ ಮತ್ತು ಯಾಸಿನ್ ಬಟ್ಕಳ್ ಸಹೋದರರ ಜೊತೆ ಸಂಪರ್ಕ ಕೂಡ ಹೊಂದಿದ್ದ.

ಎರಡುವರೆ ಕೆಜಿ ಬಂಗಾರ

2002 ರಲ್ಲಿ ಕೆ.ಪಿ ಶಬೀರ್ ತಂಡ ಎರ್ನಾಕುಲಂ ಜುವೆಲ್ಲರಿ ಅಂಗಡಿಯ ಮಾಲೀಕನ ಮೇಲೆ ಹಲ್ಲೆ ನಡೆಸಿ,ಎರಡುವರೆ ಕೇಜಿ ಬಂಗಾರ ದೋಚಿದ್ದರು. ಪರಾರಿಯಾಗುವ ಸಂದರ್ಭದಲ್ಲಿ ಕೆ.ಪಿ ಶಬೀರ್,  ನವಷಾದ್, ತಳಿಯಂಟಿವಿಡೆ ನಾಝೀರ್ ಎಂ.ಎ.ಷಬೀರ್ ಎಲ್ಲರೂ ಸೇರಿ ಬಾಂಬ್ ನನ್ನು ಸ್ಪೋಟಿಸಿದ್ದರು.ದೇಶದ ಹಲವೆಡೆ ನಡೆದ ವಿದ್ವಂಸಕ ಕೃತ್ಯಗಳಲ್ಲಿ ಮೋಸ್ಟ್ ವಾಂಟೆಡ್ ಆಗಿದ್ದ ಶಬ್ಬೀರ್ ಮತ್ತವರ ತಂಡವನ್ನು ಹಿಡಿಯಲು ಪೊಲೀಸರು ಹರಸಾಹಸ ಪಡಬೇಕಾಗಿತ್ತು. ಹತ್ತು ವರ್ಷಗಳ ಸತತ ಹುಡುಕಾಟದಿಂದ ಶಬ್ಬೀರ್ ಶಿವಮೊಗ್ಗದಲ್ಲಿ ಪತ್ತೆಯಾಗಿದ್ದ.

ಶಿವಮೊಗ್ಗದಲ್ಲಿ 8 ತಿಂಗಳು

ಶಿವಮೊಗ್ಗದಲ್ಲಿ 8 ತಿಂಗಳು ಸಂಬಂದಿಗಳ ಮನೆಯಲ್ಲಿ ಶೆಲ್ಟರ್ ಪಡೆದಿದ್ದ. ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಹಲವೆಡೆಯಲ್ಲಿನ ಸರಣಿ ಬಾಂಬ್ ಸ್ಪೋಟದಲ್ಲಿ ಭಾಗಿಯಾಗಿರುವ ಇಂತಹ ಸಮಾಜಘಾತುಕನೊಬ್ಬ ಶಿವಮೊಗ್ಗ ನಗರದಲ್ಲಿ 2012 ಮೇ ತಿಂಗಳಲ್ಲಿ  ಕೇರಳ ಪೊಲೀಸರಿಂದ ಭಂದಿತನಾಗಿದ್ದ.ಆವಾಗಲೇ ಮಲೆನಾಡು ಕೇವಲ ನಕ್ಸಲರಿಗಲ್ಲದೆ ಉಗ್ರರಿಗೂ ಆಶ್ರಯ ತಾಣವಾಗಿದೆಯಾ ಎಂಬ ಅನುಮಾನ ಎಲ್ಲರನ್ನು ಕಾಡಿತ್ತು. ಮಲೆನಾಡಿನಲ್ಲಿ ಕೇರಳ ಮೂಲದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಕೇರಳ ಮೂಲದವರು ಶಿವಮೊಗ್ಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಇಲ್ಲಿ ಬಹುತೇಕವಾಗಿ ಕೇರಳದ ಬ್ಯಾರಿ ಸಮುದಾಯದ ಮುಸ್ಲಿಂ ರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಕಾಡು ಮೇಡುಗಳಲ್ಲಿ ಕೃಷಿ ಮಾಡಿಕೊಂಡಿ ರಿಮೋಟ್ ಪ್ಲೇಸ್ ಗಳಲ್ಲಿ ವಾಸಿಸುವ  ಕೆಲವು ಕೇರಳಿಗರು ಮಾನವೀಯತೆ ದೃಷ್ಟಿಯಿಂದ ತಮ್ಮವರಿಗೆ ಶೆಲ್ಟರ್ ನೀಡುತ್ತಿದ್ದಾರೆ.

ಪೂರ್ವಪರ ವಿಚಾರಿಸದೇನೆ ಯಡವಟ್ಟು

ಆದ್ರೆ ಅವರ ಪೂರ್ವಪರ ಹಿನ್ನಲೆ ಗೊತ್ತಿರುತ್ತೋ ಇಲ್ಲವೋ ಗೊತ್ತಿಲ್ಲ .ಸಂಬಂಧಿಗಳು ಮತ್ತು ಸ್ನೇಹಿತರ ಸೋಗಿನಲ್ಲಿ ಇಲ್ಲಿ ನೆಲೆಸಿರ್ತಾರೆ.ಅವರನ್ನು ಹೊರ ರಾಜ್ಯಗಳ ಪೊಲೀಸರು ಅರೆಸ್ಟ್ ಮಾಡಲು ಬಂದಾಗಲೇ ಶೆಲ್ಟರ್ ಪಡೆದವರ ನಿಜ ಬಣ್ಣ ಗೊತ್ತಾಗುತ್ತದೆ.ಇಲ್ಲಿ ಆಶ್ರಯ ನೀಡಿದವರು ನಿರಾಶ್ರೀತರಾಗಬೇಕಾದ ಅನಿವಾರ್ಯತೆ ಎದುರಾಗುತ್ತೆ ಈ ನಿಟ್ಟಿನಲ್ಲಿ ಕೇರಳಿಗರು ಎಚ್ಚರವಹಿಸುತ್ತಿಲ್ಲ.ದೇಶದ ಯಾವುದೇ ಮೂಲೆಯಲ್ಲಿ ಕೇರಳ ಮೂಲದ ಉಗ್ರ ಸಂಘಟನೆ ಭಯೋತ್ಪಾದನೆ ಕೃತ್ಯ ಎಸಗಿದೆ ಎಂದರೆ ಅದರ ಕಮಟುವಾಸನೆ ಜಿಲ್ಲೆಗೂ ತಟ್ಟಿರುತ್ತದೆ.

ಮುಂಬೈ ಮತ್ತು ಮಲೆನಾಡು!

ಹೀಗಾಗಿ ಮುಂಬೈ ಸ್ಟೋಟಕ್ಕೆ ಮಲೆನಾಡಿನಿಂದ ಸ್ಪೋಟಕಗಳು ಪೂರೈಕೆಯಾಗಿರುವ ಮಾಹಿತಿಯನ್ನು ಅಲ್ಲಗಳೆಯುವಂತಿಲ್ಲ. ಉಗ್ರ ರಿಯಾಝ್ ಭಟ್ಕಳ್,ಯಾಸಿನ್ ಭಟ್ಕಳ್,ಕೆ.ಪಿ ಶಬ್ಬಿರ್ ಆಶ್ರಯ ಪಡೆದಂತ ಸ್ಥಳದಲ್ಲಿ,ಸ್ಪೋಟಕಗಳ ರವಾನಿಗೂ ಅವರು ಸ್ಕೆಚ್ ಆಗಿದ್ದನ್ನು ಅಲ್ಲಗಳೆಯುವಂತಿಲ್ಲ.ಮಲೆನಾಡಿನಲ್ಲಿ ನೂರಾರು ಸಂಖ್ಯೆಯಲ್ಲಿ ತಲೆ ಎತ್ತಿರುವ ಅಕ್ರಮ ಕಲ್ಲುಕ್ವಾರಿಗಳಿಗೆ ಎಲ್ಲಿಯವರೆಗೂ ಸ್ಪೋಟಕಗಳು ಪೂರೈಕೆಯಾಗುತ್ತದೋ ಅಲ್ಲಿಯವರೆಗೂ ಮಲೆನಾಡಿಗೆ ಎಕ್ಸ್ ಪ್ಲೋಸಿವ್ ಸ್ಲೀಪಿಂಗ್ ಸೆಲ್ ಎಂಬ ಅಪಖ್ಯಾತಿಯ ಪೊರೆ ಕಳಚುವುದಿಲ್ಲ.ಕಾನೂನು ಬಾಹಿರವಾಗಿ ತಲೆ ಎತ್ತಿರುವ ನೂರಾರು ಕಲ್ಲುಕ್ವಾರಿಗಳಿಗೆ ಹೆಡೆಮುರಿಕಟ್ಟಿದ್ರೆ, ಜಿಲ್ಲೆ ಪ್ರವೇಶಿಸುವ ಸ್ಪೋಟಕಗಳ ಪ್ರಮಾಣ ಕಡಿಮೆಯಾಗಬಹುದೇನೋ