Shivamogga terror suspects ಶಂಕಿತರು ಗುರುಪುರದ ಆ ಸ್ಥಳದಲ್ಲಿ ಮಾಡುತ್ತಿದ್ದಿದ್ದು ಏನು? JP Exclusive big Breaking news

What were shivamogga terror suspects suspects doing at that place in Gurupur? JP Exclusive big Breaking news

Shivamogga terror suspects ಶಂಕಿತರು ಗುರುಪುರದ ಆ ಸ್ಥಳದಲ್ಲಿ ಮಾಡುತ್ತಿದ್ದಿದ್ದು ಏನು?  JP Exclusive big Breaking news
What were shivamogga terror suspects suspects doing at that place in Gurupur? JP Exclusive big Breaking news

ಶಿವಮೊಗ್ಗ / shivamogga |  ಮಲೆನಾಡಿನಲ್ಲಿ ಮತ್ತೆ ಶಂಕಿತ ಉಗ್ರ ಚಟುವಟಿಕೆಗಳ ಜಾಡು ಪತ್ತೆಯಾಗಿದೆ. ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿ ನಿನ್ನೆ ಸಾಕಷ್ಟು ವಿಚಾರಣೆಗೆ ಒಳಪಡಿಸಿದ್ದಾರೆ.

ಇದರ ನಡುವೆ ನಿನ್ನೆ ಬೆಂಗಳೂರು ಹಾಗೂ ದಾವಣಗೆರೆಯಿಂದ ಬಂದಿದ್ದ ಎಫ್​ಎಸ್​ಎಲ್​ ತಜ್ಞರು ಶಿವಮೊಗ್ಗದ ಗುರುಪುರದಲ್ಲಿ ತುಂಗಾನದಿ ಸಮೀಪ ಸಾಕಷ್ಟು ತಪಾಸಣೆ ನಡೆಸಿದ್ದಾರೆ. ಗುರುಪುರದ ಹೊರವಲಯದಲ್ಲಿ ಶಂಕಿತರು ವಿಸ್ಫೋಟಕಗಳನ್ನು ಪರೀಕ್ಷೆಗೆ ಒಳಪಡಿಸ್ತಿದ್ರು ಎಂದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿತ್ತು. ಈ ನಿಟ್ಟಿನಲ್ಲಿ ಎಫ್​ಎಸ್​ಎಲ್​ ತಂಡವನ್ನು ಕರೆಸಿಕೊಳ್ಳಲಾಗಿತ್ತು.

ಸಿಕ್ಕಿಲ್ಲ ಜೀವಂತ ಸ್ಫೋಟಕ

ಪೊಲೀಸ್​ ಎಫ್​ಐಆರ್​ ಪ್ರಕಾರ, ಆರೋಪಿಗಳ ಬಳಿಯಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದವು ಎಂಬ ಆರೋಪವಿತ್ತು. ಅಸಲಿಗೆ ಜೀವಂತ ಸ್ಫೋಟಕ ಅಥವಾ Live explosive  ಪತ್ತೆಯಾಗಿಲ್ಲ. ಆದರೆ ಸ್ಫೋಟಕಕ್ಕೆ ಬಳಸುವ ರಾ ಮೆಟಿರಿಯಲ್​ಗಳು ಪತ್ತೆಯಾಗಿವೆ. ಅದನ್ನು ಬಾಂಬ್​ ಡಿಸ್ಪೋಸಲ್​ ಸ್ಕ್ವಾಡ್​ನವರು ಶಿವಮೊಗ್ಗ ಪೊಲೀಸರೊಂದಿಗೆ ತೆರಳಿ ಸೀಜ್​ ಮಾಡಿದ್ದರು.

ಎಫ್​​ಎಸ್​ಎಲ್​ ತಂಡಕ್ಕೆ ಸಿಕ್ಕಿದ್ದು ಏನು?

ಇನ್ನೂ ಬಾಂಬ್​ ನಿಷ್ಕ್ರೀಯ ದಳದ ಸಿಬ್ಬಂದಿ ಮೊದಲೇ ರಾ ಮೆಟಿರಿಯಲ್​ಗಳನ್ನು ಸಂಗ್ರಹಿಸಿ, ಅದರಲ್ಲಿ ಯಾವುದೇ ಜೀವಂತ ಸ್ಫೋಟಕಗಳು ಇಲ್ಲವೆಂದು ಖಚಿತಪಡಿಸಿದೆ. ಆನಂತರ ಎಫ್​ಎಸ್​ಎಲ್​ ತಂಡ ಸಾಕ್ಷ್ಯ ಸಂಗ್ರಹಕ್ಕಾಗಿ ಗುರುಪುರದ ಹೊರವಲಯಕ್ಕೆ ತೆರಳಿದೆ. ಅಲ್ಲಿ ಆ ತಂಡದ ಸದಸ್ಯರಿಗೆ ನಡುರಾತ್ರಿಯಲ್ಲು ಸಾಕಷ್ಟು ಸಾಕ್ಷ್ಯಗಳು ಲಭಿಸಿದೆ

ಐಇಡಿಗೆ ಬಳಸುವ ಸಾಮಾಗ್ರಿಗಳು ಪತ್ತೆ

ಸದ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಭವಿಸಿದ ಸ್ಫೋಟಗಳಲ್ಲಿ Improvised Explosive Devices (ಇಂಪ್ರೂವೈಸೆಡ್ ಎಕ್ಸ್​ಪ್ಲೋಸಿವ್ ಡಿವೈಎಸ್​ಗಳನ್ನು ಸ್ಫೋಟಗಳಲ್ಲಿ ಬಳಸುತ್ತಿರುವುದು ತನಿಖೆಗಳಲ್ಲಿ ಸ್ಪಷ್ಟವಾಗಿದೆ. ಇದರಲ್ಲಿ ಆಕ್ಸಿವೇಟರ್​( ಸ್ಫೋಟಗೊಳಿಸುವ ಸ್ವಿಚ್​) ಇನಿಶಿಯೇಟರ್​( ಪ್ಯೂಸ್​) ಕಂಟೈನರ್​(ಸ್ಫೋಟಕ ಇಡುವ ವಸ್ತು) ಹಾಗೂ ಚಾರ್ಜ್​(ಸ್ಫೋಟಕ) ಮತ್ತು ಬ್ಯಾಟರಿ( ಸ್ಫೋಟಿಸಲು ಬೇಕಿರುವ ಪವರ್​​ ಸಪ್ಲೆ) ಇರುತ್ತದೆ. ಇದೇ ಮಾದರಿಯ ವಸ್ತುಗಳು ಗುರುಪುರದಲ್ಲಿ ಪತ್ತೆಯಾಗಿದೆ.

ಯಾವುದು ಯಾವ ರೀತಿಯಲ್ಲಿ ಕೆಲಸ ಮಾಡುತ್ತದೆ!?

ಇದರಲ್ಲಿ ಸರ್ಕಿಟ್​ ಸ್ಫೋಟಕಗಳಿಗೆ ಮದರ್​ಬೋರ್ಡ್​ನಂತೆ ಕೆಲಸ ಮಾಡುತ್ತದೆ. ಇನ್ನೂ ಎಲ್​ಇಡಿಗಳನ್ನು ಡಿಟೋನೇಟರ್​ಗಳಿಗೆ ಬದಲಾಗಿ ಬಳಸಲಾಗುತ್ತದೆ. ಅಂದರೆ, ಯಾವುದೇ ಮೂಲ ರಸಾಯನಿಕಗಳು ತನ್ನಿಂದ ತಾನೆ ಸ್ಫೋಟಗೊಳ್ಳುವುದಿಲ್ಲ. ಅವುಗಳನ್ನು ಸ್ಫೋಟಗೊಳ್ಳುವಂತೆ ಮಾಡಲು, ಅವುಗಳನ್ನು ಸ್ಪಾರ್ಕ್​​ ಮಾಡಲಾಗುತ್ತದೆ.

ಪಟಾಕಿಯ ತುದಿಗೆ ಬೆಂಕಿ ಕೊಡುವಂತೆ, ಸ್ಫೋಟಕಗಳನ್ನು ಸ್ಪಾರ್ಕ್​​ ಮಾಡಿ ಸ್ಫೋಟಗೊಳ್ಳುವಂತೆ ಮಾಡಲಾಗುತ್ತದೆ. ಅದಕ್ಕಾಗಿ ಡಿಟೋನೇಟರ್​ ಬಳಸಲಾಗುತ್ತದೆ, ಆದರೆ ಇಲ್ಲಿ ಡಿಟೋನೇಟರ್ಸ್​ ಬದಲಾಗಿ ಎಲ್​ಇಡಿಗಳನ್ನು ಬಳಸಿಕೊಳ್ಳಲಾಗುತ್ತದೆ.

ಎಫ್​ಎಸ್​ಎಲ್​ ಏನನ್ನು ಕಂಡುಹಿಡಿಯುತ್ತದೆ

ಗುರುಪುರದಲ್ಲಿ ಎಫ್​ಎಸ್​ಎಲ್​ ತಂಡ ನಡೆಸಿದ ಸರ್ಚ್​ನಲ್ಲಿ ಹೆಚ್ಚು ಎಲ್​ಇಡಿ ಹಾಗೂ ಸರ್ಕಿಟ್ ಮತ್ತು ವಯರ್ಸ್​ಗಳು ಪತ್ತೆಯಾಗಿದೆ. ಅಷ್ಟೆಅಲ್ಲದೆ  ಸ್ಫೋಟಗೊಂಡಿದ್ದ ಸ್ಥಳದ ಮಣ್ಣನ್ನು ಸಂಗ್ರಹಿಸಿರುವ ತಂಡ, ಸ್ಫೋಟಕಕ್ಕೆ ಯಾವ ಮೆಟಿರಿಯಲ್ ಬಳಸುತ್ತಿದ್ರು, ಅದರ ತೀವ್ರತೆ ಏನು? ಅದರ ಆಪರೇಷನ್​ ಏನು? ಎಂಬಿತ್ಯಾದಿ ಮಾಹಿತಿ ಕಲೆಹಾಕಲಿದೆ.

ಟೆರರ್​ ಲಾಂಚ್ ಪ್ಯಾಡ್ ಆಗಿತ್ತಾ?

ಯಾವುದೇ ಸ್ಥಳವನ್ನು ಶಂಕಿತ  ಉದ್ದೇಶವನ್ನು ಅನುಷ್ಟಾನಗೊಳಿಸಲು ಬಳಸಿಕೊಳ್ಳುತ್ತಿದ್ರೆ, ಅದನ್ನು ಟೆರರ್ ಲಾಂಚ್ ಪ್ಯಾಡ್ ಎನ್ನುತ್ತಾರೆ. ಅದೇ ರೀತಿಯಲ್ಲಿ ತುಂಗಾನದಿಯ ತೀರವನ್ನು ಶಂಕಿತರು ಬಳಸಿಕೊಳ್ಳುತ್ತಿದ್ರು ಎನ್ನಲಾಗಿದೆ.

ಇವರಿನ್ನೂ ಲರ್ನರ್ಸ್​ ಅಷ್ಟೆ?

ಅಷ್ಟೆಅಲ್ಲದೆ ಮೂಲಗಳಲ್ಲಿ ಸಿಕ್ಕ ಮಾಹಿತಿ ಪ್ರಕಾರ, ಶಂಕಿತರು ಇನ್ನೂ ಸ್ಫೋಟಕಗಳನ್ನು ಬಳಸುವುದು, ತಯಾರಿಸುವುದು ಮತ್ತು ಸ್ಫೋಟಿಸುವ ತಯಾರಿಯನ್ನು ಮಾಡುತ್ತಿದ್ರು. ಇವರಿನ್ನು ಲರ್ನಿಂಗ್​ ಸ್ಟೇಜ್​ನಲ್ಲಿದ್ರು. ಆದರೆ ಇವರಿಗೆ ನಿರಂತರವಾಗಿ ರಾ ಮೆಟಿರಿಯಲ್​ ಸಪ್ಲೆ ಮಾಡುತ್ತಿದ್ದಿದ್ದು ಯಾರು ಎಂಬುದು ಸದ್ಯದ ಪ್ರಶ್ನೆ.

ಗ್ಲಾಸ್​, ನಟ್​, ಮೊಳೆ, ಮತ್ತು ಮಿಸೈಲ್ಸ್​!

ಇನ್ನೂ ಆರೋಪಿಗಳ ಬಳಿಯಲ್ಲಿ ಗ್ಲಾ​ಸ್​ ಪೀಸ್​ಗಳು, ನಟ್​ಗಳು ಹಾಗೂ ಮೊಳೆಗಳು ಲಭ್ಯವಾಗಿದೆ ಎನ್ನುವ ಮಾಹಿತಿಯಿದೆ. ಇವುಗಳನ್ನ ವಿದ್ವಂಸಕ ಕೃತ್ಯಗಳಲ್ಲಿ ವಿಸ್ಫೋಟಕಗಳಿಗೆ ತುಂಬಿ ಸ್ಫೋಟಿಸಿದ ಉದಾಹರಣೆಗಳಿವೆ. ಇದರಿಂದ ಸ್ಫೋಟದ ತೀವ್ರತೆ ಹೆಚ್ಚಾಗಿ ಸಾವು ನೋವುಗಳ ಸಂಖ್ಯೆ ಹೆಚ್ಚಾಗುತ್ತದೆ ಎಂಬ ಹುನ್ನಾರವಿರುತ್ತದೆ.

ಲಾಸ್ಟ್​ಬೈಟ್​!

ಒಟ್ಟಾರೆ, ಎಫ್​ಎಸ್​ಎಲ್​ ತಂಡ ನಿನ್ನೆ ಬರೋಬ್ಬರಿ ಎರಡು ಗಂಟೆಗಳ ಕಾಲ ಸರ್ಚ್​ ನಡೆಸಿ, ಅಲ್ಲಿದ್ದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ, ಇನ್ನು ಮುಂದಿನ ಹಂತವಾಗಿ ಪ್ರತಿಯೊಂದನ್ನು ಲ್ಯಾಬ್​ನಲ್ಲಿ ಪರೀಕ್ಷೆ ನಡೆಸಿ, ಅದರಲ್ಲಿ ಸಿಗುವ ಸಾಕ್ಷ್ಯವನ್ನು ರಿಪೋರ್ಟ್​​ ಸಮೇತ ನೀಡಲಿದೆ.

ವಿಶೇಷ ಸೂಚನೆ

ಸ್ನೇಹಿತರೇ ಆಂತರಿಕ ಭದ್ರತೆಯ ವಿಚಾರ ಸಾಕಷ್ಟು ಗಂಭೀರ ವಿಚಾರವಾಗಿದ್ದು, ಈ ನಿಟ್ಟಿನಲ್ಲಿ ಈ ಪ್ರಕರಣ ತುಂಬಾನೇ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದರಲ್ಲಿ ಸಿಕ್ಕಿರುವ ಮಾಹಿತಿಯನ್ನು ಜನಸಾಮಾನ್ಯರಿಗೆ ತಲುಪುವ ದೃಷ್ಟಿಯಿಂದ ಸಾಕಷ್ಟು ಮೂಲಗಳಿಂದ ಸುದ್ದಿಗಳನ್ನು ಕಲೆಹಾಕಿ ವರದಿ ಮಾಡಲಾಗಿದೆ.

ಇದನ್ನ ನಕಲು ಮಾಡುವುದೇ ಆಗಲಿ, ಇಲ್ಲಿರುವ ಫೋಟೋಗಳನ್ನು ಕದ್ದು ಪ್ರಕಟಿಸುವುದಾಗಲಿ, ಯಥಾವತ್ತು ಕಾಪಿ ಮಾಡಿ ಪ್ರಕಟಿಸುವುದು ಕಂಟೆಂಟ್​ ಕ್ಲೈಂ ಆಗುತ್ತದೆ. ಹಾಗೆಯೆ ಸುಳ್ಳು ಮಾಧ್ಯಮಗಳ ಆಘಾತಕಾರಿ ವರದಿಗಳ ಬದಲಿಗೆ ಜನರಿಗೆ ನೈಜ ವರದಿಯನ್ನು ನೀಡುವುದು ನಮ್ಮ ಪ್ರಯತ್ನ.ಈ ನಿಟ್ಟಿನಲ್ಲಿ ನಿಮ್ಮ ಪ್ರತಿಕ್ರಿಯೆ ನೀಡಿ..