Pacche Linga History ಶಿವಲಿಂಗವನ್ನು ಬಿಡದ ಬ್ಯಾಂಕ್​ ಸಾಲ! 22 ವರ್ಷ ಬಂದಿಯಾಗಿತ್ತು ಪುರಾಣ ಕಾಲದ ಪಚ್ಚೆ ಲಿಂಗ! JP Flashback

Shivamogga: Ancient 'Pacche Linga' History

Pacche Linga History  ಶಿವಲಿಂಗವನ್ನು ಬಿಡದ ಬ್ಯಾಂಕ್​ ಸಾಲ! 22 ವರ್ಷ ಬಂದಿಯಾಗಿತ್ತು ಪುರಾಣ ಕಾಲದ ಪಚ್ಚೆ ಲಿಂಗ!  JP Flashback
Shivamogga: Ancient 'Pacche Linga' History

Sagara| ಶಿವಲಿಂಗವನ್ನು ಬಿಡದ ಬ್ಯಾಂಕ್​ ಸಾಲ! 22 ವರ್ಷ ಬಂದಿಯಾಗಿತ್ತು ಪುರಾಣ ಕಾಲದ ಪಚ್ಚೆ ಲಿಂಗ! ಆ ನವರಾತ್ರಿಯೆಂದೆ ಸಿಕ್ಕಿತ್ತು, ಶಿವನ ದರ್ಶನ! ಬಂದಗದ್ದೆ ಮಠದಲ್ಲಿ , ಕೋಟಿ ಲೆಕ್ಕಕ್ಕೂ ಸಿಗದ ಆ ಮೂರ್ತಿಗೆ ಅವತ್ತು ಮುಕ್ತಿ ಸಿಕ್ಕಿದ್ದೇಗೆ ಗೊತ್ತಾ? JP Flashback

ಈ ಚಿತ್ರಗಳ ಪೂರ್ತಿ ದೃಶ್ಯವನ್ನು ನೋಡಲು ಇಲ್ಲಿ ಕ್ಲಿಕ್​ ಮಾಡಿhttps://in.pinterest.com/pin/943152346941464486

ಈ ಪಚ್ಚೆ ಶಿವಲಿಂಗನ ದರ್ಶನಕ್ಕಾಗಿ ಭಕ್ತರು ಕಾದಿದ್ದು ಬರೋಬ್ಬರಿ ಇಪ್ಪತ್ತೆರಡು ವರ್ಷ. ಇಷ್ಟು ವರ್ಷಗಳ ಕಾಲ ಶಿವನನ್ನು ಬಂಧಿಯಾಗಿಸಿದ್ದು ಅದ್ಯಾವ ದುಷ್ಟಶಕ್ತಿ. ಬೇಡಿದ್ದನ್ನು ನೀಡುವ ಅಭಯ ಹಸ್ತ ಚಾಚುವ ಶಿವಲಿಂಗನಿಗೆ 24-07-2019 ರಲ್ಲಿ ಸಿಕ್ಕಿತ್ತು ತಾತ್ಕಾಲಿಕ ಮುಕ್ತಿ.

ಶಿವಲಿಂಗಕ್ಕೂ ಅಜ್ಞಾತವಾಸ

ಅಪರೂಪದಲ್ಲಿ ಅಪರೂಪ ಎನ್ನಲಾದ ಸುಮಾರು ಒಂದು ಸಾವಿರ ವರ್ಷಗಳ ಕಾಲದ ಇತಿಹಾಸ ಇರುವ ಪಚ್ಚೆ ಶಿವಲಿಂಗ ತನ್ನ 22 ವರ್ಷಗಳ ಅಜ್ಞಾತ ವಾಸದ ಬಳಿಕ ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಿತ್ತು.

2019 ರ ನವರಾತ್ರಿಯ ಸಂದರ್ಭದಲ್ಲಿ ಬಂದಗದ್ದೆ ಕೆಳದಿ ರಾಜಗುರು ಮಠದಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೆ ಪಚ್ಚೆಶಿವಲಿಂಗನ ದರ್ಶನಕ್ಕೆ ಅವಕಾಶ ನೀಡಿದಾಗ ಜನಸಾಗರವೇ ಹರಿದು ಬಂದಿತ್ತು.

ಅಘಾದ ಮಹಿಮೆ ಇರುವ ಪಚ್ಚೆಲಿಂಗ ಜಾಮೀನಿನ ಮೇಲೆ ಹೊರಬಂದ ಹಿಂದಿನ ಕಹಾನಿ ಏನು ಅಂತಿರಾ. ಮುಂದೆ ಓದಿ.

22 ವರ್ಷಗಳ ಹಿಂದೆ

ಸುಮಾರು 22 ವರ್ಷಗಳ ಹಿಂದೆ ಶಿವರಾತ್ರಿ ಹಬ್ಬದಲ್ಲಿ ಆ ಗ್ರಾಮದ ಮಠದಲ್ಲಿ ಪಚ್ಚೆಶಿವಲಿಂಗನ ದರ್ಶನಕ್ಕೆ ಭಾಗ್ಯಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರುತ್ತಿದ್ದರು.

ಪಚ್ಚೆಲಿಂಗನ ದರ್ಶನ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬುದು ಪ್ರತೀತಿಯಾಗಿತ್ತು. ರಾಜ್ಯದ ಮೂಲೆ ಮೂಲೆಗಳಿಂದ ಜನಸಾಗರವೇ ಅಲ್ಲಿ ಜಮಾಯಿಸುತ್ತಿತ್ತು.

ಹೌದು ಅಂತಹ ಅವಿಚ್ಚಿನ ಪರಂಪರೆ ಹೊಂದಿರುವ ಆ ಮಠವಿರುವುದು ಸಾಗರ ತಾಲೂಕಿನ ಬಂದಗದ್ದೆ ಗ್ರಾಮದಲ್ಲಿ.

ಬಂದಗದ್ದೆ ಕೆಳದಿ ರಾಜಗುರು ಮಠವೆಂದರೆ ಅದರ ಪರಂಪರೆ ಸಾವಿರ ವರ್ಷಗಳ ಗಡಿ ದಾಟುತ್ತದೆ.

ಅಪರೂಪದಲ್ಲಿ ಅಪರೂಪ ಎನ್ನಬಹುದಾದ ಸುಮಾರು ಒಂದು ಸಾವಿರ ವರ್ಷಗಳ ಕಾಲ ಹಿಂದಿನ ಪಚ್ಚೆ ಶಿವಲಿಂಗ ಈ ಮಠದಲ್ಲಿ ಇರುವುದು ವಿಶೇಷ.

ಬ್ಯಾಂಕ್​ನಲ್ಲಿ ಬಂದಿಯಾಗಿದ್ದ ಪಚ್ಚೆ ಲಿಂಗ

ವಿಪರ್ಯಾಸವೆಂದರೆ ಮಠದಲ್ಲಿನ ವಿವಾದದಿಂದಾಗಿ ಈ ಪಚ್ಚೆ ಲಿಂಗ ಬ್ಯಾಂಕ್ ನಲ್ಲಿ ಸಾಲಕ್ಕೆ ಒತ್ತೆಯಾಯ್ತು.

ವಿವಾದಕ್ಕೆ ಕಾರಣವಾಯ್ತು. 22 ವರ್ಷಗಳಿಂದ ಬ್ಯಾಂಕ್ ನಲ್ಲಿ ಬಂಧಿಯಾಗಿದ್ದ ಶಿವಲಿಂಗ 2019 ರಲ್ಲಿ ವಿವಾದದಿಂದ, ಸಾಲದಿಂದ, ಕೋರ್ಟ್ ನಿಂದ ಮುಕ್ತವಾಗಿ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಯ್ತು.

ಅದು ಕೇವಲ ಒಂದು ದಿನದ ಅವಧಿಗೆ. 2019 ರ ನವರಾತ್ರಿಯಂದು ಬೆಳಿಗ್ಗೆಯಿಂದ ರಾತ್ರಿವರೆಗೆ ಭಕ್ತರಿಗೆ ದರ್ಶನ ನೀಡಿದ ಶಿವಲಿಂಗ ನಂತ್ರ ಬ್ಯಾಂಕ್ ಲಾಕರ್ ನಲ್ಲಿ ಬಂಧಿಯಾಯ್ತು.

ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪರಿಂದ ಸಿಕ್ತು ಪಚ್ಚೆಲಿಂಗಕ್ಕೆ ಮುಕ್ತಿ

ಸಾಗರ ತಾಲೂಕಿನ ಕೆಳದಿ ರಾಜಗುರು ಬಂದಗದ್ದೆ ಹಿರೇಮಠಕ್ಕೆ ಸೇರಿದ ಈ ಪಚ್ಚೆ ಶಿವಲಿಂಗದ ದರ್ಶನಕ್ಕೆ ವಿಜಯ ದಶಮಿಯಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವಕಾಶ ಕಲ್ಪಿಸಿಕೊಟ್ಟಿದ್ದು ,ಭಕ್ತರ ಆಶಯವೂ ಈಡೇರಿದಂತಾಗಿತ್ತು.

ಸುಮಾರು ಒಂದು ಕೋಟಿ ಮೌಲ್ಯದ ಐದು ಇಂಚು ಎತ್ತರದ ಒಂದು ಕೆಜಿ ತೂಕದ, ಈ ಪಚ್ಚೆಶಿವಲಿಂಗ ಕೆಳದಿ ಅರಸರ ಬಳಿಯಿತ್ತು.

ಅದನ್ನು ಸುಮಾರು 600 ವರ್ಷಗಳ ಹಿಂದೆ ತಮ್ಮ ಸಂಸ್ಥಾನದ ಗುರುಪೀಠವಾಗಿದ್ದ ಬಂದಗದ್ದೆ ಹಿರೇಮಠಕ್ಕೆ ನೀಡಿದ್ದರು.

ಪ್ರತಿ ನವರಾತ್ರಿಯಲ್ಲಿಯು ಸಿಗಬೇಕಿತ್ತು!

ಇದು ನಿರಂತರವಾಗಿ ಶ್ರೀ ಮಠದಲ್ಲಿ ಪೂಜೆಗೈಯಲ್ಪಡುತ್ತಾ ಬರುತ್ತಿತ್ತು. ಪ್ರತಿ ನವರಾತ್ರಿ ಉತ್ಸವದಲ್ಲಿ ಲಿಂಗವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತಿತ್ತು.

ಈ ಮಠಕ್ಕೂ ಸಾಕಷ್ಟು ಇತಿಹಾಸವಿದೆ. ಕೆಳದಿ ಅರಸರೆಲ್ಲರೂ ಈ ಮಠದ ಗುರುಗಳನ್ನು ರಾಜಗುರುಗಳೆಂದೇ ಪರಿಭಾವಿಸಿ ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದರು.

ಶಾಸಕ ಹರತಾಳು ಹಾಲಪ್ಪ,ಮಠದ ಶ್ರೀ ಭಕ್ತರನ್ನ ಒಳಗೊಂಡ ನಿಯೋಗದಲ್ಲಿ ಮುಖ್ಯಮಂತ್ರಿ ಭೇಟಿ

ಈ ಅಪರೂಪದ ಪಚ್ಚೆಶಿವಲಿಂಗನ ದರ್ಶನ ಭಾಗ್ಯ ಸಿಗುತ್ತಿಲ್ಲ ಎಂಬ ಕೊರಗು ಮಠದ ಸ್ವಾಮೀಜಿ ಹಾಗೂ ಭಕ್ತರನ್ನು ಕಾಡುತ್ತಲಿತ್ತು.

ಹೇಗಾದರೂ ಮಾಡಿ ಈ ಪಚ್ಚೆ ಶಿವಲಿಂಗವನ್ನು ವಾಪಸ್ಸು ಪಡೆದು ಭಕ್ತರಿಗೆ ದರ್ಶನ ಭಾಗ್ಯ ಕರುಣಿಸಬೇಕು ಎಂಬ ಬೇಡಿಕೆ ಕೇಳಿ ಬರುತ್ತಿತ್ತು.

ಸಿಎಂ ಬೇಟಿ ಮತ್ತು ಅದರ ಪರಿಣಾಮ

  • ಇದರ ಪರಿಣಾಮ ಶಾಸಕ ಹರತಾಳು ಹಾಲಪ್ಪ,ಮಠದ ಶ್ರೀ ಭಕ್ತರನ್ನು ಒಳಗೊಂಡ ನಿಯೋಗದಲ್ಲಿ ಮುಖ್ಯಮಂತ್ರಿ ಭೇಟಿಯಾಗಿ ಪಚ್ಚೆಶಿವಲಿಂಗನ ದರ್ಶನಕ್ಕೆ ಅವಕಾಶ ನೀಡುವಂತೆ ಕೋರಿಕೆ ಇಟ್ಟಿದ್ದರು.
  • ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿದ ಸಿಎಂ 2019 ರ ನವರಾತ್ರಿ ಸಂದರ್ಭದಲ್ಲಿ ಪಚ್ಚೆಶಿವಲಿಂಗನ ದರ್ಶನಕ್ಕೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿ ಶಿವಕುಮಾರ್ ಗೆ ಸೂಚಿಸಿದರು.
  • ಜಿಲ್ಲಾಧಿಕಾರಿಗಳು ಸಾಗರದ ತಹಸಿಲ್ದಾರ್ ಅವರಿಗೆ ಪತ್ರ ಬರೆದು ಅಗತ್ಯ ಪೊಲೀಸ್ ಬಂದೋಬಸ್ತ್ ನೊಂದಿಗೆ ಮೈಸೂರು ಬ್ಯಾಂಕ್ ನಲ್ಲಿದ್ದ ಪಚ್ಚೆಶಿವಲಿಂಗವನ್ನು ಪಡೆದು ಸಾಗರದ ಉಪ ಖಜಾನೆಯಲ್ಲಿ ಇರಿಸಿದರು.
  • 2019 ಅಕ್ಟೋಬರ್ 8 ರಂದು ವಿಜಯ ದಶಮಿಯಂದು ಬಂದಗದ್ದೆ ಕೆಳದಿ ರಾಜಗುರು ಮಠದಲ್ಲಿ ಬೆಳಿಗ್ಗೆ 8 ರಿಂದ ರಾತ್ರಿ 8ರವರೆಗೆ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಬೇಕು.
  • ನಂತರ ಪಚ್ಚೆಲಿಂಗವನ್ನು ಯಥಾಪ್ರಕಾರ ಬ್ಯಾಂಕ್ ಗೆ ಹಿಂದಿರುಗಿಸಬೇಕು ಎಂದು ಸೂಚನೆ ನೀಡಿದರು.

ಸಿಕ್ಕಿತು ಅಪರೂಪದ ದರ್ಶನ!

ಡಿಸಿ ಸೂಚನೆಯಂತೆ ಅಕ್ಟೋಬರ್ 5 ರಂದು ಶ್ರೀ ಮಠದ ಡಾಕ್ಟರ್ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿಯವರೊಂದಿಗೆ ಆಗಮಿಸಿದ ಸಾಗರ ತಹಸಿಲ್ದಾರ್ ಚಂದ್ರಶೇಖರ್ ನಾಯಕ್ ಬ್ಯಾಂಕ್ ನ ಸೇಫ್ ಲಾಕರ್ ನಲ್ಲಿದ್ದ ಪಚ್ಚೆಶಿವಲಿಂಗವನ್ನು ಪಡೆದುಕೊಂಡು ಸಾಗರದ ಉಪ ಖಜಾನೆಗೆ ತೆಗೆದುಕೊಂಡು ಹೋಗಿದ್ದರು.

ಮಾರನೇ ದಿನ ಬೆಳಿಗ್ಗೆ 7.30 ಕ್ಕೆ ಪೊಲೀಸ್ ಭದ್ರತೆಯಲ್ಲಿ ಸಾಗರದ ಖಜಾನೆಯಿಂದ,ಬಂದಗದ್ದೆ ಮಠಕ್ಕೆ ಪಚ್ಚೆಶಿವಲಿಂಗವನ್ನು ತರಲಾಯಿತು. ಈ ಸಂದರ್ಭದಲ್ಲಿ ಭಕ್ತಸಾಗರ ಜಯಘೋಷ ಹಾಕಿತು.

ಸಾವಿರಾರು ಸಂಖ್ಯೆಯಲ್ಲಿ ಜನರು ಪಚ್ಚೆಲಿಂಗನ ದರ್ಶನಕ್ಕಾಗಿ ರಾತ್ರಿಯಿಂದಲೇ ಕಾದು ಕೂತಿದ್ದರು.22 ವರ್ಷಗಳ ನಂತರ ಒಂದು ದಿನದ ಮಟ್ಟಿಗೆ ಮಠಕ್ಕೆ ಪಚ್ಚೆಶಿವಲಿಂಗ ಬಂದಾಗ ಮಠಾಧೀಶರು ಭಾವುಕರಾದರು.

ಸದ್ಯ ಈ ಪಚ್ಚೆಲಿಂಗದ ವಿಚಾರವಾಗಿ ಇನ್ನಷ್ಟು ಮಾಹಿತಿ ಪಡೆಯಬೇಕಿದೆ. ಆದರೆ ಅವತ್ತಿನ ಈ ಘಟನೆಯನ್ನು ಸಾಗರವಷ್ಟೆ ಅಲ್ಲದೆ ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲಿನ ಜನರು ಮರೆತಿರಲಾರರು.. ಎಲ್ಲರಿಗೂ ನವರಾತ್ರಿ ಶುಭತರಲಿ

ಮೂಲ : https://in.pinterest.com/pin/943152346941464486

ಈ ಬರಹ ಇಷ್ಟವಾದರೆ ನಿಮ್ಮ ಸ್ನೇಹಿತರಿಗೂ ನೀಡಿ, ನಿಮ್ಮ ಪ್ರತಿಕ್ರಿಯೆಗಳನ್ನು ತಿಳಿ