4 ಕೆಜಿ ಚಿನ್ನದ ಕಳ್ಳನನ್ನ ರವಿ ಚೆನ್ನಣ್ಣನವರ್​ ಟೀಂ ಹಿಡಿದ ರೋಚಕ ಕಥೆಯಿದು/ ​ PART-1

ದೂಮ್ ಸಿನಿಮಾದ ಮಾದರಿಯಲ್ಲಿ ಪಲ್ಸರ್ ಬೈಕ್ ಏರಿ ಕಳ್ಳತನಕ್ಕೆ ಹೊರಡ್ತಿದ್ದ ! ಏಕಾಂಗಿಯಾಗಿ ದೊಡ್ಡ ಅಂಗಡಿ ಬ್ಯಾಂಕ್ ಗಳನ್ನೇ ರಾಬರಿ ಮಾಡ್ತಿದ್ದ ! ಈತ ಕದ್ದ ಮಾಲಿಗಿಂತ ಕದಿಯೊದಕ್ಕೆ ಬಳಸುತ್ತಿದ್ದ ಟೂಲ್ಸ್ ಗಳೇ ಗಮನಾರ್ಹ !

4 ಕೆಜಿ ಚಿನ್ನದ ಕಳ್ಳನನ್ನ ರವಿ ಚೆನ್ನಣ್ಣನವರ್​ ಟೀಂ ಹಿಡಿದ ರೋಚಕ ಕಥೆಯಿದು/ ​ PART-1
ರವಿ ಚೆನ್ನಣ್ಣನವರ್​

ದೂಮ್ ಸಿನಿಮಾದ ಮಾದರಿಯಲ್ಲಿ ಪಲ್ಸರ್ ಬೈಕ್ ಏರಿ ಕಳ್ಳತನಕ್ಕೆ ಹೊರಡ್ತಿದ್ದ ! ಏಕಾಂಗಿಯಾಗಿ ದೊಡ್ಡ ಅಂಗಡಿ ಬ್ಯಾಂಕ್ ಗಳನ್ನೇ ರಾಬರಿ ಮಾಡ್ತಿದ್ದ ! ಈತ ಕದ್ದ ಮಾಲಿಗಿಂತ ಕದಿಯೊದಕ್ಕೆ ಬಳಸುತ್ತಿದ್ದ ಟೂಲ್ಸ್ ಗಳೇ ಗಮನಾರ್ಹ ! ಈತ ಕೈ ಹಾಕಿದರೆ, ಬೀಗ ತಾನಾಗೆ ಓಪನ್ ಆಗ್ತಿವೆ, ಸಿಸಿ ಟಿವಿ ಆಪ್ ಆಗಿ ಹೋಗ್ತವೆ ! ಕದ್ದ ನಂತರ ಪೊಲೀಸರ ನಡುವೆನೇ ಇರ್ತಿದ್ದ ! ಪೊಲೀಸರ ಕಾರ್ಯಕ್ರಮದಲ್ಲಿ ಭಾಗವಹಿಸ್ತಿದ್ದ ! ಈತನ ಹಿಡಿಯಲು ಮಾರುವೇಷದಲ್ಲಿ ತಿಂಗಳುಗಟ್ಟಲೆ ಹೊಂಚು ಹಾಕಿದ್ರು  ಪೊಲೀಸ್ರು ! ಕಳ್ಳನ ಶರ್ಟ್ ಮೇಲಿನ ದೂಳು ನೀಡಿತ್ತೊಂದು ಪೊಲೀಸರಿಗೆ ಸಣ್ಣ ಕ್ಲೂ...

ಮಂಜಾ ಮೇರಾ ನಾಮ್..ಚೋರಿ ಮೇರಾ ಕಾಮ್.

ಶಿವಮೊಗ್ಗದ ದೊಡ್ಡ ಪೇಟೆ ಪೊಲೀಸರ ತಂಡ 2015 ರಲ್ಲಿ ಅಂತಹ ನಟೋರಿಯಸ್ ಕಳ್ಳನನ್ನು ಹಿಡಿದು ಕೋಟಿಗಟ್ಟಲೆ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿತ್ತು. ಎಸ್ಪಿ ರವಿ ಚಣ್ಣನ್ನನವರ್ ಕಳ್ಳನಿಂದ ವಶಪಡಿಸಿಕೊಂಡಿದ್ದ ಚಿನ್ನಾಭರಣವನ್ನು, ಕಳ್ಳತನ ಕೃತ್ಯಕ್ಕೆ ಬಳಸಿದ ಟೂಲ್ಸ್ ಗಳನ್ನು ಡಿಸ್ ಪ್ಲೆ ಮಾಡಿದ್ದರು. ಅಲ್ಲಿ ಬಂಗಾರಕ್ಕಿಂತ ಹೆಚ್ಚು ಆಕರ್ಷಣೆಯಾಗಿ ಕಂಡಿದ್ದು..,ಕಳ್ಳ ಬಳಿಸಿದ ಟೂಲ್ಸ್ ಗಳು..

ಇದನ್ನು ಸಹ ಓದಿ : ದೇವರ ಮುಂದೆ ಅಜ್ಜಿ ಮರ್ಡರ್​/ ಕೇಳೋರೆ ಇಲ್ಲದ ಅನಾಥೆ ಸಾವಿಗೆನ್ಯಾಯ ಕೊಡಿಸಿದ ಶಿವಮೊಗ್ಗ ಪೊಲೀಸ್​/ EXCLUSIVE JP REPORT

ಏಳು ವರ್ಷಗಳಿಂದ ಪೊಲೀಸರಿಗೆ ನಿದ್ದೆಗೆಡಿಸಿದ್ದ.

ಅರೇ ಇದನ್ಯಾಕೆ ಪೊಲೀಸರು ಇದನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಇದನ್ನು ಸಹ ಕಳ್ಳ ಕದ್ದಿದ್ನಾ ಅಂತಾ ಯೋಚಿಸುತ್ತಿರುವಾಗಲೇ.  ಪ್ರದರ್ಶನಕ್ಕಿಟ್ಟ ಬಂಗಾರವನ್ನು ದೋಚೋದಕ್ಕೆ ಈ ಕಳ್ಳ ಇಷ್ಟು ಪ್ರಮಾಣದ ವಸ್ತುಗಳನ್ನು ಉಪಯೋಗಿಸುತ್ತಿದ್ದ ಅನ್ನೋದು ಗೊತ್ತಾದಾಗ ಕ್ಷಣ ಕಾಲ ಈ ಕಳ್ಳ ಇಸ್ ಗ್ರೇಟ್ ಅನ್ನೊಂಗೆ ಮಾಡಿತ್ತು ಸನ್ನಿವೇಶ. 

ದೊಡ್ಡಪೇಟೆ ಪೊಲೀಸರು ಅವತ್ತು ಸರಿಸುಮಾರು ನಾಲ್ಕು ಕೆಜಿ 133 ಗ್ರಾಂ ಚಿನ್ನಾಭರಣ, ಹಾಗು 4 ಕೆ ಜಿ 25 ಗ್ರಾಂ ತೂಕದ ಬೆಳ್ಳಿಯ ಆಭರಣ ಸೇರಿದಂತೆ ಒಟ್ಟು ಒಂದು ಕೋಟಿ ಮೂರು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕಳ್ಳನಿಂದ ವಶಪಡಿಸಿಕೊಂಡಿದ್ದರು. ಕೇವಲ ಒಬ್ಬ ಕಳ್ಳನಿಂದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗೋಲ್ಡ್ ರಿಕವರಿ ಮಾಡಲು ಸಾಧ್ಯನಾ..ಯಾರೋ ಮಾರಾಯ ಕಳ್ಳ ಅಂತಾ ಹುಡುಕ್ತಾ ಇರಬೇಕಾದ್ರೆ ಬಂದ ನೋಡಿ ಮುಸುಕುಹಾಕಿದ್ದ ಆ ಕಳ್ಳನ ಹೆಸರು ಮಂಜ ಅಲಿಯಾಸ್ ಹಾಲು ಮಂಜ ಉರುಫ್​ ಜಾನ್ಸನ್.

ಇದನ್ನು ಸಹ ಓದಿ :ಕೇಸ್​ ವಾಪಸ್​ತೆಗೆದುಕೊಳ್ಳುವಂತೆ ಬೆದರಿಕೆ/ ತಡರಾತ್ರಿ ಮನೆ ಬಾಗಿಲಿಗೆ ಬಂದು ಕಾರಿಗೆ ಬೆಂಕಿ ಹಚ್ಚಿದ್ರು/ ರಕ್ಷಣೆಯಿಲ್ಲ ಎಂದು ಕಣ್ಣಿರಿಟ್ಟ ಸಂತ್ರಸ್ತೆ

ಈತನ ಮೇಲಿದ್ದವು 96 ಕಳ್ಳತನ ಕೇಸುಗಳು.

ಹಾಲು ಮಂಜ..,ವಯಸ್ಸು 36(2015)  ಈ ಒಬ್ಬ ಕಳ್ಳನ ವಿರುದ್ಧ 96 ಕಳ್ಳತನ ಕೇಸುಗಳು ದಾಖಲಾಗಿತ್ತು. 13 ಕಮರ್ಷಿಯಲ್ ಅಂಗಡಿ ಕಳ್ಳತನ, 3 ಬ್ಯಾಂಕ್ ಕಳ್ಳತನಕ್ಕೆ ಯತ್ನ,ಹಾಗು 80 ಮನೆಗಳ್ಳತನ ಮಾಡಿದ್ದ ಕೇಸುಗಳು ದಾವಣಗೆರೆ ಶಿವಮೊಗ್ಗ ಚಿಕ್ಕಮಗಳೂರು ಚಿತ್ರದುರ್ಗ,ಸೇರಿದಂತೆ ರಾಜ್ಯದ ವಿವಿಧ ಠಾಣೆಗಳಲ್ಲಿದೆ.

ನಮ್ಮ ಸೋಶಿಯಲ್​ ಮೀಡಿಯಾ :   ಟ್ವಿಟ್ಟರ್ : ಫೇಸ್​ಬಕ್  : ಇನ್​ಸ್ಟಾಗ್ರಾಮ್  : ಟೆಲಿಗ್ರಾಂ : ವಾಟ್ಸ್ಯಾಪ್​

ಏಳು ವರ್ಷಗಳಿಂದ ಕೋರ್ಟ್ ಗೆ ಹಾಜರಾಗದೆ, ತಪ್ಪಿಸಿಕೊಂಡು ಶಿವಮೊಗ್ಗ ನಗರದಲ್ಲಿಯೇ ಓಡಾಡಿಕೊಂಡಿದ್ದ ಈತ . 2010 ರಲ್ಲಿ ಒಮ್ಮೆ ಪೊಲೀಸರ ಕೈಗೆ ಸಿಕ್ಕಿ ಫೋಟೋ ಹೊಡೆಸಿಕೊಂಡಿದ್ದ. ಆದರೆ 2015 ರಲ್ಲಿ ಈತ ಫೇಸ್​ಕಟ್ ಬದಲಾಗಿತ್ತು. ಹೀಗಾಗಿ ಪೊಲೀಸರ ಮಧ್ಯಯೇ ಓಡಾಡ್ ಕೊಂಡಿದ್ರೂ..ಅವರ ಕಣ್ಣಿಗೆ ಮಾತ್ರ ಈ ಕಳ್ಳ ಸ್ಕ್ಯಾನ್ ಆಗಿರಲಿಲ್ಲ.

ಇದನ್ನು ಸಹ ಓದಿ :ಕೇಸ್​ ವಾಪಸ್​ತೆಗೆದುಕೊಳ್ಳುವಂತೆ ಬೆದರಿಕೆ/ ತಡರಾತ್ರಿ ಮನೆ ಬಾಗಿಲಿಗೆ ಬಂದು ಕಾರಿಗೆ ಬೆಂಕಿ ಹಚ್ಚಿದ್ರು/ ರಕ್ಷಣೆಯಿಲ್ಲ ಎಂದು ಕಣ್ಣಿರಿಟ್ಟ ಸಂತ್ರಸ್ತೆ

ಜಿಲ್ಲೆಯಲ್ಲಿ ಹೆಚ್ಚಾಗಿತ್ತು ಸರಗಳ್ಳತನ ಪ್ರಕರಣಗಳು.

2011 ರಿಂದ 2015 ವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಸಗರಗಳ್ಳತನ ಮನೆಗಳ್ಳತನ ಪ್ರಕರಣಗಳು ಒಂದು ಹಂತದಲ್ಲಿ ಹೆಚ್ಚಾಗಿದ್ದವು. ಒಂದೇ ತಿಂಗಳಲ್ಲಿ 18 ಸರಗಳ್ಳತನ ಪ್ರಕರಣಗಳಾದಾಗ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದರು. ಅಂದು ಬಿಜೆಪಿ ನಾಯಕರಾದ ಕೆ.ಎಸ್ ಈಶ್ವರಪ್ಪ ಮತ್ತು ಆಯನೂರು ಮಂಜುನಾಥ್ ಪೊಲೀಸ್ ಇಲಾಖೆಗೆ ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು.

ಅಂದಿನ ಎಸ್ಪಿ ರಮಣ್ ಗುಪ್ತಾ.ಕಳ್ಳತನ ಪ್ರಕರಣ ಭೇದಿಸಲು ಹಲವು ದಿಟ್ಟ ಕ್ರಮಗಳನ್ನು ಕೈಗೊಂಡಿದ್ದರು. ಆ ಸಂದರ್ಭದಲ್ಲಿ ಕಳ್ಳತನ ತಹಬದಿಗೆ ಬಂದಿತ್ತು.ಇದಾದ ನಂತರ 2015ರಲ್ಲಿ ಶಿವಮೊಗ್ಗ ನಗರದಲ್ಲಿ ಮನೆಗಳ್ಳತನ,ಜುವೆಲ್ಲರಿ ಅಂಗಡಿ ರಾಬರಿ,ಸರಗಳ್ಳತನ ಹೆಚ್ಚಾಗಿತ್ತು.

ಇದನ್ನು ಸಹ ಓದಿ : 15 ವರ್ಷದಿಂದ ಕಾಡು ಬಿಟ್ಟು ಬರದ ರೌಡಿ ಗಣೇಶ ಮಧ್ಯಪ್ರದೇಶಕ್ಕೆ! 6 ಮಂದಿಯನ್ನು ಕೊಂದ ಸಕ್ರೆಬೈಲ್​ ಬಿಡಾರದ ಈ ಆನೆ ಎಷ್ಟೊಂದು ಉಗ್ರ ಸ್ವರೂಪಿ ಗೊತ್ತಾ?

31-10-15 ರಂದು ರಾತ್ರಿ ಶಿವಮೊಗ್ಗ ನಗರದ ದುರ್ಗಿಗುಡಿಯ ಮುಖ್ಯರಸ್ತೆಯಲ್ಲಿರುವ ಪ್ರಮುಖ ಅಂಗಡಿಯೊಂದರಲ್ಲಿ ಕಳ್ಳತನವಾಗಿತ್ತು. ಕಳ್ಳರ ತಂಡ ಮೊದಲ ಮಹಡಿಯಲ್ಲಿದ್ದ ಕೋಣೆಯೊಂದರ ಬಾಗಿಲು ಮುರಿದು, ಜ್ಯುವೆಲರ್ಸ್​ ಶಾಪ್​ನ ಮೇಲ್ಚಾವಣಿ ಕೊರೆದು ಒಳಕ್ಕೆ ನುಗ್ಗಿದ್ದರು.  ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಎಸ್ಪಿ ರವಿ ಚಣ್ಣನ್ನನವರ್ ಹೇಗಾದರೂ ಮಾಡಿ ಕಳ್ಳರನ್ನು ಹಿಡಿಯಬೇಕೆಂದು ಅಂದಿನ ಅಡಿಷನಲ್ ಎಸ್ಪಿ ವಿಷ್ಣುವರ್ಧನ್ ನೇತ್ರತ್ವದಲ್ಲಿ ತಂಡ ರಚಿನೆಯಾಗಿತ್ತು. ಡಿಎಸ್ಪಿ ರಾಮ್ ಎಲ್ ಅರಸಿದ್ದಿ, ದೊಡ್ಡಪೇಟೆ ಠಾಣೆ ಇನ್ಸ್ ಪೆಕ್ಚರ್ ಗುರುರಾಜ್, ಎಸ್ಸೈ ಕುಮಾರ್, ಎಎಸ್ಸೈ ಪಾಪೆಗೌಡರ ತಂಡದಲ್ಲಿ ಒಟ್ಟು 17 ಪೊಲೀಸ್ ಸಿಬ್ಬಂದಿ  ಕಾರ್ಯಾಚರಣೆಗಿಳಿದರು.

ಇದನ್ನು ಸಹ ಒದಿ :ಜನ ಸ್ವಯಂಸೇವಕರಾದ್ರು/ ರಾಜಕಾರಣಿ ಡಾಕ್ಟರ್​ ಆದ್ರು/ ಸಾಗರಿಕರ ಮಾನವೀಯತೆಗೆ ಸಾಕ್ಷಿಯಾದ ಆಕ್ಸಿಡೆಂಟ್

ಕಳ್ಳನ ಪತ್ತೆಗಾಗಿ ತಿಂಗಳುಗಟ್ಟಲೆ ಅಲೆದ ಪೊಲೀಸರು.

ಜಿಲ್ಲೆಯಲ್ಲಿ ನಡೆದ ಜುವೆಲ್ಲರಿ ಅಂಗಡಿ ಕಳ್ಳತನ,ಮನೆಗಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ದೊಡ್ಡ ಪೇಟೆ ಪೊಲೀಸರ ತಂಡ ಈ ಬಾರಿ ಕಳ್ಳರ ಬೇಟೆ ಮಾಡಲು ಸರ್ವ ಸನ್ನದ್ದರಾಗಿದ್ದರು.ಯುನಿಪಾರಂ ಕಳಚಿಟ್ಟು ನಗರದಲ್ಲಿ ಮಾರುವೇಶದಲ್ಲಿ ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ರು.

ಇದನ್ನು ಸಹ ಓದಿ :ರಾಜ್ಯದ ನಂಬರ್​ 01 ಇನ್ವೆಸ್ಟಿಗೇಷನ್​ ಅಧಿಕಾರಿ ಬಾಲರಾಜ್​/ ಜ್ಞಾನ ಭಾರತಿ ಕೇಸ್​ ಬಿಡಿಸಿದ್ದು ಹೇಗೆ ಗೊತ್ತಾ ?DYSP ಬಾಲರಾಜ್​ Investigation part-3

ಸಬ್ ಇನ್ಸ್ ಪೆಕ್ಟರ್ ಕುಮಾರ್ ತಂಡ ಹಗಲು ರಾತ್ರಿ ನಗರ ಪ್ರದೇಶವನ್ನು ಜಾಲಾಡತೊಡಗಿದರು. ಅದಕ್ಕಾಗಿ ಪೊಲೀಸರು ಆಟೋ ಡ್ರೈವರ್ ಗಳಾದ್ರು. ಲಗೇಜ್ ಓಡಿಸೋ..,ಚಾಲಕರಾದ್ರು. ಪಂಜೆ ಹೆಗಲ ಮೇಲೊಂದು ಟವಲ್ ಹೊದ್ದು ರಾತ್ರಿ ಹಗಲೆನ್ನದೆ. ಅನುಮಾನಸ್ಪದ ವ್ಯಕ್ತಿಗಳ ಮೇಲೆ ಕಣ್ಣು ನೆಡತೊಡಗಿದರು. ಆವಾಗ ಪೊಲೀಸರಿಗೊಬ್ಬ ವ್ಯಕ್ತಿ ಎದುರಾದ...,ಅವನ ಶರ್ಟ್ ಮೇಲೆ ಗೋಡೆಕೊರೆದ ಮಣ್ಣಿನ ಕಣಗಳು ಹಾಗೆಯೇ ರಾಚುವಂತಿತ್ತು.ಆದರೆ ವ್ಯಕ್ತಿಯನ್ನು ಬಂಧಿಸದೆ ಆತನ ಚಲನವಲನದ ಮೇಲೆ ಹದ್ದಿನ ಕಣ್ಣಿಟ್ಟಾಗ..,ನಿಜವಾದ ಕಳ್ಳನ ಜಾಡಿನ ಎಳೆಯೊಂದು ಸಿಕ್ಕಿಬಿಡ್ತು.....,ಅವನ ಹೆಸರೇ ಹಾಲು ಮಂಜ.

ಇನ್ನೂ ಇದೆ: ಸ್ನೇಹಿತರೇ, ಆ ಕಳ್ಳ ಕದಿಯುತ್ತಿದ್ದ ಸ್ಟೈಲ್​ ಹೇಗಿತ್ತು? ಆತನ ಇಂಟರ್​ಸ್ಟಿಂಗ್​ ಸಬ್ಜೆಕ್ಟ್ ಆಗಿದ್ದೇಕೆ, ಆತನ ಬಳಿ ಸಿಕ್ಕ ಚಿನ್ನ ಎಲ್ಲಿದ್ದವು. ಅವನ ಮೂಲ ಏನು? ಎಂಬಿತ್ಯಾದಿ ಕತೂಹಲವಾದ ಸ್ಟೋರಿಯನ್ನು ಮುಂದಿನ ಪಾರ್ಟ್​ನಲ್ಲಿ ಹೇಳುತ್ತೇನೆ...ಈ ಸ್ಟೋರಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ಸ್​ ತಿಳಿಸಿ, ನಮ್ಮ ವಾಟ್ಸ್ಯಾಪ್​ ಗ್ರೂಪ್​ಗೆ ಜಾಯಿನ್ ಆಗಿ

ಇದನ್ನು ಸಹ ಒದಿ :ಜನ ಸ್ವಯಂಸೇವಕರಾದ್ರು/ ರಾಜಕಾರಣಿ ಡಾಕ್ಟರ್​ ಆದ್ರು/ ಸಾಗರಿಕರ ಮಾನವೀಯತೆಗೆ ಸಾಕ್ಷಿಯಾದ ಆಕ್ಸಿಡೆಂಟ್

 ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link