ಶಿವಮೊಗ್ಗ | ಇವತ್ತು ಮಳೆ ಬರುತ್ತಾ? | ಹೇಗಿದೆ ವಾತಾವರಣ? ಹವಾಮಾನ ಇಲಾಖೆ ಹೇಳಿದ್ದೇನು?

Shimoga | Is it raining today? | How's the weather? What did the Meteorological Department say?

ಶಿವಮೊಗ್ಗ | ಇವತ್ತು ಮಳೆ ಬರುತ್ತಾ? |  ಹೇಗಿದೆ ವಾತಾವರಣ? ಹವಾಮಾನ ಇಲಾಖೆ ಹೇಳಿದ್ದೇನು?
Meteorological Department

Shivamogga Apr 19, 2024  ಶಿವಮೊಗ್ಗ ಜಿಲ್ಲೆಯಲ್ಲಿ ನಿನ್ನೆ ಉತ್ತಮವಾದ ಮಳೆಯಾಗಿದೆ. ಬೀಸುಗಾಳಿಯಿಂದ ಕೂಡಿದ ಮಳೆಯಿಂದಾಗಿ ಹಲವೆಡೆ ಮರಗಳು ಉರುಳಿವೆ. ಬೇಸಿಗೆಯಲ್ಲಿ ಒಣಮರಗಳ ಕಟಿಂಗ್‌ ಕೆಲಸವನ್ನು ಆಡಳಿತ ವ್ಯವಸ್ಥೆಗಳು ಕೈಗೊಂಡಿಲ್ಲ. ಹೀಗಾಗಿ ಮೊದಲ ಮಳೆಯ ಆರ್ಭಟಕ್ಕೆ ಲಡ್ಡಾಗಿರುವ ಮರಗಳು ರಸ್ತೆ ಮೇಲೆ ಬೀಳುತ್ತಿವೆ. ಇನ್ನೂ  ನಿನ್ನೆ ಸಹ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಕೋಣಂದೂರು ಸಮೀಪ ವ್ಯಕ್ತಿಯೊಬ್ಬರ ಮೇಲೆ ಮರ ಬಿದ್ದು ಅವರು ಸಾವನ್ನಪ್ಪಿದ್ದರು.. 

ಇನ್ನೂ ಇವತ್ತು ಶಿವಮೊಗ್ಗದಲ್ಲಿ ಮಳೆ ಬರುವ ಸಾಧ್ಯತೆ ಇದ್ದು ಮಧ್ಯಾಹ್ನದವರೆಗೂ ಬಿಸಿಲು ಇರಲಿದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ತಿಳಿಸಿದೆ.  ಮಧ್ಯಾಹ್ನ ಮೂರು ಗಂಟೆಯವರೆಗೂ ಬಿಸಿಲ ಝಳವಿದ್ದು ನಾಲ್ಕು ಗಂಟೆ ಹೊತ್ತಿಗೆ ಮಳೆಯಾಗುವ ಮುನ್ಸೂಚನೆ ಇದೆ, ಬಳಿಕ ರಾತ್ರಿ ಎಎಂಟು ಗಂಟೆ ಸುಮಾರಿಗೆ ಜಿಲ್ಲೆಯ ಕೆಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆಯಲ್ಲಿದ್ದು, ಇಂದಿನಿಂದ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಮಳೆಯಾಗುವ ನಿರೀಕ್ಷೆಯಿದೆ.