ಕೋಣಂದೂರು ಫ್ರೆಂಡ್ಸ್ ಕೋಣಂದೂರು ವತಿಯಿಂದ ಅಂತರ ತಾಲೂಕು ಮಟ್ಟದ ಮುಕ್ತ ಚದುರಂಗ ಪಂದ್ಯಾವಳಿ

KARNATAKA NEWS/ ONLINE / Malenadu today/ Sep 1, 2023 SHIVAMOGGA NEWS 

ತೀರ್ಥಹಳ್ಳಿ: ಕೋಣಂದೂರು ಫ್ರೆಂಡ್ಸ್ ಕೋಣಂದೂರು ಹಾಗೂ ಫ್ರೊ. ಗಣೇಶಮೂರ್ತಿ, ಶಿಕ್ಷಣ ಪ್ರತಿಷ್ಠಾನ ಹಾಗೂ ಅಮೃತ ಇವರ ಸಹಯೋಗದೊಂದಿಗೆ ಸೆಪ್ಟೆಂಬರ್ 10 ಭಾನುವಾರದಂದು 30 ನೇ ವರ್ಷದ ಅಂತರ ತಾಲೂಕು ಮಟ್ಟದ ಚೆಸ್ ಪಂದ್ಯಾವಳಿಯನ್ನು ರಾಷ್ಟ್ರೀಯ ಪ್ರೌಢಶಾಲೆ ಕೋಣಂದೂರಿನಲ್ಲಿ ಬೆಳಿಗ್ಗೆ  9 ಗಂಟೆಗೆ ಹಮ್ಮಿಕೊಳ್ಳಲಾಗಿದೆ. 

 

ಈ ಪಂದ್ಯಾವಳಿಯು ತೀರ್ಥಹಳ್ಳಿ, ಹೊಸನಗರ, ಸಾಗರ,  ಕೊಪ್ಪ ಅಂತರ ತಾಲೂಕು ಪಂದ್ಯಾವಳಿಯಾಗಿದ್ದು ಶಿವಮೊಗ್ಗ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಜಿ.ಎಸ್. ನಾರಾಯಣರಾವ್‌ರವರು ಇದರ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ‌. 

 

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಣಂದೂರು ಫ್ರೆಂಡ್ಸ್ ಕೋಣಂದೂರು ಅಧ್ಯಕ್ಷರಾದ ಬಿ.ಇ. ಅಬ್ಬಾಸ್‌ರವರು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಕೋಣಂದೂರು ಶರಾವತಿ ಪ್ರಥಮ ದರ್ಜೆ ಕಾಲೇಜಿನ ಪ್ರೊಫೆಸರ್ ಎಂ.ಜಿ. ಸುಭಾಷ್, ಉದ್ಯಮಿಗಳಾದ ಕೆ.ಆರ್. ಪ್ರಸಾದ್, ಫ್ರೊ. ಹೆಚ್ ಎಸ್. ಗಣೇಶ್ ಮೂರ್ತಿ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಡಾ. ರವಿಶಂಕರ್ ಹೆಚ್.ಜಿ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ, ಪ್ರತಿಷ್ಠಿತ ಬಿಐಟಿ ಸಂಸ್ಥೆಯ ಅಧ್ಯಕ್ಷರಾದ ಸಿರಿಬೈಲ್ ಧರ್ಮೇಶ್, ಭದ್ರಾವತಿ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ಶಿವಪ್ರಕಾಶ್, ಉದ್ಯಮಿಗಳಾದ ಸುಕೇಶ್, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕಂಪನಗದ್ದೆ ಸುರೇಶ್ ಕೆ.ಎನ್, ಕೋಣಂದೂರು ಫಾಹಿಂ ಸ್ಟೀಲ್ ಕಂಪನಿ ಮಾಲೀಕರಾದ ಇಸ್ಮಾಯಿಲ್, ರಾಷ್ಟ್ರೀಯ ಪ್ರೌಢಶಾಲೆ ಕೋಣಂದೂರಿನ ಮುಖ್ಯೋಪಾಧ್ಯಾಯರಾದ ಕೆ.ಬಿ. ಪ್ರಕಾಶ್‌ರವರು ಪಾಲ್ಗೊಳ್ಳುವರು. 

 

ಸಂಜೆ 5  ಗಂಟೆಗೆ ಬಹುಮಾನ ವಿತರಣೆ ಕಾರ್ಯಕ್ರಮವಿದ್ದು ಮಂಜುನಾಥ್ ಕೆ.ಎನ್, ಈಶ್ವರ್ ನಾಯ್ಕ್, ನಿರಂಜನ್‌ರವರು ಬಹುಮಾನವನ್ನು ವಿತರಿಸಲಿದ್ದಾರೆ. 

 

ಮುಖ್ಯ ಅತಿಥಿಗಳಾಗಿ ಅಶೋಕ್, ಚಂದ್ರಕಾಂತ್ ಸರ್ಜಾ, ಹೆಚ್. ಎಸ್. ದಿನೇಶ್, ಕೆ. ಆರ್. ಶ್ರೀಕಾಂತ್, ಮುದ್ದಣ್ಣ ಶೆಟ್ಟಿ, ಮುಂತಾದವರು ಪಾಲ್ಗೊಳ್ಳಲಿದ್ದಾರೆ‌.

 

ಪಂದ್ಯಾವಳಿಯ ನಿಯಮಗಳು

 

  • *ಸ್ವಿಸ್ ಲೀಗ್ ಮಾದರಿಯಲ್ಲಿ ಪಂದ್ಯ ನಡೆಸಲಾಗುವುದು

  • * ಒಂದು ದಿನದ ಪಂದ್ಯವಾಗಿರುತ್ತದೆ

  • * ದಿನಾಂಕ 8/9/2023 ರ ಶುಕ್ರವಾರದಂದು ಕಡ್ಡಯವಾಗಿ ಹೆಸರು ನೋಂದಾಯಿಸಲು ಕೊನೆಯ ದಿನಾಂಕವಾಗಿರುತ್ತದೆ  ನಂತರ ಬಂದ ಹೆಸರುಗಳನ್ನು ಪರಿಗಣಿಸಲಾಗುವುದಿಲ್ಲ.  

  • *ಆಟಗಾರರು ಚೆಸ್ ಬೋರ್ಡ್‌ ನ್ನು ತಪ್ಪದೇ ತರಬೇಕು‌

  • * ಎಲ್ಲಾ ಆಟಗಾರರಿಗೆ ಭೋಜನಾ ವ್ಯವಸ್ಥೆ ಕೂಡ ಇರುತ್ತದೆ

  • * ನೋಂದಣಿ ಶುಲ್ಕ ೨೫೦/ ಆಗಿರುತ್ತದೆ

  • * ಕಡ್ಡಾಯವಾಗಿ ವಯಸ್ಸಿನ ದಾಖಲಾತಿ ಪತ್ರ ಹಾಗೂ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ತರಬೇಕು

  • * ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ

  • * ದಾಖಲಾತಿಗಳನ್ನು ವಾಟ್ಸಾಪ್ ಮುಖಾಂತರ ಕಳುಹಿಸಬಹುದು

ಹೆಸರನ್ನು ನೋಂದಾಯಿಸಲು, ಬಿ.ಇ. ಅಬ್ಬಾಸ್ :9008139007, 9480706374,ಚಂದ್ರಕಾಂತ್ ಸರ್ಜಾ: 9449540820,ಮುದ್ದಣ್ಣ ಶೆಟ್ಟಿ: 9686555627,ಕೆ. ನಾಗರಾಜ್ ಶೆಟ್ಟಿ: 9480151139 ಇವರನ್ನು ಸಂಪರ್ಕಿಸಬಹುದಾಗಿದೆ.


 

ಇನ್ನಷ್ಟು ಸುದ್ದಿಗಳು 

 

 


 

 

 

 

Leave a Comment