ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾದ ಶಿವಮೊಗ್ಗ ಪಾಲಿಕೆ ಸದಸ್ಯರು ಮತ್ತು MLA ಚನ್ನಬಸಪ್ಪ ! ಕಾರಣವೇನು ಗೊತ್ತಾ?

KARNATAKA NEWS/ ONLINE / Malenadu today/ Sep 1, 2023 SHIVAMOGGA NEWS 

ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪರವರು ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರು ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನಾಡಹಬ್ಬ ದಸರಾ ಉತ್ಸವಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಇದೇ ವೇಳೆ ಶಿವಮೊಗ್ಗ ಪಾಲಿಕೆ ನಿಯೋಗ ಮನವಿ ಮಾಡಿದೆ. ಅಲ್ಲದೆ ದಸರಾ ಮೆರವಣಿಗೆಗೆ  3 ಆನೆಗಳನ್ನು ಒದಗಿಸುವಂತೆ ಕೋರಲಾಗಿದೆ. 

ಶಾಸಕ ಎಸ್.ಎನ್.ಚನ್ನಬಸಪ್ಪ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾದ ನಿಯೋಗ, ಶಿವಮೊಗ್ಗದಲ್ಲಿ ಆಚರಿಸಲಾಗುವ ವಿವಿಧ ದಸರಾಗಳ ಬಗ್ಗೆ ಮಾಹಿತಿ ನೀಡಿತು. ಅಲ್ಲದೆ ಪ್ರತಿ ವರ್ಷ ಸಕ್ರೆಬೈಲ್ ಆನೆ ಬಿಡಾರದಿಂದ  ಆನೆಗಳನ್ನು ಕರೆತಂದು ಅ೦ಬಾರಿ  ಮೆರವಣಿಗೆ ನಡೆಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯರಿಗೆ ವಿವರಿಸಿದರು. 

ಅದ್ದೂರಿಯಾಗಿ ದಸರಾ ನಡೆಸಲು  ರಾಜ್ಯ ಸರ್ಕಾರದಿಂದ1.5 ಕೋಟಿ ಹಣ  ಮಂಜೂರು ಮಾಡುವಂತೆ ನಿಯೋಗ ಕೋರಿತು. ಇದಕ್ಕೆ ಪ್ರತಿಕ್ರಿಯಿಸಿದ  ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಬಗ್ಗೆ ಪರಿಶೀಲಿಸುವುದಾಗಿ ತಿಳಸಿದ್ದಾರೆ. 

ಇನ್ನೂ ಸಿಎಂರನ್ನು ಭೇಟಿಯಾದ ನಿಯೋಗದಲ್ಲಿ ಮಹಾನಗರ ಪಾಲಿಕೆ ಮೇಯರ್‌ ಶಿವಕುಮಾರ್‌, ಉಪ ಮೇಯರ್‌ ಲಕ್ಷ್ಮೀ ಶಂಕರ ನಾಯ್ಕ, ಆಡಳಿತ ಪಕ್ಷದ ನಾಯಕ ಜ್ಞಾನೇಶ್ವರ್‌ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್‌, , ಪಾಲಿಕೆ ಸದಸ್ಯರಾದ ಹೆಚ್‌.ಸಿ. ಯೋಗೀಶ್‌, ನಾಗರಾಜ  ಕಂಕಾರಿ ಸೇರಿದಂತೆ ವಿವಿಧ ಮುಖಂಡರು  ಉಪಸ್ಥಿತರಿದ್ದರು


ಇನ್ನಷ್ಟು ಸುದ್ದಿಗಳು 


 

 

Leave a Comment