ಶಿವಮೊಗ್ಗದಲ್ಲಿ ಐಟಿ ಅಧಿಕಾರಿಗಳಿಂದ ದಾಳಿ | ಪ್ರಸಿದ್ಧ ಜ್ಯುವೆಲರಿ ಅಂಗಡಿ ಮೇಲೆ ರೇಡ್​

IT raid on a famous jewelery shop ಪ್ರಸಿದ್ಧ ಜ್ಯುವೆಲರಿ ಅಂಗಡಿ ಮೇಲೆ ಐಟಿ ರೇಡ್​

ಶಿವಮೊಗ್ಗದಲ್ಲಿ ಐಟಿ ಅಧಿಕಾರಿಗಳಿಂದ ದಾಳಿ |  ಪ್ರಸಿದ್ಧ ಜ್ಯುವೆಲರಿ ಅಂಗಡಿ ಮೇಲೆ ರೇಡ್​

KARNATAKA NEWS/ ONLINE / Malenadu today/ Oct 31, 2023 SHIVAMOGGA NEWS

SHIVAMOGGA |  ಶಿವಮೊಗ್ಗದಲ್ಲಿಂದು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರ ಪ್ರಸಿದ್ದ ಜ್ಯುವೆಲರಿ ಅಂಗಡಿ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೋಧನೆ ನಡೆಸ್ತಿದ್ದಾರೆ. ಪ್ರತಿಷ್ಟಿತ 'ಆಭರಣ' ಮಳಿಗೆ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆದಿದ್ದು, ಶಿವಮೊಗ್ಗ ನಗರದ ಜೆಪಿಎನ್ ರಸ್ತೆಯಲ್ಲಿರುವ ಅಂಗಡಿಯಲ್ಲಿ ಬೆಳಗ್ಗೆಯಿಂದಲೂ ಪರಿಶೀಲನೆ ನಡೆಸ್ತಿದ್ದಾರೆ. 



READ : KSRTC ಬಸ್​ಸ್ಟ್ಯಾಂಡ್​ ಲೇಡಿಗೆ ಶಾಕ್​ ಕೊಟ್ಟ ದೊಡ್ಡಪೇಟೆ ಪೊಲೀಸರು! ಬಯಲಾಯ್ತು ಕೇಸ್​!



ಎರಡು ಇನ್ನೋವಾ ಕಾರುಗಳಲ್ಲಿ ಬಂದಿರುವ 10 ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಈ ದಾಳಿಯಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ದಾಳಿ ಹಿನ್ನೆಲೆಯಲ್ಲಿ  ಅಂಗಡಿಯಲ್ಲಿಂದು ಯಾವುದೇ ವಹಿವಾಟು ಇರುವುದಿಲ್ಲ ಎಂದು ಸ್ಟಿಕ್ಕರ್ ಅಂಟಿಸಲಾಗಿದೆ.  

ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇರುವ ಆಭರಣ ಮಳಿಗೆಗಳಿವೆ. ಎಲ್ಲೆಲ್ಲಾ ಐಟಿ ರೇಡ್ ಆಗಿದೆ ಎಂಬುದರ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ. ಸದ್ಯ ಶಿವಮೊಗ್ಗದಲ್ಲಿ ನಡೆಯತ್ತಿರುವ ರೇಡ್ ಮುಂದುವರಿದಿದೆ.