ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ 93-96 ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನೆ ಕಾರ್ಯಕ್ರಮ

Students of 93-96 years of Sahyadri College, Shivamogga perform guruvandana programme

ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ 93-96 ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನೆ ಕಾರ್ಯಕ್ರಮ

ಶಿವಮೊಗ್ಗ,ಜ18: ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಪೂಜನೀಯ ಸ್ಥಾನಮಾನವಿದೆ. ನಮ್ಮಲ್ಲಿ ಅರಿವು ತುಂಬಿದ ಎಲ್ಲರಿಗೂ ಗುರುವಿನ ಗೌರವ ಭಾವ ಸಲ್ಲುತ್ತದೆ. ಈ ಕಾರಣದಿಂದ ನಮ್ಮಲ್ಲಿ ಗುರು-ಶಿಷ್ಯರ ಸಂಬಂಧಕ್ಕೆ ತುಂಬಾ ಮಹತ್ವವಿದೆ. ಈ ಪರಂಪರೆಯ ಭಾಗವಾಗಿ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ(Sahyadri Science College) ೧೯೯೩-೯೬ ಸಾಲಿನಲ್ಲಿ ಅಭ್ಯಾಸ ಮಾಡಿದ್ದ ಹಿರಿಯ ವಿದ್ಯಾರ್ಥಿಗಳು ತಮಗೆ ವಿದ್ಯೆ ಕಲಿಸಿದ ಅಧ್ಯಾಪಕರುಗಳಿಗೆ ಗೌರವಿಸುವ ಗುರುವಂದನೆ ಕಾರ್ಯಕ್ರಮವನ್ನು ಫೆ.೪ ರಂದು ಗಾಜನೂರಿನ ತುಂತುರು ಫಾರ್ಮ್‌ಹೌಸ್‌ನಲ್ಲಿ ಆಯೋಜಿಸಿದ್ದಾರೆ.

Video report : ಸೈಕಲ್​ನಲ್ಲಿ ಹಾಲು ತರುತ್ತಿದ್ದಾಗ ಬಾಲಕನ ಮೇಲೆ ಏಕಾಯೇಕಿ ಗೂಳಿಗಳ ಅಟ್ಯಾಕ್​

ವಿಜ್ಞಾನ ಕಾಲೇಜಿನಲ್ಲಿ ಆ ಅವಧಿಯಲ್ಲಿ ಕಲಿತ ಎಲ್ಲ ಕಾಂಬಿನೇಷನ್‌ನ ವಿದ್ಯಾರ್ಥಿಗಳು ಸೇರಿ ಗುರುವಂದನಾ ಸಮಿತಿಯನ್ನು ರಚಿಸಿಕೊಂಡಿದ್ದು, ೯೩-೯೬ ಸಾಲಿನಲ್ಲಿ ಪ್ರಾಚಾರ್ಯರಾಗಿದ್ದ ಪ್ರೊ.ಎ.ಎಸ್.ಚಂದ್ರಶೇಖರ್ ಅವರ ಗೌರವ ಅಧ್ಯಕ್ಷತೆಯ ಸಮಿತಿಯಿಂದ ಅರ್ಥ ಪೂರ್ಣವಾದ ಗುರುವಂದನೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಅಂದಿನ ಕಾರ್ಯಕ್ರಮದಲ್ಲಿ ಪಾಠ ಮಾಡಿದ ಎಲ್ಲಾ ಅಧ್ಯಾಪಕರುಗಳನ್ನು ಸಂಪರ್ಕಿಸಲಾಗಿದೆ. ಈಗಾಗಲೇ ೬೭ ಮಂದಿ ಸಂಪರ್ಕಕ್ಕೆ ಸಿಕ್ಕಿದ್ದು, ಅವರನ್ನು ಆತ್ಮೀಯವಾಗಿ ಆಹ್ವಾನಿಸಲಾಗಿದೆ. ರಾಜ್ಯದ ನಾನಾ ಮೂಲೆಯಲ್ಲಿರುವ ಅಧ್ಯಾಪಕರುಗಳು ಕಾರ್ಯಕ್ರಮಕ್ಕೆ ಬರಲು ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಅಂದು ಬೆಳಗ್ಗೆ ೧೦.೩೦ ಕ್ಕೆ ಗುರುವಂದನೆ ಕಾರ್ಯಕ್ರಮ ನಡೆಯಲಿದೆ. ಗುರುವಂದನಾ ಸಮಿತಿ ಅಧ್ಯಕ್ಷ ಉಮೇಶ್ ಮಾನೆ ಅಧ್ಯಕ್ಷತೆ ವಹಿಸುವರು. ಪ್ರೊ.ಎ.ಎಸ್. ಚಂದ್ರಶೇಖರ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಸ್ತುತ ಪ್ರಾಚಾರ್ಯರಾದ ಡಾ.ರಾಜೇಶ್ವರಿ ಅವರು ಭಾಗವಹಿಸುವರು.

Shikaripura bear attack : ಶಿಕಾರಿಪುರದಲ್ಲಿ ಕರಡಿ ದಾಳಿ: ಸ್ವಲ್ಪದರಲ್ಲಿ ಅರಣ್ಯ ಸಿಬ್ಬಂದಿ ಬಚಾವ್! ಕಾರ್ಯಾಚರಣೆ ಹೇಗೆ ಸಾಗಿದೆ! ವಿಡಿಯೋ ರಿಪೋರ್ಟ್

ದೇಶ ಹಾಗೂ ವಿದೇಶದಲ್ಲಿರುವ ಹಿರಿಯ ವಿದ್ಯಾರ್ಥಿಗಳು ಈಗಾಗಲೇ ಸಂಪರ್ಕಿಸಿದ್ದಾರೆ.೧೯೯೩-೯೬ ಸಾಲಿನಲ್ಲಿ ಅಭ್ಯಾಸ ಮಾಡಿರುವ ಸ್ನೇಹಿತರು ಸಮಿತಿಯನ್ನು ಸಂಪರ್ಕಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ಈ ಸಂದರ್ಭ ಮನವಿ ಮಾಡುತ್ತೇವೆ.೨೫ ವರ್ಷಗಳ ನಂತರ ಸಹಪಾಠಿಗಳ ಸಮ್ಮಿಲನ ನಡೆಯುತ್ತಿದ್ದು, ವಿದ್ಯೆ ಕಲಿಸಿದ ಗುರುಗಳನ್ನು ಗೌರವಿಸುವುದೊಂದು ಅವಿಸ್ಮರಣೀಯ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮವೂ ಇದೆ. ೧೯೯೩-೯೬ ನೇ ಸಾಲಿನಲ್ಲಿ ವಿಧ್ಯಾಭ್ಯಾಸ ಮಾಡಿದ ಎಲ್ಲಾ ಗೆಳೆಯರು ಕುಟುಂಬ ಸಮೇತ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ.ಗೋಷ್ಠಿಯಲ್ಲಿ ಉಮೇಶ್ ಮಾನೆ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಗಿರೀಶ್ ಕಾಚಿನಕಟ್ಟೆ, ನರಸಿಂಹ ಕೆ. ಪ್ರಚಾರ ಸಮಿತಿಯ ಜೇಸುದಾಸ್ ಪಿ, ನಾಗರಾಜ್ ನೇರಿಗೆ ಮತ್ತಿತರರು ಇದ್ದರು.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com