Shikaripura bear attack : ಶಿಕಾರಿಪುರದಲ್ಲಿ ಕರಡಿ ದಾಳಿ: ಸ್ವಲ್ಪದರಲ್ಲಿ ಅರಣ್ಯ ಸಿಬ್ಬಂದಿ ಬಚಾವ್! ಕಾರ್ಯಾಚರಣೆ ಹೇಗೆ ಸಾಗಿದೆ! ವಿಡಿಯೋ ರಿಪೋರ್ಟ್

Shikaripura bear attack: A bear attack took place yesterday in shikaripura town. The forest staff is saved Video report on how the operation is going

Shikaripura bear attack:  ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಪಟ್ಟಣದ (shikaripura bear attack) ವ್ಯಾಪ್ತಿಯಲ್ಲಿಯೇ ನಿನ್ನೆ ಕರಡಿ ಕಾಣಿಸಿಕೊಂಡು ಆತಂಕ  ಮೂಡಿಸಿತ್ತು. ಸದ್ಯ ಈ ಸಂಬಂಧ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದೆ. ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯ ಪೂರ್ಣ ಮಾಹಿತಿ ಇಲ್ಲಿದೆ. 

ಮೆಕ್ಕೇಜೋಳದ ಹೊಲದಲ್ಲಿ ಕರಡಿ ಅಟ್ಯಾಕ್​

ನಿನ್ನೆ ಬೆಳಗ್ಗೆ ಅಂದಾಜು 2 ರಿಂದ 3 ವರ್ಷದ ಕರಡಿ ಮರಿಯೊಂದು ಶಿಕಾರಿಪುರ ಪಟ್ಟಣದ ಸಮೀಪದ ಜಮೀನವೊಂದರಲ್ಲಿ ಕಾಣಿಸಿಕೊಂಡಿದೆ. ಅಲ್ಲದೆ ಜನವಿರುವ ಪ್ರದೇಶದಲ್ಲಿ ಓಡಾಡಿರುವ ಬಗ್ಗೆ ಅರಣ್ಯ ಸಿಬ್ಬಂದಿಗೆ ಮಾಹಿತಿ ಲಭ್ಯವಾಗಿದೆ. ಅಷ್ಟೆ ಅಲ್ಲದೆ ಕರಡಿ ಮರಿಯ ಓಡಾಟ ಸ್ಥಳಿಯವಾಗಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕರಡಿಯ ಇರುವಿಕೆ ಖಾತ್ರಿಯಾದ ಬೆನ್ನಲ್ಲೆ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಮೊದಲಿಗೆ  ಕರಡಿ ಕಾಣಿಸಿದ್ದ ಮೆಕ್ಕೆಜೋಳದ ಹೊಲದಲ್ಲಿ ಅರಣ್ಯ ಸಿಬ್ಬಂದಿ ಪೆಟ್ರೋಲಿಂಗ್ ಮಾಡಿದ್ದಾರೆ. ಈ ವೇಳೆ ಕರಡಿ ಇದ್ದಕ್ಕಿದ್ದಂತೆ ಅಟ್ಯಾಕ್ ಮಾಡಿದೆ. ತಕ್ಷಣ ಅಲರ್ಟ್​ ಆದ ಸಿಬ್ಬಂದಿ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. 

Video report : ಸೈಕಲ್​ನಲ್ಲಿ ಹಾಲು ತರುತ್ತಿದ್ದಾಗ ಬಾಲಕನ ಮೇಲೆ ಏಕಾಯೇಕಿ ಗೂಳಿಗಳ ಅಟ್ಯಾಕ್​

ಹೊಲದಲ್ಲ ಪಟಾಕಿ ಸಿಡಿಸಿ ಕೂಂಬಿಂಗ್

ಇದರ ಬೆನ್ನಲ್ಲೆ ಅರಣ್ಯ ಇಲಾಖೆಯು ಹೆಚ್ಚುವರಿ ಸಿಬ್ಬಂದಿ ಹಾಗೂ ಡಾರ್ಟ್ ತಜ್ಞರನ್ನು ಸ್ಥಳಕ್ಕೆ ಕರೆಸಿಕೊಂಡು ಆಪರೇಷನ್​ ಜಾಂಬವಂತ ಆರಂಭಿಸಿದೆ. ಮೊದಲಿಗೆ ತಜ್ಞರು ಸ್ಥಳಕ್ಕೆ ಆಗಮಿಸಿ ಕರಡಿ ಕಾಣಸಿಕ್ಕಿರುವ ಮೆಕ್ಕೆಜೋಳದ ಹೊಲವನ್ನು ಕವರ್ ಮಾಡಿದ್ಧಾರೆ.  ಸುಮಾರು ಮೂರು ಎಕೆರೆ ಜಮೀನಿನ ಸುತ್ತ ಬಲೆಯನ್ನು ಹಾಕಿಸಿದ ತಜ್ಞರು ಆನಂತರ ಕೂಂಬಿಂಗ್ ಆರಂಭಿಸಿದ್ಧಾರೆ. ಇದರಡಿಯಲ್ಲಿ ಹೊಲದ ಮಧ್ಯೆ ಮಧ್ಯೆ ಪಟಾಕಿಯನ್ನು ಸಿಡಿಸಿ ಕರಡಿ ಹೊರಕ್ಕೆ ಬರುವಂತೆ ಮಾಡಲಾಯ್ತು. ಆದರೆ ಈ ಪ್ರಯೋಗ ವಿಫಲವಾಯ್ತು. 

ಇದನ್ನು ಸಹ ಓದಿ : mandagadde : ಮಂಡಗದ್ದೆ ಶಾಲೆ ಶಿಕ್ಷಕ ರವಿಪ್ರಕಾಶ್ ಇನ್ನಿಲ್ಲ

ಕರಡಿ ಕಾರ್ಯಾಚರಣೆಗಾಗಿ ಜೆಸಿಬಿ ಮತ್ತು ಡ್ರೋನ್​ 

ಇದಾದ ಬಳಿಕ ಸ್ಥಳಕ್ಕೆ ಜೆಸಿಬಿಯೊಂದನ್ನ ತರಿಸಿಕೊಂಡು ಎತ್ತರಕ್ಕೆ ನಿಂತು ಕರಡಿಯನ್ನು ಡಾರ್ಟ್​ ಮಾಡಿ ಹಿಡಿಯುವ ಪ್ಲಾನ್ ಮಾಡಲಾಯ್ತು.  ಆದರೆ ಜೆಸಿಬಿ ಶಬ್ಧಕ್ಕೆ ಕರಡಿ ತಪ್ಪಿಸಿಕೊಳ್ಳುವ ಆತಂಕವೂ ಇತ್ತು ಈ ಹಿನ್ನೆಲೆಯಲ್ಲಿ ಕೊಳ್ಳಿಗಳನ್ನು ತಯಾರು ಮಾಡಿ, 20 ಜನರನ್ನು ಬಳಸಿಕೊಂಡು ಕೂಂಬಿಂಗ್ ಕಾರ್ಯಾಚರಣೆಯನ್ನು ಆರಂಭಿಸಲಾಯ್ತು. ಹೆಲ್ಮೆಟ್ ಧರಿಸಿ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಯುವಕರ ಸಹಾಯದಲ್ಲಿ ಕಾರ್ಯಾಚರಣೆಯನ್ನು ನಡೆಸಲಾಯ್ತು. ಇನ್ನೂ ಕರಡಿ ಪತ್ತೆಗಾಗಿ ಡ್ರೋನ್​ ಕ್ಯಾಮರಾವನ್ನು ಸಹ ಬಳಸಲಾಯ್ತು. ಅರ್ಧದಿನಕ್ಕೂ ಹೆಚ್ಚು ಕಾಲ ನಡೆದ ಕೂಂಬಿಂಗ್ ಕಾರ್ಯಾಚರಣೆ ನಡೆದರೂ ಕರಡಿಯ ಇರುವಿಕೆ ಪತ್ತೆಯಾಗಲಿಲ್ಲ. ಸಿಬ್ಬಂದಿ ಮೆಕ್ಕೆಜೋಳದ ಹೊಲವನ್ನು ಇಂಚಿಂಚೂ ಶೋಧಿಸಿದರೂ ಕರಡಿ ಪತ್ತೆಯಾಗಲಿಲ್ಲ. 

BREAKING NEWS : ಶಿಕಾರಿಪುರದಲ್ಲಿ ಕರಡಿ ಕಾಟ/ ಡ್ರೋನ್​ ಬಳಸಿ ಹುಡುಕಾಟ

ಹಿಂದೆಯು ನಡೆದಿತ್ತು ಕರಡಿ ಅಟ್ಯಾಕ್​

ಮೆಕ್ಕೆಜೋಳದ ಹೊಲದಿಂದ ಮುಂದಕ್ಕೆ ಮೈನರ್ ಫಾರೆಸ್ಟ್ ವೊಂದು ಇದ್ದು ಕರಡಿ ಅದೇ ಕಾಡಿನಿಂದ ಬಂದಿದ್ದರಬಹುದು ಎಂದು ಶಂಕಿಸಲಾಗಿತ್ತು. ಅಲ್ಲದೆ, ಕರಡಿ ಮತ್ತದೆ ಕಾಡಿಗೆ ಹೋಗಿರುವ ಸಾಧ್ಯತೆ ಇದೆ ಎಂದು ಅರಣ್ಯ ಸಿಬ್ಬಂದಿ ಹೇಳುತ್ತಿದ್ದಾರೆ. ಇನ್ನೂ ಕಳೆದ ವರ್ಷದ ಆಗಸ್ಟ್​ ನಲ್ಲಿ ಕರಡಿದಾಳಿಯೊಂದರಲ್ಲಿ  ಶಿಕಾರಿಪುರ ತಾಲೂಕು ಸಿಡುಗಿನಾಳ್ ಮರಾಠಿ ಕ್ಯಾಂಪ್ ನಿವಾಸಿಯೊಬ್ಬರು ಗಾಯಗೊಂಡಿದ್ದರು. ಸದ್ಯ ಕರಡಿಯ ಇರುವಿಕೆಯ ಬಗ್ಗೆ ಅರಿತಿರುವ ಅರಣ್ಯ ಇಲಾಖೆ ಅದನ್ನು ಹಿಡಿಯುವ ಸಂಬಂಧ ಶಿಕಾರಿಪುರದಲ್ಲಿ ಬೀಡುಬಿಟ್ಟಿದೆ. ರೇಂಜರ್ ರಾಘವೇಂದ್ರ ಹಾಗೂ ವನ್ಯಜೀವಿ ವಿಭಾಗದ ಡಾಕ್ಟರ್ ವಿನಯ್​ ಸ್ಥಳದಲ್ಲಿದ್ದಾರೆ.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com