ಬೈಕ್​ ಓಡಿಸುವ ಮಕ್ಕಳ ಪೋಷಕರಿಗೆ ಎಸ್​ಪಿ ಮಿಥುನ್​ ಕುಮಾರ್ ಹೇಳಿದ್ದೇನು? ಹೆತ್ತವರಿಗೆ ಎಚ್ಚರಿಕೆ ಸಂದೇಶ

Malenadu Today

ಮಕ್ಕಳಿಗೆ ಗಾಡಿ ಕೊಟ್ರೆ ಪೋಷಕರಿಗೆ ಅಪಾಯ ಕಾದಿದೆ, ಅಪ್ಪಿತಪ್ಪಿ ಅಪ್ರಾಪ್ತರ ಕೈಗೆ ವೆಹಿಕಲ್ ಕೊಟ್ಟು ಓಡಿಸು ಎಂದು ಕೊಟ್ಟರೆ, ಅಂತಹ ಫೋಷಕರ ವಿರುದ್ಧವೇ ಕ್ರಮಕ್ಕೆ ಆಡಳಿತ ವ್ಯವಸ್ಥೆ ಮುಂದಾಗಿದೆ.

ಶಿವಮೊಗ್ಗ ಬರ್ತಾರೆ ಭಾಗವತ್​: ಇವತ್ತು ಶಿವಮೊಗ್ಗಕ್ಕೆ RSS ನ ಹಿರಿಯ ನಾಯಕ ಮೋಹನ್​ ಭಾಗವತ್​ ಭೇಟಿ/ ಕಾರಣವೇನು ಓದಿ

ಈ ಸಂಬಂಧ ಮಾತನಾಡಿರುವ ಎಸ್​ಪಿ ಮಿಥುನ್​ ಕುಮಾರ್,  (SP Mithunkumar) ವಿಶೇಷವಾಗಿ ಪಿಯುಸಿ (Puc) ಓದುತ್ತಿರುವವರಿಗೆ ಪೋಷಕರು (parents) ವೆಹಿಕಲ್ ಕೊಟ್ಟು ಕಳುಹಿಸುತ್ತಿರುವ ಬಗ್ಗೆ ಗಮನಕ್ಕಿದೆ. ಅಂತಹ ಪೋಷಕರು ತಮ್ಮ ಮಕ್ಕಳನ್ನು ಸಾರ್ವಜನಿಕ ಸಾರಿಗೆ ವ್ಯವಸ್ಥೆ (public transport) ಅಥವಾ ತಮ್ಮ ಖಾಸಗಿ ವೆಹಿಕಲ್ ಮೂಲಕ ಮಕ್ಕಳನ್ನು ಸ್ಕೂಲ್  ಹಾಗೂ ಕಾಲೇಜುಗಳಿಗೆ ತಲುಪಿಸಿ ಎಂದು ವಿನಂತಿಸಿದ್ದಾರೆ. 

ಮೋದಿಯವರ ತಾಯಿ ನಿಧನ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೇನ್​ ನಿಧನ

ಅಪ್ರಾಪ್ತರು ವೆಹಿಕಲ್ ಓಡಿಸುವುದು ಗಮನಕ್ಕೆ ಬಂದರೆ, ಅವರಿಗೆ ಗಾಡಿ ಕೊಟ್ಟಿರುವವರ ವಿರುದ್ಧವೇ ಕೇಸ್ ದಾಖಲಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.  ಈ ಸಂಬಂಧ ತೀರ್ಥಹಳ್ಳಿಯಲ್ಲಿ ಒಂದು ಕೇಸ್​ನಲ್ಲಿ ಪೋಷಕರು ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿರುವ ಮಿಥುನ್​ ಕುಮಾರ್​ರವರು ಅಪ್ತಾಪ್ತರ ಕೈಗೆ ಬೈಕ್​ ಅಥವಾ ಬೇರೆ ವಹಿಕಲ್ ನೀಡಿದರೇ ಬರೋಬ್ಬರಿ 25 ಸಾವಿರ ರೂಪಾಯಿ ದಂಡ ಕಟ್ಟಬೇಕಾಗುತ್ತದ ಎಂದಿದ್ದಾರೆ. 

ಶರಾವತಿ ಸುದ್ದಿ ;ಶರಾವತಿ ಸಂತ್ರಸ್ತರಿಗೆ ಸರ್ಕಾರದ ಗುಡ್​ನ್ಯೂಸ್​/ ಭೂಮಿ ಹಕ್ಕಿಗೆ ಸಂಬಂಧಿಸಿದಂತೆ ಸಿಕ್ಕಿತು ಈ ಆಶ್ವಾಸನೆ/ ವಿವರ ಓದಿ

ಇನ್ನೂ ಇತ್ತೀಚೆಗೆ ನಡೆದ ಸಭೆಯಲ್ಲಿ ಕಾಲೇಜುಗಳಿಗೆ ಬೈಕ್​ಗಳನ್ನು ತಂದರೆ ಅದಕ್ಕೆ ಕಾಲೇಜಿನ ಪ್ರಿನ್ಸಿಪಾಲರೇ ಹೊಣೆಯಾಗುತ್ತಾರೆ ಎಂದು ನಿರ್ಣಯಿಸಲಾಗಿದೆ. ಈ ಸಂಬಂಧ ಪ್ರಾಂಶುಪಾಲರ ವಿರುದ್ಧ ಕೇಸ್​ ದಾಖಲಿಸಬಹುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿತ್ತು. 

ಗ್ರಾಹಕರಿಗೆ ಹೊರೆ ಇಳಿಸಿದ ಸರ್ಕಾರ/ ಮೆಸ್ಕಾಂ, ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್​ ದರ ಇಳಿಕೆ/ ಎಷ್ಟು ಕಮ್ಮಿಯಾಗಿದೆ? ವಿವರ ಇಲ್ಲಿದೆ

ಶಿವಮೊಗ್ಗದಲ್ಲಿ (shivamogga) ಅಪ್ತಾಪ್ತರು ಬೈಕ್​ಗಳನ್ನು ಓಡಿಸ್ತಿರುವುದು ಅಲ್ಲದೆ, ತ್ರಿಬ್ಬಲ್ ರೈಡಿಂಗ್ ಮಾಡುವುದು, ರೂಲ್ಸ್​ಗಳನ್ನು ಉಲ್ಲಂಘಿಸಿ ಸ್ಪೀಡಾಗಿ ಓಡಾಡುವುದು, ವಿಕೃತವಾಗಿ ಸೌಂಡ್ ಮಾಡುತ್ತಾ ತೆರಳುವುದು, ಮತ್ತು ಬೇಕಾಬಿಟ್ಟಿಯಾಗಿ ಸಂಚರಿಸಿ ಬೇರೆಯವರಿಗೆ ತೊಂದರೆಕೊಡುವುದು ಮಾಡುತ್ತಿದ್ಧಾರೆ. ಸದ್ಯ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಅಪ್ತಾಪ್ತರ ಬೈಕ್​ ಚಟಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

 

 

Share This Article