ಶಿವಮೊಗ್ಗ ನಗರದಲ್ಲಿ Rapid action force​ ರೂಟ್ ಮಾರ್ಚ್​ ಕಾರಣವೇನು ಗೊತ್ತಾ?

Do you know the reason for the Rapid Action Force Route March in Shivamogga city

ಶಿವಮೊಗ್ಗ ನಗರದಲ್ಲಿ Rapid action force​ ರೂಟ್ ಮಾರ್ಚ್​ ಕಾರಣವೇನು ಗೊತ್ತಾ|? 

ಶಿವಮೊಗ್ಗ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಇವತ್ತು ರ್ಯಾಪಿಡ್​ ಆಕ್ಷನ್​ ಫೋರ್ಸ್​ ರೂಟ್ ಮಾರ್ಚ್​​ ಮಾಡಿದೆ.ಹಳೇ ಶಿವಮೊಗ್ಗದ ಗಾಂಧಿಬಜಾರ್, ಎಂಕೆಕೆ ರೋಡ್​, ಸಿದ್ದಯ್ಯ ರೋಡ್​ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಶಸ್ತ್ರ ಸಜ್ಜಿತ ಫೊಲೀಸರು ರೂಟ್​ ಮಾರ್ಚ್​ ಮಾಡಿದ್ದಾರೆ. ಈ ರೂಟ್ ಮಾರ್ಚ್​ ಏಕಾಗಿ ನಡೆಯಿತು ಎಂಬ ಅಚ್ಚರಿಯ ಕಣ್ಗಳಲ್ಲಿ ಸ್ಥಳೀಯರು ಗಮನಿಸಿದ್ದಾರೆ. 

ಇದನ್ನು ಸಹ ಓದಿ : mandagadde : ಮಂಡಗದ್ದೆ ಶಾಲೆ ಶಿಕ್ಷಕ ರವಿಪ್ರಕಾಶ್ ಇನ್ನಿಲ್ಲ

ಸಾಮಾನ್ಯವಾಗಿ ಶಿವಮೊಗ್ಗದಲ್ಲಿ ಅಹಿತಕರ ಘಟನೆಗಳು ಸಂಭವಿಸಿದಾಗ ಇಂತಹ ರೂಟ್ ಮಾರ್ಚ್​ಗಳು ನಡೆಯುತ್ತವೆ. ಆದರೆ, ಇವತ್ತು ಏಕೆ ರೂಟ್ ಮಾರ್ಚ್​ ನಡೆಯಿತು ಎಂಬುದೇ ಜನರಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ವಿಚಾರಿಸಿದಾಗ ಮುಖ್ಯವಾಗಿ ಸಿಕ್ಕ ಸಂಗತಿ ಎಂದರೆ, ರ್ಯಾಪಿಡ್ ಆಕ್ಸನ್​ ಫೋರ್ಸ್​ ಪ್ರತಿ ಮೂರು ತಿಂಗಳಿಗೊಮ್ಮೆ  ಸೂಕ್ಷ್ಮ ಪ್ರದೇಶಗಳಲ್ಲಿ ರೂಟ್ ಮಾರ್ಚ್​ ನಡೆಸಬೇಕು ಎನ್ನುವ ನಿಯಮ ಇದೆ ಎನ್ನಲಾಗಿದೆ. ಈ ಕಾರಣಕ್ಕೇ ಆರ್​ ಎಎಫ್​ ಪಡೆ ಇವತ್ತು ರೂಟ್ ಮಾರ್ಚ್ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ. 

ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಏನಿದೆ.

ಇನ್ನೂ ಬಗ್ಗೆ ಎಸ್​ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದು, ಅವರು ನೀಡಿರುವ ಪ್ರಕಟಣೆಯಲ್ಲಿರುವ ವಿವರ ಇಲ್ಲಿದೆ ಓದಿ :  ಮುಂಬರುವ ಕರ್ನಾಟಕ ವಿಧಾನ ಸಭಾ ಸಾರ್ವರ್ತಿಕ ಚುನಾವಣೆ ಹಿನ್ನೆಲೆಯಲ್ಲಿ Rapid Action Force (RAF) ಕಂಪನಿಗಳಿಗೆ  ಜಿಲ್ಲೆಯ ಪ್ರಮುಖ ಮತ್ತು ಸೂಕ್ಷ್ಮ ಸ್ಥಳಗಳ ಪರಿಚಯ (Area Familiarization) ಕ್ಕಾಗಿ ಈ ದಿನ ದಿನಾಂಕಃ-18-01-2023 ರಂದು ಶ್ರೀ ಬಾಲರಾಜ್, ಡಿವೈಎಸ್.ಪಿ, ಶಿವಮೊಗ್ಗ-ಬಿ ಉಪ ವಿಭಾಗ ಮತ್ತು ನಯನ ನಂದಿ, ಡೆಪ್ಯುಟಿ ಕಮಾಂಡೆಂಟ್, RAF ರವರ ನೇತೃತ್ವದಲ್ಲಿ Familiarization Exircises ಪಥಸಂಚಲನವನ್ನು ಕೈಗೊಳ್ಳಲಾಗಿದೆ. 

ಶಿವಮೊಗ್ಗ ನಗರದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಳಗಿನ ತುಂಗಾನಗರದಿಂದ ಪ್ರಾರಂಭಿಸಿ ಕೆ.ಕೆ ಶೆಡ್, ಪದ್ಮಾ ಟಾಕೀಸ್, ಟಿಪ್ಪೂನಗರ ಹಾಗೂ ದೊಡ್ಡಪೇಟೆ ಪೊಲೀಸ್ ಠಾಣಾ  ವ್ಯಾಪ್ತಿಯ ವಿಜಯಾ ಗ್ಯಾರೇಜ್, ಗಜಾನನ ಗೇಟ್, ಸೀಗೇಹಟ್ಟಿ, ಕುಂಬಾರ ಬೀದಿ, ಕೆಆರ್ ಪುರಂ, ಸಿದ್ಯಯ್ಯ ಸರ್ಕಲ್, ಎಂಕೆಕೆ ರಸ್ತೆ, ಎಎ ಸರ್ಕಲ್ ಮತ್ತು ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್ ಎನ್ ಸರ್ಕಲ್, ಗಾಂಧಿ ಬಜಾರ್, ಅಶೋಕಾ ರಸ್ತೆ, ಶಿವಾಜಿ ರಸ್ತೆ, ಲಕ್ಷರ್ ಮೊಹಲ್ಲಾ, ಓಲ್ಡ್ ಬಾರ್ ಲೈನ್ ರಸ್ತೆ ಮುಖಾಂತರ ಬಂದು ಕೋಟೆ ಪೊಲೀಸ್ ಠಾಣೆಯ ಹತ್ತಿರ ಮುಕ್ತಾಯ ಮಾಡಲಾಗಿರುತ್ತದೆ.  ಸದರಿ ಪಥಸಂಚಲನದಲ್ಲಿ  ಶ್ರೀ ನವೀನ್ ಕುಮಾರ್, ಅಸಿಸ್ಟೆಂಟ್ ಕಮಾಂಡೆಂಟ್ RAF, ಪಿಐ ತುಂಗಾನಗರ, ಪಿಐ ದೊಡ್ಡಪೇಟೆ ಮತ್ತು ಪಿಐ ಕೋಟೆ ಹಾಗೂ ಪಿಎಸ್ಐ ಮತ್ತು ಸಿಬ್ಬಂಧಿಗಳು ಹಾಗೂ Rapid Action Force (RAF)ನ ಅಧಿಕಾರಿ ಸಿಬ್ಬಂಧಿಗಳು ಭಾಗವಹಿಸಿದ್ದರು.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com