ಫೆಬ್ರವರಿ 23 ಕ್ಕೆ ತೀರ್ಥಹಳ್ಳಿಯಲ್ಲಿ ಟಿಪ್ಪು ನಿಜ ಕನಸುಗಳು ನಾಟಕ

TippuNijaKanasugalu Drama at Theerthahalli on Feb. 23

ಫೆಬ್ರವರಿ  23 ಕ್ಕೆ ತೀರ್ಥಹಳ್ಳಿಯಲ್ಲಿ ಟಿಪ್ಪು ನಿಜ ಕನಸುಗಳು ನಾಟಕ
ಫೆಬ್ರವರಿ 23 ಕ್ಕೆ ತೀರ್ಥಹಳ್ಳಿಯಲ್ಲಿ ಟಿಪ್ಪು ನಿಜ ಕನಸುಗಳು ನಾಟಕ

ರಾಜ್ಯದೆಲ್ಲೆಡೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಟಿಪ್ಪು ನಿಜ ಕನಸುಗಳು ನಾಟಕ ಇದೀಗ ಶಿವಮೊಗ್ಗ ಜಿಲ್ಲೆಯಲ್ಲಿಯು ಸದ್ದು ಮಾಡುತ್ತಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನಗೊಳ್ಳಲಿದೆ. 

ಮೈಸೂರು ರಂಗಾಯಣ ಪ್ರಸ್ತುತ ಪಡಿಸುವ ' 'ಟಿಪ್ಪು ನಿಜ ಕನಸುಗಳು' ನಾಟಕ ಇದೇ  ಫೆಬ್ರವರಿ 23 ರಂದು ಗುರುವಾರ ಸಂಜೆ ತೀರ್ಥಹಳ್ಳಿಯ ಶಾಂತವೇರಿ ಗೋಪಾಲ ಗೌಡ ರಂಗಮಂದಿರದಲ್ಲಿ ನಡೆಯಲಿರುವುದಾಗಿ ಮೈಸೂರು ರಂಗಾಯಣ ನಿರ್ದೇಶಕ ಹಾಗೂ ಈ ನಾಟಕದ ರಚನೆ ಹಾಗೂ ನಿರ್ದೇಶನ ಮಾಡಿದ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ. 

ಈ ನಾಟಕದ 37 ಪ್ರಯೋಗಗಳು ಯಶಸ್ವಿಯಾಗಿವೆ. ಸುಳ್ಳಿನ ವಿರುದ್ದ ಸಾತ್ವಿಕ ಪ್ರತಿಭಟನೆಯೆ ಈ ನಾಟಕದ ಹೂರಣ ಎಂದಿರುವ ಅವರು, ನಾಟಕದ ರಂಗ ವಿನ್ಯಾಸ ಶಶಿಧರ ಅಡಪ, ವಸ್ತ್ರ ಪರಿಕರ ವಿನ್ಯಾಸ ಪ್ರಮೋದ್ ಶಿಗ್ಗಾಂವ್, ಸಂಗೀತ ಧನಂಜಯ ಆರ್.ಸಿ., ಸುಬ್ರಹ್ಮಣ್ಯ ಮೈಸೂರು, ಬೆಳಕು ಮಹೇಶ್‌ ಕಲ್ಲತ್ತಿ ಮಾಡಿಕೊಟ್ಟಿದ್ದಾರೆ ಅಂತಾ ಮಾಹಿತಿ ನೀಡಿದ್ರು.  

ಜಿಲ್ಲಾ ಜಂಕ್ಷನ್ ನಡೆದಿದ್ದು ಆಕ್ಸಿಡೆಂಟ್! ಬಯಲಾಗಿದ್ದು ಕೊಲೆ ಹಾಗೂ ದರೋಡೆ ಕೇಸ್!? ದ್ವೇಷ ಹೀಗೂ ತೀರಿಸಿಕೊಳ್ಳುತ್ತಾರಾ? ವಿಚಿತ್ರ ಕ್ರೈಂ ಕಥೆ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com