ಕೊಟ್ಟಿಗೆಗೆ ನುಗ್ಗಿದ ಚಿರತೆ/ ಹೆಂಚು ತೆಗೆದು ಅರಣ್ಯ ಇಲಾಖೆ ರೋಚಕ ಕಾರ್ಯಾಚರಣೆ!

Forest department launches operation to catch leopard at Kuppe in Soraba taluk

ಕೊಟ್ಟಿಗೆಗೆ ನುಗ್ಗಿದ ಚಿರತೆ/ ಹೆಂಚು ತೆಗೆದು ಅರಣ್ಯ  ಇಲಾಖೆ ರೋಚಕ ಕಾರ್ಯಾಚರಣೆ!

KARNATAKA NEWS/ ONLINE / Malenadu today/ May 1, 2023 GOOGLE NEWS


ಸೊರಬ/ ಶಿವಮೊಗ್ಗ ಇಲ್ಲಿನ ಕುಪ್ಪೆ ಗ್ರಾಮದ ಮನೆಯಯೊಂದರ ಕೊಟ್ಟಿಗೆಯಲ್ಲಿ ಚಿರತೆಯೊಂದು ಸೇರಿ ಆತಂಕ ಮೂಡಿಸಿತ್ತು. ಈ ಸಂಬಂಧ ತಕ್ಷಣ ಕಾರ್ಯಾಚರಣೆಗೆ ಇಳಿದ ಅರಣ್ಯ ಸಿಬ್ಬಂದಿ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ. 

ಗ್ರಾಮದ ಶಿವಕುಮಾರ್ ಗೌಡ ಎಂಬುವವರ ಮನೆಯ ಕೊಟ್ಟಿಗೆಯಲ್ಲಿ ಚಿರತೆ ಸೇರಿಕೊಂಡಿತ್ತು. ಚಿರತೆಯ ಇರುವಿಕಯನ್ನು ಗಮನಿಸಿದ  ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತರಾದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. 

ಒಂದು ಗಂಟೆಗೂ ಅಧಿಕ ಕಾಲ ಕಾರ್ಯಚರಣೆ ನಡೆಸಿದ ಅರಣ್ಯ ಸಿಬ್ಬಂದಿ, ಕೊಟ್ಟಿಗೆಯ ಹಂಚು ತೆಗೆದು ಅದರ ಮೂಲಕ ಚಿರತೆಗೆ ಅರವಳಿಕೆ ಚುಚ್ಚುಮದ್ದನ್ನು ಡಾರ್ಟ್​ ಮಾಡಿದರು, ಆನಂತರ  ಚಿರತೆಗೆ  ಪ್ರಾಥಮಿಕ ಚಿಕಿತ್ಸೆ ನೀಡಿ, ಹಂಪೆಯ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಕಳುಹಿಸಿಕೊಡಲಾಗಿದೆ. 

 

ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್​ ನೀಡಿತು ಭಾರೀ ಶಿಕ್ಷೆ 

ಈ ಸಲ ವೋಟು ಯಾರಿಗೆ ಹಾಕಬೇಕು ಎಂಬುದಕ್ಕೆ ಶಿವಮೊಗ್ಗದಲ್ಲಿ ಚಕ್ರವರ್ತಿ ಸೂಲಿಬೆಲೆ ಉತ್ತರ!

ಶಿವಮೊಗ್ಗ/  ನಗರದಲ್ಲಿ ಇವತ್ತು ಬಿಜೆಪಿ ಪರ ಚಕ್ರವರ್ತಿ ಸೂಲಿಬೆಲೆ ಮಾತನಾಡಿದ್ರು. ನಗರದ ವಿನೋಬನಗರ ಸೋಮಿನಕೊಪ್ಪ ರಸ್ತೆಯ ಸರ್ಜಿ ಇನ್ಸಿಟಿಟ್ಯೂಟ್‌ನಲ್ಲಿ  ಜನಹಿತ ಟ್ರೆಸ್ಟ್​ ಹಾಗೂ ಮತದಾರರ ಜಾಗೃತ ವೇದಿಕೆ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ  ಚಕ್ರವರ್ತಿ ಸೂಲಿಬೆಲೆ ಮಾತನಾಡ್ತಾ  ಕಳೆದ ಎಂಟತ್ತು ವರ್ಷಗಳ ಹಿಂದೆ ಪ್ರಪಂಚವೇ ಭಾರತವನ್ನು ದುರ್ಬಲ ರಾಷ್ಟ್ರ ಎಂದು ಪರಿಗಣಿಸಿತ್ತು, ಆದರೀಗ ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುವಂತೆ ನಮ್ಮ ದೇಶ ಬೆಳೆದು ನಿಂತಿದೆ ಎಂದರು



ಇದನ್ನೂ ಓದಿ / ಒಂದೇ ದಿನ 90 ಲಕ್ಷದ ಎಣ್ಣೆ ಜಪ್ತಿ/ ಶಿಕಾರಿಪುರದಲ್ಲಿ ಭರ್ಜರಿ ಹಣ ಪತ್ತೆ/  ಒಂದೇ ರಾತ್ರಿ 19 ಪಿಟ್ಟಿಕೇಸ್/ ಎ.ಎ. ಸರ್ಕಲ್​ ನಲ್ಲಿ ರೂಟ್ ಮಾರ್ಚ್​! ಪೊಲೀಸ್ ನ್ಯೂಸ್​ 

ನರೇಂದ್ರ ಮೋದಿ ಅವರನ್ನು ಬಲಪಡಿಸಲು ಕರ್ನಾಟಕದಲ್ಲಿ ಸಂಪೂರ್ಣ ಬಹುಮತದ ಬಿಜೆಪಿ ಸರಕಾರವನ್ನು ನೀಡೋಣ . ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಚುನಾವಣಾ ಪ್ರವಾಸ ಕೈಗೊಂಡ ಮೇಲೆ ಕರ್ನಾಟಕದಲ್ಲಿ ನಿಜವಾದ ಕರೆಂಟ್‌ ಪಾಸ್‌ ಆದಂತಾಗಿದೆ. 

ಬೇರೆ ಪಕ್ಷಗಳಿಗೆ ಭಯ ಹುಟ್ಟಿದೆ. ಹಾಗಾಗಿ ದಿನಕ್ಕೊಂದು ಪೊಳ್ಳು ಭರವಸೆಗಳನ್ನು ನೀಡುತ್ತಾ ಜನರ ಕಣ್ಣಿಗೆ ಮಣ್ಣೆರೆಚುತ್ತಿವೆ. ಆದರೆ, ಪ್ರಜ್ಞಾವಂತ ಮತದಾರರು ಕಿವಿಗೊಡದೇ ಜನರಿಗೆ ಸ್ಪಂದಿಸುವ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್​ ನೀಡಿತು ಭಾರೀ ಶಿಕ್ಷೆ 

ಕಳೆದ ಎಂಟು ಹತ್ತು ವರ್ಷಗಳ ಹಿಂದೆ ರಾಜಕಾರಣವೆಂದರೆ ಜನರಲ್ಲಿ ವಾಕರಿಕೆ ಮನೋಭಾವ ಇತ್ತು. ಆದರೀಗ ನರೇಂದ್ರ ಮೋದಿಯಂತಹ ನಾಯಕರಿದ್ದರೆ ದೇಶ ಸದೃಢವಾಗಿರಬಲ್ಲುದು ಎಂಬ ನಂಬಿಕೆ ಜನರಲ್ಲಿ ಮೂಡಿದೆ. ನರೇಂದ್ರ ಮೋದಿಯವರನ್ನು ಕೈ ಬಲ ಪಡಿಸಿದರೆ ಭಾರತವನ್ನು ಗಟ್ಟಿ ಮಾಡಿದಂತೆ ಎಂದರು. 

ಬಿಜೆಪಿ ಮುಖಂಡರಾದ ಡಾ.ಧನಂಜಯ ಸರ್ಜಿ ಮಾತನಾಡಿ, ಕಾಂಗ್ರೆಸ್‌ ಪಕ್ಷವು ಸುಳ್ಳು ಭರವಸೆಗಳನ್ನು ನೀಡುತ್ತಿದ್ದು, ಪ್ರಜ್ಞಾವಂತ ಮತದಾರರರು ದೇಶದ ಪ್ರಗತಿಗಾಗಿ  ಬಿಜೆಪಿಯನ್ನು ಬೆಂಬಲಿಸಬೇಕು. ಗುಡಿಸಿದರೆ ಕಸವಿರಬಾರದು, ಬಡಿಸಿದರೆ ಹಸಿವಿರಬಾರದು, ಓಟು ಹಾಕಿದರೆ ಕಾಂಗ್ರೆಸ್‌ ಇರಬಾರದು. ಈ ನಿಟ್ಟಿನಲ್ಲಿ  ಪ್ರಜ್ಞಾವಂತ ಮತದಾರರು ಜಾಗೃತರಾಗುವ ಮೂಲಕ ಅಭ್ಯರ್ಥಿ ಚನ್ನಬಸಪ್ಪ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.  

Malenadutoday.com Social media