ಅಪ್ರಾಪ್ತೆಯನ್ನ ಪ್ರೀತಿಸಿದ ತಪ್ಪಿಗೆ ಆತನಿಗೆ ಹತ್ತು ವರ್ಷ ಶಿಕ್ಷೆ..ಜೈಲಿಗೆ ಹೋದವನಿಗಾಗಿ ಕಾದು ಕೂತ ಪ್ರೇಯಸಿ! ಆದರೆ ಪೆರೋಲ್ ಮೇಲೆ ಬಂದ ಪ್ರಿಯಕರಿನಿಗೆ ಕಂಡಿದ್ದೇ ಬೇರೆ : JP Exclusive truth love stories

He was sentenced to 10 years in prison for falling in love with a minor girl. A girlfriend who waited for the one who went to jail! But a lover on parole saw something else: JP Exclusive truth love stories

ಅಪ್ರಾಪ್ತೆಯನ್ನ ಪ್ರೀತಿಸಿದ ತಪ್ಪಿಗೆ ಆತನಿಗೆ  ಹತ್ತು ವರ್ಷ  ಶಿಕ್ಷೆ..ಜೈಲಿಗೆ ಹೋದವನಿಗಾಗಿ ಕಾದು ಕೂತ ಪ್ರೇಯಸಿ! ಆದರೆ ಪೆರೋಲ್ ಮೇಲೆ ಬಂದ ಪ್ರಿಯಕರಿನಿಗೆ ಕಂಡಿದ್ದೇ ಬೇರೆ :  JP Exclusive truth love stories
ಅಪ್ರಾಪ್ತೆಯನ್ನ ಪ್ರೀತಿಸಿದ ತಪ್ಪಿಗೆ ಆತನಿಗೆ ಹತ್ತು ವರ್ಷ ಶಿಕ್ಷೆ..ಜೈಲಿಗೆ ಹೋದವನಿಗಾಗಿ ಕಾದು ಕೂತ ಪ್ರೇಯಸಿ! ಆದರೆ ಪೆರೋಲ್ ಮೇಲೆ ಬಂದ ಪ್ರಿಯಕರಿನಿಗೆ ಕಂಡಿದ್ದೇ ಬೇರೆ : JP Exclusive truth love stories

ಪ್ರೀತಿ ಮಾಡು ತಪ್ಪೇನಿಲ್ಲ ಎಂಬುದು ಆತನ ವಿಷಯದಲ್ಲಿ ಸತ್ಯವಾಗಲಿಲ್ಲ. ಏಕೆಂದರೆ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ ತಪ್ಪಿಗೆ ನ್ಯಾಯಾಲಯ ಯುವಕನಿಗೆ ಹತ್ತು ವರ್ಷ ಸಜೆಯನ್ನು ನೀಡಿತ್ತು. ಆದರೆ ಆತನಿಗಾಗಿ ಆಕೆ ಉಸಿರು ಬಿಗಿ ಹಿಡಿದು ಕಾಯುತ್ತಿದ್ದಳು. ಇಬ್ಬರ ಪ್ರೇಮದ ಕಾವ್ಯದ ನಡುವೆ ಕಾಲವೇ ದೂಮಕೇತುವಿನಂತೆ ಸಾಗಿತ್ತು.. ವಿದಿಯಾಟದಲ್ಲಿ ನಡೆದ ದುರಂತ ಪ್ರೇಮ ಕಥೆಯ ವರದಿಯನ್ನು ಓದಿದರೇ, ಕಣ್ಣಂಚಲಿ ಕಂಬನಿ ಕವಿತೆಯಾಗುತ್ತವೆ.

ವರಸೆಯಲ್ಲಿ ಅಣ್ಣ-ತಂಗಿಯಾದವರು ಪ್ರೀತಿಸಿದ್ರು! ಆದರೆ ಬದುಕುಳಿಯಲಿಲ್ಲ! ಜೋಡಿ ಕೊರಳನು ಬಿಗಿದ ಹಗ್ಗದ ಹಿಂದಿದೆ ಪ್ರೀತಿ ಮಧುರ ತ್ಯಾಗ ಅಮರದ ಕಥೆ: JP FLASHBACK

ಇವತ್ತಿಗೆ ಏಳು ವರ್ಷಗಳ ಹಿಂದೆ ದಾವಣಗೆರೆ ಜಿಲ್ಲೆಯ ಗ್ರಾಮವೊಂದರ ಶಿವು (ಹೆಸರು ಬದಲಿಸಿದೆ). ಎಂಬಾತ  ಅಪ್ರಾಪ್ತೆಯನ್ನ ಪ್ರೀತಿಸಿದ್ದ. ಆದರೆ ವಿಷಯ ಗೊತ್ತಾಗಿ, ಅದು ಪೊಲೀಸ್ ಠಾಣೆ ಮೆಟ್ಟಿಲೇರಿ, ಕೊನೆಗೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿ ಶಿವು ನನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದರು.ವಿಚಾರಣೆ ನಡೆದು, ಕೋರ್ಟ್ ತೀರ್ಪು ಸಹ ಬಂತು.  ನ್ಯಾಯಾಲಯ ಶಿವುಗೆ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತು.ಇತ್ತ ಅಪ್ರಾಪ್ತಳನ್ನು ಪೊಲೀಸರು ಸ್ವೀಕಾರ ಕೇಂದ್ರದಲ್ಲಿರಿಸಿದ್ದರು. ಆದರೆ ಅತ್ತ ಯುವಕ ಜೈಲಿಗೆ ಹೋಗಿದ್ದ. ಈ ನಡುವೆ ಇನ್ನೊಂದು ಅಚ್ಚರಿ ನಡೆದಿತ್ತು. ಸ್ವೀಕಾರ ಕೆಂದ್ರದಿಂದ ಮೇಜರ್ ಆಗಿ ಹೊರಬಿದ್ದ ಯುವತಿ, ತನ್ನ ಹೆತ್ತವರ ಮನೆಗೆ ಹೋಗಲಿಲ್ಲ. ಬದಲಾಗಿ, ತನ್ನ ಪ್ರೀತಿಸಿ ಜೈಲಿಗೆ ಹೋದವನ ಮನೆಗೆ ಹೋಗಿ ನೆಲೆಸಿದಳು. 

ಕೇಳಿ ಪ್ರೇಮಿಗಳೇ, ಪ್ರೀತಿ ಪ್ರೇಮ ಪ್ರಣಯದಲ್ಲಿ ಮೈಮೆರತರೇ ದುರಂತವೇ ನಡೆಯಬಹುದು! ಮೊಬೈಲ್ ವಿಕೃತಿಗೆ ಜೀವ ಕಳೆದುಕೊಂಡ ಸಂಜು ಮತ್ತು ಗೀತಾಳ ರಿಯಲ್ ಕಥೆ JP ಬರೆಯುತ್ತಾರೆ ಓದಿ

ಪ್ರಿಯಕರನ ಪೋಷಕರ ಮನೆಯಲ್ಲಿದ್ದೇ ಪ್ರೇಮಿಯ ಬಿಡುಗಡೆಗಾಗಿ ಕಾದು ಕೂತಳು ಪ್ರೇಯಸಿ.

ತನ್ನ ತಪ್ಪಿನಿಂದಾಗಿ ಶಿವುಗೆ ಹತ್ತು ವರ್ಷ ಜೈಲು ಶಿಕ್ಷೆಯಾಯಿತಲ್ಲಾ ಎಂದು ಮನನೊಂದಿದ್ದ ಯುವತಿ ಆತನ ಬಿಡುಗಡೆಗಾಗಿ ಜಾತಕ ಪಕ್ಷಿಯಂತೆ ಕಾದಿದ್ದಳು. ಇತ್ತ ಶಿವು ಐದು ವರ್ಷ ಸೆರೆವಾಸ ಪೂರೈಸಿದ್ದ.ಜೈಲಿನಲ್ಲಿರುವಾಗಲೇ..ತನ್ನ ಸನ್ನಡತೆಯಿಂದ ಎಲ್ಲರ ಮನಗೆದ್ದಿದ್ದ. ಹೀಗಾಗಿಯೇ ಆ ಜೈಲಿನ ಮುಖ್ಯ ಅಧೀಕ್ಷಕರು  ಶಿವುನನ್ನು ಕಛೇರಿಯಲ್ಲಿ ಜವಾನನ್ನಾಗಿ ಕರ್ತವ್ಯಕ್ಕೆ ನಿಯೋಜಿಸಿದ್ದರು. ಶಿವುನ ಸನ್ನಡತೆಯನ್ನು ಗಮನಿಸಿದ, ಜೈಲು ಅಧಿಕಾರಿ  ಕೋರೋನಾ ಲಾಕ್ ಡೌನ್ ಸಡಿಲಿಕೆ ನಂತರ...ಒಂದು ವಾರ ಪೆರೋಲ್ ಮೇಲೆ ಬಿಡುಗಡೆ ಗೊಳಿಸಿ ಮನೆಗೆ ಹೋಗಿ ಸಕಾಲದಲ್ಲಿ ಜೈಲಿಗೆ  ವಾಪಾಸ್ಸಾಗುವಂತೆ  ಸೂಚನೆ ನೀಡಿದ್ರು.

ಲಾಕ್ ಡೌನ್ ಸಂದರ್ಭದಲ್ಲಿ ಪೆರೋಲ್ ಮೇಲೆ ಬಿಡುಗಡೆಯಾದಾಗ ಏನಾಯ್ತು?

ಜೈಲಿನಿಂದ ಹೊರಬರುತ್ತಲೇ ಶಿವು..ತನ್ನ ಪ್ರೇಯಸಿಯನ್ನು ನೋಡಬೇಕೆಂಬ ತವಕದಲ್ಲಿದ್ದ.......,ಯಾವ ಆತುರದಲ್ಲಿ ಶಿವು ತನ್ನೂರಿಗೆ ಹೋದನೋ..ಅಷ್ಟೆ ವೇಗವಾಗಿ ಮತ್ತೆ ಜೈಲಿಗೆ ವಾಪಸ್ಸಾಗಿ ಬಾಗಿಲು ಬಡಿದ. ಇತ್ತ ಜೈಲು ಅಧಿಕಾರಿ ಸಿಬ್ಬಂದಿಗಳು...ಯಾಕೆ ಶಿವು ಏನಾಯ್ತು..ಎಂದು ವಿಚಾರಿಸಿದಾಗ...ಶಿವು ತನ್ನೂರಿಗೆ ಹೋದಾಗ ನಡೆದ ಘಟನೆಯನ್ನು ವಿವರಿಸಿದ್ದ. ಹೌದು ಶಿವು ಯಾವ ತವಕದಲ್ಲಿ ಪೋಷಕರ ಮನೆ ಸೇರಿದನೋ.. ಅಷ್ಟೆ ವೇಗದಲ್ಲಿ ಆತನಿಗಲ್ಲಿ ಆಘಾತ ಕಾದಿತ್ತು..ತನ್ನನ್ನು ಬರಮಾಡಿಕೊಳ್ಳಬೇಕಿದ್ದ ಪ್ರೇಯಸಿ ಬಗ್ಗೆ .ಪೋಷಕರನ್ನು ಕೇಳಿದಾಗ...ಆಕೆ ಬಾರದ ಲೋಕಕ್ಕೆ ತೆರಳಿದ್ದಾಳಪ್ಪಾ ಅಂದಾಗ ಶಿವುಗೆ ಗರಬಡಿದಂಗಾಯಿತು. ಪ್ರೇಯಸಿ  ಕೆಲ ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿ ಪೋಷಕರ ಮನೆಗೆ ಹೋಗಿದ್ದಳು...ಪೋಷಕರ ಮನೆಯಲ್ಲೇ ಆಕೆ ಸಾವನ್ನಪ್ಪಿದಳು..ನಾವೆಲ್ಲಾ ಅಂತ್ಯಸಂಸ್ಕಾರಕ್ಕೆ ಹೋಗಿದ್ದೆವು ಎಂದು ಶಿವು ಪೋಷಕರು ಹೇಳಿದರು.ಮತ್ತೆ ನನಿಗ್ಯಾಕೆ ವಿಷಯ ತಿಳಿಸಲಿಲ್ಲ ಎಂದಾಗ ಪೋಷಕರು....ನಿರುತ್ತರರಾದರು.

ಮೀನು ಹಿಡಿಯಲು ಬಂದವರ ಮೇಲೆ ಜೇನುನೊಣಗಳ ದಾಳಿ! 6 ಜನರಿಗೆ ಗಂಭೀರ ಪೆಟ್ಟು!

ಶಿವು ಜೈಲಿನಿಂದ ಪೆರೋಲ್ ನ ಮೇಲೆ ಬಿಡುಗಡೆಯಾಗುವ ಎರಡು ತಿಂಗಳ ಮೊದಲೇ ಆತನ ಪ್ರೇಯಸಿ  ಸಾವನ್ನಪ್ಪಿದ್ದಳು. ಆದರೆ ಎರಡು ಕುಟುಂಬಸ್ಥರು ಜೈಲಿನ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿರಲಿಲ್ಲ.ಪ್ರೇಯಸಿಗಾಗಿ ಹತ್ತು ವರ್ಷ ಜೈಲುವಾಸ ಅನುಭವಿಸಿದ ಶಿವು, ಜೀವನ ಹೊರಗಿರುವುದಕ್ಕಿಂತ ಒಳಗಿರುವುದೇ ಉತ್ತಮ ಎಂದು ಅಳುತ್ತಲೇ ಮತ್ತೆ ಜೈಲಿಗೆ ವಾಪಸ್ಸಾಗಿದ್ದ...ಆತನ ನೋವಿನ ಪ್ರೇಮಕಥೆ ಕೇಳಿದ ಅಧಿಕಾರಿ ಸಿಬ್ಬಂದಿಗಳ ಕಣ್ಣಾಲೆಗಳು ಒದ್ದೆಯಾಗಿದ್ದವು . ಮತ್ತೆ ಜೈಲಿನಲ್ಲಿ ಶಿವು ಎಂದಿನಂತೆ..ಜವಾನನ ಕಾಯಕ ಮುಂದುವರೆಸಿದ್ದಾನೆ..ಅತ್ತ ಪ್ರೇಯಸಿಯೂ ಸಿಗದೆ..ಇತ್ತ ಶಿಕ್ಷೆಯಿಂದಲೂ ಮುಕ್ತನಾಗದೆ...ಅತಂತ್ರವಾಗಿರುವ ಶಿವು ಜೈಲುಹಕ್ಕಿಯಾಗಿ ಉಳಿದಿದ್ದು..ದುರಂತವೇ ಸರಿ,

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com