KARNATAKA NEWS/ ONLINE / Malenadu today/ Nov 1, 2023 SHIVAMOGGA NEWS
SHIVAMOGGA | ಶಿವಮೊಗ್ಗದಲ್ಲಿ ಕಳ್ಳರ ಕೈಚಳಕ ಜೋರಾಗಿ ನಡೆಯುತ್ತಿದೆ. ತಡೆಯಬೇಕಾದ ಪೊಲೀಸ್ ವ್ಯವಸ್ಥೆಯಲ್ಲಿ ಸ್ವಲ್ಪ ಲೋಪದೋಷಗಳು ಕಂಡು ಬರುತ್ತಿದೆ. ಇದಕ್ಕೆ ಪೂರಕವಾಗಿ ಶಿವಮೊಗ್ಗದ ಜೈಲ್ ರೆಸ್ತೆಯಲ್ಲಿಯೇ ರಾಬರಿ ಪ್ರಕರಣವೊಂದು ನಡೆದಿರುವ ಬಗ್ಗೆ ವರದಿಯಾಗಿದೆ. ಈ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ನಲ್ಲಿ IPC 1860 (U/s-392) ರಾಬರಿ ಪ್ರಕರಣ ದಾಖಲಾಗಿದೆ.
ಏನಿದು ಕೇಸ್!
ಕಳೆದ 13 ನೇ ತಾರೀಖು ನಡೆದ ಕೃತ್ಯದ ಸಂಬಂಧ 30 ರಂದು ದೂರು ದಾಖಲಾಗಿದೆ. ಸೂಳಬೈಲ್ ನಿವಾಸಿಯೊಬ್ಬರು ಬೊಮ್ಮನಕಟ್ಟೆಯಲ್ಲಿ ಮದುವೆ ಮನೆ ಆರ್ಡರ್ ರೆಡಿಮಾಡಿಕೊಡಲು ತೆರಳುತ್ತಿದ್ದರು. ಆಗ ಸಮಯ ಬೆಳಗಿನ ಜಾವ ಮೂರು ಮುಕ್ಕಾಲಾಗಿತ್ತು, ಪಲ್ಸರ್ನಲ್ಲಿ ಹೋಗುತ್ತಿದ್ದ ಅವರನ್ನ ಸುಬ್ಬಯ್ಯ ಆಸ್ಪತ್ರೆಯ ಆಟೋ ಸ್ಟ್ಯಾಂಡ್ ಬಳಿಯಲ್ಲಿ ಆರ್ಎಕ್ಸ್ ನಲ್ಲಿ ಬಂದ ಇಬ್ಬರು ಹುಡುಗರು ಅಡ್ಡಗಟ್ಟಿದ್ದಾರೆ. ಅಲ್ಲದೆ ಸಂತ್ರಸ್ತರ ಜೇಬಿನಲ್ಲಿದ್ದ 54 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಹಾಗೂ ಮೂರು ಸಾವಿರ ರೂಪಾಯಿ ಕ್ಯಾಶ್ ಕಿತ್ತುಕೊಂಡು ಹೋಗಿದ್ದಾರೆ. ಸದ್ಯ ಈ ಬಗ್ಗೆ ಸಂತ್ರಸ್ತರು ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸ್ತಿದ್ದಾರೆ.
