SHIVAMOGGA Feb 29, 2024 Sirigere Kalinga ಶಿವಮೊಗ್ಗ ಜಿಲ್ಲೆ ಸಿರಿಗೆರೆಯಲ್ಲಿ 12 ಅಡಿ ಉದ್ದದ ಕಾಳಿಂಗವೊಂದು ಕಾಣ ಸಿಕ್ಕಿದೆ. ಮನೆ ಕೊಟ್ಟಿಗೆ ಸಮೀಪ ಬಿಡಾರ ಹೂಡಿದ್ದ ಕಾಳಿಂಗದಿಂದಾಗ ಕೆಲಸಗಾರರು ಕೆಲಸ ಮಾಡಲು ಅಂಜುತ್ತಿದ್ದರು. ಹೀಗಾಗಿ ಮನೆಯವರು ಕಾಳಿಂಗ ದ ಇರುವಿಕೆ ಬಗ್ಗೆ ಹಾವುಗಳನ್ನ ಸಂರಕ್ಷಿಸುವ ಬೆಳ್ಳೂರು ನಾಗರಾಜ್ರಿಗೆ ವಿಷಯ ಮುಟ್ಟಿಸಿದ್ದಾರೆ.
ವಿಷಯ ತಿಳಿದು ಸಿರಿಗೆರೆ ಗ್ರಾಮಕ್ಕೆ ಬಂದ ಬೆಳ್ಳೂರು ನಾಗರಾಜ್ ಹಾವನ್ನ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಹಿಡಿದಿದ್ದಾರೆ. ಹಾವಿನ ಬಗ್ಗೆ ಮಾಹಿತಿಯನ್ನ ನೀಡಿ, ಹಾವಿಗೆ ಯಾವುದೇ ತೊಂದರೆಯಾಗದಂತೆ ಹಿಡಿದ ಅವರು, ಅಲ್ಲಿದ್ದವರಿಗೆ ಕಾಳಿಂಗ ಸರ್ಪ ಕಾಣಿಸಿಕೊಂಡಾಗ ಎಚ್ಚರಿಕೆ ವಹಿಸಬೇಕಾದ ವಿಧಾನಗಳನ್ನ ಸಹ ತಿಳಿಸಿ ಹೇಳಿದರು.
ಕಾಳಿಂಗ ಏಳುವರೆ ಕೆಜಿ ತೂಕವಿದ್ದು, ಇತ್ತೀಚಿಗೆ ಇಷ್ಟು ಉದ್ದ ಹಾವು ಕಾಣಿಸಿದ್ದು ಇದೆ ಮೊದಲಾಗಿದೆ. ಸುಮಾರು 15 -16 ಅಡಿ ಉದ್ದದ ಕಾಳಿಂಗ ಕಾಣಿಸಿಕೊಂಡ ಉದಾಹರಣೆ ಇದೆ.