KING COBRA KARNATAKA AWARENESS

ಸಿಂಪಲ್ ಆಗಿ ಸಿಕ್ಕಿಬಿದ್ದ ಕಾಳಿಂಗ ! 12 ಅಡಿ ಉದ್ದದ ಸರ್ಪ ಹೇಗಿತ್ತು ನೋಡಿ!

Malenadu Today ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

SHIVAMOGGA  Feb 29, 2024 Sirigere Kalinga  ಶಿವಮೊಗ್ಗ ಜಿಲ್ಲೆ  ಸಿರಿಗೆರೆಯಲ್ಲಿ 12 ಅಡಿ ಉದ್ದದ ಕಾಳಿಂಗವೊಂದು ಕಾಣ ಸಿಕ್ಕಿದೆ. ಮನೆ ಕೊಟ್ಟಿಗೆ ಸಮೀಪ ಬಿಡಾರ ಹೂಡಿದ್ದ ಕಾಳಿಂಗದಿಂದಾಗ ಕೆಲಸಗಾರರು ಕೆಲಸ ಮಾಡಲು ಅಂಜುತ್ತಿದ್ದರು. ಹೀಗಾಗಿ ಮನೆಯವರು ಕಾಳಿಂಗ ದ ಇರುವಿಕೆ ಬಗ್ಗೆ ಹಾವುಗಳನ್ನ ಸಂರಕ್ಷಿಸುವ ಬೆಳ್ಳೂರು ನಾಗರಾಜ್​ರಿಗೆ ವಿಷಯ ಮುಟ್ಟಿಸಿದ್ದಾರೆ. 

ವಿಷಯ ತಿಳಿದು ಸಿರಿಗೆರೆ ಗ್ರಾಮಕ್ಕೆ ಬಂದ ಬೆಳ್ಳೂರು ನಾಗರಾಜ್​ ಹಾವನ್ನ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಹಿಡಿದಿದ್ದಾರೆ. ಹಾವಿನ ಬಗ್ಗೆ ಮಾಹಿತಿಯನ್ನ ನೀಡಿ, ಹಾವಿಗೆ ಯಾವುದೇ ತೊಂದರೆಯಾಗದಂತೆ  ಹಿಡಿದ ಅವರು, ಅಲ್ಲಿದ್ದವರಿಗೆ ಕಾಳಿಂಗ ಸರ್ಪ ಕಾಣಿಸಿಕೊಂಡಾಗ ಎಚ್ಚರಿಕೆ ವಹಿಸಬೇಕಾದ ವಿಧಾನಗಳನ್ನ ಸಹ ತಿಳಿಸಿ ಹೇಳಿದರು. 

ಕಾಳಿಂಗ ಏಳುವರೆ ಕೆಜಿ ತೂಕವಿದ್ದು, ಇತ್ತೀಚಿಗೆ ಇಷ್ಟು ಉದ್ದ ಹಾವು ಕಾಣಿಸಿದ್ದು ಇದೆ ಮೊದಲಾಗಿದೆ. ಸುಮಾರು 15 -16 ಅಡಿ ಉದ್ದದ ಕಾಳಿಂಗ ಕಾಣಿಸಿಕೊಂಡ ಉದಾಹರಣೆ ಇದೆ. 

ಕಾಳಿಂಗದ ಮರಿಗಳು ಹೇಗಿರುತ್ತವೆ ಎನ್ನುವುದಕ್ಕೆ ವಿಡಿಯೋ ಇಲ್ಲಿದೆ ನೋಡಿ :

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Malenadu Today