ಶಿವಮೊಗ್ಗ : ಕಾಪು ಬೀಚ್‌ನಲ್ಲಿ ಭೀಕರ ದುರಂತ: ಅಲೆಗಳ ಅಬ್ಬರಕ್ಕೆ ಸಿಲುಕಿ ಹೊಸನಗರದ ಯುವಕ ಸೇರಿ ಇಬ್ಬರು ಸಮುದ್ರಪಾಲು

ಹಂಚಿಕೊಳ್ಳಿ
WhatsApp Facebook X Telegram
Udupi Kaup Beach Tragedy
Udupi Kaup Beach Tragedy

ಸುದ್ದಿಯ ಸ್ಥಳ: Hosanagara, Shivamogga, Karnataka · Davanagere, Karnataka

ಮಲೆನಾಡುಟುಡೆ ಸುದ್ದಿ / ಶಿವಮೊಗ್ಗ: ಪ್ರವಾಸಕ್ಕೆಂದು ತೆರಳಿದ್ದ ಯುವಕರ ತಂಡವೊಂದು ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿದ ಪರಿಣಾಮ, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಯುವಕ ಸೇರಿದಂತೆ ಇಬ್ಬರು ಮೃತಪಟ್ಟಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ಲೈಟ್‌ಹೌಸ್ ಬೀಚ್‌ನಲ್ಲಿ ಭಾನುವಾರ ಸಂಜೆ ಸಂಭವಿಸಿದೆ. 

ದುರಂತದಲ್ಲಿ ಮೃತಪಟ್ಟವರನ್ನು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮಾವಿನಕೊಪ್ಪ ಗ್ರಾಮದ ನಿವಾಸಿ ಸಮೀರ್ (20) ಹಾಗೂ ದಾವಣಗೆರೆ ಜಿಲ್ಲೆಯ ಅಹಮ್ಮದಿ ನಗರದ ನಿವಾಸಿ ಮಲ್ಲಿಕ್ ರಿಹಾನ್ (15) ಎಂದು ಗುರುತಿಸಲಾಗಿದೆ.

ಐವರು ಯುವಕರ ತಂಡ ಪ್ರವಾಸದ ನಿಮಿತ್ತ ಉಡುಪಿಯ ಪ್ರಸಿದ್ಧ ಕಾಪು ಲೈಟ್‌ಹೌಸ್ ಕಡಲತೀರಕ್ಕೆ ಆಗಮಿಸಿತ್ತು. ಸಂಜೆ ವೇಳೆ ಐವರೂ ಸಮುದ್ರದ ನೀರಿನಲ್ಲಿ ಆಟವಾಡುತ್ತಾ ಈಜಲು ಇಳಿದಿದ್ದಾರೆ. ಈ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಅಪ್ಪಳಿಸಿದ ಬೃಹತ್ ಅಲೆಗಳು ಐವರನ್ನೂ ಆಳ ಸಮುದ್ರದ ಸೆಳೆತಕ್ಕೆ ಎಳೆದೊಯ್ದಿವೆ.

ಯುವಕರು ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ಹಾಗೂ ಕಡಲತೀರದ ರಕ್ಷಣಾ ತಂಡದ ಸಿಬ್ಬಂದಿ ತಕ್ಷಣವೇ ಕಾರ್ಯಾಚರಣೆ ನಡೆಸಿ, ಮೂವರು ಯುವಕರನ್ನು ಪ್ರಾಣಾಪಾಯದಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಅಲೆಗಳ ರಭಸಕ್ಕೆ ಕೊಚ್ಚಿಹೋಗಿದ್ದ ಸಮೀರ್ ಮತ್ತು ಮಲ್ಲಿಕ್ ರಿಹಾನ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ಇಬ್ಬರೂ ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ. 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor