Shivamogga | Feb 5, 2024 | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಆಡಿನಕೊಟ್ಟಿಗೆಯಲ್ಲಿ 13 ಅಡಿ ಉದ್ದದ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡಿದ್ದರ ಬಗ್ಗೆ ವರದಿಯಾಗಿದೆ.
ಗ್ರಾಮದ ನಿವಾಸಿಯೊಬ್ಬರ ಮನೆಯ ಹಿಂಬಾಗ ಸೇರಿಕೊಂಡಿದ್ದ ಕಾಳಿಂಗ ಸರ್ಪ ಸ್ಥಳೀಯವಾಗಿ ಆತಂಕ ಮೂಡಿಸಿತ್ತು. ಇದನ್ನ ಗಮನಿಸಿದ ಗ್ರಾಮಸ್ಥರು ಬೆಳ್ಳೂರು ನಾಗರಾಜ್ರವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಹಾವನ್ನ ಹಿಡಿಯುವ ಸಲಕರಣೆಯೊಂದಿಗೆ ಸ್ಥಳಕ್ಕೆ ಬಂದ ನಾಗರಾಜ್ ಕೆಲವು ಹೊತ್ತು ಕಾಳಿಂಗ ಸರ್ಪದ ಚಲನವಲವನ್ನ ಪರಿಶೀಲಿಸಿದ್ದಾರೆ. ಆ ಬಳಿಕ ಅರಣ್ಯ ಇಲಾಖೆಯ ಸಮ್ಮುಖದಲ್ಲಿ ಹಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ. ಬಳಿಕ ಅದನ್ನು ದಟ್ಟ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
