ಹುಂಚದ ಕೆರೆಯಲ್ಲಿ ಪ್ರತ್ಯಕ್ಷವಾದ ನೀರುನಾಯಿಗಳ ಹಿಂಡು

A herd of otters spotted in the lake, ನೀರು ನಾಯಿ

ಹುಂಚದ ಕೆರೆಯಲ್ಲಿ ಪ್ರತ್ಯಕ್ಷವಾದ ನೀರುನಾಯಿಗಳ ಹಿಂಡು
A herd of otters spotted in the lake

Shivamogga | Feb 1, 2024 |   ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಹುಂಚದ ಕೆರೆಯೊಂದರಲ್ಲಿ  ನೀರುನಾಯಿಗಳು ಕಾಣಿಸಿವೆ. ಇದೇ ಮೊದಲ ಸಲ ಇಲ್ಲಿ ನೀರುನಾಯಿಗಳು ಕಾಣಿಸಿರುವುದು ವಿಶೇಷವಾಗಿದೆ.  



ಇತಿಹಾಸ ಪ್ರಸಿದ್ದ ಹುಂಚ ಮುತ್ತಿನಕೆರೆಯಲ್ಲಿ ನೀರುನಾಯಿಗಳ ಹಿಂಡು ಪ್ರತ್ಯಕ್ಷವಾಗಿವೆ. ಕೋಡೂರು ನಾಗರಹಳ್ಳಿ ಮಾರ್ಗದಲ್ಲಿ ಬರುವ ಈ ಕೆರೆಯಲ್ಲಿ ನೀರು ನಾಯಿಗಳು  ಗುಂಪು ಗುಂಪಾಗಿ ಕಾಣಿಸಿಕೊಂಡಿದೆ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್ ಕ್ಯಾಮರಾಗಳಲ್ಲಿ ಸೆರೆ ಹಿಡಿದಿದ್ದಾರೆ. 

 

ಕಾಡಿನ ಕೆರೆಯಲ್ಲಿ ಕಾಣಸಿಗುವ ನೀರು ನಾಯಿಗಳು ನಾಡಿನಲ್ಲಿ ಪ್ರತ್ಯಕ್ಷವಾಗಿರುವುದರ ಬಗ್ಗೆ ಸ್ಥಳೀಯವಾಗಿ ಚರ್ಚೆಗಳು ಸಹ ಆರಂಭವಾಗಿದೆ.  

ರಾಷ್ಟ್ರಮಟ್ಟದ ವಿಜ್ಞಾನ ಮೇಳದಲ್ಲಿ ಜ್ಞಾನದೀಪ ಶಾಲೆಗೆ ಕಂಚಿನ ಪದಕ

ರಾಜ್‍ಕೋಟ್‍ನಲ್ಲಿ ಸೈನ್ಸ್ ಸೊಸೈಟಿ ಆಫ್ ಇಂಡಿಯಾ ಆಯೋಜಿಸಿದ್ದ ಸಮ್ಮೇಳನದಲ್ಲಿ ಪರಿಸರ ಸೈದ್ಧಾಂತಿಕ ವಿಷಯ ಆಧರಿಸಿ ಭಾರತೀಯ ವಿಜ್ಞಾನ ಮತ್ತು ಇಂಜಿನಿಯರಿಂಗ್ ಮೇಳದಲ್ಲಿ ಜ್ಞಾನದೀಪ ಶಾಲೆಯ 8ನೇ ತರಗತಿಯ ಅಶ್ವಿನಿ ಎನ್ ಬಿ.  ಮತ್ತು ಪ್ರಣತಿ ಹೆಚ್.ಎಸ್. ಎಂಬ ವಿದ್ಯಾರ್ಥಿನಿಯರು ತೃತೀಯ ಸ್ಥಾನ ಪಡೆದಿದ್ದಾರೆ.

ಅಶ್ವಿನಿ ಎನ್ ಬಿ. "ಮೌಲ್ಯವರ್ಧಿತ ಮಿಶ್ರಗೊಬ್ಬರಕ್ಕಾಗಿ ಅಡಿಕೆ ಸಿಪ್ಪೆಯ ಜೈವಿಕ ಮೃದುಗೊಳಿಸುವಿಕೆ" ಎಂಬ ವಿಷಯದ ಮೇಲೆ ಸಂಶೋಧನಾ ಪ್ರಾಜೆಕ್ಟ್  ಮಂಡಿಸಿ ತೃತೀಯ ಸ್ಥಾನ ಪಡೆಯುವದರೊಂದಿಗೆ ರಾಷ್ಟ್ರಮಟ್ಟದ ಕಂಚಿನ ಪದಕ ಮತ್ತು ಪ್ರಶಸ್ತಿ ಪತ್ರ ಪಡೆದಿದ್ದಾರೆ.

ಪ್ರಣತಿ ಹೆಚ್.ಎಸ್. "ತೋಟಕ್ಕೆ ತ್ಯಾಜ್ಯ ಮಾಂತ್ರಿಕ ಕಸ" ಎಂಬ ವಿಷಯದ ಮೇಲೆ ಸಂಶೋಧನಾ ಪ್ರಾಜೆಕ್ಟ್  ಮಂಡಿಸಿ ತೃತೀಯ ಸ್ಥಾನ ಪಡೆಯುವದರೊಂದಿಗೆ ರಾಷ್ಟ್ರಮಟ್ಟದ ಕಂಚಿನ ಪದಕ ಮತ್ತು ಪ್ರಶಸ್ತಿ ಪತ್ರ ಪಡೆದಿದ್ದಾರೆ.

 ಶಾಲೆಯ ಪ್ರಾಚಾರ್ಯ ಶ್ರೀಕಾಂತ ಎಂ ಹೆಗಡೆ, ಮತ್ತು ಎಲ್ಲಾ ಶಿಕ್ಷಕರು, ಅಡಳಿತ ಮಂಡಳಿಯವರು  ಹಾಗೂ ತರಬೇತಿಗೊಳಿಸಿದ ವಿಜ್ಞಾನ ಶಿಕ್ಷಕಿ ಶ್ವೇತಾ ಎಂ ಎಸ್. ಮಕ್ಕಳನ್ನು ಅಭಿನಂದಿಸಿದ್ದಾರೆ.