ಶಿವಮೊಗ್ಗ | ಕೆ.ಆರ್.ಪುರಂ. ಭರಮಪ್ಪನಗರ, ಎಂಕೆಕೆ ರಸ್ತೆ ಸೇರಿ ಹಲವೆಡೆ ಒಂದು ದಿನ ಪವರ್‌ ಕಟ್‌

Shimoga | One day power cut in many places including KR Puram, Bharamappanagar, MKK Road

ಶಿವಮೊಗ್ಗ |  ಕೆ.ಆರ್.ಪುರಂ. ಭರಮಪ್ಪನಗರ, ಎಂಕೆಕೆ ರಸ್ತೆ ಸೇರಿ ಹಲವೆಡೆ ಒಂದು ದಿನ ಪವರ್‌ ಕಟ್‌
KR Puram, Bharamappanagar, MKK Road,power cut

SHIVAMOGGA | MALENADUTODAY NEWS | Apr 23, 2024   

ನಾಳೆ ಅಂದರೆ ಏಪ್ರಿಲ್‌ 24 ರಂದು ಶಿವಮೊಗ್ಗದ ಮೀನು ಮಾರುಕಟ್ಟೆ ಸೇರಿದಂತೆ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಶಿವಮೊಗ್ಗ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ಪ್ರಕಟಣೆಯಲ್ಲಿ ಏನಿದೆ?

ಶಿವಮೊಗ್ಗ ನಗರದ ಮೀನು ಮಾರುಕಟ್ಟೆ ಬಳಿ ಹೊಸ  ಕಂಬಗಳನ್ನು ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿದ್ದು, ಏ. 24 ರಂದು ಬೆಳಗ್ಗೆ 9.00 ರಿಂದ ಸಂಜೆ 6.00ರವರೆಗೆ ನಗರದ ಗಾಂಧಿಬಜಾರ್, ಲಷ್ಕರ್ ಮೊಹಲ್ಲಾ, ಸಾವರ್ಕರ್ ನಗರ, ಬಿ.ಹೆಚ್.ರಸ್ತೆ, ತಿರುಪಳಯ್ಯನಕೇರಿ, ಸೊಪ್ಪಿನ ಮಾರುಕಟ್ಟೆ, ಕೆ.ಆರ್.ಪುರಂ. ಭರಮಪ್ಪನಗರ, ಎಂಕೆಕೆ ರಸ್ತೆ, ನಾಗಪ್ಪಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.