ಹಳೆ ಶಿವಮೊಗ್ಗ, ಆಲ್ಕೋಳ ಸೇರಿದಂತೆ ನಾಳೆ ಬಹಳ ಕಡೆಗಳಲ್ಲಿ ಇರೋದಿಲ್ಲ ವಿದ್ಯುತ್!‌ ಕಾರಣವೇನು? ಎಲ್ಲೆಲ್ಲಿ ಪವರ್‌ ಕಟ್‌ ತಿಳಿದುಕೊಳ್ಳಿ

There will be no electricity in many places tomorrow, including Old Shivamogga and Alkola. What is the reason? Know where the power cut is

ಹಳೆ ಶಿವಮೊಗ್ಗ, ಆಲ್ಕೋಳ ಸೇರಿದಂತೆ ನಾಳೆ ಬಹಳ ಕಡೆಗಳಲ್ಲಿ ಇರೋದಿಲ್ಲ ವಿದ್ಯುತ್!‌ ಕಾರಣವೇನು? ಎಲ್ಲೆಲ್ಲಿ ಪವರ್‌ ಕಟ್‌ ತಿಳಿದುಕೊಳ್ಳಿ
power cut

Shivamogga Mar 20, 2024 power cut  ನಾಳೆ Mar 21, 2024 ತಾರೀಖು ಶಿವಮೊಗ್ಗ ನಗರವೂ ಸೇರಿದಂತೆ ಹಲವೆಡೆ ವಿದ್ಯುತ್‌ ಇರೋದಿಲ್ಲ. ಈ ಸಂಬಂಧ ಮೆಸ್ಕಾಂ ವಿವಿಧ ಪ್ರಕಟಣೆಗಳನ್ನು ನೀಡಿದೆ. ಮೆಸ್ಕಾಂ ಶಿವಮೊಗ್ಗ ನೀಡಿದ ವಿವರವನ್ನ ಗಮನಿಸುವುದಾದರೆ, ಮೊದಲನೇಯದ್ದಾಗಿ ಹಳೆ ಶಿವಮೊಗ್ಗ ಭಾಗದಲ್ಲಿ ನಾಳೆ ಪವರ್‌ ಕಟ್‌ ಇರಲಿದೆ. ಭರಮಪ್ಪನಗರ ಹಾಗೂ ಎಂಕೆಕೆ ರಸ್ತೆಯಲ್ಲಿ ಕಂಬ ಬದಲಾಯಿಸುವ ಕಾಮಗಾರಿಯನ್ನು ಹಮ್ಮಿಕೊಂಡ ಹಿನ್ನೆಲೆಯಲ್ಲಿ ಈ ಪವರ್‌ ಕಟ್‌ ಇರಲಿದೆ ಎಂದು  ಮೆಸ್ಕಾಂ ತಿಳಿಸಿದೆ. ವಿದ್ಯುತ್ ವ್ಯತ್ಯಯ

ನಗರದ ಗಾಂಧಿಬಜಾರ್, ಭರಮಪ್ಪ ನಗರ, ಎಂಕೆಕೆ ರಸ್ತೆಗಳಲ್ಲಿ ಕಂಬಗಳನ್ನು ಬದಲಿಸುವ ಕಾಮಗಾರಿಯನ್ನು ಮಾ.21 ರಂದು ಹಮ್ಮಿಕೊಂಡಿದ್ದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಗಾಂಧಿಬಜಾರ್, ಸೊಪ್ಪಿನ ಮಾರ್ಕೆಟ್, ಕೆ.ಆರ್.ಪುರಂ, ಭರಮಪ್ಪ ನಗರ, ಎಂಕೆಕೆ ರಸ್ತೆ, ಬಿ.ಹೆಚ್.ರಸ್ತೆ, ನಾಗಪ್ಪ ಕೇರಿ, ತಿರುಪಳಯ್ಯನ ಕೇರಿ, ಸಾವರ್ಕರ್ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆಮಾ.21 ರಂದು ವಿದ್ಯುತ್ ವ್ಯತ್ಯಯ

ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾ. 21 ರಂದು ಬೆಳಗ್ಗೆ 10- ರಿಂದ ಸಂಜೆ 04-00ರವರೆಗೆ  ಆಲ್ಕೊಳ ಸುತ್ತಮುತ್ತ, ಎಸ್.ಹೆಚ್.ಲೇಔಟ್, ಎಸ್.ಎಲ್.ವಿ.ಲೇಔಟ್, ಕಾಶಿಪುರ ಮುಖ್ಯರಸ್ತೆ, ಕುವೆಂಪು ಬಡಾವಣೆ, ಹೈವೆ ಹೋಟೆಲ್ ಸುತ್ತಮುತ್ತ, ಶ್ರೀನಿವಾಸ್ ವೈನ್ ಸ್ಟೋರ್ ಸುತ್ತಮುತ್ತ, ಲಕ್ಷ್ಮೀಪುರ ಬಡಾವಣೆ, ಪಶುವೈದ್ಯಕೀಯ ಕಾಲೇಜು ರಸ್ತೆ  ಹಾಗೂ   ಸುತ್ತಮುತ್ತಲಿನ  ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.ಆಯನೂರು , ಮಲೇಶಂಕರ, ತಮ್ಮಡಿಹಳ್ಳಿ

 ಆಯನೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಾಲ್ಕನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಮಾ. 21 ರಂದು ಬೆಳಗ್ಗೆ 10.00 ರಿಂದ ಸಂಜೆ 06-00ರವರೆಗೆ  ಆಯನೂರು, ಕೋಹಳ್ಳಿ, ಮಂಟಘಟ್ಟ, ಸೂಡೂರು, ಕೂಡಿ, ಮಲೆಶಂಕರ, ದೊಡ್ಡಮತ್ತಲಿ, ತಮ್ಮಡಿಹಳ್ಳಿ, ಚನ್ನಳ್ಳಿ ವೀರಣ್ಣನಬೆನವಳ್ಳಿ, ಮೈಸವಳ್ಳಿ, ಕೊನಗವಳ್ಳಿ, ಸೇವಲಾಲ್‍ನಗರ  ಹಾಗೂ   ಸುತ್ತಮುತ್ತಲಿನ  ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.ಇದನ್ನ ಸಹ ಓದಿ : ದರೋಡೆಕೋರರಿದ್ದಾರೆ ಎಚ್ಚರಿಕೆ ! ರಸ್ತೆ ಬದಿಯಲ್ಲಿದ್ದವರಿಗೆ ಚಾಕು ತೋರಿಸಿ ರಾಬರಿ! ಪಲ್ಸರ್‌ ಬೈಕ್‌ನಲ್ಲಿ ಬಂದವರಿಂದ 2 ಕಡೆ ಕೃತ್ಯ