ಶಿವಮೊಗ್ಗ ನಗರದ ಗಾಂಧಿ ಬಜಾರ್ ವಾಸಿ ಚಿನ್ನಬೆಳ್ಳಿ ವ್ಯಾಪಾರಿ ಪಾಂಡುರಂಗ ಎಂಬುವವರ ಮಗ ಭರತ್ ಎಂಬ 31 ವರ್ಷದ ವ್ಯಕ್ತಿ ನಾಪತ್ತೆಯಾಗಿದ್ದಾರೆ. ದಿನಾಂಕ 24/11/2022 ರಿಂದ ಮನೆಯಿಂದ ಹೊರಗೆ ಹೋದವರು ಕಾಣೆಯಾಗಿದ್ಧಾರೆ. ಈ ವ್ಯಕ್ತಿಯು 5.7 ಅಡಿ ಎತ್ತರ, ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಮನೆಯಿಂದ ಹೊರಗೆ ಹೋಗುವಾಗ ತಿಳಿಹಳದಿ ಬಣ್ಣದ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಈ ವ್ಯಕ್ತಿಯನ್ನು ಕಂಡಲ್ಲಿ ಕೋಟೆ ಪೊಲೀಸ್ ಠಾಣೆ, ದೂ.ಸಂ.: 08182-261415/ 261413/ 9480803331 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ
ಇದನ್ನು ನೋಡಿ : ಅಯ್ಯಪ್ಪನ ಸನ್ನಿಧಿ ಶಬರಿಮಲೆಯಲ್ಲಿ ರಶ್ ಹೇಗಿದೆ ಗೊತ್ತಾ/ ವಿಡಿಯೋ ನೋಡಿ
ಡಿ. 17ರಂದು ವಿದ್ಯುತ್ ಅದಾಲತ್
ಆಯನೂರು ಶಾಖಾ ವ್ಯಾಪ್ತಿಯ ಸಿರಿಗೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ದಿ: 17/12/2022 ರಂದು ಬೆಳಗ್ಗೆ 10.30 ರಿಂದ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಲು ವಿದ್ಯುತ್ ಅದಾಲತ್ ನಡೆಸುತ್ತಿದ್ದು, ಸಿರಿಗೆರೆ ಗ್ರಾಮದ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನು ನೋಡಿ : ಶಿವಮೊಗ್ಗದಲ್ಲಿ ಮಾಂಡೌಸ್ ಚಂಡಮಾರುತದ ಎಫೆಕ್ಟ್ ಹೇಗಿದೆ ಗೊತ್ತಾ? ವಿಡಿಯೋ ನೋಡಿ
ಎಸ್‍ಬಿಐ ನಿಂದ ಟ್ರೂನ್ಯಾಟ್ ಯಂತ್ರ ಕೊಡುಗೆ
ಡಿ.14 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇವರು ಸಿಎಸ್‍ಆರ್ ಚಟುವಟಿಕೆ ಅಡಿಯಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮಕ್ಕೆ ಕ್ಷಯ ರೋಗಿಗಳ ಶೀಘ್ರ ಪತ್ತೆ ಮತ್ತು ಚಿಕಿತ್ಸೆಗಾಗಿ ಆಧುನಿಕ ಯಂತ್ರವಾದ ಟ್ರೂನ್ಯಾಟ್ ಯಂತ್ರವನ್ನು ಕೊಡುಗೆಯಾಗಿ ನೀಡಿದರು.ಎಸ್‍ಬಿಐ ಡೆಪ್ಯೂಟಿ ಜನರಲ್ ಮ್ಯಾನೇಜರ್ ಜೋಬಿ ಜೋಶ್ ಹಾಗೂ ಶಿವಮೊಗ್ಗ ವಿಭಾಗದ ರೀಜನಲ್ ಮ್ಯಾನೇಜರ್ ಶ್ರೀಜಿತ್ ಇವರು ಟಿಬಿ ಮುಕ್ತ ಭಾರತ ಮಾಡುವ ಉದ್ದೇಶದಿಂದ ಟಿಬಿ ರೋಗಿಗಳ ಶೀಘ್ರ ಪತ್ತೆ ಮತ್ತು ಚಿಕಿತ್ಸೆಗಾಗಿ ಈ ಆಧುನಿಕ ಯಂತ್ರವನ್ನು ನೀಡಿದರು.ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಮಾತನಾಡಿ, ಇಂತಹ ಕಾರ್ಯಕ್ರಮವನ್ನು ಅಧಿಕಾರಿಗಳು ಮಾಡುತ್ತಿರುವುದು ಪವಿತ್ರವಾದ ಕರ್ತವ್ಯವೆಂದು ಹೇಳಿದರು. ಆರ್‍ಸಿಹೆಚ್‍ಓ ಡಾ. ನಾಗರಾಜ್ ನಾಯಕ್, ಡಿ ಟಿ ಓ ಡಾ. ದಿನೇಶ್ ಜಿ ಸಿ, ಡಾ. ಗುಡದಪ್ಪ ಕಸಬಿ, ಸಿಡಿಪಿಓ ಚಂದ್ರಪ್ಪ ಹಾಗೂ ಎಸ್ ಬಿ ಐ ನ ವ್ಯವಸ್ಥಾಪಕರಾದ ನಿಶಾಂತ್ ಗೌರವ್ ಉಪಸ್ಥಿತರಿದ್ದರು.
ಇದನ್ನು ಪೂರ್ತಿ ಓದಿ : ಸಾರ್ವಜನಿಕರಿಗೆ ಸೂಚನೆ | ಡಿ.13 ರವರೆಗೆ 6 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್| ಯಾವ್ಯಾವ ಜಿಲ್ಲೆಗಳಲ್ಲಿ ಯಾವಾಗ ಮಳೆಯಾಗಲಿದೆ ಎಂಬ ವಿವರ ಇಲ್ಲಿದೆ
ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
2022-23 ನೇ ಸಾಲಿನಲ್ಲಿ ಭದ್ರಾವತಿ ತಾಲ್ಲೂಕಿನ ಶಂಕರಘಟ್ಟದ ಅಲ್ಪಸಂಖ್ಯಾತರ ಸ್ನಾತಕೋತ್ತರ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಖಾಲಿ ಇರುವ ಸ್ಥಾನಗಳಿಗೆ ಪ್ರವೇಶಾತಿ ನೀಡಲು ಸೇವಾಸಿಂಧು ತಂತ್ರಾಂಶ https://sevasindhu.karnataka.gov.in ದ ಮೂಲಕ ಆನ್‍ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಖಾಲಿ ಇರುವ ಸೀಟುಗಳ ವಿವರವನ್ನು ವಿದ್ಯಾರ್ಥಿನಿಲಯವಾರು ವಿದ್ಯಾರ್ಥಿನಿಲಯ ಹಾಗೂ ತಾಲ್ಲೂಕು ವಿಸ್ತರಣಾಧಿಕಾರಿಗಳ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಮುಸ್ಲಿಂ-36, 2ಎ-03, ಎಸ್‍ಸಿ-07, ಎಸ್‍ಟಿ-02 ಸೀಟುಗಳು ಲಭ್ಯವಿದ್ದು ಡಿಸೆಂಬರ್ 27 ಅರ್ಜಿ ಸಲ್ಲಿಸಲು ಕಡೆಯ ದಿನಾಂಕ. ಹೆಚ್ಚಿನ ಮಾಹಿತಿಗೆ ತಾಲ್ಲೂಕು ವಿಸ್ತರಣಾಧಿಕಾರಿಗಳ ಕಾರ್ಯಾಲಯ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಉಪವಿಭಾಗ, ಶಿವಮೊಗ್ಗ, 2ನೇ ಮಹಡಿ, ಹಳೇ ಡಿಸಿ ಕಚೇರಿ, ಶಿವಮೊಗ್ಗ ದೂ.ಸಂ: 08182-276258 ನ್ನು ಸಂಪರ್ಕಿಸಬಹುದೆಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ : ಶಿವಮೊಗ್ಗದಲ್ಲಿ ದಾವಣಗೆರೆಯ ಮೂಲದ ಮೂವರು ವಿದ್ಯಾರ್ಥಿಗಳ ದುರ್ಮರಣ | ಘಟನೆಗೆ ಕಾರಣವೇನು?
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link
