ಸಾರ್ವಜನಿಕರಿಗೆ ಸೂಚನೆ | ಡಿ.13 ರವರೆಗೆ 6 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್​| ಯಾವ್ಯಾವ ಜಿಲ್ಲೆಗಳಲ್ಲಿ ಯಾವಾಗ ಮಳೆಯಾಗಲಿದೆ ಎಂಬ ವಿವರ ಇಲ್ಲಿದೆ

Malenadu Today

ಬೆಂಗಳೂರು: ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಮಾಂಡೌಸ್​  ಚಂಡ  ಮಾರುತದಿಂದ (mandous cyclone karnataka) ಉತ್ತರ ಕರಾವಳಿ ತಮಿಳುನಾಡು, ಪುದುಚೇರಿಯಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯು. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಕೊಡಗು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಹಳದಿ ಅಲರ್ಟ್‌ ಘೋಷಿಸಿದೆ.

ಇದನ್ನು ಸಹ ಓದಿ : ಪತಿ ಎದುರೇ ನಡೀತು ಪತ್ನಿಯ ಕಿಡ್ನ್ಯಾಪ್​/ ಇಟ್ಟುಕೊಂಡವನೇ ಮಾಡಿದ್ದ ಅಪಹರಣ/ ಸ್ಟೇಷನ್ ಮಟ್ಟಿಲೇರಿತು ಇಬ್ಬರು ಪುರುಷರ ಜೊತೆಗಿನ ಸಂಸಾರ ಕದನ

ಮಾಂಡೌಸ್​ ಚಂಡಮಾರುತ ಬಂಗಾಳಕೊಲ್ಲಿಗೆ ಅಪ್ಪಳಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಕೆಲವು ದಿನಗ ರಾಜ್ಯದ ಹಲವೆಡೆ ಮಳೆಯಾಗಲಿದೆ. ಭಾರತೀಯ ಹವಾಮಾನ ಇಲಾಖೆಯ (india meteorological department)  ಪ್ರಕಾರ, ಕರ್ನಾಟಕದಲ್ಲಿ ಚಂಡಮಾರುತದ ದೆಸೆಯಿಂದ (64.5 ಮಿ.ಮೀ-115.5 ಮಿ.ಮ) ನಷ್ಟು ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲಿ ಇವತ್ತಿನಿಂದಲೇ ಬರುವ ಭಾನುವಾರದ ವರೆಗು ಭಾರೀ ಮಳೆಯಾಗುವ ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ. ಈ ಕಾರಣಕ್ಕೇನೆ, ಹವಾಮಾನ ಇಲಾಖೆಯು ಹಲವು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್​ ಘೋಷಿಸಿದೆ. 

ಇದನ್ನುಸಹ ಓದಿ : ರಾಜ್ಯ ಸಚಿವ ಸಂಪುಟದಲ್ಲಿ ತೀರ್ಥಹಳ್ಳಿಗೆ 75 ಕೋಟಿಯ ಕಾಮಗಾರಿ ಸ್ಯಾಂಕ್ಷನ್​/ ಎರಡು ಸೇತುವೆ ನಿರ್ಮಾಣಕ್ಕೆ ಅಸ್ತು

ದಕ್ಷಿಣ ಒಳನಾಡಿನಲ್ಲಿ ಇದೇ ಒಂಬತ್ತರಿಂದ 13 ನೇ ತಾರೀಖಿನವರೆಗು ಮಳೆಯಾಗುವ ಸೂಚನೆ ನೀಡಿದ್ದು, ಅದೇ ರೀತಿಯಲ್ಲಿ ಉತ್ತರ ಒಳನಾಡಿನಲ್ಲಿಯು ಇದೇ 11 ರಿಂದ 13 ನೇ ತಾರೀಖಿನವರೆಗು ಮಳೆಯಾಗುವ ಸೂಚನೆ ನೀಡಿದೆ. 

ಇದನ್ನು ಸಹ ಓದಿ : ದೇಶದ ಅತಿದೊಡ್ಡ ಸೆಕ್ಸ್ ರಾಕೆಟ್ ಬಯಲು/ 14 ಸಾವಿರಕ್ಕೂ ಹೆಚ್ಚು ಮಹಿಳೆಯರ ರಕ್ಷಣೆ/

ಎಲ್ಲೆಲ್ಲಿ ಮಳೆಯ ಸೂಚನೆ

ಡಿಸೆಂಬರ್ 10, ಶನಿವಾರ, : ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ

ಡಿಸೆಂಬರ್ 11, ಭಾನುವಾರ: ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು

ಡಿಸೆಂಬರ್ 12, ಸೋಮವಾರ, : ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

Share This Article