ಇದು ಮೆಸ್ಕಾಂ ಶಿವಮೊಗ್ಗ ಪ್ರಕಟಣೆ ! ಇವತ್ತು ಈ ಏರಿಯಾಗಳಲ್ಲಿ ಇರೋದಿಲ್ಲ ಕರೆಂಟ್‌

This is mescom shivamogga announcement! There is no electricity in these areas today

ಇದು ಮೆಸ್ಕಾಂ ಶಿವಮೊಗ್ಗ ಪ್ರಕಟಣೆ ! ಇವತ್ತು ಈ ಏರಿಯಾಗಳಲ್ಲಿ ಇರೋದಿಲ್ಲ ಕರೆಂಟ್‌
mescom shivamogga announcement

Shivamogga Mar 19, 2024  mescom shivamogga announcement  ಶಿವಮೊಗ್ಗ ನಗರದ ವಿವಿಧ ಭಾಗಗಳಲ್ಲಿ ಇವತ್ತು ಪವರ್‌ ಕಟ್‌ ಇರಲಿದೆ ಎಂದು ಮೆಸ್ಕಾಂ ಶಿವಮೊಗ್ಗ ವಿಭಾಗ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಕಟಣೆಯಲ್ಲಿ ಏನಿದೆ, ಯಾವೆಲ್ಲಾ ಸ್ಥಳಗಳಲ್ಲಿ ಕರೆಂಟ್‌ ಇರೋದಿಲ್ಲ ಎನ್ನುವುದನ್ನ ನೋಡುವುದಾದರೆ, 

ಮಾ.19 ರಂದು ವಿದ್ಯುತ್ ವ್ಯತ್ಯಯ

ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾ. 19 ರಂದು ಬೆಳಗ್ಗೆ 10- ರಿಂದ ಸಂಜೆ 06-00ರವರೆಗೆ  ಆಲ್ಕೊಳ ವೃತ್ತ, ಆಲ್ಕೋಳ ಅರಣ್ಯ ಕಚೇರಿ, ಆಹಾರ ನಿಗಮ ಇಲಾಖೆ, ಇಂದಿರಾಗಾಂಧಿ ಬಡಾವಣೆ, ಜಯದೇವ ಬಡಾವಣೆ, ಶಿವಪ್ಪನಾಯಕ ಬಡಾವಣೆ, ಪ್ರಿಯದರ್ಶಿನಿ ಲೇಔಟ್, ಕೆ.ಎಸ್.ಆರ್.ಟಿ.ಸಿ. ಲೇಔಟ್, ಸೂಡಾ ಕಚೇರಿ, ಕಾಶೀಪುರ, ದಾಮೋದರ ಕಾಲೋನಿ, ಕೆ.ಹೆಚ್.ಬಿ. ಎ ಯಿಂದ ಜಿ ಬ್ಲಾಕ್, ಕರಿಯಣ್ಣ ಬಲ್ಡಿಂಗ್, ರೇಣುಕಾಂಬ ಬಡಾವಣೆ, ತಿಮ್ಮಕ್ಕ ಲೇಔಟ್, ಲಕ್ಷ್ಮೀಪುರ ಬಡಾವಣೆ, ಕೆಂಚಪ್ಪ ಬಡಾವಣೆ, ಕುವೆಂಪು ಬಡಾವಣೆ, ಸಿದ್ಧರಾಮ ಬಡಾವಣೆ, ತಮಿಳ್ ಕ್ಯಾಂಪ್, ಪೊಲೀಸ್ ಚೌಕಿ, ವಿನೋಬನಗರ ಹಾಗೂ   ಸುತ್ತಮುತ್ತಲಿನ  ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ