ಸಾರ್ವಜನಿಕರ ಗಮನಕ್ಕೆ ನಾಳೆ ನಾಡಿದ್ದು ಶಿವಮೊಗ್ಗದ ಈ ಪ್ರದೇಶಗಳಲ್ಲಿ ಪವರ್‌ ಕಟ್!‌

Power cuts in these areas of Shivamogga tomorrow will come to the notice of the public!

ಸಾರ್ವಜನಿಕರ ಗಮನಕ್ಕೆ ನಾಳೆ ನಾಡಿದ್ದು ಶಿವಮೊಗ್ಗದ ಈ ಪ್ರದೇಶಗಳಲ್ಲಿ ಪವರ್‌ ಕಟ್!‌
Power cuts in Shivamogga

shivamogga Mar 22, 2024  ಶಿವಮೊಗ್ಗ ನಗರದವೂ ಸೇರಿದಂತೆ ಶಿವಮೊಗ್ಗ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಾಳೆ ಅಂದರೆ ಮಾರ್ಚ್‌ 23 ಮತ್ತು ನಾಡಿದ್ದು ಮಾರ್ಚ್‌ 24 ರಂದು ಪವರ್‌ ಕಟ್‌ ಇರಲಿದೆ ಅಂತಾ ಮೆಸ್ಕಾಂ ಶಿವಮೊಗ್ಗ ತಿಳಿಸಿದೆ. ಈ ಸಂಬಂಧ ಎರಡು ಪ್ರಕಟಣೆಯನ್ನು ನೀಡಲಾಗಿದ್ದು ಅದರ ವಿವರ ಇಲ್ಲಿದೆ

ಮಾ.24 ರಂದು ವಿದ್ಯುತ್ ವ್ಯತ್ಯಯ

ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾ. 24 ರಂದು ಬೆಳಗ್ಗೆ 10- ರಿಂದ ಸಂಜೆ 04-00ರವರೆಗೆ  ಶ್ರೀನಿವಾಸ ವೈನ್ ಸ್ಟೋರ್, ಲಕ್ಷ್ಮೀಪುರ, ಕುವೆಂಪು ಬಡಾವಣೆ, ಕಾಶಿಪುರ ಮುಖ್ಯರಸ್ತೆ ಹಾಗೂ   ಸುತ್ತಮುತ್ತಲಿನ  ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಮಾ.23 ರಂದು ವಿದ್ಯುತ್ ವ್ಯತ್ಯಯ

ಗಾಜನೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಮಾ. 23 ರಂದು ಬೆಳಗ್ಗೆ 09.00 ರಿಂದ ಸಂಜೆ 06-00ರವರೆಗೆ  ಗಾಜನೂರು, ಕ್ಯಾಂಪ್ ಮತ್ತು ಡ್ಯಾಮ್, ಸಕ್ಕರೆಬೈಲು, ನವೋದಯ ಶಾಲೆ, ಶಿವಮೊಗ್ಗ ಕುಡಿಯುವ ನೀರಿನ ಸ್ಥಾವರ, ಹಾಲಲಕ್ಕವಳ್ಳಿ, ಕಡೆಕಲ್, ಯರಗನಾಳ್, ಕುಸ್ಕೂರು, ಶ್ರೀಕಂಠಪುರ, ವೀರಾಪುರ, ತಟ್ಟಿಕೆರೆ, ಹೊಸಕೊಪ್ಪ, ಇಂದಿರಾನಗರ, ಹೊಸಹಳ್ಳಿ, ಮುಳ್ಕೆರೆ, ಆನೆಬಿಡಾರ, ತಿಮ್ಮಾಪುರ  ಹಾಗೂ   ಸುತ್ತಮುತ್ತಲಿನ  ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.ಸ್ಕಾಂ : ರಜಾದಿನಗಳಲ್ಲಿ ನಗದು ಬಿಲ್ ಪಾವತಿ ಕೌಂಟರ್ ಚಾಲನೆ

ಗ್ರಾಹಕರಿಗೆ ವಿದ್ಯುತ್ ಬಿಲ್‍ಗಳನ್ನು ಪಾವತಿಸಲು ಅನುಕೂಲವಾಗುವಂತೆ ಸಾರ್ವತ್ರಿಕ ರಜಾದಿನಗಳಾದ ಮಾ.23,  24,  29 ಹಾಗೂ 31 ಈ ದಿನಗಳಂದು ದಕ್ಷಿಣಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಮೆಸ್ಕಾಂನ ಎಲ್ಲಾ ನಗದು ಕೌಂಟರ್‍ಗಳನ್ನು ಚಾಲನೆಗೊಳಿಸಲಾಗಿದೆ.

ಮೇಲ್ಕಾಣಿಸಿದ ರಜಾದಿನಗಳಂದು ಗ್ರಾಹಕರು ಸೌಲಭ್ಯದ ಸದುಪಯೋಗಪಡಿಸಿಕೊಂಡು ವಿದ್ಯುತ್ ಬಿಲ್‍ಗಳನ್ನು ಪಾವತಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.