ಶಿವಮೊಗ್ಗ ಬಳಿಕ ಭದ್ರಾವತಿಯಲ್ಲಿ ವಾಹನ ಸವಾರರಿಗೆ ಪೊಲೀಸರ ಶಾಕ್!

After Shivamogga, Shivamogga SP Mithun Kumar led a drive against half helmets in Bhadravathi

ಶಿವಮೊಗ್ಗ ಬಳಿಕ ಭದ್ರಾವತಿಯಲ್ಲಿ ವಾಹನ ಸವಾರರಿಗೆ ಪೊಲೀಸರ ಶಾಕ್!

SHIVAMOGGA  | BHADRAVATI |   Dec 5, 2023 | ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಎಸ್​ಪಿ ಮಿಥುನ್ ಕುಮಾರ್ ಹಾಗೂ ಭದ್ರಾವತಿ ಸೇರಿ ನಗರದ ಉಪವಿಭಾಗದ ಪೊಲೀಸರು ನಿನ್ನೆ ಸೋಮವಾರ ವಾಹನ ಸವಾರರಿಗೆ ಪೂರ್ಣ ಪ್ರಮಾಣದ ಐಎಸ್‌ಐ ಪ್ರಮಾಣೀಕೃತ ಹೆಲೈಟ್ ಧರಿಸಿ ರಸ್ತೆ ಸಂಚಾರ ನಿಯಮ ಪಾಲಿಸುವಂತೆ ಜಾಗೃತಿ ಮೂಡಿಸಿದರು.

ನಗರದ ಬಿ.ಎಚ್‌. ರಸ್ತೆ, ಅಂಬೇಡ್ಕರ್‌ವೃತ್ತದಲ್ಲಿ ವಾಹನ ಸವಾರರಿಗೆ ತಿಳಿ ಹೇಳಿದ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ಅರ್ಧ ಹೆಲೈಟ್ ಧರಿಸದಂತೆ ಸೂಚನೆ ನೀಡಿದ್ದರೂ ಸಹ ಬಳಸುತ್ತಿರುವುದು ಸರಿಯಲ್ಲ. ನಿಯಮ ಪಾಲನೆ ಪ್ರತಿಯೊಬ್ಬರ ಜವಾಬ್ದಾರಿ ಎಂದರು.

READ : ಅಡಿಕೆ ರೇಟು ಎಷ್ಟಿದೆ? ಯಾವ್ಯಾವ ಮಾರುಕಟ್ಟೆಯಲ್ಲಿ ಜಾಸ್ತಿ ಇದೆ ದರ!? ವಿವರ ಇಲ್ಲಿದೆ

ಹೆಜ್ಜೆಟ್ ವಿಚಾರ ಕಾನೂನು ಕ್ರಮ ಮಾತ್ರವಲ್ಲ. ವಾಹನ ಸವಾರರ ಜವಾಬ್ದಾರಿ. ದಂಡ ಪಾವತಿಯಿಂದ ಸಮಸ್ಯೆ ಸಂಪೂರ್ಣ ನಿವಾರಣೆ ಅಸಾಧ್ಯ. ಜನರು ಸುರಕ್ಷತೆ ತಮ್ಮ ಜವಾಬ್ದಾರಿ ಎಂದು ಭಾವಿಸಿದಾಗ ಮಾತ್ರ ಸುರಕ್ಷತೆ ಸಾಧ್ಯ ಎಂದು ಹೇಳಿದರು.

ಪೊಲೀಸ್ ಉಪಾಧೀಕ್ಷಕ ಕೆ.ಆರ್. ನಾಗರಾಜ್, ನಗರ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್, ವಿವಿಧ ಠಾಣೆಗಳ ಠಾಣಾಧಿಕಾರಿಗಳಾದ ಶಾಂತಲ, ರಮೇಶ್, ಶರಣಪ್ಪ ಹಂಡ್ರಾಗಲ್‌, ಸಹಾಯಕ ಠಾಣಾಧಿಕಾರಿ ಎಂ. ರಾಜಪ್ಪ ಸೇರಿ ಹಲವು ಸಿಬ್ಬಂದಿ ಪಾಲ್ಗೊಂಡಿದ್ದರು.‘ 

ಇದಕ್ಕೂ ಮೊದಲು ನಗರದ ಪ್ರಮುಖ ವೃತ್ತಗಳಲ್ಲಿ ಕಾರ್ಯಾಚರಣೆ ನಡೆಸಿ ಅರ್ಧ ಹೆಲ್ಮೆಟ್​  ಧರಿಸಿರುವ ದ್ವಿಚಕ್ರ ವಾಹನ ಸವಾರರಿಂದ ಹೆಲೈಟ್‌ಗಳನ್ನು ವಶಪಡಿಸಿ ಕೊಳ್ಳಲಾಯಿತು. ಅಲ್ಲದೆ ಎಸ್​​ ಮಿಥುನ್ ಕುಮಾರ್ ಈ ಸೂಚನೆಗಳನ್ನು ನೀಡಿದರು 

1) ದ್ವಿ ಚಕ್ರ ವಾಹನ ಸವಾರರು ತಮ್ಮ ಸುರಕ್ಷತೆಯ ದೃಷ್ಠಿಯಿಂದ ವಾಹನಗಳನ್ನು ಚಲಾಯಿಸುವಾಗ ಕಡ್ಡಾಯವಾಗಿ ತಲೆಗೆ ಸಂಪೂರ್ಣ ರಕ್ಷಣೆ ನೀಡುವ ಶಿರಸ್ತ್ರಾಣ (Full Helmet) ಅನ್ನು ಧರಿಸಿ ವಾಹನ ಚಲಾಯಿಸಿ.  

2) ಯಾವುದೇ ಸಂದರ್ಭದಲ್ಲಿ ಅಪಘಾತಗಳು ಜರುಗುವ ಸಂಭವವಿವುದರಿಂದ, ಸ್ವಲ್ಪ ದೂರದ ಪ್ರಯಾಣಕ್ಕೆ ಹೆಲ್ಮೆಟ್ ನ್ನು ಧರಿಸುವುದು ಬೇಡವೆಂದು ನಿರ್ಲಕ್ಷತನ ತೋರದೇ, ಕಡ್ಡಾಯವಾಗಿ ನಿಮ್ಮ ಸುರಕ್ಷತಾ ದೃಷ್ಟಿಯಿಂದ ತಲೆಗೆ ಸಂಪೂರ್ಣ ರಕ್ಷಣೆ ನೀಡುವ Full Helmet ಅನ್ನು ಧರಿಸಿ.

3) ದ್ವಿ ಚಕ್ರ ವಾಹನ ಸವಾರರು Half Helmet (ಅರ್ಧ ಹೆಲ್ಮೆಟ್) ಗಳನ್ನು ಧರಿಸಿ ವಾಹನ ಚಲಾಯಿಸಿದ್ದಲ್ಲಿ, ಅಫಘಾತವಾದಾಗ Half Helmet (ಅರ್ಧ ಹೆಲ್ಮೆಟ್) ಗಳಿಂದ ನಿಮ್ಮ ತಲೆಗೆ ಯಾವುದೇ ಸುರಕ್ಷತೆ ಇಲ್ಲದೇ ಹೆಚ್ಚಿನ ಪೆಟ್ಟಾಗುವ ಸಂಭವವಿರುತ್ತದೆ. ಆದ್ದರಿಂದ ಕಡ್ಡಾಯವಾಗಿ ತಲೆಗೆ ಸಂಪೂರ್ಣ ರಕ್ಷಣೆ ನೀಡುವ ಐಎಸ್ಐ ಪ್ರಮಾಣಿತ ಹೆಲ್ಮೆಟ್  ಗಳನ್ನೇ ಧರಿಸುವುದು. 

4) ಯಾರೇ ಆಗಲಿ ರಸ್ತೆ ಅಫಘಾತಕ್ಕೆ ಒಳಗಾದಾಗ ಅವರ ಜೊತೆಗೆ, ಅವರ ಕುಟುಂಬದ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ನಮ್ಮ ಮತ್ತು ಕುಟುಂಬದ ರಕ್ಷಣೆಯ ದೃಷ್ಠಿಯಿಂದ ಸಂಚಾರ ನಿಯಮಗಳನ್ನು ಪಾಲಿಸಿ ಮತ್ತು ಸುರಕ್ಷಿತವಾಗಿ ವಾಹನ ಚಲಾಯಿಸುವುದು. 

ಇನ್ನೂ ಈ ಸಂದರ್ಭದಲ್ಲಿ Half Helmet (ಅರ್ಧ ಹೆಲ್ಮೆಟ್) ಗಳನ್ನು ಧರಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ, ವಾಹನ ಸವಾರರು ತಾವು ಧರಿಸಿದ್ದ  Half Helmet (ಅರ್ಧ ಹೆಲ್ಮೆಟ್) ಗಳನ್ನು  ತಾವಾಗಿಯೇ ತೆಗೆದುಕೊಟ್ಟರು. ಅಲ್ಲದೆ ಮುಂದಿನ  ದಿನಗಳಲ್ಲಿ Half Helmet ಧರಿಸಿ ದ್ವಿ ಚಕ್ರ ವಾಹನ ಚಲಾಯಿಸುವ  ವಾಹನ ಸವಾರರ ವಿರುದ್ಧ  ಐಎಂವಿ ಕಾಯ್ದೆಯಡಿಯಲ್ಲಿ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದರು.