ಪ್ಲೀಸ್ ಭದ್ರಾವತಿ ವಿಐಎಸ್​ಎಲ್​ ಕಾರ್ಖಾನೆಯನ್ನು ಮುಚ್ಚಬೇಡಿ! ಕೇಂದ್ರ ಉಕ್ಕು ಪ್ರಾಧಿಕಾರಕ್ಕೆ ಸಂಸದರ ಮನವಿ!

Please don't close bhadravathi VISL factory! MPs appeal to Central Steel Authority

ಪ್ಲೀಸ್ ಭದ್ರಾವತಿ ವಿಐಎಸ್​ಎಲ್​ ಕಾರ್ಖಾನೆಯನ್ನು ಮುಚ್ಚಬೇಡಿ!  ಕೇಂದ್ರ ಉಕ್ಕು ಪ್ರಾಧಿಕಾರಕ್ಕೆ ಸಂಸದರ ಮನವಿ!

KARNATAKA NEWS/ ONLINE / Malenadu today/ Jun 13, 2023 SHIVAMOGGA NEWS

ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರರವರು ಇಂದು ಭಾರತೀಯ ಉಕ್ಕು ಪ್ರಾಧಿಕಾರದ ನೂತನ ಅಧ್ಯಕ್ಷ ಅಮರೆಂದು ಪ್ರಕಾಶ್‌ ರನ್ನು ಭೇಟಿ ಮಾಡಿದರು. ಈ ವೇಳೆ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಮುಚ್ಚುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು.

 

ಅಲ್ಲದೆ ಪರ್ಯಾಯವಾಗಿ ಗಣಿಯನ್ನು ಒದಗಿಸುವುದರ ಜೊತೆ, ಕಾರ್ಖಾನೆಯನ್ನು ಪುನಶ್ವೇತನ ಗೊಳಿಸಲು ಅಗತ್ಯ ಬಂಡವಾಳವನ್ನು ತೊಡಗಿಸುವಂತೆ ಮನವಿ ಮಾಡಿದ್ರು. 

ಅಲ್ಲದೆ ಸ್ಥಗಿತಗೊಂಡಿರುವ ಎಲ್ಲಾ ಉತ್ಪಾದನಾ ಘಟಕಗಳನ್ನು ಪುನರಾರಂಭಿಸಲು ಮನವಿ ಮಾಡಿದರು.ಈ ಸಂದರ್ಭದಲ್ಲಿ ಭದ್ರಾವತಿ ಬಿಜೆಪಿ ಮುಖಂಡ ಮಂಗೋಟೆ ರುದ್ರೇಶ್, ವಿಐಎಸ್‌ಎಲ್ ಕಾರ್ಮಿಕರ ಸಂಘದ ಅಧ್ಯಕ್ಷ ಜಗದೀಶ್ ಮತ್ತು ಇತರ ಪದಾಧಿಕಾರಿಗಳು, ಹಾಗೆಯೇ ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ್‌, ನೌಕರರ ಅಸೋಸಿಯೇಷನ್‌ ಅಧ್ಯಕ್ಷ ಕುಮಾರಸ್ವಾಮಿ ಮತ್ತು ಇತರರು ಹಾಜರಿದ್ದು, ಪ್ರತ್ಯೇಕ ಮನವಿಗಳನ್ನು ಈ ಸಂದರ್ಭದಲ್ಲಿ ಅಧ್ಯಕ್ಷರಿಗೆ ಸಲ್ಲಿಸಿದರು.


ಗ್ಯಾರಂಟಿ ಬೆನ್ನಲ್ಲೆ, ಬಿಜೆಪಿ ವಿರುದ್ಧ ಶುರುವಾಗಲಿದೆ ಕಾಂಗ್ರೆಸ್ ಅಭಿಯಾನ! ಏನದು?



ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್​ ಎಸ್​ ಸುಂದರೇಶ್​ ಇವತ್ತು ಸುದ್ದಿಗೋಷ್ಟಿಯಲ್ಲಿ ಮಾತನಾಡ್ತ, ಕಾಂಗ್ರೆಸ್‌ ನೀಡಿದ್ದ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಜನರನ್ನ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದೆ ಎಂದು ಆರೋಪಿಸಿದರು. ಈ ಮೂಲಕ ಯೋಜನೆಗೆ  ಬ್ರೇಕ್ ಹಾಕಲು ಯತ್ನಿಸುತ್ತಿದೆ ಎಂದ ಅವರು, . ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಲ್ಲಿ ಮೋದಿಯವರು ಪ್ರತಿಯೊಬ್ಬನ ಬ್ಯಾಂಕ್ ಅಕೌಂಟ್‌ಗೆ 15 ಲಕ್ಷ ರೂ. ಹಾಗೂ ಪ್ರತಿ ವರ್ಷ 2ಕೋಟಿ ಉದ್ಯೋಗ ಸೃಷ್ಟಿ ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿದ್ದರು. ಆದರೆ, ಯಾವುದೇ ಭರವಸೆಯನ್ನು ಇದುವರೆಗೆ ಈಡೇರಿಸಿಲ್ಲ. ಈ ಬಗ್ಗೆ ರಾಜ್ಯದ ಬಿಜೆಪಿ ಸಂಸದರು ಮಾತನಾಡುತ್ತಿಲ್ಲ. ಹೀಗಾಗಿ ಬಿಜೆಪಿಗೆ ರಾಜ್ಯ ಸರ್ಕಾರದ ಯೋಜನೆಗಳ ಜಾರಿ ಬಗ್ಗೆಮಾತನಾಡುವ ನೈತಿಕ ಹಕ್ಕಿಲ್ಲ ಎಂದರು

 

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾವ ಮುಖ ಇಟ್ಟುಕೊಂಡು ಮತದಾರರಲ್ಲಿ ಮತ ಯಾಚಿಸುತ್ತಾರೆ ಎಂದು ಟೀಕಿಸಿದ ಸುಂದರೇಶ್​​ ಬಿಜೆಪಿ ನೀಡಿದ್ದ ಭರವಸೆಗಳು ಏನಾದವು ಎಂಬ ಬಗ್ಗೆ ರಾಜ್ಯದ ಬಿಜೆಪಿ ಸಂಸದರ ವಿರುದ್ಧ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.  

 

ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಬೇಕಾ ಗಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಪಠ್ಯ ಪುಸ್ತಕದಲ್ಲಿ ಭಾರೀ ವ್ಯತ್ಯಾಸಗಳಿದ್ದ ಮರು ಪರಿಷ್ಕರಣೆ ಮಾಡಿ ಸಚಿವರು ಸರ್ಕಾರಿ ಶಾಲೆಗಳನ್ನು ಹೈಟೆಕ್ ಮಾಡಬೇಕು ಎಂದು ಮನವಿ ಮಾಡಿದ್ರು

 

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ಬಹಳಷ್ಟು ಆರೋಪಗಳಿವೆ. ಇವುಗಳ ಬಗ್ಗೆ ಆರೋಗ್ಯ ಸಚಿವರ ಗಮನಕ್ಕೆ ತರಲಾಗಿದೆ. ಹಾಗೂ ಆಸ್ಪತ್ರೆಯ ಅಭಿವೃದ್ಧಿ ಬಗ್ಗೆ ಗಮನಕ್ಕೆ ತರಲಾಗಿದೆ. ಸಚಿವರು ಆಸ್ಪತ್ರೆ ಸುಧಾರಣೆ ತರಲಿದ್ದಾರೆ ಎಂದು ತಿಳಿಸಿದ ಸುಂದರೇಶ್,  ಎಲ್ಲಾ ಇಲಾಖೆಗಳ ಸಚಿವರು ಜಿಲ್ಲೆಯ ಪ್ರವಾಸ ಮಾಡಿ, ಇಲಾಖೆಗಳಲ್ಲಿರುವ ಭ್ರಷ್ಟಾಚಾರಕ್ಕೆ ಕಡಿವಾಣ  ಹಾಕಬೇಕಿದೆ ಎಂದರು. 

 

 


ಬತ್ತಿದ ಶರಾವತಿ ಹಿನ್ನೀರು! ಸಿಗಂದೂರು ಚೌಡೇಶ್ವರಿಯ ಮೂಲ ಸ್ಥಳದ ದರ್ಶನದ ಪಡೆದ ಯೋಗೇಂದ್ರ ಶ್ರೀಗಳು! 



ಶರಾವತಿ/ ಹಿನ್ನೀರು ತಗ್ಗಿರುವುದು ಒಂದು ಕಡೆ ಆತಂಕ ಉಂಟು ಮಾಡಿದರೆ, ಮತ್ತೊಂದು ಕಡೆಯಲ್ಲಿ ಶರಾವತಿ ಸಂತ್ರಸ್ತರನ್ನ ತನ್ನತ್ತ ಸೆಳೆಯುತ್ತಿದೆ. ಅದರಲ್ಲಿಯು ವಿಶೇಷವಾಗಿ ಸಿಗಂದೂರು ಚೌಡೇಶ್ವರಿ ದೇವಿ ಮೂಲ ಸ್ಥಳವೂ ಹಿನ್ನೀರು ತಗ್ಗಿರುವುದರಿಂದ ಸ್ಪಷ್ಟವಾಗಿ ಕಾಣ ಸಿಗುತ್ತಿದೆ. 

 

ಈ ಹಿನ್ನೆಲೆಯಲ್ಲಿ ಮೂಲ ಚೌಡಶ್ವರಿ ದೇವಿಯ ಕಟ್ಟೆಗೆ ಭೇಟಿಕೊಟ್ಟ ಶ್ರೀ ಕ್ಷೇತ್ರ ಕಾರ್ತಿಕೇಯ ಪೀಠದ ಯೋಗೇಂದ್ರ ಶ್ರೀಗಳು, ಅಲ್ಲಿ ಚೌಡೇಶ್ವರಿಗೆ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

ಪ್ರತಿ ವರ್ಷ ಶ್ರೀ ದೇವಿಯ ಜಾತ್ರಾ ಮಹೋತ್ಸವದ ದಿನ ಈ  ಮೂಲ ಸ್ಥಾನದಿಂದಲೇ ಜ್ಯೋತಿ ರೂಪದಲ್ಲಿ  ದೀಪವನ್ನು ಈಗಿನ  ಕ್ಷೇತ್ರಕ್ಕೆ ತರಲಾಗುತ್ತದೆ.  ಚೌಡೇಶ್ವರಿ ಅಮ್ಮನವರ ಮಹಿಮೆಯ ಕಥೆಗಳು ಮೂಲ ದೇವಿಕಟ್ಟೆಯಿಂದಲೇ ಆರಂಭವಾಗುತ್ತದೆ.  

 

ಸದ್ಯ ಕಾಣಸಿಕ್ಕಿರುವ ಮೂಲಸ್ಥಳದಲ್ಲಿ ಯೋಗೇಂದ್ರ ಗುರುಗಳು ಹಾಗೂ ಸಿಗಂದೂರು ಚೌಡೇಶ್ವರಿ ದೇವಾಲಯದ ಧರ್ಮದರ್ಶಿ ರಾಮಪ್ಪರವರು, ಪೂಜೆ ಸಲ್ಲಿಸಿದ್ದಾರೆ. 

 


ಸಾಗರ ಬಸ್​ ನಿಲ್ದಾಣದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ದಿಢೀರ್​ ಪ್ರತಿಭಟನೆ ! ಮಕ್ಕಳ ಬಳಿ ಕಷ್ಟ ಹೇಳಿಕೊಂಡ ಡಿಪೊ ಮ್ಯಾನೇಜರ್​!


ಸಾಗರ  ತಾಲ್ಲೂಕಿನ ಆನಂದಪುರಂನಿಂದ ಸಾಗರದ ವಿವಿಧ ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರಲು ಹೆಚ್ಚುವರಿ ಬಸ್ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಇವತ್ತು ಸಾಗರದ ಕೆಎಸ್​ಆರ್​ಟಿಸಿ (KSRTC) ಬಸ್ ನಿಲ್ದಾಣದ ಎದುರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ರು. 

ಸಮಸ್ಯೆಯೇನು?

ಆನಂದಪುರಂನಿಂದ ಸಾಗರದ ಇಂದಿರಾಗಾಂಧಿ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜ್ಯೂನಿಯರ್ ಕಾಲೇಜಿಗೆ ಬರಲು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಬಸ್​ ಸಿಗುತ್ತಿಲ್ಲ ಎಂಬುದು ವಿದ್ಯಾರ್ಥಿಗಳ ದೂರು.  ಕಳೆದ ಎರಡಮೂರು ದಿನಗಳಿಂದ ವಿದ್ಯಾರ್ಥಿಗಳು ಬಸ್ ಇಲ್ಲದೆ ಕಾಲೇಜಿಗೆ ಹಾಜರಾಗಲು ಆಗುತ್ತಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನ ಹೇಳಿಕೊಂಡರು. ಇನ್ನೂ  ನಿಲ್ದಾಣದ ಅಧಿಕಾರಿಗಳಿಗೆ ಈ ಹಿಂದಿನಿಂದಲೂ ಸಮಸ್ಯೆ ಹೇಳಿಕೊಂಡು ಬಂದಿದ್ದೇವೆ ಆದರೂ ಸಮಸ್ಯೆ ಬಗೆಹರಿದಿಲ್ಲವಂತೆ. ಹೀಗಾಗಿ ಹೆಚ್ಚುವರಿ ಬಸ್ ನ್ನ ಆನಂದಪುರಂನಿಂದ ಬಿಡಬೇಕು ಎಂದು ಪ್ರತಿಭಟನೆ ನಡೆಸಿದ್ರು. 

ಡಿಪೋ ಮ್ಯಾನೇಜರ್ ಹೇಳಿದ್ದೇನು?

ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸಿ ಮಾತನಾಡಿದ ಡಿಪೋ ಮ್ಯಾನೇಜರ್ ರಾಜಪ್ಪ, ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಯನ್ನು ಇನ್ನು ಒಂದೆರಡು ದಿನಗಳಲ್ಲಿ ಬಗೆಹರಿಸುತ್ತೇವೆ ಎಂದಿದ್ಧಾರೆ.  ಹೆಚ್ಚುವರಿ ಬಸ್ ಕಲ್ಪಿಸುವ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುತ್ತದೆ ಎಂದರು 

ಅಳಲು ತೋಡಿಕೊಂಡ ಡಿಪೋ ಮ್ಯಾನೇಜರ್

ಇನ್ನೂ ವಿದ್ಯಾರ್ಥಿಗಳ ಬಳಿಯಲ್ಲಿ ಮಾತನಾಡ್ತ, ತಮ್ಮ ಬಳಿಯಲ್ಲಿ ಬಸ್ ಇಲ್ಲ, ಡ್ರೈವರ್ ಇಲ್ಲ, ಕಂಡಕ್ಟರ್ಗಳಿಲ್ಲ ಎಂದು ಅಳಲು ತೋಡಿಕೊಂಡರು. ಉಚಿತ ಟಿಕೆಟ್ ಶಕ್ತಿಯೋಜನೆ ಜಾರಿಯಾದ ಬೆನ್ನಲ್ಲೆ ಹೆಚ್ಚುವರಿಯಾಗಿ ಮಹಿಳಾ ಪ್ರಯಾಣಿಕರು ಕೆಎಸ್​ಆರ್​ಟಿಸಿಯತ್ತ ಮುಖ ಮಾಡಿದ್ಧಾರೆ. ಗಾರ್ಮೆಂಟ್ಸ್​ಗೆ ಹೋಗುವ ಮಹಿಳಾ ಸಿಬ್ಬಂದಿ ಸೇರಿದಂತೆ , ಪರ್ಯಾಯ ಸಾರಿಗೆ ವ್ಯವಸ್ಥೆ ಬಳಸುತ್ತಿದ್ದವರು ಕೆಎಸ್​ಆರ್​ಟಿಸಿಯಲ್ಲಿ ಓಡಾಡುತ್ತಿದ್ದಾರೆ. ಇದರಿಂದ ಸ್ವಲ್ಪ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಹೆಚ್ಚುವರಿ ಬಸ್​ಗಳನ್ನ ಬಿಡುವ ವ್ಯವಸ್ಥೆಯನ್ನು ಕಲಿಸ್ಪಲಾಗುವುದು ಎಂದಿದ್ಧಾರೆ.