KARNATAKA NEWS/ ONLINE / Malenadu today/ May 11, 2023 GOOGLE NEWS / SHIVAMOGGA NEWS
ಭದ್ರಾವತಿ/ ಶಿವಮೊಗ್ಗ ಇಲ್ಲಿನ ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್ನಲ್ಲಿ ಯುವತಿಯೊಬ್ಬಳ ಆತ್ಮಹತ್ಯೆ ಪ್ರಕರಣ ಸಂಬಂಧ ಕೇಸ್ ದಾಖಲಾಗಿದೆ. ಅಲ್ಲದೆ ಆಕೆಯ ಸಾವಿಗೆ ಗಂಡನ ಕಿರುಕುಳವೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಅಪ್ತಾಪ್ತ ವಯಸ್ಸಿನ ಹುಡುಗಿಯನ್ನ ಕಡೂರು ಮೂಲದ ವ್ಯಕ್ತಿಯೊಬ್ಬರಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾಗಿ ಇನ್ನೂ ವರ್ಷದ ಮೇಲೆ ಒಂದು ತಿಂಗಳು ಕಳೆದಿದೆಯಷ್ಟೆ. ಏಳು ತಿಂಗಳ ಬಾಣಂತಿ ಯಾಗಿದ್ದ ಅಪ್ತಾಪ್ತೆ ಚಾನಲ್ಗೆ ಹಾರಿ ಸಾವನ್ನಪ್ಪಿದ್ದಾರೆ.
ಭದ್ರಾವತಿಯಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಹೋಗುತ್ತಿದ್ದವರಿಗೆ ಕಾರು ಡಿಕ್ಕಿ ! ತೀರ್ಥಹಳ್ಳಿಯಲ್ಲಿ ಭೀಕರ ಅಪಘಾತ
ಮನೆಯಲ್ಲಿ ಚಿಕನ್ ವಿಷಯದಲ್ಲಿ ಅತ್ತೆ ಮತ್ತು ಗಂಡನಿಂದ ಟಾರ್ಚ್ರ್ ನೀಡಲಾಗುತ್ತಿದ್ದು, ಇದೇ ಕಾರಣಕ್ಕೆ ಆಕೆಯ ಮೇಲೆ ಹಲ್ಲೆ ಮಾಡಿದ್ದರಂತೆ. ಇದರಿಂದ ಬೇಸತ್ತ ಅಪ್ತಾಪ್ತೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ. ಘಟನೆಯ ಸಂಬಂಧ ಪೋಷಕರು ಗ್ರಾಮಾಂತರ ಠಾಣೆ ಮುಂದೆ ಆಕ್ರೋಶ ಹೊರಹಾಕಿದ್ದು, ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಶಿವಮೊಗ್ಗ ಪೊಲೀಸ್ ಇಲಾಖೆಯ ಬ್ಲ್ಯಾಕ್ ಬ್ಯೂಟಿ ಗೌರಿ ಇನ್ನಿಲ್ಲ!
ಸಾಗರ ತಾಲ್ಲೂಕಿನ ತಾಳಗುಪ್ಪದ ಸಮೀಪ ಕಾರು ಪಲ್ಟಿ
ಸಾಗರ/ ಶಿವಮೊಗ್ಗ ಇಲ್ಲಿನ ತಾಳಗುಪ್ಪದ ಬಳಿಯಲ್ಲಿ ಕಾರೊಂದು ಪಲ್ಟಿಯಾಗಿದೆ. ಚಿಕ್ಕಮಗಳೂರು ರಿಜಿಸ್ಟ್ರೇಷನ್ ಹೊಂದಿರುವ ಕೆಂಪು ಬಣ್ಣದ ಕಾರು ಹೈವೆ ಬದಿಯಲ್ಲಿ ಪಲ್ಟಿಯಾಗಿ ಧರೆಯ ಬೇಲಿಗೆ ವಾಲಿ ನಿಂತಿದೆ.
ಘಟನೆಯಲ್ಲಿ ಗಾಯಗೊಂಡವರನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ. ಸ್ತಳಕ್ಕೆ ತೆರಳಿರುವ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಮತ ಹಾಕಲು ಬರುವಾಗ ಕಾರು ಅಪಘಾತ
ಇನ್ನೂ ನಿನ್ನೆ ಮತಹಾಕಲು ಎಂದು ಬೆಂಗಳೂರಿನಿಂದ ಸಾಗರ ತಾಲ್ಲೂಕಿಗೆ ಬರುತ್ತಿದ್ದವರು ಅಪಘಾತದದಲ್ಲಿ ಗಾಯಗೊಂಡಿದ್ದಾರೆ. ಚೆನ್ನಗಿರಿಯಲ್ಲಿ ಈ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಟೊಯೊಟಾ ಕಾರು ಪಲ್ಟಿಯಾಗಿ ಉರುಳಿಬಿದ್ದಿದೆ. ಘಟನೆಯಲ್ಲಿ ಕಾರಿನಲ್ಲಿದ್ದವರಿಗೆ ಗಾಯಗಳಾಗಿದ್ದು, ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
Read/ Bhadravati/ ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್
Read/ Kichcha Sudeepa/ ನಟ ಸುದೀಪ್ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?
Malenadutoday.com Social media