Karnatka election/ 2018 ರ ಚುನಾವಣೆಗೂ 2023 ರ ಚುನಾವಣೆಗೂ ಏನು ವ್ಯತ್ಯಾಸ! ಅಂಕಿಅಂಶಗಳು ಹೇಳೋದೇನು? ಶಿವಮೊಗ್ಗ ಜಿಲ್ಲೆಯ ಈ ಮಾಹಿತಿ ನಿಮಗಾಗಿ

What's the difference between the 2018 election and the 2023 election! What do the statistics say? This information from Shimoga district is for you.

Karnatka election/   2018 ರ ಚುನಾವಣೆಗೂ 2023 ರ ಚುನಾವಣೆಗೂ ಏನು ವ್ಯತ್ಯಾಸ! ಅಂಕಿಅಂಶಗಳು ಹೇಳೋದೇನು? ಶಿವಮೊಗ್ಗ ಜಿಲ್ಲೆಯ ಈ ಮಾಹಿತಿ ನಿಮಗಾಗಿ

KARNATAKA NEWS/ ONLINE / Malenadu today/ May 11, 2023 GOOGLE NEWS 

ಶಿವಮೊಗ್ಗ/ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಪೂರ್ಣಗೊಂಡಿದೆ. ಚುನಾವಣೆಯನ್ನ ಯಶಸ್ವಿಯಾಗಿ ಮುಗಿಸಿದ ಸಿಬ್ಬಂದಿ ಹಾಗೂ ಅಭ್ಯರ್ಥಿಗಳು ರಿಲ್ಯಾಕ್ಸ್​ ಮೂಡ್​ನಲ್ಲಿದ್ದಾರೆ. ಈ ನಡುವೆ ಮತದಾನ ಅಂಕಿಅಂಶಗಳ ಬಗ್ಗೆ ಚರ್ಚೆಯಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ವಿಚಾರದಲ್ಲಿ  ಅಂಕಿ ಅಂಶಗಳನ್ನು ಗಮನಿಸುವುದಾದರೆ, ಇದುವರೆಗೂ ಲಭ್ಯವಿರುವ ಅಂಕಿಅಂಶಗಳ ಪ್ರಕಾರ ಕಳೆದ 2018 ಚುನಾವಣೆಗಿಂತಲು ತುಸು ಕಡಿಮೆ ಮತದಾನ ಶಿವಮೊಗ್ಗ ಜಿಲ್ಲೆಯಲ್ಲಿ ಆಗಿದೆ. 

ಈ ಸಲದ ಚುನಾವಣೆಯ ವಿಶೇಷಗಳು

2018ರ ಚುನಾವಣೆಗೆ ಹೋಲಿಸಿದರೆ ಈ ಸಲ ಶೇ.0.44ರಷ್ಟು ಇಳಿಕೆಯಾಗಿದೆ. 2018ರಲ್ಲಿ ಶೇ.78.72ರಷ್ಟು ಮತದಾನವಾಗಿತ್ತು. 2023ರಲ್ಲಿ ಶೇ.78.28ರಷ್ಟು ಮತದಾನವಾಗಿದೆ.

ಇನ್ನೂ ತೀರ್ಥಹಳ್ಳಿಯಲ್ಲಿ ಈ ಸಲ ಅತ್ಯದಿಕ ಮತದಾನವಾಗಿದ್ದು, 2018ರ ಚುನಾವಣೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಶೇ.84.83ರಷ್ಟು ಮತದಾನವಾಗಿತ್ತು.  ಈ ಸಲವೂ ಕಳೆದ ಚುನಾವಣೆಯಲ್ಲಿ ಆದಷ್ಟೇ ಮತದಾನವಾಗಿದೆ.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಅತಿಹೆಚ್ಚು ಮತದಾನದ ಕ್ಷೇತ್ರಗಳ ಪೈಕಿ ಜಿಲ್ಲೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಕಳೆದ  2018 ರ ಚುನಾವಣೆಯಲ್ಲಿ ಶೇಕಡಾ 81.07 ರಷ್ಟು ಮತದಾನವಾಗಿತ್ತು ಈ ಸಲ 83.71 ರಷ್ಟು ಮತದಾನವಾಗಿದೆ. 

ಶಿವಮೊಗ್ಗ ನಗರ ಹಾಗೂ ಭದ್ರಾವತಿ ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗಿದ್ದು, 2018 ರಲ್ಲಾದ ಮತದಾನದ ಪ್ರಮಾಣಕ್ಕಿಂತ ಹೆಚ್ಚು ಮತದಾನವಾಗಿದೆ. 

ಭದ್ರಾವತಿಯಲ್ಲಿ 2018ರಲ್ಲಿ ಶೇ.73.13ರಷ್ಟು ಮತದಾನವಾಗಿತ್ತು. 2023ರಲ್ಲಿ ಶೇ.68.47ರಷ್ಟು ಮತದಾನವಾಗಿದ್ದು, ಶೇ.4.66ರಷ್ಟು ಇಳಿಕೆಯಾಗಿದೆ.

ಸೊರಬ ಮತಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಶೇ.84.47ರಷ್ಟು ಮತದಾನವಾಗಿತ್ತು. ಈ ಸಲ ಶೇ.82.97ರಷ್ಟಾಗಿದ್ದು, ಶೇ.1.5ರಷ್ಟು ಮತದಾನ ಕಡಿಮೆಯಾಗಿದೆ.

ಶಿಕಾರಿಪುರದಲ್ಲಿ ಶೇ.0.85, ಶಿವಮೊಗ್ಗದಲ್ಲಿ ಶೇ.2.16, ಶಿವಮೊಗ್ಗ ಗ್ರಾಮಾಂತರದಲ್ಲಿ ಶೇ.2.64, ಶಿಕಾರಿಪುರದಲ್ಲಿ ಶೇ.0.92 ಹಾಗೂ ಸಾಗರದಲ್ಲಿ ಶೇ.0.85ರಷ್ಟು ಮತದಾನದಲ್ಲಿ ಹೆಚ್ಚಳವಾಗಿದೆ

ಶಿವಮೊಗ್ಗದ ವಿಧಾನಸಭಾ ಕ್ಷೇತ್ರಗಳ ಅಂಕಿ ಅಂಶಗಳು

ಶಿವಮೊಗ್ಗ ಜಿಲ್ಲೆ

2018

2023

ಭದ್ರಾವತಿ

73.13

68.47

ಸಾಗರ

79.35

80.2

ಶಿಕಾರಿಪುರ

81.65

82.57

ಶಿವಮೊಗ್ಗ

66.58

68.74

ಶಿವಮೊಗ್ಗ ಗ್ರಾ.

81.07

83.71

ಸೊರಬ

84.47

82.97

ತೀರ್ಥಹಳ್ಳಿ

84.83

84.83

ಒಟ್ಟು

78.72

78.28