aynuru manjunath/ನಾನು ಕರಾಳ ರಾತ್ರಿಯ ಒಂಟಿ ನಾಯಿ ಎಂದಿರುವ ಆಯನೂರು ಮಂಜುನಾಥ್​ ಶಿವಮೊಗ್ಗದ ಕೋಮು ಸೂಕ್ಷ್ಮತೆಗೆ ಪರಿಹಾರವೆ?

Ayanur Manjunath, who has claimed that he is a lonely dog on a dark night, said, "Will he provide a solution to the communal sensitivity of Shivamogga?

aynuru manjunath/ನಾನು ಕರಾಳ ರಾತ್ರಿಯ ಒಂಟಿ ನಾಯಿ ಎಂದಿರುವ ಆಯನೂರು ಮಂಜುನಾಥ್​ ಶಿವಮೊಗ್ಗದ ಕೋಮು ಸೂಕ್ಷ್ಮತೆಗೆ ಪರಿಹಾರವೆ?
aynuru manjunath/ನಾನು ಕರಾಳ ರಾತ್ರಿ ಒಂಟಿ ನಾಯಿ ಎಂದಿರುವ ಆಯನೂರು ಮಂಜುನಾಥ್​ ಶಿವಮೊಗ್ಗದ ಕೋಮು ಸೂಕ್ಷ್ಮತೆಗೆ ಪರಿಹಾರವೆ?

aynuru manjunath/ ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ, ಮರಿದ ಮನಸ್ಸುಗಳ ಬೆಸುಗೆಯಾಗಲಿ, ಶಿವಮೊಗ್ಗದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲಿ ಹೀಗೊಂದು ಧ್ಯೇಯ ಘೋಷದೊಂದಿಗೆ ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್, ವಿಧಾನಸಭೆ ಚುನಾವಣೆಯ ಪ್ರಬಲ ಆಕಾಂಕ್ಷಿಯಾಗಿ ಅಖಾಡಕ್ಕಿಳಿದಿದ್ದಾರೆ. ನಿಜಕ್ಕೂ ಈ ಕಲ್ಪನೆಯನ್ನು ಸಾಕಾರಗೊಳಿಸಲು ಆಯನೂರು ಮಂಜುನಾಥ್ ಸಂಕಲ್ಪ ಮಾಡಿದ್ದರೆ ಅದನ್ನು ಶಿವಮೊಗ್ಗದ ಜನರು ಸ್ವಾಗತ ಮಾಡುತ್ತಾರೆ. ಏಕೆಂದರೆ, ಶಾಂತಿ ಸೌಹಾರ್ದತೆಗೆ ಹೆಸರಾಗಿರುವ ಶಿವಮೊಗ್ಗ ನಗರದ ಪರಿಸ್ಥಿತಿ ಈಗ ಮೊದಲಿನಂತಿಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸದಾ ವಿವಾದಾತ್ಮಕ ಹೇಳಿಕೆ ನೀಡುವುದು, ಆ ಹೇಳಿಕೆಗೆ ಪ್ರಚೋದನೆಗೊಳ್ಳುವ ಸಮುದಾಯಗಳ ಒಂದಿಷ್ಟು ಮಂದಿ ಮತ್ತಿನೆಲ್ಲೋ ಅಥವಾ ಉದ್ವೇಗದಲ್ಲಿಯೋ ಅಮಾಯಕರ ಜೀವ ತೆಗೆಯುವುದು, ನಂತರ ಸೆಕ್ಷನ್ ಕರ್ಪ್ಯೂ ಎಂದೆಲ್ಲಾ ಶಿವಮೊಗ್ಗದ ಶಾಂತಿ ನೆಮ್ಮದಿ ಹಾಳಾಗುವುದು...ಇದನ್ನೆಲ್ಲಾ ನೋಡಿ ನೋಡಿ ಶಿವಮೊಗ್ಗದ ಜನರಿಗೆ ಸಾಕಾಗಿ ಹೋಗಿದೆ.

Shikaripura court / ಕಳೆದು ಹೋದ ಮೊಬೈಲ್​ ಬಗ್ಗೆ ಕೇಳಿದ್ದಕ್ಕೆ ಹಲ್ಲೆ! ಆರೋಪಿಗೆ ಎಂತಹ ಶಿಕ್ಷೆ ಗೊತ್ತಾ!

ಮೊದಲು ಜನಪ್ರತಿನಿಧಿಯಾದವರು ಪ್ರಚೋಧನಾಕಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಿದರೆ ಮಾತ್ರ ಶಿವಮೊಗ್ಗ ತಣ್ಣಗಾಗುವುದು ಎಂದು ಎಲ್ಲರೂ ಮಾತಾಡಿಕೊಳ್ಳುತ್ತಿದ್ದಾರೆ. ಶಿವಮೊಗ್ಗದಲ್ಲಿ ಗಲಾಟೆಯಾದಾಗಲೆಲ್ಲಾ ತಿಂಗಳುಗಟ್ಟಲೆ ಹಳೆ ಶಿವಮೊಗ್ಗ ಭಾಗ ಬಯಲು ಬಂಧಿಖಾನೆಯಾಗುತ್ತೆ. ವ್ಯಾಪಾರ ವಹಿವಾಟು ಸ್ಥಗಿತಗೊಂಡು ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಬೀದಿ ಬದಿ ವ್ಯಾಪಾರಸ್ಥರು ಕಂಗಾಲಾಗುತ್ತಾರೆ..ಶಿವಮೊಗ್ಗದ ಆರ್ಥಿಕ ಸ್ಥಿತಿಗತಿಯೇ ಬುಡಮೇಲಾಗುತ್ತದೆ..ಪರಿಣಾಮಗಳ ಭೀಕರತೆಯನ್ನು ಎದುರಿಸಿರುವ ಶಿವಮೊಗ್ಗದ ಮಂದಿ ಮತ್ತೆ ಅಂತಹ ಗಲಾಟೆಗಳು ಬೇಡ ಶಿವಮೊಗ್ಗ ತಣ್ಣಗಿರಿಲಿ ಎನ್ನುತ್ತಿದ್ದಾರೆ. ಈ ಕಾರಣಕ್ಕೆ ಜಾತ್ಯಾತೀತ ಆಲೋಚನೆಯಿರುವ ರಾಜಕಾರಣಿಯನ್ನು ಶಿವಮೊಗ್ಗದ ಜನರು ಎದುರು ನೋಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಬಿಜೆಪಿಯಲ್ಲೊಬ್ಬ ನಾಯಕ ಬಂಡಾಯವೆದ್ದು ಶಿವಮೊಗ್ಗದ ಶಾಂತಿಯ ಜಪ ಮಾಡುತ್ತಾರೆ ಎಂದು ಯಾರು ಊಹಿಸಿರಲಿಲ್ಲ.

ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ! ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ

ಶಿವಮೊಗ್ಗದ ಬಿಜೆಪಿಯಲ್ಲಿ ಈಗ ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪನವರಿಗೆ ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್, ಮಗ್ಗುಲ ಮುಳ್ಳಾಗಿದ್ದಾರೆ. ನಾನು ಕೂಡ ಬಿಜೆಪಿಯಿಂದ ಸ್ಪರ್ಧಾಕಾಂಕ್ಷಿ ಎಂದು ಹೇಳಿರುವ ಆಯನೂರು ಮಂಜುನಾಥ್ ಈಶ್ವರಪ್ಪನವರ ರಾಜಕೀಯ ನಡೆನುಡಿ ಲೆಕ್ಕಚಾರಗಳನ್ನು ಅವರ ಹೆಸರನ್ನ ಬಳಸದೆಯೆ  ಟೀಕಿಸಿದ್ದಾರೆ. ಆರ್ ಎಸ್ ಎಸ್ ಮತ್ತು ಪ್ರದಾನಿ ನರೇಂದ್ರ ಮೋದಿಯವರೇ  ಮುಸ್ಲಿಂ ಸಮುದಾಯವನ್ನು ಒಪ್ಪಿಕೊಂಡಿರುವಾಗ ಕೆ.ಎಸ್ ಈಶ್ವರಪ್ಪನವರೇಕೆ ಆ ಸಮುದಾಯವನ್ನು ಶತ್ರುವಿನಂತೆ ಕಾಣುತ್ತಾರೆ ಎಂದು ಬಹಿರಂಗವಾಗಿಯೇ ಪ್ರಶ್ನಿಸಿದ್ದಾರೆ. ನಾನು ಶಿವಮೊಗ್ಗದ ಶಾಂತಿಗಾಗಿ ಧ್ವನಿ ಎತ್ತಿದ್ದೇನೆ. ಜನರು ನನಗೆ ಹೇಗೆ ಸ್ಪಂಧಿಸುತ್ತಾರೋ ಗೊತ್ತಿಲ್ಲ. ನಾನು ಕರಾಳ ರಾತ್ರಿಯ ಒಂಟಿ ನಾಯಿ. ಏಕೆಂದರೆ ಮದ್ಯರಾತ್ರಿ ಬೀದಿನಾಯಿ ಒಂಟಿಯಾಗಿ ಕೂಗುವಾಗ ಕೇರಿಯ ಜನ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಒಂಟಿ ನಾಯಿ ಬೊಗಳುತ್ತಿದೆ ಬಿಡು ಎಂದುಕೊಂಡು ಮಲಗುತ್ತಾರೆ. ಆದ್ರೆ ಕಳ್ಳ ಮಾತ್ರ ನಾಯಿ ಬೊಗಳುವಾಗ ಎಚ್ಚರಿಕೆಯಿಂದ ಇರುತ್ತಾನೆ. ನಾಯಿ ಕಳ್ಳ ಬಂದನೆಂದೇ ಬೊಗಳುವಾಗಲೂ ಯಾರಾದರೊಬ್ಬರು ಬಾಗಿಲು ತೆಗೆಯುತ್ತಾರಾ ಎಂದು ಕಾದು ನೋಡುವಂತೆ ನಾನು ಕೂಡ..ಶಾಂತಿಗಾಗಿ ಒಂಟಿ ನಾಯಿಯಂತೆ ಧ್ವನಿ ಎತ್ತಿದ್ದೇನೆ. ನನಗೆ ಶಿವಮೊಗ್ಗದ ಜನರು ಹೇಗೆ ಬಾಗಿಲು ತೆರೆಯುತ್ತಾರೆ ಎಂದು ನಿರೀಕ್ಷಿಸುತ್ತಿದ್ದೇನೆ ಎನ್ನುವ ಆಯನೂರು ಮಂಜುನಾಥ್ ರವರ  ಮಾತು ಎಂತವರನ್ನು ನಾಟುತ್ತೆ.

ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ! ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ

ಈ ನಿಟ್ಟಿನಲ್ಲಿ ಆಯನೂರು ಮಂಜುನಾಥ್​ರ ಮಾತು ಬಿಜೆಪಿಯಲ್ಲಿಯೇ ಸಂಚಲನ ಮೂಡಿಸುತ್ತಿದೆ. ಇನ್ನೂ ಇವರ ಮಾತಿಗೆ ಈಶ್ವರಪ್ಪನವರ ಅಭಿಮಾನಿಗಳು ಹೊರತುಪಡಿಸಿದರೇ ಉಳಿದ ಬಿಜೆಪಿ ನಾಯಕರು ಪ್ರತಿಕ್ರಿಯಿಸುತ್ತಿಲ್ಲ. ಮತ್ತೊಂದೆಡೆ ಆಯನೂರು ಬಂಡಾಯದ ಹಿಂದೆ ಹಿರಿಯ ನಾಯಕರ ಸಹಮತವೂ ಇದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಒಟ್ಟಾರೆ, ಆಯನೂರು ಅಭಿಮತ, ಈಶ್ವರಪ್ಪನವರ ಮಾತಿನ ನಡುವೆ ಈ ಸಲದ ಚುನಾವಣೆ ಕಾವು ಪಡೆದುಕೊಳ್ತಿದೆ.

MALENADUTODAY.COM  |SHIVAMOGGA| #KANNADANEWSWEB

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today, Shikaripura Court/