ಅಡಿಕೆ ತೋಟ ಕೆಡವಿದ ಅರಣ್ಯ ಇಲಾಖೆ! ಮಲೆನಾಡಿಗರಲ್ಲಿ ಮಡುಗಟ್ಟಿದ ಆಕ್ರೋಶ! ಜನಪ್ರತಿನಿಧಿಗಳಿಗೆ ತಟ್ಟುತ್ತಾ ಬಿಸಿ

Forest department demolishes arecanut plantation! There's anger among the people!

ಅಡಿಕೆ ತೋಟ ಕೆಡವಿದ ಅರಣ್ಯ ಇಲಾಖೆ! ಮಲೆನಾಡಿಗರಲ್ಲಿ ಮಡುಗಟ್ಟಿದ ಆಕ್ರೋಶ! ಜನಪ್ರತಿನಿಧಿಗಳಿಗೆ ತಟ್ಟುತ್ತಾ ಬಿಸಿ

MALENADUTODAY.COM  |SHIVAMOGGA| #KANNADANEWSWEB

ಶರಾವತಿ ಸಂತ್ರಸತರ ಭೂಮಿ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿರುವ ಬೆನ್ನಲ್ಲೆ ಮಲೆನಾಡಲ್ಲಿ ಮತ್ತೆ ಅರಣ್ಯ ಇಲಾಖೆಯ ಜೆಸಿಬಿ ಅಮಾನುಷವಾಗಿ ಸದ್ದು ಮಾಡಿದೆ. ಮೇಲಾಗಿ ರಾಜ್ಯ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿಯೆ ಇಂತಹದ್ದೊಂದು ಘಟನೆ ನಡೆದಿರುವುದು, ರಾಜಕಾರಣದ ಲೆಕ್ಕಗಳು ತಲೆಕೆಳಗೆ  ಮಾಡುವ ಸಾಧ್ಯತೆ ಇದೆ. 

ನಡೆದಿದ್ದೇನು? 

ಕಳೆದ ಸೋಮವಾರ ಸೊರಟ ತಾಲೂಕು ಕುಪ್ತಗಟ್ಟೆ ತಾಳಗುಪ್ಪ ಗ್ರಾಮದ ಸರ್ವೇ ನಂ. 20ರಲ್ಲಿ  ಹೈಕೋರ್ಟ್ ಆದೇಶದ ಮೇರೆಗೆ ಅನಧಿಕೃತವಾಗಿ ಸಾಗುವಳಿ ಮಾಡಿದ ಜಮೀನಿನನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಮುಂದಾಗಿತ್ತು. ಈ ವೇಳೆ ಅಲ್ಲಿಯ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಕೋರ್ಟ್​ ವಿಚಾರ ಎಂದು ಜನಪ್ರತಿನಿಧಿಗಳು ತಪ್ಪಿಸಿಕೊಂಡರು. ಆದಾಗ್ಯು ಊರ ಜನರು ಮಾತ್ರ ತೆರವುಗೊಳಿಸಲು ಅವಕಾಶ ನೀಡಿರಲಿಲ್ಲ. ಇದರ ನಡುವೆ ಅರಣ್ಯ ಇಲಾಖೆ ಜಮೀನಿನ ಸುತ್ತ ಟ್ರೆಂಚ್ ಹೊಡೆದು ಅಲ್ಲಿಂದ ತೆರಳಿತ್ತು. ಆದರೆ ಮರುದಿನ ಜಮೀನಿನಲ್ಲಿ  ಬೆಳೆದಿದ್ದ ಅಡಿಕೆ, ಬಾಳೆ ಮರಗಳನ್ನು ನೆಲಕ್ಕುರುಳಿಸಿತು. ಈ ವೇಳೆ ಮಾತನಾಡಿದ ವಕೀಲರು ಎಂ.ಡಿ. ಶೇಖರ್ ಮಾತನಾಡಿ, ಅರಣ್ಯ ಇಲಾಖೆಯಿಂದ ಬಗರ್​ ಹುಕುಂ ರೈತರನ್ನು ಒಕ್ಕಲೆಬ್ಬಿಸುತ್ತಿರುವುದು ಖಂಡನೀಯ. ಕ್ಷೇತ್ರದಲ್ಲಿ ಬಿಜೆಪಿ ಆಡಳಿತದಲ್ಲಿ ಇದ್ದ ಅವಧಿಯಲ್ಲೆಲ್ಲಾ ರೈತರಿಗೆ ರಕ್ಷಣೆ ಇಲ್ಲದಂತಾಗಿದೆ. ಈ ಹಿಂದೆಯೂ ಸಹ ರೈತರ ಸಾಗುವಳಿ ಮಾಡಿದ ಭೂಮಿಯನ್ನು ವಶಕ್ಕೆ ಪಡೆಯಲಾಗಿತ್ತು. ಸುಮಾರು 45 ರಿಂದ 50 ವರ್ಷಗಳ ಹಳೆಯ ಅಡಿಕೆ ಮರಗಳು ಧರೆಗೆ ಉರುಳುವ ಆತಂಕವನ್ನು ಎದುರಿಸುವಂತಾಗಿದೆ ಎಂದಿದ್ದರು. 

ಮತ್ತೊಮ್ಮೆ ಶಿವಮೊಗ್ಗ ಏರ್​ಪೋರ್ಟ್​ನಲ್ಲಿ ಬಂದಿಳಿಯಲಿದ್ದಾರೆ ನರೇಂದ್ರ ಮೋದಿ! ಹುಬ್ಬಳ್ಳಿ ಬಿಟ್ಟು ಶಿವಮೊಗ್ಗವನ್ನೇ ಆಯ್ಕೆ ಮಾಡಿದ್ದೇಕೆ ಪ್ರಧಾನಿ!?

ತೋಟ ನೆಲಸಮ, ಸಿಡಿದ್ದೆದ್ದ ಮಲೆನಾಡು!

ಇನ್ನೂ 20 ಎಕೆರೆ ತೋಟವನ್ನು ನೆಲಸಮ ಮಾಡಿದ್ದು ತೀವ್ರ ವಿರೋಧಕ್ಕೆ ಕಾರಣವಾಗಿದೆ. ಮಲೆನಾಡಿನಲ್ಲಿ ಬಹುತೇಕ ಭೂಮಿಗಳು ಬಗರ್​ ಹುಕುಂ ಆಗಿದ್ದು, ಭೂಮಿ ಹಕ್ಕಿನ ದಾಖಲೆಗಾಗಿ ಅರ್ಜಿ ಹಿಡಿದುಕೊಂಡು ಜನರು ಕಾಯುತ್ತಿದ್ದಾರೆ. ಅಂತಹವರಿಗೆ ನಿನ್ನೆಯ ಘಟನೆ ಆತಂಕ ಮೂಡಿಸಿದೆ. ಅಲ್ಲದೆ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಮಾತನಾಡಿರುವ  ಕಾಂಗ್ರೆಸ್ ಮುಖಂಡ ರಮೇಶ್ ಹೆಗ್ಡೆ ಅರಣ್ಯಾಧಿಕಾರಿಗಳು ಸಾಗುವಳಿದಾರರನ್ನು ಒಕ್ಕಲೆಬ್ಬಿಸಿ ಸುಮಾರು 20 ಎಕರೆ ಫಸಲು ಬಂದ ತೋಟವನ್ನು ನಾಶ ಮಾಡಿ ಸುತ್ತಲೂ ಟ್ರಂಚ್ ಹಾಕಿದ್ದಾರೆ  ಬಿಜೆಪಿ, ಅರಣ್ಯ ಭೂಮಿ ಸಾಗುವಳಿದಾರರಿಗೆ ಒಕ್ಕಲೆಬ್ಬಿಸುವುದಿಲ್ಲ ಎಂದು ಕಳೆದ  ಚುನಾವಳೆ ವೇಳೆಯಲ್ಲಿ  ಭರವಸೆ ನೀಡಿತ್ತು. ಮಾಜಿ ಸಿಎಂ ಬಿಎಸ್​ವೈ ಸಹ ಯಾವುದೇ ಕಾರಣಕ್ಕೂ ಅರಣ್ಯ ಭೂಮಿ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದಿದ್ದರು. ಆದರೆ.. ಈಗ. ಬಡ ರೈತ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಗ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಮಣಿಪುರದಲ್ಲಿ ರಿಪ್ಪನ್​ಪೇಟೆ ಯೋಧ ಗುಂಡಿಗೆ ಬಲಿ! ಸಾವಿನ ಬಗ್ಗೆ ಮೂಡಿತು ಅನುಮಾನ?

ಈ ಪ್ರದೇಶದಲ್ಲಿ ಒಟ್ಟು 6 ಕುಟುಂಬಗಳು ತೋಟ ಮಾಡಿಕೊಂಡಿದ್ದು, ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿದೆ. ಇವರ ಹೆಸರಿನಲ್ಲಿ ದಾಖಲೆಗಳೂ ಇವೆ. ಸಾಗುವಳಿದಾರರನ್ನು ಒಕ್ಕಲೆಬ್ಬಿಸದಂತೆ ಸುಮಾರು 8 ಕಾಯಿದೆಗಳು ಜೀವಂತವಾಗಿವೆ. ಅದರಲ್ಲಿ 1963ರ ಕಾಯಿದೆ ಪ್ರಕಾರ, ಇಬ್ಬರು ರೈತರನ್ನು ಒಕ್ಕೆಲೆಬ್ಬಿಸುವ ಹಾಗಿಲ್ಲ. ಇನ್ನುಳಿದ ನಾಲ್ಕು ರೈತರು ಅರ್ಜಿ ಹಾಕಿಕೊಂಡು ಕಾಯುತ್ತಿದ್ದಾರೆ, ಇವರ ಜೊತೆಗೆ 80 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದೆ. ಅವರೆಲ್ಲರನ್ನೂ ಬಿಟ್ಟು ಇವರಿಗೆ ಮಾತ್ರ ನೋಟಿಸ್ ನೀಡಿದ್ದು ಎಷ್ಟು ಸರಿ ಎಂದು ರಮೇಶ್ ಹೆಗ್ಡೆ ಪ್ರಶ್ನಿಸಿದ್ದಾರೆ. ಅಲ್ಲದೆ ಈ ಸಂಬಂಧ ಹೋರಾಟಕ್ಕೆ ಅಣಿಯಾಗಿದ್ದಾರೆ.  ಇನ್ನೊಂದೆಡೆ ರೈತ ಹೋರಾಟ ಸಮಿತಿ ಸಂಚಾಲಕ ತೀ.ನಾ. ಶ್ರೀನಿವಾಸ್​, ಅರಣ್ಯ ಇಲಾಖೆಯ ಕ್ರಮದಿಂದ ಆರು ಕುಟುಂಬಗಳು ಬೀದಿಗೆ ಬಿದ್ದಿದೆ. ನಾಳೆ ಸಾಗರ ಎಸಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ ತೀ.ನಾ ಶ್ರೀನಿವಾಸ್, ಪ್ರಭಾವಿಗಳ ಹುನ್ನಾರದಿಂದ ಜಮೀನನ್ನು ನೆಲಸಮಗೊಳಸಿಲಾಗಿದೆ ಎಂದು ದೂರಿದ್ದಾರೆ. 

ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ! ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNewsshivamogga news,shivamogga,shivamogga airport,kannada news