Shikaripura court / ಕಳೆದು ಹೋದ ಮೊಬೈಲ್​ ಬಗ್ಗೆ ಕೇಳಿದ್ದಕ್ಕೆ ಹಲ್ಲೆ! ಆರೋಪಿಗೆ ಎಂತಹ ಶಿಕ್ಷೆ ಗೊತ್ತಾ!

Shikaripura court / assaulted for asking about a lost mobile! Do you know the punishment for the accused?

Shikaripura court / ಕಳೆದು ಹೋದ ಮೊಬೈಲ್​ ಬಗ್ಗೆ ಕೇಳಿದ್ದಕ್ಕೆ ಹಲ್ಲೆ! ಆರೋಪಿಗೆ ಎಂತಹ ಶಿಕ್ಷೆ ಗೊತ್ತಾ!
Shikaripura court / ಕಳೆದು ಹೋದ ಮೊಬೈಲ್​ ಬಗ್ಗೆ ಕೇಳಿದ್ದಕ್ಕೆ ಹಲ್ಲೆ! ಆರೋಪಿಗೆ ಎಂತಹ ಶಿಕ್ಷೆ ಗೊತ್ತಾ!

 Shikaripura court / ಶಿಕಾರಿಪುರದ 1ನೇ ಅಧಿಕ ಸಿಜೆ ಮತ್ತು ಜೆಎಂಎಸ್​ಫಿ ಕೋರ್ಟ್​ ಮೂರು ಪ್ರಕರಣಗಳಲ್ಲಿ ತೀರ್ಪು ನೀಡಿದ್ದು, ಪ್ರಕರಣದ ವಿವರ ಹಾಗೂ ಕೋರ್ಟ್ ನೀಡಿದ ಆದೇಶದ ವಿವರ ಇಲ್ಲಿದೆ 

13-03-2016 ರಂದುನಡೆದಿದ್ದ ಪ್ರಕರಣ

ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳಗಿ ಗ್ರಾಮದದಲ್ಲಿ ಹನುಮಂತಮ್ಮ ಮತ್ತು ರಮೇಶಪ್ಪರವರ ಮಗನ ಮೊಬೈಲ್ ಕಳೆದಿದ್ದು, ಸಿಕ್ಕಿದ್ದರೆ ಕೂಡಿ ಎಂದು ಕೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ, ಗಣೇಶ, ರಾಘವೇಂದ್ರ, ರತ್ನಮ್ಮ ಎಂಬವರು ಹಲ್ಲೆ ಮಾಡಿದ್ರು. ಈ ಸಂಬಂಧ  504, 323, 324, 354, 506, 34 ಐಪಿಸಿಯಡಿಯಲ್ಲಿ ಕೇಸ್ ಆಗಿತ್ತು. ಪ್ರಕರಣದದ ವಿಚಾರಣೆ ನಡೆಸಿ ಶಿರಾಳಕೊಪ್ಪ ಪೊಲೀಸರು ಚಾರ್ಜ್​ಶೀಟ್ ಸಲ್ಲಿಸಿದ್ದರು. ಸದ್ಯ ಪ್ರಕರಣದ ತೀರ್ಪು ಬಂದಿದ್ದು, 1ನೇ ಅಧಿಕ ಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಶಿಕಾರಿಪುರ,  03 ವರ್ಷ ಸಾಧಾ ಕಾರಾವಾಸ ಶಿಕ್ಷೆ ಮತ್ತು 10,000/-ರೂ ದಂಡ, ದಂಡ ಕಟ್ಟಲು ವಿಫಲರಾದಲ್ಲಿ 06  ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶ ನೀಡಿದೆ. 

ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ! ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ

 30-12-2018 ರಂದು ನಡೆದಿದ್ದ ಪ್ರಕರಣ

ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಉಡುಗಣಿ ಗ್ರಾಮದ ಶಿರಾಳಕೊಪ್ಪ – ಶಿಕಾರಿಪುರ ರಾಜ್ಯ ಹೆದ್ದಾರಿಯಲ್ಲಿ ಫಕೀರಪ್ಪ ಎಂಬವರು ಬಸ್​ ಚಲಾಯಿಸುತ್ತಾ,  ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆಸಿದ್ದರು. ಈ ಸಂಬಂಧ  279, 304(ಎ) ಐಪಿಸಿ ಮತ್ತು 187ರ ಐಪಿಸಿಯಡಿಯಲ್ಲಿ ಕೇಸ್ ಆಗಿ ಚಾರ್ಜ್​ ಶೀಟ್ ಸಲ್ಲಿಕೆಯಾಗಿತ್ತು. ಇದರ ವಿಚಾರಣೆ ನಡೆದು ಶಿಕಾರಿಪುರದ  1ನೇ ಅಧಿಕ ಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ತೀರ್ಪು ನೀಡಿದೆ. ಆರೋಪಿಗೆ ಕೋರ್ಟ್​  02 ವರ್ಷ ಸಾಧಾ ಕಾರಾವಾಸ ಶಿಕ್ಷೆ ಮತ್ತು 5,800/- ರೂ ದಂಡ, ದಂಡ ಕಟ್ಟಲು ವಿಫಲರಾದಲ್ಲಿ 03  ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶ ನೀಡಿದೆ. 

ಜಸ್ಟ್​ ಎರಡು ಹನಿ ಒಂದು ದೈತ್ಯ ಆನೆಯನ್ನು ಎರಡೇ ನಿಮಿಷದಲ್ಲಿ ನೆಲಕ್ಕುರುಳಿಸುತ್ತದೆ. ಕಾಡಾನೆ ಸೆರೆಹಿಡಿಯಲು ಬಳಸುವ ಆ ವಂಡರ್ ಡ್ರಗ್ ಯಾವುದು?

 07-11-2014 ರಂದು ನಡೆದಿದ್ದ ಪ್ರಕರಣ

 ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಮಳವಳ್ಳಿ ಗ್ರಾಮದಲ್ಲಿ ಜಮೀನಿನ ವ್ಯಾಜ್ಯದ ವಿಚಾರವಾಗಿ ಚನ್ನಬಸಪ್ಪ ಎಂಬವರ ಮೇಲೆ  ಸುರೇಶಪ್ಪ, ಸಣ್ಣ ಗೌಡಪ್ಪ, ಉಮೇಶಪ್ಪ, ಸಂತೋಷ ಮತ್ತು ಕುಸುಮಮ್ಮ ಹಲ್ಲೆ ಮಾಡಿದ್ದರು. ಈ ಸಂಬಂಧ  143, 147, 148, 448, 504, 323, 326, 506, 149 ಐಪಿಸಿಯಡಿ ಕೇಸ್ ದಾಖಲಾಗಿ, ಕೋರ್ಟ್​ಗೆ ಚಾರ್ಜ್​ಶೀಟ್ ಸಹ ಸಲ್ಲಿಕೆಯಾಗಿತ್ತು. ಇದೀಗ ಪ್ರಕರಣ ಸಂಬಂಧ ಶಿಕಾರಿಪುರದ 1ನೇ ಅಧಿಕ ಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ತೀರ್ಪು ನೀಡಿದೆ. ಆರೋಪಿಗಳಿಗೆ 03 ವರ್ಷ ಸಾಧಾ ಕಾರಾವಾಸ ಶಿಕ್ಷೆ ಮತ್ತು 48,000/- ರೂ ದಂಡ, ದಂಡ ಕಟ್ಟಲು ವಿಫಲರಾದಲ್ಲಿ 03  ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶ ನೀಡಿರುತ್ತಾರೆ.

 MALENADUTODAY.COM  |SHIVAMOGGA| #KANNADANEWSWEB

ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ! ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today, Shikaripura Court/ Shikaripura Court Judgment, Shiralakoppa Police Station, Assault Case, Abuse Case, Verdict to accused in old cases, 1st Additional CJ and JMFC Court, Shikaripura court / ಶಿಕಾರಿಪುರ ಕೋರ್ಟ್ ತೀರ್ಪು, ಶಿರಾಳಕೊಪ್ಪ ಪೊಲೀಸ್ ಸ್ಟೇಷನ್​, ಹಲ್ಲೆ ಪ್ರಕರಣ, ನಿಂದಿಸಿದ ಪ್ರಕರಣ, ಹಳೆಯ ಪ್ರಕರಣಗಳಲ್ಲಿ ಆರೋಪಿಗಳಿಗೆ ತೀರ್ಪು , 1ನೇ ಅಧಿಕ ಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ,