ಇನ್ನೇನಿದ್ರೂ ಲೆಕ್ಕಾಚಾರ | ಎಷ್ಟಾಯ್ತು ವೋಟು ? | ಕಳೆದ ಸಲಕ್ಕೂ ಈ ಸಲಕ್ಕೂ ಎಷ್ಟು ವ್ಯತ್ಯಾಸ? |

Shimoga. How many votes were cast? What is the difference between last time and this time? |Shimoga Election, Shimoga Lok Sabha Voting, Shimoga Voting.

ಇನ್ನೇನಿದ್ರೂ ಲೆಕ್ಕಾಚಾರ | ಎಷ್ಟಾಯ್ತು ವೋಟು ? | ಕಳೆದ ಸಲಕ್ಕೂ ಈ ಸಲಕ್ಕೂ ಎಷ್ಟು ವ್ಯತ್ಯಾಸ? |
Shimoga Election, Shimoga Lok Sabha Voting, Shimoga Voting.

SHIVAMOGGA | MALENADUTODAY NEWS | May 7, 2024  

ಶಿವಮೊಗ್ಗ ಲೋಕಸಭಾ ಚುನಾವಣೆ ಮತದಾನ ಅಂತ್ಯಗೊಂಡಿದೆ. ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೇ ಈ ಭಾರಿ ಹೆಚ್ಚು ಮತದಾನವಾಗಿದೆ. ಶಿವಮೊಗ್ಗ ಹಾಗೂ ಭದ್ರಾವತಿಯನ್ನು ಹೊರತುಪಡಿಸಿ ಉಳಿದೆಲ್ಲೆಡೆಯಲ್ಲಿಯು ಸಾಲಿಡ್‌ ವೋಟಿಂಗ್‌ ಆಗಿದೆ. ಮತದಾರ ಅಗ್ರೆಸಿವ್‌ ಆಗಿ ವೋಟ್‌ ಮಾಡಿರುವುದು ಮತದಾನದ ಹಬ್ಬದ ಯಶಸ್ಸಿಗೆ ಕಾರಣವಾಗಿದೆ. 

 

ಕಳೆದ ಲೋಕಸಭಾ ಚುನಾವಣೆ ಅಂದರೆ 2019 ರ ಎಪ್ರಿಲ್‌ 18 ರಂದು ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ  ಒಟ್ಟಾರೆ 176 ರಷ್ಟು ಮತದಾನವಾಗಿತ್ತು. ಈ ಸಲ ಈ ಶೇಕಡಾವಾರು ಮತದಾನ ಇನ್ನಷ್ಟು ಹೆಚ್ಚಳಗೊಂಡಿದೆ

 

ಎಷ್ಟಾಯ್ತು ಮತದಾನ

ಇನ್ನೂ ಇವತ್ತಿನ ಮತದಾನದ ಪರ್ಸೆಂಟೇಜ್‌ ಲೆಕ್ಕಾಚಾರ ಹೀಗಿದೆ. ಇದೀಗ ಬಂದ ಮಾಹಿತಿ ಪ್ರಕಾರ, ಬೆಳಗ್ಗೆ ಒಂಬತ್ತುವರೆಗೆ  11 ಪರ್ಸೆಂಟ್‌ ಮತದಾನವಾಗಿತ್ತು. ಬಳಿಕ 11 ಗಂಟೆಗೆ  27.21 ರಷ್ಟು ಮತದಾನವಾಗಿತ್ತು. ಆನಂತರ ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ ನ 45.19% ಪರ್ಸೆಂಟ್‌ ವೋಟ್‌ ಆಗಿತ್ತು. ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ಶಿವಮೊಗ್ಗದಲ್ಲಿ ಒಟ್ಟಾರೆ 58.04%  ಮತದಾನ ಆಗಿತ್ತು. ಸಂಜೆ ಐದು ಗಂಟೆಗೆ ಶಿವಮೊಗ್ಗ ಕ್ಷೇತ್ರದಲ್ಲಿ ಬರೋಬ್ಬರಿ   72.36%  ರಷ್ಟು  ಮತದಾನವಾಗಿದೆ. ಅಂತಿಮವಾಗಿ ಶಿವಮೊಗ್ಗದಲ್ಲಿ ಇವತ್ತು  ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 78.24 % ರಷ್ಟು ಮತದಾನವಾಗಿದೆ..ಅಂತಿಮ ಹಂತದ ಅಂಕಿ ಅಂಶಗಳ ವರದಿಯಲ್ಲಿ ಈ ಶೇಕಡವಾರು ಮತದಾನದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇದೆ. ಉಳಿದಂತೆ ವಿಸ್ತೃತ ಮಾಹಿತಿ ಮಲೆನಾಡು ಟುಡೆ ಶಿ‍ಘ್ರದಲ್ಲಿಯೇ ಒದಗಿಸಲಿದೆ. 

 

Shimoga Election, Shimoga Lok Sabha Voting, Shimoga Voting.