ಗ್ಯಾಸ್ ಸಿಲಿಂಡರ್ ಎಸೆದು ಹೆದರಿಸ್ತಿದ್ದ ಆಸಾಮಿ ವಿರುದ್ಧ ಹೆಚ್ಚುವರಿ ಆಕ್ಷನ್! ಥ್ಯಾಂಕ್ಯು ಭದ್ರಾವತಿ ಪೊಲೀಸ್!
Additional action against man who threatened to throw gas cylinders Thank you Bhadravathi Police!
Shivamogga Feb 12, 2024 | ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಭದ್ರಾವತಿಯ ಹೊಸಮನೆ ಕಾಲೋನಿಯ ಎನ್ಎಂಸಿ ಮೂರನೇ ತಿರುವಿನಲ್ಲಿ ಕುಡುಕನೊಬ್ಬ ತುಂಬಿದ ಸಿಲಿಂಡರ್ನ್ನ ಎತ್ತಿಹಾಕಿ ಸ್ಫೋಟಿಸಲು ಯತ್ನಿಸಿದ ವಿಚಾರದ ಬಗ್ಗೆ ಮಲೆನಾಡು ಟುಡೆ ವರದಿ ಮಾಡಿತ್ತು. ವರದಿಯಲ್ಲಿ ಸ್ಥಳೀಯರು ಮಾಡಿದ್ದ ಆರೋಪಗಳನ್ನು ವಿವರಿಸಲಾಗಿತ್ತು. ಭದ್ರಾವತಿ ಹೊಸಮನೆ ಕಾಲೋನಿಯ ಜನರ ಒತ್ತಾಯದ ಪ್ರತಿಯಾಗಿ ಸ್ಥಳೀಯರು ಪೊಲೀಸರಿಗೆ ನೀಡಿದ ಮನವಿ ಕಾಪಿ ಹಾಗೂ ವಿಡಿಯೋವನ್ನು ಎಸ್.ಪಿ.ಮಿಥುನ್ ಕುಮಾರ್ ರವರ ಗಮನಕ್ಕೆ ತರಲಾಗಿತ್ತು.
ಸದ್ಯ ಈ ವಿಚಾರವಾಗಿ ಭದ್ರಾವತಿ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಪ್ರಕರಣದ ಸಂಬಂಧ ಪೊಲೀಸರು ಆರೋಪಿಯನ್ನು ಬಿಟ್ಟು ಕಳುಹಿಸಿದ್ದರು ಎಂದು ಸ್ಥಳೀಯರು ದೂರಿದ್ದರು. ಆದರೆ ಘಟನೆ ನಡೆದ ದಿನವೇ ಆರೋಪಿಯನ್ನ ಮಾದಕವಸ್ತು ಸೇವನೆಯ ಸಂಬಂಧ ಪರೀಕ್ಷೆಗೆ ಒಳಪಡಿಸಿ ಆತನ ವಿರುದ್ಧ ಪಿಟ್ಟಿ ಕೇಸ್ ದಾಖಲಿಸಿದ್ದರು ಹೊಸಮನೆ ಪೊಲೀಸರು. ಈ ಸಂಬಂಧ ಪೊಲೀಸ್ ಮಾಧ್ಯಮ ಮಾಹಿತಿ ಗ್ರೂಪ್ನಲ್ಲಿ ಸಂದೇಶವನ್ನು ಸಹ ರವಾನೆ ಮಾಡಲಾಗಿದೆ. ಪ್ರಕರಣ ಸಂಬಂಧ ಯುವಕನ್ನ ಠಾಣೆಗೆ ಕರೆದುಕೊಂಡು ಬಂದು. ಅವನಿಗೆ ಸೂಕ್ತ ಎಚ್ಚರಿಕೆ ನೀಡಿ, ತಿಳುವಳಿಕೆ, ಬುದ್ದಿವಾದ ಹೇಳಿ, ಬಂದೋಬಸ್ತ್ ಮಾಡಿದ್ದು, ಕಲಂ 92ಒ & ಆರ್ ಕೆಪಿ ಆ್ಯಕ್ಟ್ ಅಡಿಯಲ್ಲಿ ಲಘು ಪ್ರಕರಣ ದಾಖಲಿಸಿ. ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿರುತ್ತದೆ ಎಂದು ತಿಳಿಸಿದ್ದಾರೆ. ಭದ್ರಾವತಿ ಜನರ ಮಾಹಿತಿಗಾಗಿ ಪೊಲೀಸ್ ಇಲಾಖೆ ತಿಳಿಸಿದ ವಿವರವನ್ನು ಸಹ ಇಲ್ಲಿ ನೀಡಲಾಗಿದೆ.
ಇನ್ನೂ ಇದೇ ವಿಚಾರದಲ್ಲಿ ಪೊಲೀಸರು ಸಿಆರ್ಪಿಸಿ ಆಕ್ಟರ್ 107 ಅಡಿಯಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ. ಸಾರ್ವಜನಿಕರಿಗೆ ನಿತ್ಯ ಕಿರುಕುಳ ನೀಡುತ್ತಿದ್ದರೇ ಆತ ಅಪಾಯಕಾರಿಯೇ. ಆತನ ವಿರುದ್ಧ ಕ್ರಮ ಅನಿವಾರ್ಯ. ಹೊಸಮನೆ ಎನ್ಎಂಸಿಯಲ್ಲಿಯು ಇದೇ ರೀತಿಯಾಗಿತ್ತು. ವೈರಲ್ ಆದ ವಿಡಿಯೋದ ಮೂಲ ಹುಡುಕಿಹೋದ ಸಂದರ್ಭದಲ್ಲಿ, ಸ್ಥಳೀಯರು ದೂರು ಹೇಳಿಕೊಂಡಿದ್ದರು. ಮಲೆನಾಡು ಟುಡೆ ಜನರ ನೋವು ಹಾಗೂ ಧ್ವನಿಯನ್ನು ಎಸ್ಪಿ ಮಿಥುನ್ ಕುಮಾರ್ರವರಿಗೆ ತಲುಪಿಸಿ ಹಾಗೂ ವರದಿಯನ್ನ ಬಿತ್ತರಿಸಿತ್ತು.
ಇದರ ಬೆನ್ನಲ್ಲೆ ಭದ್ರಾವತಿ ಪೊಲೀಸರು ಈ ಮೊದಲೇ ಕೈಗೊಂಡ ಕ್ರಮ ಹಾಗೂ ಸದ್ಯ ಕೈಗೊಳ್ಳುತ್ತಿರುವ ಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರ ಬಗ್ಗೆಯು ಮಲೆನಾಡು ಟುಡೆ ವಿವರವಾಗಿ ವರದಿ ಮಾಡಿದೆ. ಜೊತೆಯಲ್ಲಿ ಜನರ ಶಾಂತಿ ನೆಮ್ಮದಿಗಾಗಿ ಪೂರಕವಾಗಿ ಕೈಗೊಂಡ ಕ್ರಮಕ್ಕಾಗಿ ಭದ್ರಾವತಿ ಪೊಲೀಸರಿಗೆ ಧನ್ಯವಾದವನ್ನು ತಿಳಿಸುತ್ತೇವೆ.