ಮಳೆಯಲ್ಲಿ ಕೊಚ್ಚಿ ಹೋದ ಸ್ಮಾರ್ಟ್‌ ಸಿಟಿ | ಉಕ್ಕಿದ ರಾಜಕಾಲುವೆಯಲ್ಲಿ ಪಾಲಿಕೆ ಕಣ್ಮರೆ | ಪತ್ರಿಕೆಗಳ ಮಂಗಳಾರತಿ

Shivamogga Smart City, Mahanagara Palike and Rain Problem

ಮಳೆಯಲ್ಲಿ ಕೊಚ್ಚಿ ಹೋದ ಸ್ಮಾರ್ಟ್‌ ಸಿಟಿ  | ಉಕ್ಕಿದ ರಾಜಕಾಲುವೆಯಲ್ಲಿ ಪಾಲಿಕೆ ಕಣ್ಮರೆ  | ಪತ್ರಿಕೆಗಳ ಮಂಗಳಾರತಿ
Shivamogga Smart City, Mahanagara Palike , Rain Problem

SHIVAMOGGA | MALENADUTODAY NEWS | May 21, 2024  ಮಲೆನಾಡು ಟುಡೆ

ಶಿವಮೊಗ್ಗ ನಗರದಲ್ಲಿ ಮಳೆ ಬೇಸಿಗೆ ತಣಿಸಿದಷ್ಟೆ ವೇಗವಾಗಿ ಸ್ಮಾರ್ಟ್‌ ಸಿಟಿಯ ಹಣೆಬರಹವನ್ನು ಬಟಾಬಯಲು ಮಾಡಿದೆ. ಒಂದು ಗಂಟೆಯ ಮಳೆಗೂ ಹರಿದು ಹೋಗದಂತಹ ವ್ಯವಸ್ಥೆ ಶಿವಮೊಗ್ಗ ಸ್ಮಾರ್ಟ್‌ ಸಿಟಿಯಾಗಿದೆ. ಪಾಲಿಕೆಯ ಲಿಮಿಟ್ಸ್‌ನಲ್ಲಿ ನಿನ್ನೆ ಒಂದೇ ದಿನ ಜನರೆಷ್ಟು ಸಂಕಟ ಅನುಭವಿಸಿದ್ದಾರೆ ಎಂದರೆ ಅದು ದೇವರಿಗೆ ಪ್ರೀತಿ.

ನಿನ್ನೆ ಒಂದೆ ದಿನ ಶಾಸಕ ಚನ್ನಬಸಪ್ಪರವರಿಗೆ ನೂರಾರು ಕಾಲ್‌ಗಳು ಹೋಗಿವೆ. ಎಲ್ಲಾ ಕಡೆಗಳಲ್ಲಿ ಅವರೇ ಹೋಗಿ ಪರಿಸ್ಥಿತಿ  ಅವಲೋಕಿಸುವುದಾದರೆ ಪಾಲಿಕೆಯ ಕೆಲಸವೇನು ಎಂದು ಸಾರ್ವಜನಿಕರೇ ಆಕ್ರೋಶ ಹೊರಹಾಕಿದ್ದಾರೆ. ಬೇಸಿಗೆ ಅಂತ್ಯ ಬರುವಷ್ಟರಲ್ಲಿ ಎಲ್ಲಾ ಚರಂಡಿಗಳನ್ನು ಕ್ಲೀನ್‌ ಮಾಡಿಸಬೇಕಿದ್ದ ಪಾಲಿಕೆ ಈ ಸಲ ಅಂತಹದ್ದೊಂದು ಕೆಲಸವಿದೆ ಎಂದು ಸಹ ಯೋಚಿಸಲಿಲ್ಲ. ಬಿಡುಗಡೆಯಾಗುವ ಹಣಕ್ಕೆ ಲೆಕ್ಕ ಹುಡುಕುವ ಪಾಲಿಕೆ ಹಾಗೂ ಸ್ಮಾರ್ಟ್‌ ಸಿಟಿಯ ಜಾತಕವನ್ನು ಇವತ್ತು ಶಿವಮೊಗ್ಗದ ಎಲ್ಲಾ ಪತ್ರಿಕೆಗಳು ಬಿಚ್ಚಿಟ್ಟಿವೆ. 

ಇನ್ನೂ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂಬಂತೆ ನಿನ್ನೆ ದಿನ ಹೊಸಮನೆ ಏರಿಯಾದಲ್ಲಿ ಥೇಟು ಬೆಂಗಳೂರು ಸ್ಟೈಲ್‌ನಲ್ಲಿ ಮನೆಗಳಿಗೆ ನೀರು ನುಗ್ಗಿತ್ತು. ರಾಜ ಕಾಲುವೆ ಸರಿಮಾಡಿಸುತ್ತಿವಿ ಅಂತ ಸ್ಮಾರ್ಟ್ ಸಿಟಿ ಮಾಡಿದಾಗಿಂದನೂ ಹೇಳಿಕೊಂಡು ಬರಲಾಗುತ್ತಿದೆ. ಆದರೆ ರಾಜಕಾಲುವೆ ಸೇರುವ ಕಸದ ರಾಶಿಯನ್ನು ತಡೆದಿಲ್ಲ. ಬಹುತೇಕ ಕಸದಿಂದಲೇ ಭರ್ತಿಯಾಗಿದ್ದ ರಾಜಕಾಲುವೆಯಲ್ಲಿ ನೀರು ಮುಂದಕ್ಕೆ ಹರಿಯಲು ಸಾಧ್ಯವೇ ಇಲ್ಲ. ಅಲ್ಲಿಗೆ ಹರಿದ ನೀರು ಮನೆಗಳಿಗೆ ನುಗ್ಗಿದೆ.  

ಇನ್ನೂ ಕೊಚ್ಚೆ ನೀರು ಮನೆಗೆ ನುಗ್ಗಿದರೇ ಪರಿಸ್ಥಿತಿ ಏನಾಗಬೇಡ. ನಿನ್ನೆ ಒಂದೆದಿನದ ಮಳೆಗೆ ಅಂಡರ್‌ ಗ್ರೌಂಡ್‌ ಸೇರಿದಂತೆ ಮನೆಯ ಸಂಪು, ಬಾವಿಗೂ ನೀರುನುಗ್ಗಿದೆ. ರಸ್ತೆಗಳಲ್ಲಿಯು ಕೊಳೆಚೆ ನೀರು ನಿಂತು ಅದರಲ್ಲಿಯೇ ಓಡಾಡಿದ ಜನರಿಗೆ ತುರಿಕೆ ಅಲರ್ಜಿ ಆರಂಭವಾಗಿದೆ. ಈ ಸ್ಥಿತಿ ಸ್ಮಾರ್ಟ್‌ ಸಿಟಿ ಕೆಲಸ ತೃಪ್ತಿ ತಂದಿದೆ ಎಂದವರಿಗೆ ಕೇಳುತ್ತಿಲ್ಲ. ಕನಿಷ್ಟ ಮಳೆಗಾಲಕ್ಕೂ ಮೊದಲು ನೀರು ಹರಿಯುವ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿ ಇಡಬೇಕು ಎಂಬುದು ಪಾಲಿಕೆಗೆ ಕಾಣುತ್ತಿಲ್ಲ. ಈ ಲೋಪದೋಷಗಳಲ್ಲಿ ಪಾಲುದಾರರು ಎಷ್ಟು ಮಂದಿ ಇದ್ದಾರೋ ಯಾರ್ಯಾರೋ ಇದ್ದಾರೋ ಭಗವಂತ ಬಲ್ಲ ಎನ್ನುತ್ತಿದ್ದಾರೆ ಸ್ಥಳಿಯುರು.