20 ಸಾವಿರ ಚೆಕ್​ ಕೊಟ್ಟು ಬ್ಯಾಂಕ್​ನಲ್ಲಿ ದೇವರು ಮೈಮೇಲೆ ಬಂದಂತೆ ಆಡಿದ ಮಹಿಳೆ ! ಮುಂದೇನಾಯ್ತು!

Woman demands bank staff to give Rs 20,000 cheque to cash even if she doesn't have money in her accountಅಕೌಂಟ್​ನಲ್ಲಿ ಹಣವಿಲ್ಲದಿದ್ದರೂ 20 ಸಾವಿರ ಚೆಕ್ ನೀಡಿ ಕ್ಯಾಶ್ ನೀಡುವಂತೆ ಬ್ಯಾಂಕ್ ಸಿಬ್ಬಂದಿಯನ್ನು ಒತ್ತಾಯಿಸಿದ ಮಹಿಳೆ

20 ಸಾವಿರ ಚೆಕ್​ ಕೊಟ್ಟು ಬ್ಯಾಂಕ್​ನಲ್ಲಿ ದೇವರು ಮೈಮೇಲೆ ಬಂದಂತೆ ಆಡಿದ ಮಹಿಳೆ ! ಮುಂದೇನಾಯ್ತು!

KARNATAKA NEWS/ ONLINE / Malenadu today/ Aug 29, 2023 SHIVAMOGGA NEWS 

ಒಮ್ಮೊಮ್ಮೆ ಎಂತಹ ಘಟನೆಗಳು ನಡೆಯುತ್ತದೆ ಎಂದರೆ, ಅದನ್ನು ನಂಬುವುದು ಹೇಗೋ ಭಗವಂತ ಎಂದೆನಿಸಿ ಬಿಡುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ, ಆಯನೂರಿನ ಬ್ಯಾಂಕ್​ವೊಂದರಲ್ಲಿ ಮಹಿಳೆಯೊಬ್ಬರು, 20 ಸಾವಿರ ಚೆಕ್​ ಕೊಟ್ಟು ಕ್ಯಾಶ್ ಕೊಡುವಂತೆ ಸತಾಯಿಸಿದ ಘಟನೆಯೊಂದು ನಡೆದಿದೆ. ಮೈಮೇಲೆ ದೇವರು ಬಂದಂತೆ ಆಡಿದ  ಮಹಿಳೆಯು ದೇವರು ಕೇಳ್ತಿದ್ದಾರೆ ದುಡ್ಡು ಕೊಡಿ ಎಂದು ರಚ್ಚೆ ಹಿಡಿದ ಸನ್ನಿವೇಶಕ್ಕೂ ಅಲ್ಲಿದ್ದವರು ಸಾಕ್ಷಿಯಾಗಿದ್ದಾರೆ. ಈ ಮಧ್ಯೆ ಬ್ಯಾಂಕ್ ಸಿಬ್ಬಂದಿ ಪೊಲೀಸರನ್ನ ಕರೆಸಿದರೆ, ಪೊಲೀಸರಿಗೂ ಮಹಿಳೆಯು 20 ಸಾವಿರ ಹಣ ನೀಡಲೇಬೇಕು ಎಂದು ಪೀಡಿಸಿದ್ದಾಳೆ. ಆದರೆ ಆಕೆಯ ಅಕೌಂಟ್​ನಲ್ಲಿ ಕೇವಲ 2 ಸಾವಿರ ರೂಪಾಯಿ ಇರುವುದಾಗಿ ಬ್ಯಾಂಕ್ ಸಿಬ್ಬಂದಿ ಹೇಳಿದ್ಧಾರೆ. 

ಏನಿದು ಘಟನೆ 

ನಿನ್ನೆ ಆಯನೂರಿನ ಬ್ಯಾಂಕ್​ವೊಂದಕ್ಕೆ ಬಂದಿದ್ದ ಮಹಿಳೆಯೊಬ್ಬರು,  ತನಗೆ 20 ಸಾವಿರ ಹಣ ನೀಡುವಂತೆ ಚೆಕ್ ನೀಡಿದ್ದರು. ಬ್ಯಾಂಕ್ ಸಿಬ್ಬಂದಿ ಚೆಕ್ ಪರಿಶೀಲನೆ ಮಾಡಿದಾಗ, ಅವರ ಅಕೌಂಟ್​ನಲ್ಲಿ ಕೇವಲ 2 ಸಾವಿರ ರೂಪಾಯಿ ಇದೆ ಎಂಬುದು ಗೊತ್ತಾಗಿದೆ. ಹೀಗಾಗಿ, ಹಣ ನೀಡಲು ಬರುವುದಿಲ್ಲವೆಂದು ಉತ್ತರಿಸಿದ್ದರು. ಆದರೆ ಇದನ್ನ ಒಪ್ಪದ ಮಹಿಳೆ ಹಣ ಕೊಡಲೇ ಬೇಕು ಎಂದು ಮೈಮೇಲೆ ದೇವರು ಬಂದಂತೆ ವರ್ತಿಸಿ, ನಾನು ದೇವರು ಕೇಳಿದಷ್ಟು ಹಣ ನೀಡಿ ಎಂದು ಹಠ ಹಿಡಿದಿದ್ದರು.


ಸ್ಥಳಕ್ಕೆ ಬಂದ ಪೊಲೀಸರು

ಇನ್ನೂ ವಿಷಯ ದೊಡ್ಡದಾಗುತ್ತಿದ್ದಂತೆ, ಬ್ಯಾಂಕ್​ನವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಮಹಿಳೆಯನ್ನು ಸಂತೈಸುವ ಕೆಲಸ ಮಾಡಿದ್ಧಾರೆ. ಅಲ್ಲದೆ ಮಾನವೀಯತೆ ದೃಷ್ಟಿಯಲ್ಲಿ ಐನೂರು ರೂಪಾಯಿ ಕೊಟ್ಟಿದ್ಧಾರೆ, ಆದರೆ ಮಹಿಳೆಯು ಅದನ್ನ ಬಿಸಾಡಿ, ತನಗೆ 20 ಸಾವಿರ ಬೇಕು ಎಂದಿದ್ಧಾಳೆ. ಕೊನೆಗೆ ಮಹಿಳೆಯ ತಾಯಿಯನ್ನು ಸ್ಥಳಕ್ಕೆ ಕರೆಸಿದ ಪೊಲೀಸರು, ಅವರೊಂದಿಗೆ ಮಹಿಳೆಯನ್ನು ಕಳುಹಿಸಿಕೊಟ್ಟಿದ್ದಾರೆ. ಮಹಿಳೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದು ಆನಂತರ ಪೊಲೀಸರಿಗೆ  ಹಾಗೂ ಬ್ಯಾಂಕ್​ ನವರಿಗೆ ತಿಳಿದುಬಂದಿತು.  


ಇನ್ನಷ್ಟು ಸುದ್ದಿಗಳು