ಮಲೆನಾಡು ಟುಡೆ ವರದಿಯ ಸಾರ್ಥಕತೆ | ಜೀವ ಉಳಿಸಿದ 112 ಸಿಬ್ಬಂದಿಯನ್ನ ಸನ್ಮಾನಿಸಿದ ಎಸ್‌ ಪಿ ಮಿಥುನ್‌ ಕುಮಾರ್‌

The merits of the Malenadu Today report SP Mithun Kumar honored 112 personnel who saved lives

ಮಲೆನಾಡು ಟುಡೆ ವರದಿಯ ಸಾರ್ಥಕತೆ | ಜೀವ ಉಳಿಸಿದ 112 ಸಿಬ್ಬಂದಿಯನ್ನ ಸನ್ಮಾನಿಸಿದ ಎಸ್‌ ಪಿ ಮಿಥುನ್‌ ಕುಮಾರ್‌
Malenadu Today report , SP Mithun Kumar

SHIVAMOGGA | MALENADUTODAY NEWS | May 21, 2024  ಮಲೆನಾಡು ಟುಡೆ

ಶಿವಮೊಗ್ಗದ ಅಬ್ಬಲಗೆರೆ ಬಳಿ ನೀರಲ್ಲಿ ಕೊಚ್ಚಿಹೋಗುತ್ತಿದ್ದ ಯುವಕನೊಬ್ಬನನ್ನ 112 ಪೊಲೀಸ್‌ ಸಿಬ್ಬಂದಿ ರಕ್ಷಣೆ ಮಾಡಿದ್ದರ ಬಗ್ಗೆ ಮೊದಲು ಮಲೆನಾಡು ಟುಡೆ ವರದಿ ಮಾಡಿತ್ತು. ಅಲ್ಲದೆ ಜೀವ ಉಳಿಸಿದ ಸಿಬ್ಬಂದಿಯನ್ನ ‍‍‍ ಶ್ಲಾಘಿಸಿತ್ತು. ಇದೀಗ ಮಲೆನಾಡು ಟುಡೆ ವರದಿ ಬೆನ್ನಲ್ಲೆ ಎಸ್‌ಪಿ ಮಿಥುನ್‌ ಕುಮಾರ್‌ ನಡೆದ ಘಟನೆ ಬಗ್ಗೆ ಮಾಹಿತಿ ಪಡೆದು ಇಬ್ಬರು ಸಿಬ್ಬಂದಿಯನ್ನ ಸನ್ಮಾನಿಸಿದ್ದಾರೆ. ಈ ಬಗ್ಗೆ ಮಲೆನಾಡು ಟುಡೆ ಸನ್ಮಾನಿತರನ್ನ ಸಂಪರ್ಕಿಸಿದಾಗ ಅವರು ನಮ್ಮ ಕರ್ತವ್ಯ ನಾವು ಮಾಡಿದ್ದೆವು. ಆ ಸಂದರ್ಭದಲ್ಲಿ ಏನನ್ನೂ ಯೋಚಿಸಿರಲಿಲ್ಲ. ಎಸ್‌ಪಿ ಮಿಥುನ್‌ ಕುಮಾರ್‌ರವರು ನಮ್ಮನ್ನ ಸನ್ಮಾನಿಸಿದ್ದಾರೆ, ಇದು ಸಂತಸ ಮೂಡಿಸಿದೆ ಎಂದಿದ್ದಾರೆ. 

ಇನ್ನೂ ಈ ಬಗ್ಗೆ ಪೊಲೀಸ್‌ ಇಲಾಖೆ ಈ ಬಗ್ಗೆ ಪ್ರಕಟಣೆ ನೀಡಿದ್ದು ಅದರ ವಿವರ ಹೀಗಿದೆ.  ಅಬ್ಬಲಗೆರೆಯಿಂದ ಮುಂದೆ ಕೊಮ್ಮನಾಳು ಸಮೀಪ ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬನು  ರಸ್ತೆಯ ಮೇಲೆ ಹರಿಯುತ್ತಿದ್ದ  ಮಳೆಯ ನೀರಿನಿಂದ ಬೈಕ್ ನಲ್ಲಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ಬಗ್ಗೆ ERSS - 112 ತುರ್ತು ಸಹಾಯವಾಣಿಗೆ ಕರೆ ಬಂದ ಮೇರೆಗೆ, ERSS – 112 ವಾಹನದ ಅಧಿಕಾರಿಗಳಾದ ರಂಗನಾಥ್, ಹೆಚ್. ಸಿ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಪ್ರಸನ್ನ ಕುಮಾರ್, ಎ.ಹೆಚ್.ಸಿ ಡಿಎಆರ್ ಶಿವಮೊಗ್ಗ ರವರು ಕೂಡಲೇ ಸ್ಥಳಕ್ಕೆ ಹೋಗಿ ವ್ಯಕ್ತಿಯನ್ನು ರಕ್ಷಿಸಿ ಉತ್ತಮ ಕಾರ್ಯ ನಿರ್ವಹಿಸಿರುತ್ತಾರೆ.   

21-05-2024 ರಂದು ಮಿಥುನ್ ಕುಮಾರ್ ಜಿ. ಕೆ, ಐಪಿಎಸ್,  ಮಾನ್ಯ  ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ರಂಗನಾಥ್ ಹೆಚ್. ಸಿ ಮತ್ತು ಪ್ರಸನ್ನ ಕುಮಾರ್ ಎ.ಹೆಚ್.ಸಿ  ರವರ ಉತ್ತಮವಾದ ಕಾರ್ಯಕ್ಕೆ ಪ್ರಶಂಸನಾ ಪತ್ರವನ್ನು  ನೀಡಿ ಗೌರವಿಸಿ ಅಭಿನಂದಿಸಿರುತ್ತಾರೆ.