ಶಿವಮೊಗ್ಗದಲ್ಲಿಯು ಜೋರಾಯ್ತು RCB ಕ್ರೇಜ್‌ | ವಿರಾಟ್‌ ಅಭಿಮಾನಿ ವಿದ್ಯಾರ್ಥಿನಿ ನೀಡಿದ್ರು ಟ್ಯಾಟು ಗಿಫ್ಟ್

RCB craze gets louder in Shimoga | Virat fan student gives tattoo gift to team

ಶಿವಮೊಗ್ಗದಲ್ಲಿಯು ಜೋರಾಯ್ತು RCB ಕ್ರೇಜ್‌ | ವಿರಾಟ್‌ ಅಭಿಮಾನಿ ವಿದ್ಯಾರ್ಥಿನಿ ನೀಡಿದ್ರು ಟ್ಯಾಟು ಗಿಫ್ಟ್
RCB Shimoga , Virat kohli

SHIVAMOGGA | MALENADUTODAY NEWS | May 22, 2024  ಮಲೆನಾಡು ಟುಡೆ

ಆರ್‌ಸಿಬಿ ಫೀಲಿಂಗ್‌ ಶಿವಮೊಗ್ಗದಲ್ಲಿಯು ಜೋರಾಗಿದೆ. ಕಪ್‌ ಗೆಲ್ಲುತ್ತೀವೋ ಬಿಡುತ್ತೇವೋ ಹಠ ತೊಟ್ಟಿದ್ದನ್ನ ಸಾಧಿಸ್ತೀವಿ, ಕಪ್‌ ನಮ್ದೇ ಅನ್ನೋ ಫೀಲ್‌ ಕೊಡುತ್ತೀವಿ ಎನ್ನುವ ಫ್ಯಾನ್ಸ್‌ ಇವತ್ತಿನ ಮ್ಯಾಚ್‌ಗೆ ಸಿದ್ದರಾಗುತ್ತಿದ್ದಾರೆ. ಶಿವಮೊಗ್ಗದಲ್ಲಿ ಇದರ ಜೋಶ್‌ ಹೈ ಆಗಿದೆ. 

ವಿಶೇಷ ಅಂದರೆ ಶಿವಮೊಗ್ಗದಲ್ಲಿ ವಿರಾಟ್‌ ಕೊಹ್ಲಿಯ ಅಭಿಮಾನಿ ವಿದ್ಯಾರ್ಥಿನಿಯೊಬ್ಬರು ತಮ್ಮ ಕೈ ಮೇಲೆ ಅಪ್ಪುರವರ ಹಾಗೂ ವಿರಾಟ್‌ ಕೊಹ್ಲಿ ಜೆರ್ಸಿ ನಂಬರ್‌ನ್ನ ಟ್ಯಾಟೋ ಹಾಕಿಸಿಕೊಂಡಿದ್ದಾರೆ. ಸಿಂಚನಾ ಎಂಬ ವಿದ್ಯಾರ್ಥಿನಿ ಈ ಮೂಲಕ ತಮ್ಮ ಆರ್‌ಸಿಬಿ ಅಭಿಮಾನ ಪ್ರದರ್ಶಿಸಿದ್ದಾರೆ. 

ಆರ್‌ಸಿಬಿ ಕೊಹ್ಲಿಯ ವಿರಾಟ ಸ್ವರೂಪದ ಬ್ಯಾಟಿಂಗ್‌ ಸಿಂಚನಾರಿಗೆ ಇಷ್ಟವಂತೆ ಅದರಂತೆ ಬೌಲಿಂಗ್‌ನಲ್ಲಿ ಸಿರಾಜ್‌ ಫ್ಯಾನ್‌ ತಾವು ಎನ್ನುತ್ತಾರೆ. ಇನ್ನೂ ಸಿಂಚನಾರ ಜೊತೆಗೆ ಕಾಲೇಜಿನ ವಿದ್ಯಾರ್ಥಿನಿಯರು ಆರ್‌ಸಿಬಿಗೆ ಗುಡ್‌ ಲಕ್‌ ಹೇಳಿದ್ದಾರೆ.