ಸತ್ತಿಲ್ಲ ಬದುಕಿದ್ದೇನೆ ಎಂದು ವಿಡಿಯೋ ಹರಿಬಿಟ್ಟ ಪೂನಂ ಪಾಂಡೆ! ನಿನ್ನೆಯ ಸಾವಿನ ಸುದ್ದಿಗೆ ಕಾರಣವೇನು ಗೊತ್ತಾ?

Shivamogga | Feb 3, 2024 |  ಸೋಶಿಯಲ್ ಮೀಡಿಯಾ ಸ್ಟಾರ್ ಪೂನಮ್ ಪಾಂಡೆ ಸತ್ತಿಲ್ಲ. ಬದುಕಿದ್ದಾಳೆ. ಈ ಬಗ್ಗೆ ಆಕೆಯೆ ತನ್ನ ಇನ್​ಸ್ಟಾಗ್ರಾಮ್​ ಅಕೌಂಟ್​ನಲ್ಲಿ ವಿಡಿಯೋವೊಂದು ಹರಿಬಿಟ್ಟಿದ್ದಾಳೆ. ಇದೀಗ ಆಕೆಯ ಹೊಸ ವಿಡಿಯೋ ವೈರಲ್ ಆಗಿದ್ದು, ನಿನ್ನೆ ಸಾವಿನ ಸುದ್ದಿಯನ್ನು ಹರಿಬಿಟ್ಟಿದ್ದಕ್ಕೆ ಆಕೆ ಕ್ಷಮೆಯನ್ನ ಸಹ ಕೇಳಿದ್ದಾಳೆ. ಅಲ್ಲದೆ ಇದು ತನ್ನದೇ ಕೃತ್ಯ, ಉದ್ದೇಶ ಪೂರ್ವಕವಾಗಿ ಸ್ಟೇಟ್ಮೆಂಟ್ ಹಾಕಿದ್ದು ಎಂದಿದ್ದಾಳೆ. 

ಸರ್ವಿಕಲ್ ಕ್ಯಾನ್ಸರ್​ನಿಂದ ಆಕೆಯನ್ನು ಕಳೆದುಕೊಂಡಿದ್ದೇವೆ ಎಂಬ ಹೇಳಿಕೆ ಇದ್ದ ಪೋಸ್ಟ್ ವೊಂದು ನಿನ್ನೆ ಇನ್​ಸ್ಟಾಗ್ರಾಮ್​ನಲ್ಲಿ ಅಪ್ಲೋಡ್ ಆಗಿತ್ತು. ಈ ಸಂಬಂಧ ರಾಷ್ಟ್ರೀಯ ಮಾಧ್ಯಮಗಳು ಆಕೆಯ ಮ್ಯಾನೇಜರ್​ ಬಳಿ ಸ್ಪಷ್ಟನೆ ಕೇಳಿ ಸುದ್ದಿ ಮಾಡಿದ್ದವು. ಇವತ್ತು ಬೆಳಗ್ಗೆ ಪೂನಂ ತನ್ನ ವಿಡಿಯೋವೊಂದನ್ನ ಇನ್​ಸ್ಟಾಗ್ರಾಂ ಅಕೌಂಟ್​ನಲ್ಲಿ ಪೋಸ್ಟ್ ಮಾಡಿದ್ದಾಳೆ. ಅಲ್ಲದೆ ವಿಡಿಯೋದಲ್ಲಿ ನಾನು ಪೂನಮ್​, ಮೊದಲಿಗೆ ನಿಮ್ಮೆಲ್ಲರ ಕ್ಷಮೆ ಕೇಳುತ್ತೇನೆ. ಯಾರಿಗಾದರೂ ನೋವು ಉಂಟುಮಾಡಿದ್ದರೂ ಅದಕ್ಕೆ ದಯಮಾಡಿ ಕ್ಷಮಿಸಿ, ನಾನೇ ಸ್ವತಃ ನನ್ನ ಸಾವಿನ ಸುದ್ದಿಯನ್ನು ಹರಿಬಿಟ್ಟಿದ್ದೆ. ಇದಕ್ಕೆ ಕಾರಣವೂ ಇತ್ತು ಎಂದಿದ್ದಾಳೆ. 

ಸರ್ವಿಕಲ್ ಕ್ಯಾನ್ಸರ್​ ಬಗ್ಗೆ ಯಾರೊಬ್ಬರು ಯೋಚಿಸಿರಲಿಲ್ಲ. ಆದರೆ ಪೂನಂ ಪಾಂಡೆ ಅಂತಹ ಒಂದು ವ್ಯಾದಿಯಿಂದ ಸಾವನ್ನಪ್ಪಿದ್ದಾಳೆ ಎಂಬ ಸುದ್ದಿಯ ಮೂಲಕ ಸರ್ವಿಕಲ್ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸಿದೆ. ನಿನ್ನೆ ಹಲವಾರು ಮಂದಿ ಸರ್ವಿಕಲ್ ಕ್ಯಾನ್ಸರ್ ಬಗ್ಗೆ ತಿಳಿದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಯಾರಿಗಾದರೂ ಬೇಸರವಾಗಿದ್ದರೇ ಕ್ಷಮಿಸಿ ಎಂದಿದ್ದಾಳೆ. 


Leave a Comment