ಹೆಚ್​.ಡಿ. ಕುಮಾರಸ್ವಾಮಿ ಕೇಸರಿ ಶಾಲು ಮತ್ತು ಲಕ್ಷಣ್ ಸವಧಿ ವಿಚಾರದಲ್ಲಿ ಆರಗ ಜ್ಞಾನೇಂದ್ರರ ಕುತೂಹಲಕಾರಿ ಹೇಳಿಕೆ

ಹಂಚಿಕೊಳ್ಳಿ
WhatsApp Facebook X Telegram

Shivamogga | Feb 3, 2024 | Kumaraswamy Wearing Saffron Shawl | ಶಿವಮೊಗ್ಗದಲ್ಲಿ ಇವತ್ತು ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಆರಗ ಜ್ಞಾನೇಂದ್ರ   ಲಕ್ಷ್ಮಣ ಸವದಿಗೆ ದೆಹಲಿ‌ ಬುಲಾವ್ ಹಿನ್ನೆಲೆ ಪ್ರತಿಕ್ರಿಯೆ ನೀಡಿರುವ ತೀರ್ಥಹಳ್ಳಿ ಶಾಸಕರು 

ಲಕ್ಷ್ಮಣ ಸವದಿ ಶ್ರೀಘ್ರದಲ್ಲೇ ಬಿಜೆಪಿಗೆ ಬರ್ತಾರೆ, ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ಮೂಲತಃ ಬಿಜೆಪಿ ಹಿನ್ನೆಲೆ ಉಳ್ಳವರು. ಅವರಿಗೆ ಕಾಂಗ್ರೆಸ್ ಸಂಸ್ಕೃತಿ ಇಷ್ಟವಾಗುವುದಿಲ್ಲ.  ಶೀಘ್ರದಲ್ಲಿ ಅವರು ಬಿಜೆಪಿಗೆ ಬರ್ತಾರೆ ಎಂದಿದ್ದಾರೆ. ನಾವು ಅವರನ್ನ ಡಿಸಿಎಂ ಮಾಡಿದ್ವಿ, ಇದೀಗ ಅಲ್ಲಿಗೆ ಕರೆದುಕೊಂಡು ಹೋಗಿ, ಅವರನ್ನ ಪುಕ್ಸಟ್ಟೆ ಕೂರಿಸಿದ್ದಾರೆ ಎಂದು ಟೀಕಿಸಿದ ಆರಗ ಜ್ಞಾನೇಂದ್ರ ಲಕ್ಷ್ಮಣ ಸವದಿ ಬಹಳಷ್ಟು ದಿನ ಅಲ್ಲಿ ಇರುವುದಿಲ್ಲ ಎಂದಿದ್ದಾರೆ. 

ಕುಮಾರಸ್ವಾಮಿ ಕೇಸರಿ ಶಾಲು

ಇನ್ನೂ ಕುಮಾರಸ್ವಾಮಿ ಕೇಸರಿ ಶಾಲು ಧರಿಸಿದ್ದಕ್ಕೆ ದೇವೇಗೌಡ ಬೇಸರ ಹಿನ್ನೆಲೆ ಮಾತನಾಡಿದ ಆರಗ ಜ್ಞಾನೇಂದ್ರರವರು ಕೇಸರಿ ಶಾಲು ಕೇವಲ ಬಿಜೆಪಿಗೆ ಸೇರಿದ್ದಲ್ಲ . ಅದು ಹಿಂದೂ ಸಂಸ್ಕೃತಿಯ ದ್ಯೋತಕ. ಅಷ್ಟಕ್ಕೂ ಕುಮಾರಸ್ವಾಮಿ ಅವರು ಬಿಜೆಪಿಯ ಶಾಲು ಹಾಕಿಕೊಂಡಿಲ್ಲ. ನಾನು ಕನ್ನಡಪರ ಕಾರ್ಯಕ್ರಮಕ್ಕೆ ಹೋದಾಗ ಕನ್ನಡದ ಶಾಲು ಧರಿಸುತ್ತೇನೆ .ಏಕೆಂದರೆ ನಾನು ಒಬ್ಬ ಕನ್ನಡಿಗ. ಹಾಗೆಯೇ ಹಿಂದೂವಾಗಿ ಕೇಸರಿ ಶಾಲನ್ನು ಧರಿಸುತ್ತೇನೆ. ಅದರಲ್ಲಿ ಯಾವುದೇ ತಪ್ಪು ಇಲ್ಲ .ಯಾವ ಕಾರಣಕ್ಕೆ ದೇವೇಗೌಡರು ಬೇಸರ ಮಾಡಿಕೊಂಡಿದ್ದರು ನನಗೆ ಗೊತ್ತಿಲ್ಲ ಎಂದಿದ್ದಾರೆ. 

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 40 ಸ್ಥಾನ ಬರೋದಿಲ್ಲ ಎಂಬ ಮಮತಾ ಬ್ಯಾನರ್ಜಿ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಅವರು,  ಮಮತಾ ಬ್ಯಾನರ್ಜಿ ಅವರು ಇಂಡಿಯಾ ಒಕ್ಕೂಟದ ಪ್ರಮುಖ ನಾಯಕರು .ಅವರೇ ಈ ಮಾತನ್ನು ಹೇಳಿದ್ದಾರೆ ಎಂದರೆ ಆಶ್ಚರ್ಯವಾಗುತ್ತದೆ .ಅಷ್ಟಕ್ಕೂ ಅವರು ಸತ್ಯವನ್ನೇ ಹೇಳಿದ್ದಾರೆ .ಕಾಂಗ್ರೆಸ್ ಈಗಾಗಲೇ ದೇಶಾದ್ಯಂತ ತನ್ನ ನೆಲೆಯನ್ನು ಕಳೆದುಕೊಂಡಿದೆ .ಬರುವ ಚುನಾವಣೆಯಲ್ಲೂ ಅದೇ ಪರಿಸ್ಥಿತಿ ಮುಂದುವರಿಯಲಿದೆ .ಅಲ್ಪಸಂಖ್ಯಾತರ ತುಷ್ಟಿಕರಣ ಹಾಗೂ ದೇಶ ವಿಭಜನೆಯ ನೀತಿಯೇ ಅದಕ್ಕೆ ಮುಳುವಾಗಿದೆ. ಹಾಗಾಗಿ ಇಂಡಿಯಾ ಒಕ್ಕೂಟದ ಪ್ರಮುಖ ಪಕ್ಷವಾಗಿರುವ ಕಾಂಗ್ರೆಸ್ ಬರುವ ಚುನಾವಣೆಯಲ್ಲಿ ಧೂಳಿಪಟವಾಗಲಿದೆ ಎಂದಿದ್ದಾರೆ.


ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor