ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ನುಸುಳುತ್ತಲೇ ಇದೆ : ಜಿ.ಟಿ ದೇವೇಗೌಡ

Politics keeps creeping into cooperation sector: GT Deve Gowda ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ನುಸುಳುತ್ತಲೇ ಇದೆ : ಜಿ.ಟಿ ದೇವೇಗೌಡ

ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ನುಸುಳುತ್ತಲೇ ಇದೆ : ಜಿ.ಟಿ ದೇವೇಗೌಡ

KARNATAKA NEWS/ ONLINE / Malenadu today/ Nov 14, 2023 SHIVAMOGGA NEWS

Shivamogga |  ಸಹಕಾರಿ ಕ್ಷೇತ್ರ ಉಳಿದರೆ ಮಾತ್ರ ರೈತರಿಗೆ ಜೀವಾಳ ಎಂಬ ಭಾವನೆಯಲ್ಲಿ ಸಹಕಾರಿ ಕ್ಷೇತ್ರ ಎಲ್ಲಾ ಕ್ಷೇತ್ರಗಳನ್ನು ಅವಲಂಬಿಸಿದೆ. ಜವಹಾರ್ ಲಾಲ್ ನೆಹರು ಪ್ರಥಮ ಪ್ರಧಾನಿಯಾದ ಸಂದರ್ಭದಲ್ಲಿ ಪಂಚವಾರ್ಷಿಕ ಯೋಜನೆಗಳಲ್ಲಿ ಸಹಕಾರಿ ಕ್ಷೇತ್ರಕ್ಕೆ ತುಂಬಾ ಒತ್ತು ನೀಡಿದ್ದಾರೆ. ಹೀಗಾಗಿ ಅವರ ಹುಟ್ಟು ಹಬ್ಬದ ಅಂಗವಾಗಿ ಪ್ರತಿ ವರ್ಷ ಸಹಕಾರಿ ಸಪ್ತಾಹ ಮಾಡಲಾಗುತ್ತಿದೆ. ಸಪ್ತಾರದಲ್ಲಿ  ಸಹಕಾರಿ ಕ್ಷೇತ್ರ ನಡೆದು ಬಂದ ಹಾದಿ, ಕುಂಟಿತದ ಬಗ್ಗೆ ಪುನಶ್ಥೇತನದ ಸಾಧಕ ಭಾದಕ ಮತ್ತು ಅಬಿವೃದ್ಧಿ ಪಥದತ್ತ ಕೊಂಡೊಯ್ಯುವ ಬಗ್ಗೆ ಚರ್ಚಿಸಲಾಗುತ್ತದೆ

.ಬಡವರು ರೈತರ ಪಾಲಿಗೆ ಸ್ವಾಯತ್ತತೆ ಸಂಸ್ಥೆಯಾಗಿ ಸಹಕಾರಿ ಕ್ಷೇತ್ರ ಉಳಿದಿದೆ. ಸಹಕಾರಿ ಕ್ಷೇತ್ರ ಉಳಿದರೆ ಮಾತ್ರ ರೈತರಿಗೆ ಜೀವಾಳ ಎಂಬ ಭಾವನೆಯಲ್ಲಿ ಸಹಕಾರಿ ಕ್ಷೇತ್ರ ಎಲ್ಲಾ ಕ್ಷೇತ್ರಗಳನ್ನು ಅವಲಂಬಿಸಿದೆ. ಮಾರುಕಟ್ಟೆ ನೇಕಾರಿಕೆ, ಗೊಬ್ಬರ ಬಿತ್ತನೆ, ಎಲ್ಲದರಲ್ಲೂ ಸಹಕಾರಿ ಕ್ಷೇತ್ರವಿದೆ. 

READ : ನಿಮಗೂ ಶಾಕ್​ ಆಗಬಹುದು! ನೀವು 90 ಸಾವಿರ ಕಳೆದುಕೊಳ್ಳಬಹುದು! ಹೇಗೆ ಗೊತ್ತಾ?

ಏಳು ದಿನಗಳ ಕಾಲ ಹಿಂದೆ ನಡೆದು ಬಂದ ಹಾದಿ ಹಾಗು ಮುಂದಿನ ಗುರಿಯ ಬಗ್ಗೆ ನಿರ್ಧಾರ  ಮಾಡುವಂತದ್ದೆ ಸಹಕಾರಿ ಸಪ್ತಾಹದ ಗುರಿಯಾಗಿದೆ ಎಂದು ಜಿ.ಟಿ ದೇವೆಗೌಡ ಹೇಳಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ರಾಜಕಾರಣ ಇರಬಾರದು ಎಂದು ಕುರಿಯನ್ ಹೇಳಿದ್ರೂ, ರಾಜಕಾರಣ ನುಸುಳುತ್ತಿದೆ. ಇಷ್ಟರ ನಡುವೆಯೂ ಉತ್ತಮ ಸಹಕಾರಿಗಳಿಂದ ಬ್ಯಾಂಕ್ ಗಳು ಸಹಕಾರಿ ಸಂಘಗಳು ಚೆನ್ನಾಗಿ ನಡೆಯುತ್ತಿದೆ ಎಂದಿದ್ದಾರೆ