ವಿದ್ಯಾನಗರದಲ್ಲಿ ಮನೆಯೊಳಗೆ ಹೊಗ್ಗಿದ ಕಳ್ಳ! ಬಾಗಿಲ ಚಿಲಕ ಹಾಕಿ ಕೂಗಿದ ಮಹಿಳೆ! ಜನ ಬರುವಷ್ಟರಲ್ಲಿ ಆತ ಎಸ್ಕೇಪ್! ಪಲಾಯನ ಆಗಿದ್ದೇಗೆ ಓದಿ

thief tried to steal and escaped in Kote Police Station Limits in Vidyanagar.

ವಿದ್ಯಾನಗರದಲ್ಲಿ ಮನೆಯೊಳಗೆ ಹೊಗ್ಗಿದ ಕಳ್ಳ! ಬಾಗಿಲ ಚಿಲಕ ಹಾಕಿ ಕೂಗಿದ ಮಹಿಳೆ! ಜನ ಬರುವಷ್ಟರಲ್ಲಿ ಆತ ಎಸ್ಕೇಪ್! ಪಲಾಯನ ಆಗಿದ್ದೇಗೆ ಓದಿ
Kote Police Station

Shivamogga Feb 12, 2024 |   ಮನೆಗೆ ನುಗ್ಗಿ ವ್ಯಾನಿಟಿ ಬ್ಯಾಗ್‌ನಲ್ಲಿದ್ದ 50 ಸಾವಿರ ರೂ. ನಗದು ಕಳವು ಮಾಡಿದ ಘಟನೆ ಶಿವಮೊಗ್ಗದಲ್ಲಿಯೇ ವರದಿಯಾಗಿದೆ. ಶಿವಮೊಗ್ಗ ನಗರದ ವಿದ್ಯಾನಗರದಲ್ಲಿ ಈ ಘಟನೆ ನಡೆದಿದೆ. 

ಮಟಮಟ ಮಧ್ಯಾಹ್ನವೇ ಇಲ್ಲಿನ ಏಳನೇ ಅಡ್ಡರಸ್ತೆಯೊಂದರ ಮನೆಯೊಂದಕ್ಕೆ ಕಳ್ಳ ಹೊಕ್ಕಿದ್ದ. ಆತನ ಇರುವಿಕೆಯನ್ನ ಗಮನಿಸಿದ ಮನೆಯ ಮಹಿಳೆ ಹೊರಗಡೆ ಬಂದು ಚಿಲಕ ಹಾಕಿ, ಒಳಗೆ ಕಳ್ಳ ಬಂದಿದ್ದಾನೆ ಎಂದು ಜನರನ್ನ ಸಹಾಯಕ್ಕೆ ಕರೆದಿದ್ಧಾರೆ. ಜನರು ಬಾಗಿಲು ತೆಗೆದು ಒಳಕ್ಕೆ ಹೋಗಿ ನೋಡುವಷ್ಟರಲ್ಲಿ ಕಳ್ಳ ಚಾವಣಿಯ ಹಂಚು ಕಿತ್ತು ಹೊರಕ್ಕೆ ಹಾರಿ ಪರಾರಿಯಾಗಿದ್ದಾನೆ. 

ಅಷ್ಟೆ ಅಲ್ಲದೆನ ಮನೆಯ ವ್ಯಾನಿಟಿ ಬ್ಯಾಗ್​ನಲ್ಲಿದ್ದ ಐವತ್ತು ಸಾವಿರ ರೂಪಾಯಿ ಸಹ ಕದ್ದೊಯ್ದಿದ್ದಾನೆ. ಕಳೆದ ಫೆಬ್ರವರಿ 98 ರಂದು ನಡೆದಿದ್ದ ಘಟನೆ ಸಂಬಂಧ ಇದೀಗ ಎಫ್ಐಆರ್ ದಾಖಲಾಗಿದೆ. ಪ್ರಕರಣದ ತನಿಖೆಯನ್ನ ಕೋಟೆ ಪೊಲೀಸ್ ಸ್ಟೇಷನ್ ಪೊಲೀಸರು ನಡೆಸ್ತಿದ್ದಾರೆ.