ಸೋಶಿಯಲ್ ಮೀಡಿಯಾ ಮಂದಿಗೆ ವಾರ್ನಿಂಗ್! ಮಹಿಳೆಯ ಘೋಷಣೆ ವಿಡಿಯೋ ಎಡಿಟ್ ಮಾಡಿದವರ ವಿರುದ್ಧ ದಾಖಲಾಯ್ತು ಕೇಸ್​

Warning to social media users! Case registered against those who edited woman slogan video /Woman shouts Allahu Akbar in shivamogga at Jai Sri Ram celebration.

ಸೋಶಿಯಲ್ ಮೀಡಿಯಾ ಮಂದಿಗೆ ವಾರ್ನಿಂಗ್! ಮಹಿಳೆಯ ಘೋಷಣೆ ವಿಡಿಯೋ ಎಡಿಟ್ ಮಾಡಿದವರ ವಿರುದ್ಧ ದಾಖಲಾಯ್ತು ಕೇಸ್​
Warning to social media users! Case registered against those who edited woman slogan video

SHIVAMOGGA  |  Jan 26, 2024  |  ಇತ್ತೀಚೆಗೆ ಶಿವಮೊಗ್ಗ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಮಹಿಳೆಯೊಬ್ಬಳು ಘೋಷಣೆ ಕೂಗಿದ ವಿಚಾರದಲ್ಲಿ ಸೋಶಿಯಲ್ ಮಿಡಿಯಾಲದಲ್ಲಿ ಅಪಪ್ರಚಾರದ ಪ್ರಚೋಧನಾತ್ಮಕ ಪೋಸ್ಟ್​ಗಳು ಹರಿದಾಡುತ್ತಿವೆ ಎಂಬುದನ್ನ ಮಲೆನಾಡು ಟುಡೆ ವರದಿ ಮೂಲಕ ಎಚ್ಚರಿಸಿತ್ತು. ಇದರ ಬೆನ್ನಲ್ಲೆ ಶಿವಮೊಗ್ಗ ಪೊಲೀಸ್ ಇಲಾಖೆ  ಇಂತಹ ಸಾಮಾಜಿಕ ಜಾಲತಾಣ ಗಳ ಪೋಸ್ಟ್ ಗಳ ಮೇಲೆ ಸೈಬರ್ ಕಣ್ಣನ್ನ ಇಟ್ಟಿದೆ. ಸಾಕ್ಷಿ ಎಂಬಂತೆ ಇನ್​ಸ್ಟಾಗ್ರಾಮ್ Post ವೊಂದರ ಮೇಲೆ ಸೈಬರ್ ಕ್ರೈಂ ಆಕ್ಟ್​ ಅಡಿಯಲ್ಲಿ ಕೇಸ್​ ವೊಂದು ದಾಖಲಾಗಿದೆ. 

ದೊಡ್ಡಪೇಟೆ ಪೊಲೀಸ್ ಸ್ಟೇಷನ್​ 

ಶ್ರೀರಾಮಮಂದಿರ ಸಂಭ್ರಮೋತ್ಸವದ ನಡುವೆ ಮಹಿಳೆಯೊಬ್ಬರು ಘೋಷಣೆ ಕೂಗಿದ್ದರು. ಅದು ಆಕ್ಷೇಪಾರ್ಹವಾಗಿತ್ತು. ಆನಂತರ ಆ ಬಗ್ಗೆ ಪೊಲೀಸ್ ಇಲಾಖೆ ವಿಚಾರಣೆ ನಡೆಸಿ ಸ್ಪಷ್ಟನೆಯನ್ನು ಸಹ ನೀಡಿತ್ತು. ಇದರ ಬಳಿಕ ಮಹಿಳೆಯ ವಿಡಿಯೋ ವೈರಲ್ ಆಗಿತ್ತು ಹಾಗೆ ಟ್ರೋಲ್​ಗೆ ಗುರಿಯಾಗಿತ್ತು. ಅದೇ ರೀತಿಯಲ್ಲಿ ಕಿಲಾಡಿ ಕೃಷ್ಣ ಎಂಬವರ ಇನ್​ಸ್ಟಾ ಗ್ರಾಮ್​ ಪೋಸ್ಟ್​ನಲ್ಲಿ ವಿಡಿಯೋದಲ್ಲಿರುವ ವ್ಯಕ್ತಿಗಳಿಗೆ ಮಾತಿನ ಆಡಿಯೋ ನೀಡಿ ನಿಂದನಾತ್ಮಕವಾಗಿ ಎಡಿಟ್ ಮಾಡಲಾಗಿದೆ. ಉತ್ತರ ಕರ್ನಾಟಕ ಸ್ಟೈಲ್​ನಲ್ಲಿ ಎಂಬ ಟೈಟಲ್​ ಅಡಿಯಲ್ಲಿ ವಿಡಿಯೋವನ್ನು ಎಡಿಟ್ ಮಾಡಿ ಪೋಸ್ಟ್ ಮಾಡಲಾಗಿದೆ. ಈ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್  ನಲ್ಲಿ ಕೇಸ್​ ದಾಖಲಾಗಿದೆ. 

ರೌಡಿ ನಿಗ್ರಹ ದಳ

ಶಿವಮೊಗ್ಗ ರೌಡಿ ನಿಗ್ರಹ ದಳದ ಸಿಬ್ಬಂದಿ ತಮ್ಮಣ್ಣ ಜಂಬರಗಿಯವರು ಸಹ ಮಹಿಳೆಯ ವಿಡಿಯೋದಲ್ಲಿ ಕಾಣಿಸಿದ್ದು, ಅವರಿಗೆ ಲಿಪ್ ಸಿಂಕಿಂಗ್ ಮಾಡಿ ವಲ್ಗರ್​ ಭಾಷೆಯಲ್ಲಿ ಮಾತುಗಳನ್ನ ಅಳವಡಿಸಲಾಗಿದೆ ಎಡಿಟ್ ವಿಡಿಯೋದಲ್ಲಿ. ಅದೇ ಕಾರಣಕ್ಕೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಸಮಾಜದ ಶಾಂತಿಗೆ ಭಂಗ ತರುವಂತಹ ಉದ್ದೇಶದ ಕೃತ್ಯ ಇದೆಂದು ಆರೋಪಿಸಿ ಕೇಸ್​ ದಾಖಲಿಸಲಾಗಿದೆ. 

ಕೇವಲ ಲೈಕ್ಸು, ಕಾಮೆಂಟ್ಸ್, ಹಿಟ್ಸು, ಬೇಕು ಎನ್ನುತ್ತಾ ಸೋಶಿಯಲ್ ಮೀಡಿಯಾದಲ್ಲಿ ದುಡ್ಡಿನ ಜೊತೆಗೆ ಟೆಂಪವರಿ ಟ್ರೆಂಡ್ ಆಗುವ ಮನಸ್ಸುಗಳಿಗೆ ತಮ್ಮ ಪೋಸ್ಟ್​ಗಳು ಯಾರನ್ನು ನಿಂದಿಸಬಾರದು ಎಂಬ ವಿಚಾರ ತಿಳಿದಿರಬೇಕು. ಇಲ್ಲವಾದರೆ ಸುಮ್ಮನೆ ತಮಾಷೆ ಎಂದು ಸಮಜಾಯಿಷಿ ಕೊಟ್ಟರೂ ಸಹ ಕಾನೂನು ಕೇಸ್​ನ್ನು ಸೀರಿಯಸ್ ಆಗಿ ಹಾಕುತ್ತದೆ. ಇದಕ್ಕೆ ಇವತ್ತಿನ ಪ್ರಕರಣವೇ ಸಾಕ್ಷಿ