ಪ್ರಧಾನಿ ಕಾರ್ಯಕ್ರಮದ ಸಿದ್ಧತೆಯ ನಡುವೆ ಶಿವಮೊಗ್ಗ ಸಿಟಿಯಲ್ಲಿ ನಡೆಯಿತು ದರೋಡೆ!

Malenadu Today

 MALENADUTODAY.COM | SHIVAMOGGA  | #KANNADANEWSWEB

ಶಿವಮೊಗ್ಗ ಪೊಲೀಸ್ ಇಲಾಖೆ, ನಾಳಿನ ಪ್ರಧಾನಿ ಕಾರ್ಯಕ್ರಮದ ಬಿಸಿಯಲ್ಲಿದ್ದಾರೆ. ಹೈಸೆಕ್ಯುರಿಟಿಗಾಗಿ ಬೇರೆ ಬೇರೆ ಜಿಲ್ಲೆಯ ಪೊಲೀಸರನ್ನು ಸಹ ನಿಯೋಜಿಸಲಾಗಿದೆ. ಇದರ ನಡುವೆ ಶಿವಮೊಗ್ಗ ಸಿಟಿಯಲ್ಲಿ ದರೋಡೆ ನಡೆದಿದೆ. ನಿನ್ನೆ  ಶಿವಮೊಗ್ಗ ಹೊರವಲಯದ ಸವಳಂಗ ರಸ್ತೆಯ ಕುವೆಂಪು ಬಡಾವಣೆ ಸನಿಹ ಕಳೆದ ರಾತ್ರಿ ವ್ಯಕ್ತಿಯೊಬ್ಬರನ್ನು ನಾಲ್ಕು ಮಂದಿ ದುಷ್ಕರ್ಮಿಗಳ ತಂಡ ಅಡ್ಡಗಟ್ಟಿ ದರೋಡೆ ಮಾಡಿದೆ. ಕಾರವಾರದಿಂದ ಟಿಟಿ ವಾಹನದಲ್ಲಿ ಬಂದು ಮನೆ ಸನಿಹದ ರಸ್ತೆಯಲ್ಲಿ ಡ್ರಾಪ್ ತೆಗೆದು ಕೊಂಡ ವ್ಯಕ್ತಿಯು ಮನೆ ಕಡೆ ಹೆಜ್ಜೆ ಹಾಕಿದ್ದರು ಅಷ್ಟೆ.

ಕ್ಷಣಾರ್ದದಲ್ಲಿ ಬಂದ ನಾಲ್ಕು ಮಂದಿ ದುಷ್ಕರ್ಮಿಗಳು ಚಾಕುವನ್ನು ಹಿಂಬದಿಯಿಂದ ಮತ್ತು ಮುಂಬದಿಯಿಂದ ತೋರಿಸಿ ಅಲುಗಾಡದಂತೆ ಮಾಡಿದ್ದಾರೆ. ವ್ಯಕ್ತಿಯ  ಬಳಿಯಿದ್ದ ಮೊಬೈಲ್ ವಾಚು ಮತ್ತು ಪರ್ಸ್ ಕಸಿದುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share This Article